Wednesday, June 15, 2022

ಜನನಾಯಕ, ಬಡವರ ಸೇವಕ ಬಂಡೆಪ್ಪ ಖಾಶೆಂಪುರ್

 ಜನನಾಯಕ, ಬಡವರ ಸೇವಕ ಬಂಡೆಪ್ಪ ಖಾಶೆಂಪುರ್



(ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು)

ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಸನ್ಮಾನ್ಯ ಶ್ರೀ ಬಂಡೆಪ್ಪ ಖಾಶೆಂಪುರ್ ರವರು ಬಡವರ, ರೈತರ, ಶ್ರಮಿಕರ, ಕಷ್ಟದಲ್ಲಿರುವ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುವ ಸರಳ ಸಜ್ಜನಿಕೆಯ ನಾಯಕರಾಗಿದ್ದಾರೆ. ಅವರು ತಮಗೆ ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜನತೆಯ ಒಳಿತಿಗಾಗಿ ದುಡಿಯುತ್ತಿರುವ ಜನಸೇವಕರಾಗಿದ್ದಾರೆ.

ಬೀದರ್ ಉತ್ಸವ ಆರಂಭಿಸುವ ಮೂಲಕ ರಾಜ್ಯಕ್ಕೆ ಬೀದರ್ ಜಿಲ್ಲೆಯ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಹೋರಾಡಿ ಬೀದರ್ ಜಿಲ್ಲೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತಂದು ಕೊಡುವಲ್ಲಿ ಯಶಸ್ವಿಕಂಡಿದ್ದಾರೆ. 

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬೀದರ್ ನಗರದ ರಸ್ತೆಗಳ ಅಗಲೀಕರಣ ಆಸ್ಪತ್ರೆ, ರಸ್ತೆ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ ಕೀರ್ತಿ ಅವರದ್ದಾಗಿದೆ. ಬಂಡೆಪ್ಪ ಖಾಶೆಂಪುರ್ ರವರು, ಸಚಿವರಾಗಿದ್ದಾಗಲೆಲ್ಲಾ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿಕೊಟ್ಟಿದ್ದಾರೆ. ಆ ಮೂಲಕ ತವರು ಜಿಲ್ಲೆಯ ಮೇಲಿನ ಕಾಳಜಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಧಾನ - ಧರ್ಮ ಮಾಡುವ ಕುಟುಂಬದ ಮಾಣಿಕ್ಯಪ್ಪ ಖಾಶೆಂಪುರ್ ರವರ ಪುತ್ರರಾದ ಬಂಡೆಪ್ಪ ಖಾಶೆಂಪುರ್ ರವರು ತಂದೆಯವರ ಗುಣಗಳನ್ನು ಮೈಗೂಡಿಸಿಕೊಂಡು ಸಾಗುತ್ತಿದ್ದಾರೆ. ಕಷ್ಟ ಹೇಳಿಕೊಂಡು ತಮ್ಮ ಮನೆಗೆ ಬಂದವರನ್ನು ಯಾವತ್ತಿಗೂ ಬರಿಗೈಯಿಂದ ಕಳಿಸದ ಅವರು, ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಸಾಗುತ್ತಿದ್ದಾರೆ. 

ಇನ್ನೊಬ್ಬರ ನೋವುಗಳಿಗೆ ಸ್ಪಂಧಿಸುವ, ನೆರವು ನೀಡುವ ಸ್ವಚ್ಛವಾದ ಮನಸ್ಸನ್ನು ಹೊಂದಿರುವ ಬಂಡೆಪ್ಪ ಖಾಶೆಂಪುರ್ ರವರು ಅನೇಕ ಜನರ ಪಾಲಿಗೆ ಆಶ್ರಯದಾತರಾಗಿದ್ದಾರೆ. ಮಕ್ಕಳ ಶಿಕ್ಷಣ, ಆಸ್ಪತ್ರೆಯ ಖರ್ಚು, ಮದುವೆ, ಶುಭ ಕಾರ್ಯಗಳ ಖರ್ಚು ಕೊಡಿ ಎಂದು ತಮ್ಮ ಮನೆಯವರೆಗೂ ಬರುವ ಜನರಿಗೆ ಅವರು ಸಾಧ್ಯವಾದಷ್ಟು ಸಹಾಯ ಸಹಕಾರ ಮಾಡುತ್ತಾ ಸಾಗಿದ್ದಾರೆ. ಅನೇಕ ಪಾಲಿಗೆ ಅವರು ಆಶ್ರಯದಾತರಾಗಿದ್ದಾರೆ.

ಯಾರ ಮನಸ್ಸು ನೋಯಿಸದೆ ಸದಾಕಾಲವೂ ಹಸನ್ಮುಖಿಯಾಗಿರುವ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರಿಗೆ ಜನ್ಮ ದಿನದ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ, ಅವರಿಗೆ ರಾಜಕೀಯವಾಗಿ ಇನ್ನೂ ಉನ್ನತಮಟ್ಟದ ಸ್ಥಾನಮಾನಗಳು ದೊರೆಯಲಿ, ಸಮಾಜದಲ್ಲಿ ಇನ್ನೂ ದೊಡ್ಡಮಟ್ಟದ ವ್ಯಕ್ತಿಯಾಗಿ ಬೆಳೆಯಲಿ ಎಂದು ಸಮಸ್ತ ಅಭಿಮಾನಿಗಳ, ಜೆಡಿಎಸ್ ಪಕ್ಷದ ಪರವಾಗಿ ಶುಭ ಕೋರುತ್ತೇವೆ.


ಬೀದರ್ ಜಿಲ್ಲೆಯ ಅಭಿವೃದ್ಧಿಯ ಹರಿಕಾರ:

ಮಾಜಿ ಸಚಿವರು ಹಾಲಿ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕ್ಷೇತ್ರ ಪುನರ್ ವಿಂಗಡನೆಗೂ ಮೊದಲು ಬೀದರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಹಾಗ ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಿದ್ದರು. ಕ್ಷೇತ್ರದ ಜನತೆಯ ಮೆಚ್ಚುಗೆ ಪಡೆದುಕೊಂಡು ಜನಪ್ರಿಯ ಶಾಸಕರಾಗಿ ಹೊರಹೊಮ್ಮಿದ್ದರು. ಬಳಿಕ ಕ್ಷೇತ್ರ ವಿಂಗಡನೆಯಿಂದಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದರು. 


ಬೀದರ್ ಜಿಲ್ಲೆಗೆ ಮೆಡಿಕಲ್ ಕಾಲೇಜ್ ತರುವಲ್ಲಿ ಯಶಸ್ವಿ:

ರಾಜ್ಯದ ಗಡಿಜಿಲ್ಲೆ ಮತ್ತು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟೆ ಹೊಂದಿರುವ ಬೀದರ್ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಮತ್ತು ಜಿಲ್ಲೆಗೆ ಮೆಡಿಕಲ್ ಕಾಲೇಜು ತರಬೇಕು ಎಂಬ ಛಲದೊಂದಿಗೆ ಸಾಗಿದ ಬಂಡೆಪ್ಪ ಖಾಶೆಂಪುರ್ ರವರು ನಿರಂತರ ಹೋರಾಟದ ಮೂಲಕ ಮೆಡಿಕಲ್ ಕಾಲೇಜು ಸ್ಥಾಪಿಸುವ ಕೆಲಸದಲ್ಲಿ ಜಯಕಂಡಿದ್ದಾರೆ.  ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಜಿಲ್ಲೆಯ ಜನತೆಗೆ ತುಂಬಾ ಅನುಕೂಲವಾಗಿದೆ.


ಬೀದರ್ ನಗರದ ರಸ್ತೆಗಳ ಅಗಲೀಕರಣ:

ಬೀದರ್ ನಗರದಲ್ಲಿರುವ ಮತ್ತು ಬೀದರ್ ಜಿಲ್ಲೆಯಲ್ಲಿನ ಕಿರಿದಾದ ರಸ್ತೆಗಳಿಂದ ಅನೇಕ ಸಮಸ್ಯೆಗಳನ್ನು ಜನ ಎದುರಿಸುತ್ತಿರುವ ಮತ್ತು ಅದರಿಂದ ಅಭಿವೃದ್ಧಿ ಕುಂಟಿತವಾಗುತ್ತಿರುವುದನ್ನು ಗಮನಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಗಾದರು ಮಾಡಿ ರಸ್ತೆಗಳ ಅಗಲೀಕರಣ ಮಾಡಬೇಕೆಂಬ ದೃಢನಿರ್ಧಾರ ಕೈಗೊಂಡು ಬೀದರ್ ನಗರದ ಮತ್ತು ಜಿಲ್ಲೆಯಲ್ಲಿನ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. 


ರಿಂಗ್ ರೋಡ್ ಗಳ ಸ್ಥಾಪನೆ:

ಬೀದರ್ ಜಿಲ್ಲೆಯಲ್ಲಿನ ರಸ್ತೆ ಸಮಸ್ಯೆಗಳನ್ನು ಮನಗಂಡ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ರಿಂಗ್ ರೋಡ್ ಗಳ ಮೂಲಕ ಸುಗಮ ಸಂಚಾರ ವ್ಯವಸ್ಥೆ ಸಾಧ್ಯವೆಂದು ಅರಿತು ಜಿಲ್ಲೆಯಲ್ಲಿ ರಿಂಗ್ ರೋಡ್ ಸ್ಥಾಪನೆಗೆ ವಿವಿಧ ಯೋಜನೆಗಳ ಮೂಲಕ ಅನುದಾನ ತಂದು, ರಿಂಗ್ ರೋಡ್ ಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. 


ಮೀನುಗಾರಿಕೆ ಮತ್ತು ಪಶುವಿಶ್ವವಿದ್ಯಾಲಯ ಸ್ಥಾಪನೆ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಇರದ ಮೀನುಗಾರಿಕೆ ಮತ್ತು ಪಶುವಿಶ್ವವಿದ್ಯಾಲಯ ಮತ್ತು ಅಧ್ಯಯನ ಕೇಂದ್ರವನ್ನು ಗಡಿ ಜಿಲ್ಲೆ ಬೀದರ್ ಗೆ ತರುವಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಶ್ರಮ ಬಹಳಷ್ಟಿದೆ. ಅವರ ನಿರಂತರ ಹೋರಾಟದಿಂದಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ಮತ್ತು ಪಶುವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಇದರಿಂದ ಜಿಲ್ಲೆಯ ಮತ್ತು ಈ ಭಾಗದ ಬಹುತೇಕರಿಗೆ ಬಹಳಷ್ಟು ಅನುಕೂಲವಾಗಿದೆ.


ಬೀದರ್ ಉತ್ಸವ ಆರಂಭಿಸಿದ ಕೀರ್ತಿ ಬಂಡೆಪ್ಪರದ್ದು:

ಬೀದರ್ ಎಂದರೇ ರಾಜ್ಯದ ಮತ್ತು ನೆರೆ ರಾಜ್ಯದ ಜನ ಕಿಳಾಗಿ ಕಾಣುವ ಪರಿಸ್ಥಿತಿ ಇದ್ದಂತ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಬಂಡೆಪ್ಪ ಖಾಶೆಂಪುರ್ ರವರು, ತಮ್ಮ ಸರ್ಕಾರದ ಅವಧಿಯಲ್ಲಿ ಬೀದರ್ ಉತ್ಸವ ಆರಂಭಿಸಿದರು. ಆ ಮೂಲಕ ಬೀದರ್ ಜಿಲ್ಲೆಯ ಮಹತ್ವವನ್ನು ರಾಜ್ಯದ ಜನತೆಗೆ ಮತ್ತು ಕಿಳಾಗಿ ಕಾಣುತ್ತಿದ್ದವರಿಗೆ ತೋರಿಸಿಕೊಡುವ ಮಹತ್ವದ ಕೆಲಸವನ್ನು ಅವರು ಮಾಡಿದರು. ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕೆಲಸ ಅವರ ಸರ್ಕಾರ ಮಾಡಿತ್ತು. 


ಕೆರೆ ತುಂಬಿಸುವ ಯೋಜನೆ:

ಬಂಡೆಪ್ಪ ಖಾಶೆಂಪುರ್ ರವರು ಸಮ್ಮಿಶ್ರ ಸರ್ಕಾರದ ಅವಧಿಗಳಲ್ಲಿ ಸಚಿವರಾಗಿದ್ದ ಎರಡು ಬಾರಿಯೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಉಸ್ತುವಾರಿ ಸಚಿವರು ಆಗಿದ್ದ ಅವರು, ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸುವ ಮತ್ತು ಕೆರೆ ಹುಳೆತ್ತುವ ಯೋಜನೆಗಾಗಿ ಬಜೆಟ್ ನಲ್ಲಿ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರು. ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅಷ್ಟೆ ಅಲ್ಲದೇ ಲಿಪ್ಟ್ ಎರಿಗೇಷನ್ ಕಾಮಗಾರಿಗಳಿಗೂ ಅನುದಾನ ಮೀಸಲಿಡಲಾಗಿತ್ತು.


ಕೃಷಿ ಸಚಿವರಾಗಿ ಬಂಡೆಪ್ಪ ಖಾಶೆಂಪುರ್:

ಬಂಡೆಪ್ಪ ಖಾಶೆಂಪುರ್ ರವರು ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಕೃಷಿ ಸಚಿವರಾಗಿ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿರವರ ಮೂಲಕ ಜಾರಿಗೊಳಿಸುವ ಕೆಲಸ ಮಾಡಿದ್ದರು. ಜನಪ್ರಿಯ ಕೃಷಿ ಸಚಿವರಾಗಿದ್ದ ಅವರು, ವಿದೇಶಗಳು, ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡಿದ್ದರು. 

ಅಲ್ಲಿನ ಕೃಷಿ ಪದ್ದತಿಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಅವರು ಅನೇಕ ಯೋಜನೆಗಳನ್ನು ರೂಪಿಸಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ, ಕೃಷಿ ಕಾರ್ಮಿಕರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು. ಆ ಮೂಲಕ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಿಗೆ ಪ್ರಯತ್ನಿಸಿದ್ದರು.


ಸಹಕಾರ ಸಚಿವರಾಗಿ ಬಂಡೆಪ್ಪ ಖಾಶೆಂಪುರ್:

ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಹಕಾರ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳು ಅವರ ಕಾಲದಲ್ಲಿ ಆಗಿವೆ. ರೈತರ ಸಾಲಮನ್ನಾದಂತ ಅನೇಕ ಯೋಜನೆಗಳನ್ನು ಬಂಡೆಪ್ಪ ಖಾಶೆಂಪುರ್ ರವರು ಸಚಿವರಾಗಿದ್ದ ವೇಳೆಯಲ್ಲಿ ಜಾರಿಗೊಳಿಸಲಾಗಿದೆ. ಬಂಡೆಪ್ಪ ಖಾಶೆಂಪುರ್ ರವರು ತಮಗೆ ನೀಡಿದ ಸಚಿವ ಸ್ಥಾನಗಳ ಮೂಲಕ ರಾಜ್ಯದ ಜನತೆಯ ಒಳಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ.


ಸದನದಲ್ಲಿ ಧ್ವನಿ ಎತ್ತಿದ ಖಾಶೆಂಪುರ್:

ಬಂಡೆಪ್ಪ ಖಾಶೆಂಪುರ್ ರವರು ಒಂದು ಬಾರಿ ಪಕ್ಷೇತರ ಶಾಸಕರಾಗಿ ಎರಡು ಬಾರಿ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಪ್ರತಿ ಅಧಿವೇಶನದ ವೇಳೆಯಲ್ಲೂ ಕೂಡ ಸದನದಲ್ಲಿ ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತುವ ಕೆಲಸ ಮಾಡಿದ್ದಾರೆ. ರಾಜ್ಯದ ನೆಲ, ಜಲ, ಭಾಷೆಗಳ ವಿಷಯದಲ್ಲಿ ಹಾಗೂ ರಾಜ್ಯದಲ್ಲಿನ ಗಂಭೀರ ವಿಷಯಗಳ ಬಗ್ಗೆ ಅವರು ಕಲಾಪಗಳಲ್ಲಿ ಮಾತನಾಡಿದ್ದಾರೆ.

ರಾಜ್ಯದಲ್ಲಿ ಉಂಟಾಗಿರುವ ಮಹತ್ವದ ಸಮಸ್ಯೆಗಳ ಬಗ್ಗೆ, ಧಾರ್ಮಿಕ ತಾರತಮ್ಯಗಳ ಬಗ್ಗೆ, ಭಾಷೆ ವಿಷಯದಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ರಾಜ್ಯದ ರೈತರ, ಬಡವರ ಪರವಾಗಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅದಿವೇಶನಗಳಲ್ಲಿ ಧ್ವನಿ ಎತ್ತಿದ್ದಾರೆ. ಚುಕ್ಕೆ ಗುರುತಿನ ಪ್ರಶ್ನೆ, ಗಮನ ಸೇಳೆಯುವ ಸೂಚನೆ, ಶೂನ್ಯ ವೇಳೆ ಸೇರಿದಂತೆ ಅನೇಕ ಸಂದರ್ಭದಲ್ಲಿ ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿದ್ದಾರೆ.


ರೈತರ ಪರ ಸದನದಲ್ಲಿ ಧ್ವನಿ:

ಮೂಲತ ಕೃಷಿ ಕುಟುಂಬದಿಂದ ಬಂದು ತಾವು ಕೂಡ ಕೃಷಿ ಕಾಯಕವನ್ನು ಮುಂದುವರೆಸಿಕೊಂಡು ಸಾಗುತ್ತಿರುವ ಬಂಡೆಪ್ಪ ಖಾಶೆಂಪುರ್ ರವರು, ಪ್ರತಿಯೊಂದು ಅಧಿವೇಶನದ ವೇಳೆಯಲ್ಲಿ ಕೂಡ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೇಳುವ ಪ್ರಶ್ನೆಗಳಿಗೆ ಸರ್ಕಾರಗಳೇ ಉತ್ತರ ನೀಡದ ಘಟನೆಗಳು ಅನೇಕ ಬಾರಿ ನಡೆದಿವೆ.


ಕಬ್ಬು ಬೆಳೆಗಾರರ ಪರವಾಗಿ ಸದನದಲ್ಲಿ ಧ್ವನಿ:

ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ಜಿಲ್ಲೆಯ ಮತ್ತು ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅನೇಕ ಅಧಿವೇಶನಗಳಲ್ಲಿ ಧ್ವನಿ ಎತ್ತಿದ್ದಾರೆ. ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಪರಿಸರಿಸುವಂತೆ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ರೈತರ ಬಾಕಿ ಹಣ ಪಾವತಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸವನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಡಿದ್ದಾರೆ.  


ಕಾರಂಜ ಸಂತ್ರಸ್ತ ರೈತರ ಪರ ಧ್ವನಿ:

ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕಾರಂಜ ಸಂತ್ರಸ್ತ ರೈತರ ಸಮಸ್ಯೆಗಳ ಬಗ್ಗೆ ಪ್ರತಿಬಾರಿಯ ಅಧಿವೇಶನದಲ್ಲಿ ಧ್ವನಿ ಎತ್ತುತ್ತಿದ್ದಾರೆ. ಆ ರೈತರ ನೋವುಗಳಿಗೆ ಸ್ಪಂಧಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿಕೊಂಡು ಸಾಗಿದ್ದಾರೆ. ರೈತರಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡ ತರುವ ಕೆಲಸವನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಡುತ್ತಿದ್ದಾರೆ. 


ಸರ್ವ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ:

ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ವ ಸಮಾಜದ ಜನರು ಇಷ್ಟಪಡುವ ಜನನಾಯಕರಾಗಿದ್ದಾರೆ. ಅವರು ಎಲ್ಲಾ ಜಾತಿ, ಧರ್ಮಗಳನ್ನು ಸಮಾನಾಗಿ ಕಾಣುವ ದೊಡ್ಡಗುಣವನ್ನು ಹೊಂದಿದ್ದಾರೆ. ಪ್ರತಿಯೊಂದು ಜಾತಿ, ಧರ್ಮದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವರು ಎಲ್ಲಾ ಜಾತಿ, ಜನಾಂಗದವರು ಇಷ್ಟ ಪಡುವ ಸರಳತೆಯ ಸಾಹುಕಾರರಾಗಿದ್ದಾರೆ.


ಕಳಂಕರಹಿತ ರಾಜಕಾರಣಿ:

ಬಂಡೆಪ್ಪ ಖಾಶೆಂಪುರ್ ರವರು, ಕಳಂಕರಹಿತ ರಾಜಕಾರಣಿಯಾಗಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಅವರನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಅದರಿಂದ ಅವರು ಜನತೆಯ ಪ್ರೀತಿಯ ನಾಯಕರಾಗಿದ್ದಾರೆ.


ಕೊಡುಗೈ ಧಾನಿ ಬಂಡೆಪ್ಪ ಖಾಶೆಂಪುರ್:

ಬಂಡೆಪ್ಪ ಖಾಶೆಂಪುರ್ ರವರು ಕೊಡುಗೈ ಧಾನಿಗಳ ಕುಟುಂಬದಿಂದ ಬಂದವರಾಗಿದ್ದಾರೆ. ಅವರು ರಾಜಕೀಯಕ್ಕೆ ಕಾಲಿಡುವ ಮೊದಲೇ ಧಾನ – ಧರ್ಮ ಮಾಡುವುದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಅವರ ತಂದೆಯ ಕಾಲದಿಂದಲೂ ಧಾನ – ಧರ್ಮ ಮಾಡುತ್ತಿದ್ದ ಕುಟುಂಬ ಈಗಲೂ ಧಾನ – ಧರ್ಮ ಮಾಡುತ್ತಾ ಸಾಗಿದೆ. ಕಷ್ಟ ಇದೆ ಅಂತ ತಮ್ಮ ಬಳಿ ಬಂದವರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಸರೆಯಾಗುತ್ತಾರೆ.

 

ರಾಜ್ಯಾಧ್ಯಂತ ಅಭಿಮಾನಿಗಳನ್ನು ಹೊಂದಿರುವ ನಾಯಕ:

ಮುದ್ದಿನ ಮನಸ್ಸು ಹೊಂದಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಇಷ್ಟ ಪಡುವ ಅಭಿಮಾನಿಗಳು ರಾಜ್ಯದ ಮೂಲೇಮೂಲೆಗಳಲ್ಲಿದ್ದಾರೆ. ಬಂಡೆಪ್ಪ ಖಾಶೆಂಪುರ್ ರವರನ್ನು ಕಂಡರೇ ಸಾಕು ಕುಣಿದು ಕುಪ್ಪಳಿಸುವ ಅಭಿಮಾನಿಗಳು ಪ್ರತಿಯೊಂದು ಜಿಲ್ಲೆಯಲ್ಲಿದ್ದಾರೆ. ಅಭಿಮಾನಿಗಳು ಬಂಡೆಪ್ಪ ಖಾಶೆಂಪುರ್ ರವರ ಮಾತಿನ ಶೈಲಿ, ಗುರುತಿಸಿ ಮಾತನಾಡಿಸುವ ಗುಣವನ್ನು ಇಷ್ಟ ಪಟ್ಟಿದ್ದಾರೆ.


ನಸೇವೆಯಲ್ಲಿರುತ್ತಾರೆ ಎಂದರೇ ಅತಿಶಯೋಕ್ತಿಯಾಗದು. ಬಂಡೆಪ್ಪ ಖಾಶೆಂಪುರ್ ರವರು ತಮ್ಮಕುಟುಂಬದ ಸದಸ್ಯರಿಂದ ಕ್ಷೇತ್ರದ ಜನತೆಯವರೆಗೂ ಒಂದೇ ಮೊಬೈಲ್ ನಂಬರ್ ಬಳಸುತ್ತಿದ್ದಾರೆ. ತಮಗೆ ಬರುವ ಪ್ರತಿಯೊಂದು ಕರೆಗಳಿಗೂ ಅವರು ಸ್ಪಂಧಿಸುತ್ತಾರೆ. ಅವಶ್ಯಕ, ತುರ್ತು ಸಂದರ್ಭಗಳಲ್ಲಿ ಮಾತ್ರ ಪೋನ್ ಬಂದ್ ಇಡುವ ಅವರು ಇನ್ನೂಳಿದ ಸಂದರ್ಭದಲ್ಲಿ ಪ್ರತಿಯೊಬ್ಬರ ಸಂಪರ್ಕಕ್ಕೂ ಸಿಗುವ ಸರಳ ರಾಜಕಾರಣಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಅವರು ಇರುವಲ್ಲಿಗೆ ದಿನದ ಯಾವ ಸಮಯದಲ್ಲೂ ಕೂಡ ಜನತೆ ಬರಬಹುದಾಗಿದೆ. ಅವಶ್ಯಕ ತುರ್ತು ಸಂದರ್ಭಗಳಲ್ಲಿ ಮಧ್ಯರಾತ್ರಿಯಲ್ಲೂ ಬಂದರು ಕೂಡ ಜನರು ಅವರನ್ನು ಭೇಟಿಯಾಗಬಹುದಾಗಿದೆ. ಬೆಳಗ್ಗೆ ವಾಕಿಂಗ್ ಮಾಡುವ ವೇಳೆಯಿಂದ ರಾತ್ರಿ ಮಲಗುವ ಸಮಯದವರೆಗೂ ಅವರು ಜನರ ಸಂಪರ್ಕದಲ್ಲಿರುವ ದೊಡ್ಡತನವನ್ನು ಹೊಂದಿದ್ದಾರೆ. ಅದರಿಂದಲೇ ಅವರನ್ನು ಜನತೆ ಇಷ್ಟಪಡುತ್ತಿದ್ದಾರೆ.

ಒಟ್ಟಾರೆಯಾಗಿ 58ನೇ ವರ್ಷದ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರಿಗೆ ಭಗವಂತ ಉತ್ತಮ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ. ರಾಜಕೀಯ ಜೀವನದಲ್ಲಿ ಇನ್ನೂ ಉನ್ನತ ಸ್ಥಾನಮಾನಗಳು ಅವರಿಗೆ ಸಿಗಲಿ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರು ಅವರಿಗೆ ದೊರೆಯಲಿ. ಅವರಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಸದಕಾಲವೂ ಒಳಿತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಮತ್ತೊಮ್ಮೆ ಸನ್ಮಾನ್ಯ ಶ್ರೀ ಬಂಡೆಪ್ಪ ಖಾಶೆಂಪುರ್ ರವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸೋಣ.

*ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು*

ಶಾಸಕ ಬಂಡೆಪ್ಪ ಖಾಶೆಂಪುರ್ ರವರ 58ನೇ ಜನ್ಮದಿನವಿಂದು

 ಶಾಸಕ ಬಂಡೆಪ್ಪ ಖಾಶೆಂಪುರ್ ರವರ 58ನೇ ಜನ್ಮದಿನವಿಂದು

(ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು)

ಬೀದರ್ (ಜೂ.15): ಒಂದು ಬಾರಿ ಪಕ್ಷೇತರ ಎರಡು ಬಾರಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ 58ನೇ ವರ್ಷದ ಜನ್ಮದಿನವಿಂದು.

ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ಕ್ಷೇತ್ರದ ಪಾನ್ ಖಾಶೆಂಪುರ್ ಮೂಲದ ಕೊಡುಗೈ ಧಾನಿ ಎಂಬ ಖ್ಯಾತಿ ಪಡೆದಿದ್ದ ಮಾಣಿಕಪ್ಪ - ಹಣುಮಂತಮ್ಮ ದಂಪತಿಗಳ ಪುತ್ರರಾಗಿದ್ದಾರೆ. ಉನ್ನತ ಶಿಕ್ಷಣದವರೆಗೂ ವ್ಯಾಸಂಗ ಮಾಡಿರುವ ಬಂಡೆಪ್ಪ ಖಾಶೆಂಪುರ್ ರವರು, ತಂದೆಯವರಂತೆ ಧಾನ - ಧರ್ಮ ಮಾಡುವ ಗುಣವನ್ನು ಮೈಗೂಡಿಸಿಕೊಂಡು ಸಾಗುತ್ತಿದ್ದಾರೆ.

ನಾನೊಬ್ಬ ಶಾಸಕ, ಮಾಜಿ ಸಚಿವ ಎಂಬ ಯಾವುದೇ ಗರ್ವವಿಲ್ಲದ ಅವರು, ತಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬರುವ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಪರಿಹರಿಸಿಕೊಡುವ ತಾಯಿ ಹೃದಯವನ್ನು ಬಂಡೆಪ್ಪ ಖಾಶೆಂಪುರ್ ರವರು ಹೊಂದಿದ್ದಾರೆ. 

ಪ್ರಸ್ತುತ ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿರುವ ಅವರು, ಪ್ರತಿನಿತ್ಯ ತಮ್ಮ ನಿವಾಸದ ಬಳಿಗೆ ಬರುವ ಜನರ ನೋವುಗಳಿಗೆ ಸ್ಪಂದಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ. ಮೊದಲ ಬಾರಿಗೆ ಕೃಷಿ ಸಚಿವರಾಗಿ, ಎರಡನೇ ಬಾರಿಗೆ ಸಹಕಾರ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಅವರು, ಅನೇಕ ಮಹತ್ವದ ಯೋಜನೆಗಳನ್ನು ರಾಜ್ಯದ ಒಳಿತಿಗಾಗಿ ಜಾರಿಗೆ ತಂದಿದ್ದಾರೆ.

ಸರಳ, ಸಜ್ಜನಿಕೆಯ ರಾಜಕಾರಣಿ, ಜನಮನ್ನಣೆ ಪಡೆದ ಜನನಾಯಕ ಎಂಬ ಕೀರ್ತಿ ಹೊಂದಿರುವ ಅವರು ರಾಜ್ಯಾದ್ಯಂತ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಅಭಿಮಾನಿ ಸಂಘಗಳಿವೆ. ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಕರ್ತವ್ಯ ನಿಷ್ಠೆ, ಅವರ ಪ್ರಾಮಾಣಿಕತೆಯನ್ನು ಮೆಚ್ಚಿರುವ ಜೆಡಿಎಸ್ ಪಕ್ಷ ಅವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನವನ್ನು ನೀಡಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನವನ್ನು ಹೊಂದಿರುವ ಅವರು, ರೈತರ, ಶ್ರಮಿಕರ, ಬಡವರ ಪರವಾಗಿ ಅನೇಕ ಬಾರಿ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಧಿವೇಶನ, ಬೆಳಗಾವಿಯಲ್ಲಿ ನಡೆದ ಅಧಿವೇಶನಗಳಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ರೈತರ, ಬಡವರ, ಶ್ರಮಿಕ ವರ್ಗದವರ ಪರವಾಗಿ ಧ್ವನಿ ಎತ್ತಿದ್ದಾರೆ. ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಅಷ್ಟೇ ಅಲ್ಲದೇ ಬೀದರ್ ಜಿಲ್ಲೆ, ಬೀದರ್ ದಕ್ಷಿಣ ಕ್ಷೇತ್ರದ ಮಹತ್ವದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿರುವ ಕೀರ್ತಿಯನ್ನು ಸಹ ಅವರು ಹೊಂದಿದ್ದಾರೆ. ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ, ಕಾರಂಜಾ ಸಂತ್ರಸ್ತ ರೈತರ ಪರಿಹಾರದ ವಿಷಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಬಹಳಷ್ಟು ಬಾರಿ ಸದನದಲ್ಲಿ ಅವರು ಮಾತನಾಡಿದ್ದಾರೆ.

ಅಪಾರ ಜನಮನ್ನಣೆ ಹೊಂದಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಈ ವರ್ಷ ಕ್ಷೇತ್ರದ ತಮ್ಮ ನಿವಾಸದಲ್ಲಿಯೇ ಉಳಿದುಕೊಂಡು, ಇಲ್ಲಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರ ಜನ್ಮದಿನವಾದ ಜೂನ್ 15ರಂದು ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿಯೇ ಇದ್ದು ಕ್ಷೇತ್ರದ, ಜಿಲ್ಲೆಯ ಜನರೊಂದಿಗೆ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. 

58ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರಿಗೆ ಭಗವಂತ ಒಳ್ಳೆಯ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿ. ಸದಾಕಾಲವೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಅವರಿಂದ ಆಗಲಿ ಎಂದು ಶುಭ ಹಾರೈಸೋಣ.

*ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು*

Thursday, June 9, 2022

ಪಠ್ಯ ಪುಸ್ತಕದಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಸ್ಥಾನಮಾನ ನೀಡಿ: ದೇವಿಕಾ ನಾಯಕ ದೊರೆ

ದೇವಿಕಾ ನಾಯಕ ದೊರೆ

ರಾಯಚೂರು (ಜೂ.09): ರಾಜ್ಯದ ಪಠ್ಯ ಪುಸ್ತಕಗಳಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಸೂಕ್ತವಾದ ಸ್ಥಾನಮಾನ ನೀಡಬೇಕು. ಈ ಸಮಾಜದ ಮಹಾತ್ಮರ ಇತಿಹಾಸವನ್ನು ತಿಳಿಸುವ ಕೆಲಸವಾಗಬೇಕೆಂದು ರಾಯಚೂರು ಜಿಲ್ಲೆ ದೇವದುರ್ಗ ಮೂಲದ ವಾಲ್ಮೀಕಿ ನಾಯಕ ಸಮಾಜದ ಯುವತಿ ದೇವಿಕಾ ನಾಯಕ ದೊರೆ ಒತ್ತಾಯಿಸಿದ್ದಾಳೆ.

ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುರಪುರದ ನಾಯಕರ ಇತಿಹಾಸವನ್ನು ಪಠ್ಯ ಪುಸ್ತಕದಿಂದ ಕೈಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅನೇಕ ಮಹತ್ತರ ಇತಿಹಾಸ ಹೊಂದಿರುವ ಈ ಸಮಾಜದಲ್ಲಿ ಅನೇಕ ಮಹಾತ್ಮರು ಜನಿಸಿ, ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಅಂತವರ ಇತಿಹಾಸವನ್ನು ಪಠ್ಯದಲ್ಲಿ ಸೇರಿಸುವ ಕೆಲಸ ಮಾಡಬೇಕಾಗಿದ್ದ ಸರ್ಕಾರ ಈ ಸಮಾಜದ ಮಹಾತ್ಮರ ಇತಿಹಾಸವನ್ನು ಪಠ್ಯದಿಂದ ಕೈಬಿಡುತ್ತಿರುವುದು ಗಂಭೀರವಾದ ಅಪರಾಧವಾಗಿದೆ.

Facebook ನಲ್ಲೂ ದೊರೆ ನ್ಯೂಸ್ ಕನ್ನಡ ಲಭ್ಯ

ಮಂತ್ರಿ ಸ್ಥಾನಗಳ ವಿಷಯದಲ್ಲಿ, ಮೀಸಲಾತಿ ವಿಷಯದಲ್ಲಿ, ಸಮಾಜದ ಬೇಡಿಕೆಗಳ ವಿಷಯದಲ್ಲಿ ಈ ಸಮಾಜಕ್ಕೆ ಸದಾಕಾಲವೂ ಅನ್ಯಾಯ ಮಾಡಿಕೊಂಡು ಬಂದಿರುವ ಬಿಜೆಪಿ ಸರ್ಕಾರ ಪಠ್ಯದಲ್ಲಿ ಕೂಡ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಮಾಜದ ಕೆಲ ಸ್ವಾರ್ಥಿ ರಾಜಕಾರಣಿಗಳನ್ನು ಬಳಸಿಕೊಂಡು ಈ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವ ಕೆಲಸವನ್ನು ನಾವು ಮಾಡುತ್ತೇವೆ.

ನಾಯಕ ಸಮಾಜದ ಶಕ್ತಿ ಏನು ಎಂಬುದನ್ನು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ, ಈ ಸಮಾಜದ ಮುಂಚೂಣಿ ರಾಜಕೀಯ ನಾಯಕರಿಗೂ ತೋರಿಸುವ ಕೆಲಸವನ್ನು ಮಾಡುತ್ತೇವೆ. ನೂರ ಇಪ್ಪತ್ತಕ್ಕೂ ಹೆಚ್ಚು ದಿನಗಳಿಂದ ಸಮಾಜದ ಶ್ರೀಗಳು ಹಗಲು ರಾತ್ರಿ ಧರಣಿ ನಡೆಸುತ್ತಿದ್ದರು ಕೂಡ ಮೀಸಲಾತಿ ಹೆಚ್ಚಳ ಮಾಡದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ, ಮುಂಬರುವ ಚುನಾವಣೆಯಲ್ಲಿ ದೊಡ್ಡ ಪಾಠ ಕಲಿಸುತ್ತೇವೆ.

ರಾಜ್ಯದಲ್ಲಿ ಆಡಳಿತ ನಡೆಸಿದ ಪ್ರತಿಯೊಂದು ಸರ್ಕಾರಗಳು ವಾಲ್ಮೀಕಿ ನಾಯಕ ಸಮಾಜವನ್ನು ಕೇವಲ ವೋಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಂಡು ಸಾಗುತ್ತಿದ್ದು, ಪ್ರತಿನಿತ್ಯ ನಾಯಕ ಸಮಾಜಕ್ಕೆ ದ್ರೋಹ ಮಾಡುತ್ತಾ ಸಾಗುತ್ತಿವೆ. ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಈ ಸಮಾಜವನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳು ಅದರ ಪರಿಣಾಮವನ್ನು ಎದುರಿಸಲು ಸಿದ್ದವಾಗಬೇಕು ಎಂದು ದೇವಿಕಾ ನಾಯಕ ದೊರೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿದ್ದಾಳೆ.