Wednesday, November 1, 2023

ಪಾಮನಕಲ್ಲೂರು: ಸಡಗರದಿಂದ ಜರುಗಿದ ಕನ್ನಡ ರಾಜ್ಯೋತ್ಸವ

ಪಾಮನಕಲ್ಲೂರು: ಸಡಗರದಿಂದ ಜರುಗಿದ ಕನ್ನಡ ರಾಜ್ಯೋತ್ಸವ

ರಾಯಚೂರು (ನಂ.01): ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಕನ್ನಡ (ಕರ್ನಾಟಕ) ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕರವೇಯಿಂದ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ:
ಗ್ರಾಮದ ಸಂತೆಕಟ್ಟೆ ಬಳಿ ಇರುವ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನಾಮಫಲಕದ ಬಳಿ ಕನ್ನಡಾಂಬೆ ಭಾವಚಿತ್ರವಿಟ್ಟು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಕನ್ನಡ ರಾಜ್ಯೋತ್ಸವ ಆಚರಿಸಿದರು.
ಆಟೋ ಚಾಲಕರಿಂದ ರಾಜ್ಯೋತ್ಸವ ಆಚರಣೆ:
ಗ್ರಾಮದಲ್ಲಿರುವ ಆಟೋ ಚಾಲಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವಕ್ಕೆ ಮೆರುಗು ತಂದರು.
ಗ್ರಾಮದಲ್ಲಿರುವ ಸರಕಾರಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಗ್ರಾಮ ಪಂಚಾಯತಿ ಕಛೇರಿ ಸೇರಿದಂತೆ ವಿವಿಧೆಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಹೋಬಳಿ ಘಟಕದ ಗೌರವಾಧ್ಯಕ್ಷರಾದ ಶಿವಾನಂದ ಹೂಗಾರ, ಅಧ್ಯಕ್ಷರಾದ ರಮೇಶ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ, ಮುಖಂಡರಾದ ನಾಗಪ್ಪ ಹಡಪಾದ, ಶಿವರಾಜ ಕುರುಬರು, ವೀರೇಶ ಗಂಟ್ಲಿ, ಅಮರಯ್ಯಸ್ವಾಮಿ ಹೊರಗಿನಮಠ, ಅಯ್ಯಪ್ಪ ಯದಲದೊಡ್ಡಿ, ಹನುಮಂತ ಕೊಂಡಾಲ್, ದುರ್ಗಾಸಿಂಗ್, ಹನುಮಂತರಾಯ, ರಮೇಶ್ ಗಂಟ್ಲಿ, ರಾಮಚಂದ್ರಪ್ಪ, ಹುಲ್ಯಪ್ಪ ಸಾನಬಾಳ, ಆಟೋ ಚಾಲಕರಾದ ಅಜಯ್, ಮಾಳಿಂಗರಾಯ, ಮಹೇಶ್, ಮಲ್ಲಿಕಾರ್ಜುನ ಗೊಬ್ಬಿ ಸೇರಿದಂತೆ ಅನೇಕರಿದ್ದರು.
#KannadaRajyotshava #KarnatakaRajyotshava

No comments:

Post a Comment