Friday, August 21, 2020

'ಉದ್ಯೋಗ ಖಾತ್ರಿ' ಕೆಲಸ ನೀಡದಿದ್ದರೆ ಪಂಚಾಯ್ತಿಗೆ ಮುತ್ತಿಗೆ: ತುಪ್ಪದೂರು ಜನರಿಂದ ಎಚ್ಚರಿಕೆ

ದೊರೆ ನ್ಯೂಸ್ ಕನ್ನಡ, ರಾಯಚೂರು (ಅ.21): ಮೂರ್ನಾಲ್ಕು ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡದಿದ್ದರೆ ಪಾಮನಕಲ್ಲೂರು ಗ್ರಾಮ ಪಂಚಾಯ್ತಿ ಕಛೇರಿಗೆ ಮುತ್ತಿಗೆ ಹಾಕುತ್ತೇವೆಂದು ಛಲವಾದಿ ಮಹಾಸಭಾದ ಮುಖಂಡರು, ತುಪ್ಪದೂರು ಗ್ರಾಮಸ್ಥರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯ್ತಿ ಕಛೇರಿಗೆ ಆಗಮಿಸಿದ ಛಲವಾದಿ ಮಹಾಸಭಾ ತುಪ್ಪದೂರು ಗ್ರಾಮ ಘಟಕದ ಮುಖಂಡರು, ಗ್ರಾಮಸ್ಥರು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತುಪ್ಪದೂರು ಗ್ರಾಮದ ಜನರಿಗೆ ಕೆಲಸ ನೀಡುವಂತೆ ಪಂಚಾಯ್ತಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ನಾವು ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಇದುವರೆಗೂ ಸ್ಪಂದಿಸಿಲ್ಲ.
ಬೇರೆ ಬೇರೆ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಲಾಗಿದೆ. ಆದರೆ ತುಪ್ಪದೂರು ಗ್ರಾಮವನ್ನು ಕಡೆಗಣನೆ ಮಾಡಿದ್ದಾರೆ. ನಾವು ಎಷ್ಟು ಸಾರಿ ಮನವಿ ಮಾಡಿದರು ನಮ್ಮ ಗ್ರಾಮಕ್ಕೆ ಕೆಲಸ ನೀಡಿಲ್ಲ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೆಲಸ ನೀಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆಂದು ಛಲವಾದಿ ಮಹಾಸಭಾದ ಮುಖಂಡರು, ವಿವಿಧ ಸಂಘಟನೆಯ ಮುಖಂಡರು, ಗ್ರಾಮಸ್ಥರ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಚಲುವಾದಿ ಮಹಾಸಭಾದ ಗೌರವಾಧ್ಯಕ್ಷ ಕನಕಪ್ಪ ತುಪ್ಪದೂರು, ಅಧ್ಯಕ್ಷ ಚನ್ನಬಸವ ತುಪ್ಪದೂರು, ಉಪಾಧ್ಯಕ್ಷ ಸುವರ್ಣಪ್ಪ ತುಪ್ಪದೂರು, ಪ್ರಧಾನ ಕಾರ್ಯದರ್ಶಿ ಬಸಪ್ಪ ತುಪ್ಪದೂರು, ಮುಖಂಡರಾದ ಮಲ್ಲಪ್ಪ ತುಪ್ಪದೂರು, ರಾಮಪ್ಪ ತುಪ್ಪದೂರು, ಗುರುದೇವ್, ಗ್ರಾಮಸ್ಥರಾದ ಚನ್ನಬಸವ, ವೀರಭದ್ರಪ್ಪ, ನಾಗರಾಜ್ ಹೊಸಮನಿ, ಕಮಲರಾಜ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

No comments:

Post a Comment