Saturday, December 5, 2020

ಉಸ್ಕಿಹಾಳ: ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆ; ಜಿಲ್ಲೆಯ ಅನೇಕರು ಭಾಗಿ

ರಾಯಚೂರು (ಡಿ.05): ಉಸ್ಕಿಹಾಳ ವಾಲ್ಮೀಕಿ ಗುರುಪೀಠದ ಗುರುಗಳಾದ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ, ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ನಾಯಕ ಸಮಾಜದ ಚಿಂತನಮಂಥನ ಸಭೆ ನಡೆಯಿತು.


ಸಭೆಯಲ್ಲಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸಬೇಕಾದ ಹೋರಾಟಗಳು, ವಾಲ್ಮೀಕಿ ನಾಯಕ ಸಮಾಜದ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು, ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವುದು, ಸರ್ಕಾರದಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ವಾಲ್ಮೀಕಿ ನಾಯಕ ಸಮಾಜದ ಐತಿಹಾಸಿಕ ಪುರುಷರ (ಮಹಾತ್ಮರ) ಹೈಜಾಕ್ ತಡೆಗಟ್ಟುವುದು, ಸಮಾಜವನ್ನು ಬಲಿಷ್ಟಗೊಳಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ವೇಳೆ ಮಾತನಾಡಿದ ಆತ್ಮಾನಂದ ಸ್ವಾಮೀಜಿಗಳು, ವಾಲ್ಮೀಕಿ ನಾಯಕ ಸಮಾಜವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಒಗ್ಗಟ್ಟಾಗಿಸಲು ಚಿಂತನಮಂಥನ ಸಭೆಗಳು ಅವಶ್ಯಕವಾಗಿವೆ. ಇದೇ 29ರಂದು ಮಸ್ಕಿ ತಾಲೂಕಿನ ತಿಮ್ಮಾಪೂರದಲ್ಲಿ ಚಿಂತನಮಂಥನ ಸಭೆ ನಡೆಸಲಾಗುತ್ತದೆ. ವಾಲ್ಮೀಕಿ ನಾಯಕ ಸಮಾಜದ ಯುವ ಜನತೆ ಸಭೆಗೆ ಆಗಮಿಸಬೇಕು. ಸಮಾಜದ ಏಳ್ಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ವಾಲ್ಮೀಕಿ ನಾಯಕ ಸಮಾಜದ ಚಿಂತನಮಂಥನ ಸಭೆಗಳನ್ನು ನಡೆಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರೀತಿಯ ಸಭೆಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಅನೇಕರು ಅಭಿಪ್ರಾಯ ಪಟ್ಟರು.

ಸಂದರ್ಭದಲ್ಲಿ ಮುಖಂಡರಾದ ಜಾಲಿ ಶೇಖರಗೌಡ ಬಳಗಾನೂರು, ಶೇಖರಗೌಡ ಕಾಟಗಲ್, ವಕೀಲರಾದ ಶಿವಕುಮಾರ ನಾಯಕ ರಾಯಚೂರು, ಗೋವಿಂದ ನಾಯಕ ರಾಯಚೂರು, ಮೌನೇಶ ನಾಯಕ ಪಂಚಮುಖಿ ಗಾಣದಾಳ, ಅಂಬಣ್ಣ ಡೋಣಮರಡಿ, ಉಸ್ಕಿಹಾಳದ ಆದಿತ್ಯ ನಾಯಕ, ಗ್ವಾಲಪ್ಪ ನಾಯಕ, ಮರಿಸ್ವಾಮಿ ನಾಯಕ, ಕನಕರಾಯ ಮಾಲೀಪಾಟೀಲ್, ಮೌನೇಶ್ ನಾಯಕ, ನರಸನಗೌಡ ಮಾಲೀಪಾಟೀಲ್ ಮ್ಯಾದರಹಾಳ, ವೆಂಕಟೇಶ ಕೋಳಬಾಳ, ಶಿವಪುತ್ರಪ್ಪ ಮಾರಲದಿನ್ನಿ, ಚಂದ್ರಶೇಖರ್ ಉದ್ಬಾಳ ಸೇರಿದಂತೆ ಅನೇಕರಿದ್ದರು.

-------------------------------------------------------

(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.

ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

No comments:

Post a Comment