Thursday, July 28, 2022

ಕಲಾವಿದರು ಜಾಗೃತರಾಗಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್



ಬೀದರ್ (ಜು.28): ಕಲಾವಿದರು ಜಾಗೃತರಾಗಬೇಕು. ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಲೆಯನ್ನು ಉಳಿಸಿ, ಬೆಳಸಿಕೊಂಡು ಸಾಗಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.



ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಗುರುವಾರ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ಸಂಭ್ರಮಾಚರಣೆ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಮತ್ತು ಜನಪದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಸುಮಾರು ಕಲಾವಿದರು ಸೇರಿಕೊಂಡು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ. ಆ ಮೂಲಕ ಕಲಾವಿದರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.



ಕಲೆ ಮತ್ತು ಕಲಾವಿದರಲ್ಲಿ ಬಹಳಷ್ಟು ಶಕ್ತಿ ಇರುತ್ತದೆ. ಸಾಮಾನ್ಯ ವ್ಯಕ್ತಿಯಾಗಿದ್ದ ಚಂದ್ರುರವರನ್ನು ಮುಖ್ಯಮಂತ್ರಿ ಚಂದ್ರುರವರನ್ನಾಗಿ, ಪರ್ಮನೆಂಟ್ ಮುಖ್ಯಮಂತ್ರಿಯಾಗಿ ಮಾಡಿರುವುದು ಕಲೆ. ಒಬ್ಬ ಕಲಾವಿದ ತಾನು ತೋರಿಸುವ ಕಲೆಯಿಂದಲೇ ಪ್ರಚಾರ ಪಡೆಯುತ್ತಾನೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸಚಿವನಾಗಿ ಕುಮಾರಸ್ವಾಮಿರವರ ಪಕ್ಕದ ಸಿಟ್ ನಲ್ಲಿಯೇ ಕುಳಿತಿದ್ದೆ. ಕಲಾವಿದರಿಗೆ ಮಾಶಾಸನ ನೀಡಬೇಕು ಎಂದು ಅಂದು ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಮನವಿ ಮಾಡಿದ್ದೆ. 



ಪ್ರತಿನಿತ್ಯ ಜನಪದ ಹಾಡುಗಳನ್ನು ಹಾಡುವುದರಿಂದ ಕೇಳುವುದರಿಂದ, ಜನಪದ ಕಲೆಯಿಂದ ಅರ್ಧದಷ್ಟು ಕಾಯಿಲೆಗಳು ನಮ್ಮಿಂದ ದೂರವಾಗುತ್ತವೆ. ಜನಪದ ಕಲೆಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ. ಪ್ರಾಚೀನ ಕಾಲದ ಕಲೆ, ಸಾಹಿತ್ಯ ಮಾಯವಾಗುತ್ತಿದೆ. ಅವುಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗಬೇಕಾಗಿದೆ. ಅಂತದಕ್ಕೆ ಸರ್ಕಾರದಿಂದ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ.

ಒಕ್ಕೂಟದವರು ಮಂಡನೆ ಮಾಡಿದ ಹತ್ತು ಬೇಡಿಕೆಗಳಲ್ಲಿ ಯಾವ ಬೇಡಿಕೆ ಕೂಡ. ಈಡೇರಿಸಲು ಆಗದೇ ಇರುವ ಬೇಡಿಕೆಗಳು ಅಲ್ಲ. ಸರ್ಕಾರ ಮನಸ್ಸು ಮಾಡಿದರೇ ಕೇವಲ ಐದು ನಿಮಿಷಗಳಲ್ಲಿ ಕಲಾವಿದರ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ. ಈ ಸರ್ಕಾರ ಅದನ್ನು ಮಾಡಬೇಕಾಗಿದೆ. ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಆ ಕೆಲಸ ಮಾಡುತ್ತೇವೆ.

ಈ ಹಿಂದೆ ಒಕ್ಕೂಟದ ವತಿಯಿಂದ ನನಗೆ ಮನವಿ ಸಲ್ಲಿಸಿದ್ದರು. ಅದರ ಬಗ್ಗೆ ಅಧಿವೇಶನದಲ್ಲಿ ನಾನು ಕೇಳಿದ ಪ್ರಶ್ನೆ ಸ್ಟಾರ್ ಆಗಿದ್ದರಿಂದ ಕಲಾವಿದರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಾನು ಮಾಡಿದ್ದೆ. ಸಚಿವರು ಅದಕ್ಕೆ ಉತ್ತರವನ್ನು ನೀಡಿದ್ದರು. ಕಲಾವಿದರ ಮಾಶಾಸನ ಎರಡು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸುವಂತೆ ಒಕ್ಕೂಟದಿಂದ ಮನವಿ ಮಾಡಿದ್ದಾರೆ. ಅದನ್ನು ಹತ್ತು ಸಾವಿರದವರೆಗೂ ಹೆಚ್ಚಿಸುವಂತೆ ಮನವಿ ಮಾಡಬೇಕಾಗಿದೆ. 

ಭಾರತ ದೇಶ ದೊಡ್ಡ ಪ್ರಮಾಣದಲ್ಲಿ ಶ್ರೇಷ್ಠತೆ ಪಡೆದಿರುವುದು ನಮ್ಮ ಸಂಸ್ಕೃತಿಯಿಂದಲೆ. ನಮ್ಮ ಸಂಸ್ಕೃತಿ, ನಮ್ಮ ಸಭ್ಯತೆಯೇ ನಮ್ಮ ದೇಶದ ಆಸ್ತಿಯಾಗಿದೆ. ಕಲೆ, ಸಾಹಿತ್ಯದಿಂದ ಉತ್ತಮ ಸಂಸ್ಕೃತಿ, ಸಭ್ಯತೆ ರೂಪಿಸಲು ಸಾಧ್ಯವಾಗುತ್ತದೆ. ರಾಜ್ಯದ ಕಲಾವಿದರ ವಯೋಮಾನ 58 ರಿಂದ 50 ಕ್ಕೆ ಇಳಿಸಬೇಕು ಎಂದು ಮನವಿ ಮಾಡಲಾಗಿದೆ. ಕಲೆ, ಮತ್ತು ಕಲಾವಿದರಿಗೆ ವಯಸ್ಸಿನ ಭೇದ ಭಾವವಿಲ್ಲ. ಅಲ್ಲದೇ ಕಲಾವಿದರಿಗೆ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಕೂಡ ಇರುವುದಿಲ್ಲ. 

ಕಲಾವಿದರ ಬೇಡಿಕೆಗಳ ಪರವಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಸಲ್ಲಿಸುತ್ತೇನೆ. ಅಲ್ಲದೇ ನಮ್ಮ ಪಕ್ಷದ ನಾಯಕರಾದ ಕುಮಾರಸ್ವಾಮಿರವರಿಗೂ ಕೂಡ ಮನವಿ ಮಾಡುತ್ತೇನೆ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಸಹಾಯ ಮಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು, ಶಾಸಕ ರಹಿಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗೌರವ ಸಲಹೆಗಾರ ಶ್ರೀನಿವಾಸ ಜಿ ಕಪ್ಪಣ್ಣ, ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ, ಡಿಂಗ್ರಿ ನರೇಶ್ ಸೇರಿದಂತೆ ಅನೇಕರಿದ್ದರು.

ಜು.29ರಂದು ಬೀದರ್ ನಗರಕ್ಕೆ ಹೆಚ್ಡಿಕೆ, ಸಿ.ಎಂ ಇಬ್ರಾಹಿಂ ಆಗಮನ: ಶಾಸಕ ಬಂಡೆಪ್ಪ ಖಾಶೆಂಪುರ್



ಬೀದರ್ (ಜು.28): ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು ಜು.29ರಂದು ಶುಕ್ರವಾರ ಜೆಡಿಎಸ್ ಪಕ್ಷದ ಸಭೆಯ ನಿಮಿತ್ತವಾಗಿ ಬೀದರ್ ನಗರಕ್ಕೆ ಆಗಮಿಸಲಿದ್ದಾರೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.



ಮುಂಬರುವ 2023ರ ಚುನಾವಣೆಯ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆಯನ್ನು ಇದೇ ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ಬೀದರ್ ನ ನವದಗೆರೆಯ ಚಿಕ್ಕಪೇಟೆ ರಸ್ತೆಯಲ್ಲಿರುವ ಹೊಟೇಲ್ ವೈಬ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರು, ರಾಜ್ಯಾಧ್ಯಕ್ಷರಾದ ಸಿ.ಎಂ ಹಿಬ್ರಾಹಿಂರವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಂಬರುವ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಪ್ರಮುಖರು ಇರಲಿದ್ದಾರೆ. ಪ್ರಮುಖರ ಸಭೆಯ ಬಳಿಕ ಬೀದರ್ ಜಿಲ್ಲೆಯ ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.



ಕುಮಾರಸ್ವಾಮಿರವರು ವಿಮಾನದ ಮೂಲಕ ಬೆಂಗಳೂರಿನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು, ಹೈದರಾಬಾದ್ ನಿಂದ ಬೀದರ್ ಗೆ ರಸ್ತೆ ಮೂಲಕ ಸಂಚರಿಸಿ, ನಗರದ ಪ್ರವಾಸಿ ಮಂದಿರ (ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ) ಹತ್ತಿರ ಕಾರಂಜಾ ಸಂತ್ರಸ್ತ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ, ನಗರದ ಜೆಡಿಎಸ್ ಕಛೇರಿಗೆ ಭೇಟಿ ನೀಡುತ್ತಾರೆ. ಬಳಿಕ ನಗರದ ನವದಗೆರೆಯಲ್ಲಿರುವ ಹೋಟೆಲ್ ವೈಬ್ ನಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಜು.29ರಂದು ಬೀದರ್ ನಲ್ಲೇ ವಾಸ್ತವ್ಯ ಹೂಡಿ, ಜುಲೈ 30ರಂದು ಬೆಳಗ್ಗೆ 09 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿ, ನಂತರ ಕಾರ್ಯಕ್ರಮದ ನಿಮಿತ್ಯ ಬೀದರ್ ನಿಂದ ಕಲಬುರಗಿ ನಗರಕ್ಕೆ ರಸ್ತೆ ಮೂಲಕ ಸಂಚರಿಸಲಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮದವರಿಗೆ ತಿಳಿಸಿದರು.

Tuesday, July 26, 2022

ಜು.29ರಂದು ಹೆಚ್ಡಿಕೆ, ಇಬ್ರಾಹಿಂ, ಬಂಡೆಪ್ಪ ಖಾಶೆಂಪುರ್ ನೇತೃತ್ವದಲ್ಲಿ ಬೀದರ್ ನಲ್ಲಿ ಜೆಡಿಎಸ್ ಸಭೆ: ರಮೇಶ್ ಪಾಟೀಲ್ ಸೋಲಪೂರ್



ಬೀದರ್ (ಜು.26): ಮುಂಬರುವ 2023ರ ಚುನಾವಣೆಯ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆಯನ್ನು ಇದೇ ಜುಲೈ 29ರಂದು ಬೀದರ್ ನ ನವದಗೆರೆಯ ಚಿಕ್ಕಪೇಟೆ ರಸ್ತೆಯಲ್ಲಿರುವ ಹೊಟೇಲ್ ವೈಬ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರು,  ರಾಜ್ಯಾಧ್ಯಕ್ಷರಾದ ಸಿ.ಎಂ ಹಿಬ್ರಾಹಿಂರವರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಮುಖಂಡತ್ವದಲ್ಲಿ ಸಭೆ ನಡೆಯುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ರವರು ಹೇಳಿದರು.

ಬೀದರ್ ನಗರದ ಹೊಟೇಲ್ ವೈಬ್ ನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನತಾದಳ ಪಕ್ಷದ ಸಂಘಟನೆ ಮತ್ತು ಬಲವರ್ಧನೆ, ಪಂಚರತ್ನ ದರ್ಶನ ರಥ ಯಾತ್ರೆ ಹಾಗೂ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಿದ್ದತೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಜು.29ರ ಶುಕ್ರವಾರ ಹೋಟೆಲ್ ವೈಬ್ ನಲ್ಲಿ ಸಭೆ ಕರೆಯಲಾಗಿದೆ ಎಂದರು.

ಬೆಳಗ್ಗೆ 11 ಘಂಟೆಗೆ ಆರಂಭವಾಗುವ ಸಭೆಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ರವರು ಹೇಳಿದರು.

ಏಪ್ರಿಲ್ ನಲ್ಲಿ ಯಶಸ್ವಿಯಾಗಿ ನಡೆದ ಜನತಾ ಜಲಧಾರೆ ರಥಯಾತ್ರೆ:

ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ, ಜನತಾ ಜಲಧಾರೆ ರಥ ಯಾತ್ರೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಅದರಂತೆಯೇ ಮುಂಬರುವ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರಾದ ದೇವೇಗೌಡರ ಮಾರ್ಗದರ್ಶನದಲ್ಲಿ ಪಂಚರತ್ನ ಎಂಬ ಕಾರ್ಯಕ್ರಮವನ್ನು ತರಲಾಗುತ್ತದೆ.

ಪಂಚರತ್ನ ಯೋಜನೆಯ ರೂಪುರೇಷೆ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಸಭೆ ನಡೆಸುವಂತೆ ನಾವು ಪಕ್ಷದ ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದೇವು. ಮನವಿಗೆ ಸ್ಪಂದಿಸಿದ ನಾಯಕರು, ಸಭೆ ನಡೆಸಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನ ನಡೆಸುತ್ತೇವೆ ಎಂದರು.

ನಾವು ಶಿಸ್ತಿನ ಸಿಪಾಯಿಗಳು ಇದ್ದಿವಿ. ಪಕ್ಷ ಕೈಗೊಳ್ಳುವ ನಿರ್ಧಾರವನ್ನು ಸ್ವೀಕರಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗುತ್ತೇವೆ. ಪಕ್ಷ ಯಾರಿಗೆ ಅವಕಾಶ ನೀಡುತ್ತದೆಯೋ ಅವರನ್ನು ಗೆಲ್ಲಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ. ಅದೇ ನಿಟ್ಟಿನಲ್ಲಿ ಜುಲೈ 29ರಂದು ಸಭೆ ನಡೆಸಲಾಗುತ್ತಿದೆ ಎಂದು ರಮೇಶ್ ಪಾಟೀಲ್ ಸೋಲಪೂರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಸವರಾಜ ಪಾಟೀಲ್ ಹಾರೋಗೇರಿ, ಅಶೋಕಕುಮಾರ್ ಕರಂಜೆ, ರಾಜಶೇಖರ ಜವಳೆ, ನಬೀ ಖುರೇಷಿ, ಅಸಾದುದ್ದೀನ್, ಅಶೋಕ ಕೊಡ್ಗೆ, ಸಂಗು ಚಿದ್ರಿ, ರಾಜು ಚಿಂತಾಮಣಿ, ನವಾಜ್ ಖಾನ್ ಸೇರಿದಂತೆ ಅನೇಕರಿದ್ದರು.

Tuesday, July 12, 2022