ಬೀದರ್ (ಜು.28): ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು ಜು.29ರಂದು ಶುಕ್ರವಾರ ಜೆಡಿಎಸ್ ಪಕ್ಷದ ಸಭೆಯ ನಿಮಿತ್ತವಾಗಿ ಬೀದರ್ ನಗರಕ್ಕೆ ಆಗಮಿಸಲಿದ್ದಾರೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
ಮುಂಬರುವ 2023ರ ಚುನಾವಣೆಯ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆಯನ್ನು ಇದೇ ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ಬೀದರ್ ನ ನವದಗೆರೆಯ ಚಿಕ್ಕಪೇಟೆ ರಸ್ತೆಯಲ್ಲಿರುವ ಹೊಟೇಲ್ ವೈಬ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿಗಳು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರು, ರಾಜ್ಯಾಧ್ಯಕ್ಷರಾದ ಸಿ.ಎಂ ಹಿಬ್ರಾಹಿಂರವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಂಬರುವ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಪ್ರಮುಖರು ಇರಲಿದ್ದಾರೆ. ಪ್ರಮುಖರ ಸಭೆಯ ಬಳಿಕ ಬೀದರ್ ಜಿಲ್ಲೆಯ ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಕುಮಾರಸ್ವಾಮಿರವರು ವಿಮಾನದ ಮೂಲಕ ಬೆಂಗಳೂರಿನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು, ಹೈದರಾಬಾದ್ ನಿಂದ ಬೀದರ್ ಗೆ ರಸ್ತೆ ಮೂಲಕ ಸಂಚರಿಸಿ, ನಗರದ ಪ್ರವಾಸಿ ಮಂದಿರ (ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ) ಹತ್ತಿರ ಕಾರಂಜಾ ಸಂತ್ರಸ್ತ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ, ನಗರದ ಜೆಡಿಎಸ್ ಕಛೇರಿಗೆ ಭೇಟಿ ನೀಡುತ್ತಾರೆ. ಬಳಿಕ ನಗರದ ನವದಗೆರೆಯಲ್ಲಿರುವ ಹೋಟೆಲ್ ವೈಬ್ ನಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಜು.29ರಂದು ಬೀದರ್ ನಲ್ಲೇ ವಾಸ್ತವ್ಯ ಹೂಡಿ, ಜುಲೈ 30ರಂದು ಬೆಳಗ್ಗೆ 09 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿ, ನಂತರ ಕಾರ್ಯಕ್ರಮದ ನಿಮಿತ್ಯ ಬೀದರ್ ನಿಂದ ಕಲಬುರಗಿ ನಗರಕ್ಕೆ ರಸ್ತೆ ಮೂಲಕ ಸಂಚರಿಸಲಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮದವರಿಗೆ ತಿಳಿಸಿದರು.
No comments:
Post a Comment