ಬೀದರ್ (ಅ.30): ಗೊಂಡ (ಕುರುಬ) ಸಮಾಜದ ಇತಿಹಾಸ ಮತ್ತು ಸಮಾಜದ ಮಹಾತ್ಮರ ಚರಿತ್ರೆ ಸಾರುವ ಕೆಲಸವನ್ನು ಕುರುಬರ ಸಾಂಸ್ಕೃತಿಕ ಪರಿಷತ್ತು ಮಾಡುತ್ತಿದ್ದು, ಆ ನಿಟ್ಟಿನಲ್ಲಿ 'ಕುರುಬರ ಸಂಸ್ಕೃತಿ ದರ್ಶನ' ಎಂಬ ಪುಸ್ತಕ ಹೊರತಂದಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಪುಟಗಳ 13 ಸಂಚಿಕೆಗಳ ಪುಸ್ತಕಗಳನ್ನು ಗೊಂಡ ಕುರುಬ ಸಮಾಜದ ಪ್ರತಿಯೊಬ್ಬರೂ ಖರೀದಿಸಿ ಓದಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗ ಮಂದಿರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ಬೀದರ್ ಜಿಲ್ಲಾ ಗೊಂಡ (ಕುರುಬ) ಅಭಿಮಾನಿಗಳ ಬಳಗ ಬೀದರ್ ಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 'ಕುರುಬರ ಸಂಸ್ಕೃತಿ ದರ್ಶನ: ೧೩ ಗ್ರಂಥಗಳ ಅನಾವರಣ ಹಾಗೂ ಗೊಂಡ ಸಂಸ್ಕೃತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ' ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಪುಟಗಳ 13 ಸಂಚಿಕೆಗಳ ಪುಸ್ತಕ ರಚನೆ ಮಾಡಿರುವುದು ಇದೆ ಪ್ರಥಮವೆನಿಸುತ್ತಿದೆ ಎಂದರು.
ನಮ್ಮ ಬೀದರ್ ನಲ್ಲಿ ಗೊಂಡ ಮತ್ತು ಕುರುಬ ಎರಡುವೊಂದೆಯಾಗಿದೆ. ಈ ಸಮಾಜಕ್ಕೆ ಬಹಳಷ್ಟು ಇತಿಹಾಸವಿದೆ. ಚಂದ್ರಗುಪ್ತ ಮೌರ್ಯ, ಕನಕದಾಸ, ಬೊಮ್ಮಗೊಂಡರು ಸೇರಿದಂತೆ ಅನೇಕ ಮಹಾತ್ಮರು ಈ ಸಮುದಾಯದ ಇತಿಹಾಸ ಪುರುಷರಾಗಿದ್ದಾರೆ. ಆರ್ಆರ್ಆರ್ ಸಿನಿಮಾದಲ್ಲಿ ಗೊಂಡ ಸಮಾಜದ ಬಗ್ಗೆ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಈ ಸಮಾಜದ ಸಾಧನೆ, ಇತಿಹಾಸದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಗ್ರಂಥಗಳನ್ನು ರಚಿಸುವುದು ಮುಖ್ಯವಾಗುತ್ತದೆ. ಆಗಾಗಿ ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮಾಜದ ಸಂಸ್ಕೃತಿ ಅಜರಾಮರವಾಗಿರಬೇಕು ಎಂಬ ನಿಟ್ಟಿನಲ್ಲಿ ಪುಸ್ತಕ ರಚಿಸಿದ್ದಾರೆ. ಪುಸ್ತಕ ಖರೀದಿಸಿ ಓದುವ ಮೂಲಕ ಇತಿಹಾಸ ತಿಳಿದುಕೊಳ್ಳುವ ಕಡೆಗೆ ಸಮಾಜದ ಜನರು ಆಸಕ್ತಿ ವಯಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಹೆಚ್.ಎಮ್ ರೇವಣ್ಣ ಮೇಟಿ ಇದ್ದಂತೆ:
ಮಾಜಿ ಸಚಿವರು, ಸಮಾಜದ ಹಿರಿಯರಾಗಿರುವ ಹೆಚ್.ಎಮ್ ರೇವಣ್ಣರವರು ಈ ಸಮಾಜದ ಮೇಟಿ ಇದ್ದಂತೆ . ಅವರು ಸಮಾಜದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸಮಾಜಕ್ಕಾಗಿ ಅನೇಕ ಮಹತ್ವದ ಕೆಲಸಗಳನ್ನು ಅವರು ಮಾಡಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆ, ಕುರುಬರ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷರಾದ ಹೆಚ್.ಎಮ್ ರೇವಣ್ಣ, ವಿಜಯಪುರದ ಹಿರಿಯ ವಿದ್ವಾಂಸ ಪ್ರೊ. ಚನ್ನಪ್ಪ ಕಟ್ಟಿ, ಹಿರಿಯ ಸಾಹಿತಿ ಡಾ. ಬಿದರಿ ಚಂದ್ರಕಲಾ, ಸಂಶೋಧಕಿ ಸುನೀತಾ ಕೂಡ್ಲಿಕರ್, ಗೊಂಡ ಸಂಸ್ಕೃತಿ ಪುಸ್ತಕದ ಲೇಖಕ ಎಮ್.ಜಿ ಗಂಗನಪಳ್ಳಿ, ಕುರುಬರ ಸಂಸ್ಕೃತಿ ದರ್ಶನ ಸಂಪುಟಗಳ ಯೋಜನಾ ನಿರ್ದೇಶಕ ಕಾ.ತ ಚಿಕ್ಕಣ್ಣ, ಕುರುಬರ ಸಾಂಸ್ಕೃತಿಕ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ಬಿ.ಕೆ ರವಿ, ಸಹ ಕಾರ್ಯದರ್ಶಿ ಜಿ. ಗಂಗಾಧರ, ಕಾರ್ಯಕ್ರಮ ಸಂಯೋಜಕ ಡಾ. ಸಂಜೀವಕುಮಾರ್ ಅತಿವಾಳೆ, ಕರ್ನಾಟಕ ಗೊಂಡ ಆದಿವಾಸಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ರಾಜ್ಯಾಕೋಶಾದ್ಯಕ್ಷ ಎಮ್.ಎಸ್ ಕಟಗಿ, ಪ್ರಮುಖರಾದ ವಿಜಯಕುಮಾರ್ ಖಾಶೆಂಪುರ್, ರವಿಂದ್ರ ಕಣಜಿ, ಪ್ರತಾಪ್ ಮೇತ್ರೆ ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Kashempur #ಬಂಡೆಪ್ಪ #ಖಾಶೆಂಪುರ್ #bandeppa #khashempur
No comments:
Post a Comment