ಪಾಮನಕಲ್ಲೂರು: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಸರ್ವ ಜನಾಂಗದ ಮುಖಂಡರು ಭಾಗಿ
ರಾಯಚೂರು (ಅ.09): ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ವಜನಾಂಗದ ಮುಖಂಡರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಮುಖ್ಯರಸ್ತೆ ಬಳಿ ಇರುವ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ಮತ್ತು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಚಾಲನೆ ನೀಡಿದರು.
ಮಹಾತ್ಮರ ವೃತಗಳಿಗೆ ಪೂಜೆ:
ಪ್ರತಿಭಾರಿಯಂತೆ ಈ ಬಾರಿ ಕೂಡ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಮುಖ್ಯರಸ್ತೆಯ ಬಳಿಯಲ್ಲಿರುವ ಶ್ರೀ ಗುರು ಒಳಬಳ್ಳಾರಿ ಚನ್ನಬಸವೇಶ್ವರ ನಾಮಫಲಕ, ನಿಜಶರಣ ಅಂಬಿಗರ ಚೌಡಯ್ಯರ ನಾಮಫಲಕ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಫಲಕ, ಕನಕದಾಸರ ನಾಮಫಲಕಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಮಲ್ಲಿಕಾರ್ಜುನ ನಾಲ್ವರ್ಕರ್, ಪ್ರತಿಭಾರಿಗಿಂತ ಈ ಬಾರಿಯ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ವಿಶೇಷವಾಗಿದೆ. ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವುದು ಈ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸುಮಾರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಪಾಮನಕಲ್ಲೂರು ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸುತ್ತೇವೆ. ಜಯಂತೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಾಸಾಬ್ ಸೈಕಲ್ ಗುಡಿಹಾಳ, ಮುಖಂಡರಾದ ಮಲ್ಲಿಕಾರ್ಜುನ ನಾಲ್ವರ್ಕರ್, ಮಲ್ಲೇಶಪ್ಪ ಬಳಿ, ವೆಂಕಟೇಶ ಯದ್ದಲದೊಡ್ಡಿ, ಅಯ್ಯಪ್ಪ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ ವಾಟರ್ಮ್ಯಾನ್, ಮಲ್ಲಪ್ಪ ತಳವಾರ, ಶರಣಪ್ಪ ಕೊಂಡಾಲ, ಲಕ್ಷ್ಮಣ ದೊರೆ ಯದ್ದಲದೊಡ್ಡಿ, ಶಿವಗೇನಿ ನಾಯಕ ಡ್ರೈವರ್, ಹುಚ್ಚರಡ್ಡಿ ನಾಯಕ ಜಂತಾಓಣಿ, ದುರುಗಪ್ಪ ಅರಿಕೇರಿ, ಬಸವರಾಜ ಕೋಟೆಕಲ್, ಅಮರಯ್ಯ ತಾತ, ಅಮರೇಶ ಸಿಎಂ, ಬಸಣ್ಣ ಶಾಸ್ತ್ರಿ, ಮರೆಪ್ಪ ಹುಣಸಗಿ, ವಿಜಯಕುಮಾರ್ ಗುತ್ತದಾರ್, ಸಂಗಪ್ಪ ಹಡಪದ, ಮರಿಯಪ್ಪ ತಳವಾರ, ಶರಣಬಸವ ಕಾನ್ಯಾಳ್, ಮೌನೇಶ ಕಾನ್ಯಾಳ್, ರಾಜ್ ಗಂಟ್ಲಿ ಪಾಮನಕಲ್ಲೂರು, ಸಣ್ಣ ದುರುಗಪ್ಪ ಜೋಳದರಾಶಿ, ಅಮರೇಗೌಡ ಗುಡಿಹಾಳ, ಶ್ರೀನಿವಾಸ್ ಸಾನಬಾಳ, ಬಸವರಾಜ್ ಛಲವಾದಿ, ಕಲ್ಯಾಣಿ ರಾಜ, ಶಿವಕುಮಾರ್ ಬಳಿ, ಬಸಣ್ಣ ಹಡಪದ, ಅಮರೇಶ ಡಿ ಪೂಜಾರಿ, ಸದ್ದಾಮ್, ಮಹಮ್ಮದ್ ರಫಿ ಸಾಹುಕಾರ್, ಬಡೆಸಾಬ್ ಪಾನ್ ಶಾಪ್, ರಮೇಶ್ ಚಿಲ್ಕರಾಗಿ, ಭಾಷಾ, ನಾಗರಾಜ್ ನಾಯಕ ಜಂತಾಓಣಿ, ಹುಸೇನಪ್ಪ ನಾಯಕ ಕಾನ್ಯಾಳ, ಬಸವರಾಜ್ ನಾಯಕ ಕಾನ್ಯಾಳ, ಕಿರಾಣಿ ಅಂಗಡಿ ತಾತ, ಹನುಮಂತ ಗಂಟ್ಲಿ, ಮುಕ್ಕಣ್ಣ ಕಾನ್ಯಾಳ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಆಂಜನೇಯ ನಾಯಕ ಸೇರಿದಂತೆ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.
No comments:
Post a Comment