ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಬಂಡೆಪ್ಪ ಖಾಶೆಂಪುರ್ ರವರ 59ನೇ ಜನ್ಮದಿನವಿಂದು
( ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು)
ಬೀದರ್ (ಜೂ.15): ಒಂದು ಬಾರಿ ಪಕ್ಷೇತರ ಎರಡು ಬಾರಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಂಡೆಪ್ಪ ಖಾಶೆಂಪುರ್ ರವರ 59ನೇ ವರ್ಷದ ಜನ್ಮದಿನವಿಂದು.
ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ಕ್ಷೇತ್ರದ ಪಾನ್ ಖಾಶೆಂಪುರ್ ಮೂಲದ ಕೊಡುಗೈ ಧಾನಿ ಎಂಬ ಖ್ಯಾತಿ ಪಡೆದಿದ್ದ ಮಾಣಿಕಪ್ಪ - ಹಣುಮಂತಮ್ಮ ದಂಪತಿಗಳ ಪುತ್ರರಾಗಿದ್ದಾರೆ. ಉನ್ನತ ಶಿಕ್ಷಣದವರೆಗೂ ವ್ಯಾಸಂಗ ಮಾಡಿರುವ ಬಂಡೆಪ್ಪ ಖಾಶೆಂಪುರ್ ರವರು, ತಂದೆಯವರಂತೆ ಧಾನ - ಧರ್ಮ ಮಾಡುವ ಗುಣವನ್ನು ಮೈಗೂಡಿಸಿಕೊಂಡು ಸಾಗುತ್ತಿದ್ದಾರೆ.
ನಾನೊಬ್ಬ ಮಾಜಿ ಶಾಸಕ, ಮಾಜಿ ಸಚಿವ ಎಂಬ ಯಾವುದೇ ಗರ್ವವಿಲ್ಲದ ಅವರು, ತಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬರುವ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಪರಿಹರಿಸಿಕೊಡುವ ತಾಯಿ ಹೃದಯವನ್ನು ಬಂಡೆಪ್ಪ ಖಾಶೆಂಪುರ್ ರವರು ಹೊಂದಿದ್ದಾರೆ.
ಪ್ರಸ್ತುತ ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸವಾಗಿರುವ ಅವರು, ಪ್ರತಿನಿತ್ಯ ತಮ್ಮ ನಿವಾಸದ ಬಳಿಗೆ ಬರುವ ಜನರ ನೋವುಗಳಿಗೆ ಸ್ಪಂದಿಸುವ ಮೂಲಕ ಜನಮನ್ನಣೆ ಪಡೆದಿದ್ದಾರೆ. ಮೊದಲ ಬಾರಿಗೆ ಕೃಷಿ ಸಚಿವರಾಗಿ, ಎರಡನೇ ಬಾರಿಗೆ ಸಹಕಾರ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಅವರು, ಅನೇಕ ಮಹತ್ವದ ಯೋಜನೆಗಳನ್ನು ರಾಜ್ಯದ ಒಳಿತಿಗಾಗಿ ಜಾರಿಗೆ ತಂದಿದ್ದಾರೆ.
ಸರಳ, ಸಜ್ಜನಿಕೆಯ ರಾಜಕಾರಣಿ, ಜನಮನ್ನಣೆ ಪಡೆದ ಜನನಾಯಕ ಎಂಬ ಕೀರ್ತಿ ಹೊಂದಿರುವ ಅವರು ರಾಜ್ಯಾದ್ಯಂತ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಅಭಿಮಾನಿ ಸಂಘಗಳಿವೆ. ಬಂಡೆಪ್ಪ ಖಾಶೆಂಪುರ್ ರವರ ಕರ್ತವ್ಯ ನಿಷ್ಠೆ, ಅವರ ಪ್ರಾಮಾಣಿಕತೆಯನ್ನು ಮೆಚ್ಚಿರುವ ಜೆಡಿಎಸ್ ಪಕ್ಷ ಅವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನವನ್ನು ನೀಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನವನ್ನು ಹೊಂದಿದ್ದ ಅವರು, ರೈತರ, ಶ್ರಮಿಕರ, ಬಡವರ ಪರವಾಗಿ ಅನೇಕ ಬಾರಿ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಧಿವೇಶನ, ಬೆಳಗಾವಿಯಲ್ಲಿ ನಡೆದ ಅಧಿವೇಶನಗಳಲ್ಲಿ ಶಾಸಕರಾಗಿ ಬಂಡೆಪ್ಪ ಖಾಶೆಂಪುರ್ ರವರು ರೈತರ, ಬಡವರ, ಶ್ರಮಿಕ ವರ್ಗದವರ ಪರವಾಗಿ ಧ್ವನಿ ಎತ್ತಿದ್ದಾರೆ. ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಅಷ್ಟೇ ಅಲ್ಲದೇ ಬೀದರ್ ಜಿಲ್ಲೆ, ಬೀದರ್ ದಕ್ಷಿಣ ಕ್ಷೇತ್ರದ ಮಹತ್ವದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿರುವ ಕೀರ್ತಿಯನ್ನು ಸಹ ಅವರು ಹೊಂದಿದ್ದಾರೆ. ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ, ಕಾರಂಜಾ ಸಂತ್ರಸ್ತ ರೈತರ ಪರಿಹಾರದ ವಿಷಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಬಹಳಷ್ಟು ಬಾರಿ ಸದನದಲ್ಲಿ ಅವರು ಮಾತನಾಡಿದ್ದಾರೆ.
ಅಪಾರ ಜನಮನ್ನಣೆ ಹೊಂದಿರುವ ಬಂಡೆಪ್ಪ ಖಾಶೆಂಪುರ್ ರವರು ಈ ವರ್ಷ ಕ್ಷೇತ್ರದ ತಮ್ಮ ನಿವಾಸದಲ್ಲಿಯೇ ಉಳಿದುಕೊಂಡು, ಇಲ್ಲಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅವರ ಜನ್ಮದಿನವಾದ ಜೂನ್ 15ರಂದು ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿಯೇ ಇದ್ದು ಕ್ಷೇತ್ರದ, ಜಿಲ್ಲೆಯ ಜನರೊಂದಿಗೆ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ.
59ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಬಂಡೆಪ್ಪ ಖಾಶೆಂಪುರ್ ರವರಿಗೆ ಭಗವಂತ ಒಳ್ಳೆಯ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿ. ಸದಾಕಾಲವೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಅವರಿಂದ ಆಗಲಿ ಎಂದು ಶುಭ ಹಾರೈಸೋಣ.
ವಿಶೇಷ ಲೇಖನ: ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment