Wednesday, September 28, 2022

ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಮುಖಂಡರು

ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಮುಖಂಡರು



ಬೀದರ್ (ಸೆ.28): ಸೆ.05ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆದಿದ್ದ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬುಧವಾರ ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಬೀದರ್ ನಗರಕ್ಕೆ ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ್ ರವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಮುಖಂಡರು, ಕಾರ್ಯಕರ್ತರು  ಹೂಗುಚ್ಛ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ, ಶಾಸಕ ಬಂಡೆಪ್ಪ ಖಾಶೆಂಪುರ್ ರವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಬಾಲ್ಕಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೆಳಗಿ, ಬಾಲ್ಕಿ ನಗರಸಭೆ ಸದಸ್ಯ ಅಸ್ರಬ್ ಪಟೇಲ್, ಔರಾದ್ ತಾಲೂಕು ಅಧ್ಯಕ್ಷ ತಾನಾಜಿ ತೋರಣೆಕರ್, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಅರ್ಶದ್ ಮಾಹಾಗಾವೆ, ಮುಖಂಡರಾದ ಯಶ್ರಬ್ ಅಲಿ ಖಾದ್ರಿ, ಬಸವಣ್ಣಪ್ಪ, ಬೀದರ್ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಹಾರೂರಗೇರೆ, ಮುಖಂಡರಾದ ಮಾರುತಿ ಬೌದ್ಧೆ, ಬೀದರ್ ನಗರ ಸಭೆ ಸದಸ್ಯರಾದ ನವಾಜ್ ಖಾನ್, ಅಭಿ ಕಾಳೆ, ಮುಖಂಡರಾದ ಸಂಜುಕುಮಾರ್ ಚಿದ್ರಿ, ಅಶೋಕ ಕೊಡ್ಗೆ, ಸುದರ್ಶನ ಸುಂದರರಾಜ್, ನಬಿ ಖುರೇಷಿ,   ರೇವಣಸಿದ್ದಪ್ಪ ಬಾವ್ಗೆ, ಶರಣಪ್ಪ ಖಾಶೆಂಪುರ್, ರಾಜು ಕಡ್ಯಾಳ್, ಗುಂಡಪ್ಪ, ಪುಟ್ಟರಾಜ, ಹುಮಾನಾಬಾದ್ ತಾಲೂಕು ಅಧ್ಯಕ್ಷ ಸುರೇಶ ಸಿಗೆ, ಸುನೀಲ್ ದೊಮಾಳೆ, ಮುನ್ನಾ ಕೋಟೆ, ಚಿಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಚಿಟ್ಟಾ, ಭೋಮಗೊಂಡ ಚಿಟ್ಟವಾಡಿ, ಮಹೇಶ ಚಿಂತಾಮಣಿ, ರಾಜು ಶಿವಪೂಜೆ, ಅಬ್ಬು, ನಂದು ಪಾಟೀಲ್, ಸುರೇಶ್, ಶಿವು ಸಿಂದೋಲ್ ಸೇರಿದಂತೆ ಅನೇಕರಿದ್ದರು.
#bandeppa #khashempur Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Public Leader Bandeppa Kashempur

No comments:

Post a Comment