![]() |
ಪಿಎಸ್ಐ ನಾಗಪ್ಪ |
ದೊರೆ ನ್ಯೂಸ್ ಕನ್ನಡ / Dore News Kannada
ಪಾಮನಕಲ್ಲೂರು: (ಜ.18): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮೂಲದ ನಾಗಪ್ಪ ಪಿಎಸ್ಐರವರಿಗೆ ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ ಒಲಿದು ಬಂದಿದೆ.
ನಾಗಪ್ಪರವರು ರಾಜ್ಯದ ಅನೇಕ ಕಡೆಗಳಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಅವರು ಕಾರವಾರ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಾಗಪ್ಪರವರ ದಕ್ಷತೆ, ಪ್ರಾಮಾಣಿಕತೆ, ಸೇವಾ ನಿಷ್ಠತೆ ಮತ್ತು ಸಮಾಜಮುಖಿ ಹಾಗೂ ಸಾಹಿತ್ಯಪರ ಚಟುವಟಿಕೆಗಳನ್ನು ಗುರುತಿಸಿ ತುಮಕೂರಿನ ಮಾತೃಭೂಮಿ ಸೇವಾ ಟ್ರಸ್ಟ್ ನವರು ರಾಜ್ಯಮಟ್ಟದ "ಮಾತೃಭೂಮಿ ಸೇವಾರತ್ನ"ಪ್ರಶಸ್ತಿಗೆ ಪಿಎಸ್ಐ ನಾಗಪ್ಪರವರನ್ನು ಆಯ್ಕೆ ಮಾಡಿದ್ದಾರೆ.
ಫೇಸ್ಬುಕ್ ನಲ್ಲೂ ಸುದ್ದಿ ಓದಿ... ಪೇಜ್ ಲೈಕ್, ಫಾಲೋ ಮಾಡಿ..
ಜನವರಿ 22ರಂದು 'ಮಾತೃಭೂಮಿ' ಪ್ರದಾನ:
ಜನವರಿ 22ರಂದು ತುಮಕೂರು ನಗರದ ಕನ್ನಡ ಭವನದಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್ ವತಿಯಿಂದ ನಡೆಯಲಿರುವ 'ಕನ್ನಡ ಸಂಭ್ರಮ ಹಬ್ಬ' ದಲ್ಲಿ ಪಿಎಸ್ಐ ನಾಗಪ್ಪರವರಿಗೆ ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ, ಅಭಿನಂಧನಾ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಮಾತೃಭೂಮಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜ್ಯೋತಿ ಶ್ರೀನಿವಾಸ್ ರವರು ತಿಳಿಸಿದ್ದಾರೆ.
ದೊರೆ ನ್ಯೂಸ್ ಫೇಸ್ಬುಕ್ ಐಡಿಗೆ ಸ್ನೇಹಿತರಾಗಿ ಹೆಚ್ಚಿನ ಅಪ್ಡೇಟ್ ಪಡೆದುಕೊಳ್ಳಿ...
ಪಾಮನಕಲ್ಲೂರಿನ ಕೀರ್ತಿ ಹೆಚ್ಚಿಸಿ ಎಂದ್ರು ದೊಸ್ತ್ರು:
ನಾಗಪ್ಪಣ್ಣ ಪಿಎಸ್ಐ ಆಗಿ ಅನೇಕ ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಮಾತೃಭೂಮಿ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ. ಕಡು ಬಡತನದ ನಡುವೆ ಬೆಳೆದು ಬಂದ ಅವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ, ಗೌರವ ಸನ್ಮಾನಗಳನ್ನು ನೀಡಲಿ. ಅವರ ಸಮಾಜಮುಖಿ ಕೆಲಸ ಕಾರ್ಯಗಳು ಹೀಗೆ ಮುಂದುವರೆಯಲಿ. ಅವರಿಂದ ಇನ್ನಷ್ಟು ಜನಪರ ಕೆಲಸಗಳಾಗಲಿ. ನಾಗಪ್ಪಣ್ಣ ಪಾಮನಕಲ್ಲೂರು ಗ್ರಾಮದ ಕೀರ್ತಿ ಹೆಚ್ಚಿಸಲಿ ಎಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅವರ ಸ್ವಗ್ರಾಮವಾಗಿರುವ ಪಾಮನಕಲ್ಲೂರು ಗ್ರಾಮದ ಅವರ ಗೆಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ. ವಾಟ್ಸಾಪ್ ಗ್ರೂಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದಿಸಿದ್ದಾರೆ.
ವಿಶೇಷ ವರದಿ:
ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment