ರಾಯಚೂರು (ಜ.21): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು
ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯರವರ 904ನೇ ಜಯಂತೋತ್ಸವ ಕಾರ್ಯಕ್ರಮವನ್ನು
ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯಲ್ಲಿರುವ ನಿಜಶರಣ ಅಂಬಿಗರ
ಚೌಡಯ್ಯರವರ ನಾಮ ಫಲಕಕ್ಕೆ ಹಾಗೂ ಭಾವಚಿತ್ರಕ್ಕೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ
ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದಲ್ಲಿರುವ ಅಂಬಿಗ (ಗಂಗಮತ / ಕಬ್ಬಲಿಗ) ಸಮಾಜದ ಮುಖಂಡರು
ಹಾಗೂ ಗ್ರಾಮದ ಗುರು ಹಿರಿಯರು ಚಾಲನೆ ನೀಡಿದರು.
ಗ್ರಾಮದಲ್ಲಿರುವ ಮಹಾತ್ಮರ
ನಾಮ ಫಲಕಗಳಿಗೆ ಪೂಜೆ:
ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಎಂದಿನಂತೆ
ಗ್ರಾಮದಲ್ಲಿರುವ ಒಳಬಳ್ಳಾರಿ ಚನ್ನಬಸವೇಶ್ವರ, ಮಹರ್ಷಿ ವಾಲ್ಮೀಕಿ, ದಾಸ ಶ್ರೇಷ್ಠ ಭಕ್ತ ಕನಕದಾಸ,
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ರವರ ನಾಮಫಲಕಗಳು ಸೇರಿದಂತೆ
ಗ್ರಾಮದಲ್ಲಿರುವ ಅನೇಕ ಜನ ಮಹಾತ್ಮರ ನಾಮಫಲಕಗಳಿಗೆ ಗ್ರಾಮಸ್ಥರ ನೇತೃತ್ವದಲ್ಲಿ ಏಕಕಾಲಕ್ಕೆ ಪೂಜೆ
ಸಲ್ಲಿಸಿ ಭಾವೈಕ್ಯತೆ ಮೆರೆಯಲಾಯಿತು.
ಗ್ರಾಮ ಪಂಚಾಯತಿ
ಕಛೇರಿಯಲ್ಲಿ ಜಯಂತೋತ್ಸವ:
ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಗ್ರಾಮದಲ್ಲಿರುವ
ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯತಿ ಸಿಬ್ಬಂದಿ ಸೂಗಪ್ಪ ಮರೆಡ್ಡಿ ಹಾಗೂ ಗ್ರಾಮ ಪಂಚಾಯತಿ
ಸದಸ್ಯರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಅಂಬಿಗರ ಚೌಡಯ್ಯರವರ ಭಾವಚಿತ್ರಕ್ಕೆ ಪೂಜೆ
ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮದ ವಿವಿಧೆಡೆ ನಡೆದ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನಂದ
ಸ್ವಾಮೀಜಿ, ಹುಸೇನಪ್ಪ ಗೊಬ್ಬಿ, ಶಂಕ್ರಪ್ಪ ಸಾನಬಾಳ, ಪ್ರಭು ಧಣಿ, ಯಲ್ಲಪ್ಪ ಶಾಸ್ತ್ರಿ,
ನಾಗಲಿಂಗಪ್ಪ, ಮಲ್ಲಿಕಾರ್ಜುನ ಗೊಬ್ಬಿ, ರಮೇಶ್ ಗಡ್ಡಿಮನಿ, ಲಕ್ಷ್ಮಣ ಚೌಡ್ಲಿ, ಬಸವರಾಜ ಪೋಸ್ಟ್
ಮಾಸ್ಟರ್, ದುರುಗಪ್ಪ ಕಲ್ಲೂರು, ಶ್ರೀನಿವಾಸ್ ಸಾನಬಾಳ, ಕಿಟ್ಟಪ್ಪ ಈಳಿಗೇರ, ಸೈಕಲ್ ಶಾಪ್ ಪಾಷಾ,
ವೀರೇಶ ಹೊನ್ನಳ್ಳಿ, ಶರಣಪ್ಪ ಕೊಂಡಾಲ್, ಮರಿಸ್ವಾಮಿ, ನಿಂಗಪ್ಪ ಕುರುಬರು, ರಾಮಚಂದ್ರಪ್ಪ ಕಲ್ಲೂರು,
ಮಲ್ಲಪ್ಪ, ಮಲ್ಲಿಕಾರ್ಜುನ ನಾಲ್ವರಕರ್, ಶಿವು ಬಳಿ, ಶಶಿಧರ್, ಲಕ್ಷ್ಮಣ ದೊರೆ, ಮಹಾದೇವಪ್ಪ
ಕಲ್ಲೂರು, ದುರ್ಗಸಿಂಗ್ ಸೇರಿದಂತೆ ಅನೇಕರಿದ್ದರು.
No comments:
Post a Comment