ಪಾಮನಕಲ್ಲೂರು: ಸಡಗರದಿಂದ ಜರುಗಿದ ಕನ್ನಡ ರಾಜ್ಯೋತ್ಸವ
"DORE NEWS KANNADA ದೊರೆ ನ್ಯೂಸ್ ಕನ್ನಡ " ಇದು ಕನ್ನಡ ವೆಬ್ ಸೈಟ್ ಆಗಿದ್ದು, ದೇಶದ ಮೂಲೆಮೂಲೆಯಲ್ಲಿನ ನಿಖರ ಸುದ್ದಿಗಳನ್ನು ನಿಮ್ಮ ಮುಂದಿಡುವ ಅಂತರ್ಜಾಲ ತಾಣವಾಗಿದೆ.
Wednesday, November 1, 2023
ಪಾಮನಕಲ್ಲೂರು: ಸಡಗರದಿಂದ ಜರುಗಿದ ಕನ್ನಡ ರಾಜ್ಯೋತ್ಸವ
Thursday, October 26, 2023
ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ
ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ
![]() |
| ಪಿಡಿಒಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಗ್ರಾಮಸ್ಥರು |
Tuesday, October 17, 2023
ಕೆ.ಪಿ.ಆರ್.ಎಸ್ ಪಾಮನಕಲ್ಲೂರು ಗ್ರಾಮ ಘಟಕ ರಚನೆ
ರಾಯಚೂರು (ಅ.17): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘ (ಕೆಪಿಆರ್ಎಸ್) ದ ಗ್ರಾಮ ಘಟಕವನ್ನು ಸೋಮವಾರ ರಾತ್ರಿ ರಚಿಸಿ, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಪಾಮನಕಲ್ಲೂರು ಗ್ರಾಮದ ಮಲ್ಲಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸ ಸಾನಬಾಳ, ಉಪಾಧ್ಯಕ್ಷರುಗಳನ್ನಾಗಿ ಬಸವರಾಜ ಛಲವಾದಿ, ಕನಕಪ್ಪ ಹರಿಜನ, ಸಹ ಕಾರ್ಯದರ್ಶಿಗಳನ್ನಾಗಿ ಯಮನಪ್ಪ ಯದ್ದಲದೊಡ್ಡಿ, ಹನುಮಂತ ಕಲ್ಲೂರು, ಖಜಾಂಚಿಯನ್ನಾಗಿ ರಾಜೇಶ ಬಾಂಬೆ, ಸದಸ್ಯರನ್ನಾಗಿ ನಾಗೇಶ ಟೂಬಾಕಿ, ರಮೇಶ್ ಕಲ್ಲೂರು, ಹುಲಗಪ್ಪ ಗಡ್ಡಿಮನಿ, ದೇವಪ್ಪ ಹೂನೂರು, ಪಿಡ್ಡಪ್ಪ ಶಿರಹಟ್ಟಿ, ಕರೆಪ್ಪ ಗಂಟ್ಲಿ, ದುರ್ಗಾಸಿಂಗ್ ರಜಪೂತ್, ರಂಗಪ್ಪ ಹರಕೇರಿ, ದುರುಗಪ್ಪ ಗಂಟ್ಲಿರವರನ್ನು ನೇಮಕ ಮಾಡಲಾಗಿದೆ.
ಕೆಪಿಆರ್ಎಸ್ ನ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ವೀರಾಪೂರ್, ಮುಖಂಡರಾದ ನಿಂಗಪ್ಪ ವೀರಾಪೂರ್ ರವರು ನೂತನ ಘಟಕ ರಚಿಸಿ, ಪದಾಧಿಕಾರಿಗಳನ್ನು ನೇಮಿಸಿದರು.
ಈ ಸಂದರ್ಭದಲ್ಲಿ ರಮೇಶ್ ಗಂಟ್ಲಿ ಪಾಮನಕಲ್ಲೂರು, ಅಮರೇಶ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.
Saturday, September 30, 2023
ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾದ ಮಾರುತಿ ಖಾಶೆಂಪುರ್
ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾದ ಮಾರುತಿ ಖಾಶೆಂಪುರ್
![]() |
| ಕೆಎಮ್ಎಫ್ ನಿರ್ದೇಶಕರನ್ನು ಸನ್ಮಾನಿಸಿದ ಮುಖಂಡರು |
ಬೀದರ್ (ಸೆ.30): ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಬೀದರ್ ವಿಭಾಗದ ಸಾಮಾನ್ಯ ಚುನಾವಣೆಯಲ್ಲಿ ಗೆದ್ದು ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾಗಿ ಆಯ್ಕೆಯಾದ ಮಾರುತಿ ಖಾಶೆಂಪುರ್ ರವರು ತಮ್ಮ ಅಣ್ಣನವರಾದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
Monday, September 25, 2023
ಮೈತ್ರಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಮೈತ್ರಿ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಸ್ಪಷ್ಟನೆ
![]() |
| ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮಾತನಾಡಿದರು. |
Tuesday, September 19, 2023
ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ
ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ
![]() |
| Ayyanna Nayaka Pamanakallur ಅಯ್ಯಣ್ಣ ನಾಯಕ ಪಾಮನಕಲ್ಲೂರು |
ರಾಯಚೂರು (ಸೆ.19): ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಸ್ಥಾನಕ್ಕೆ ಯುವ ಪತ್ರಕರ್ತ (ಬರಹಗಾರ) ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮೂಲದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೀನಾಮೆ ನೀಡಿದ್ದಾರೆ.
ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ರಾಜೇಶ್ ನಾಯಕರವರಿಗೆ ಸೋಮವಾರ ಸಂಜೆ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ಪತ್ರ ಬರೆದಿದ್ದಾರೆ.
‘ಇತ್ತೀಚಿನ ಕೆಲ ವರ್ಷಗಳ ಹಿಂದೆ ರಚಿಸಲಾಗಿದ್ದ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ರಾಜ್ಯ ಘಟಕದಲ್ಲಿ ತಾವು ನನಗೆ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ನೀಡಿದ್ದಿರಿ. ಕಾರಣಾಂತರಗಳಿಂದ ನಾನು ತಾವು ನೀಡಿದ್ದ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ಗೆ ಈ ಪತ್ರದ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಪತ್ರವನ್ನು ಪರಿಗಣಿಸಿ ನನ್ನ ರಾಜೀನಾಮೆಯನ್ನು ಕೂಡಲೇ ಅಂಗೀಕಾರ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೀದ್ದೇನೆ.
ತಮ್ಮ ಸಮಿತಿಯಲ್ಲಿ ನನಗೆ ಅವಕಾಶ ನೀಡಿದ್ದ ಸಮಿತಿಯ ಸರ್ವ ಸದಸ್ಯರಿಗೂ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನೊಂದಿಗೆ ಇದ್ದು ಸಹಕರಿಸಿದ ಸರ್ವರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇನ್ನೂ ಮುಂದೆ ತಮ್ಮ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ಯ ಕಾರ್ಯಚಟುವಟಿಕೆಗಳಿಂದ ದೂರವಿರಲು ಬಯಸಿದ ನನಗೆ ತಾವು ಸಹಕರಿಸುವಿರಿ ಎಂದು ನಂಬಿದ್ದೇನೆ. ಮತ್ತೊಮ್ಮೆ ಸರ್ವರಿಗೂ ಧನ್ಯವಾದಗಳು. ತಮ್ಮ ಕಾರ್ಯಗಳಿಗೆ ಶುಭವಾಗಲಿ. ವಂದನೆಗಳು’ ಎಂದು ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೇಶ್ ನಾಯಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
Sunday, September 10, 2023
ಜೆಡಿಎಸ್ ಸಮಾವೇಶದಲ್ಲಿ ಗರ್ಜಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
![]() |
| ಬಂಡೆಪ್ಪ ಖಾಶೆಂಪುರ್ (ಮಾಜಿ ಸಚಿವರು, ಕರ್ನಾಟಕ ಸರ್ಕಾರ) |
ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಪಕ್ಷದ ಮುಖಂಡರ, ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿದ ಸಂಪೂರ್ಣ ವಿಡಿಯೋ..
ಭಾಷಣದ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ...
#ಬಂಡೆಪ್ಪ #ಖಾಶೆಂಪುರ್ #bandeppakashempur #Bandeppa #Khashempur #jds #karnataka #kannada #india #news #jdsnews #bidar #south #mla #minister #hdk #hdkumaraswamy #hdd #hddevegowda





.jpg)
