Wednesday, October 3, 2018

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ವಾಲ್ಮೀಕಿ ನಾಯಕ ಸಮಾಜದಿಂದ ಸನ್ಮಾನ

ದೊರೆನ್ಯೂಸ್ (ಬೆಳಗಾವಿ): ನಗರಾಭಿವೃದ್ದಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರೀತಮ್ ನಸಲಾಪುರೆ ಅವರನ್ನು ಬೆಳಗಾವಿ ಜಿಲ್ಲೆ ವಾಲ್ಮೀಕಿ ನಾಯಕ ಸಮಾಜದ  ಅಧ್ಯಕ್ಷ ರಾಜಶೇಖರ್ ತಳವಾರ ಹೂಗುಚ್ಛ ನೀಡಿ ಸನ್ಮಾನಿಸಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಸನ್ಮಾನಿಸುತ್ತಿರುವ ವಾಲ್ಮೀಕಿ ನಾಯಕ ಸಮಾಜದ ಮುಖಂಡರು.

ಈ  ಸಂದರ್ಭದಲ್ಲಿ ಬೆಳಗಾವಿಯ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಾಗಡೆ ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಳ್ಳಾರಿ ಪ್ರವಾಸದ ನಂತರ ರಾಯಚೂರು ಪ್ರವಾಸ ಕೈಗೊಂಡಿರುವ ವಾಲ್ಮೀಕಿ ಸಮಾಜದ ಗುರುಗಳು

ದೊರೆನ್ಯೂಸ್ (ರಾಯಚೂರು): ಬಳ್ಳಾರಿ ಜಿಲ್ಲೆಯ ಪ್ರವಾಸದ ನಂತರ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರು ಪೀಠದ ಗುರುಗಳಾದ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. 
ಬುಧುವಾರ ಸಂಜೆ ರಾಯಚೂರು ಜಿಲ್ಲೆಗೆ ಆಗಮಿಸಿದ ಶ್ರೀಗಳು ಸಿಂಧನೂರಿನ ವಾಲ್ಮೀಕಿ ಸಮಾಜದ ಮುಖಂಡ ಶಂಕರಗೌಡ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ರಾಯಚೂರು ಜಿಲ್ಲೆಗೆ ಆಗಮಿಸಿದ ವಾಲ್ಮೀಕಿ ಶ್ರೀಗಳನ್ನು ಸ್ವಾಗತಿಸುತ್ತಿರುವ ವಾಲ್ಮೀಕಿ ನಾಯಕ ಸಮಾಜದ ಮುಖಂಡರು.

ಅಲ್ಲದೇ ಮಸ್ಕಿ ಹತ್ತಿರದ ಗೌಡನಬಾವಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಅನ್ಯ ಸಮಾಜದವರ ಕಿರುಕುಳದಿಂದ ತಂದೆ - ಮಗಳು ಆತ್ಮಹತ್ಯೆ ಮಾಡಿಕೊಂಡ್ಡಿದ್ದರಿಂದ ಅವರ ಮನೆಗೆ ತೆರಳಿ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.
ಇನ್ನೂ ಗುರುವಾರದಂದು ರಾಯಚೂರು ನಗರದಲ್ಲಿ ಸಮಾಜದ ವಿಚಾರಗಳ ಬಗ್ಗೆ ಮತ್ತು ನಕಲಿ ಜಾತಿ‌ ಪ್ರಮಾಣಪತ್ರದ ವಿರುದ್ಧ ಕಲಬುರಗಿಯಲ್ಲಿ ನಡೆಯಲಿರುವ ಹೋರಾಟಗಳ ಬಗ್ಗೆ ಚರ್ಚೆ ನಡೆಯಲಿದ್ದು, ಗ್ರಾಮಗಳ ಭೇಟಿಯ ನಂತರ ಶ್ರೀಗಳು ರಾಯಚೂರಿಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ನಂದಕುಮಾರ್ ಮಾಲಿಪಾಟೀಲ್, ಮುಖಂಡರಾದ ಗುರುನಾಥ್ ಹುಲಕಲ್ ಸೇರಿದಂತೆ ಅನೇಕರು‌ ಉಪಸ್ಥಿತರಿದ್ದರು.

Tuesday, October 2, 2018

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಗುಡ್ಡಗಾಡು ಓಟಕ್ಕೆ ಹನುಮಂತ ಗಂಗಪ್ಪ ನಾಯಕ ಆಯ್ಕೆ

ಹನುಮಂತ ಗಂಗಪ್ಪ ನಾಯಕ

ದೊರೆನ್ಯೂಸ್: ರಾಯಚೂರು ಜಿಲ್ಲೆ ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹನುಮಂತ ಗಂಗಪ್ಪ ನಾಯಕ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಗುಡ್ಡಗಾಡು ಓಟಕ್ಕೆ ಆಯ್ಕೆಯಾಗಿದ್ದಾನೆಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹಾಂತಗೌಡ ಪಾಟೀಲ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ವಿದ್ಯಾರ್ಥಿ ಹನುಮಂತ ಗಂಗಪ್ಪ ನಾಯಕ ಗುಲಬರ್ಗಾ ವಿಶ್ವವಿದ್ಯಾಲಯದ ಗುಡ್ಡಗಾಡು ಓಟದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಇದೇ ನಾಲ್ಕರಂದು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಗುಡ್ಡಗಾಡು ಓಟದಲ್ಲಿ ಭಾಗವಹಿಸಲಿದ್ದಾನೆ.
ಈ ವಿದ್ಯಾರ್ಥಿಯು ಕಾಲೇಜಿಗೆ ಹಾಗೂ ರಾಯಚೂರು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಇವರ ಸಾಧನೆಯನ್ನು ಶ್ಲಾಘಿಸಿ ಲಿಂಗಸುಗೂರಿನ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಡಿ.ಎಸ್ ಹೂಲಗೇರಿ, ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಾನಂದ ನರಹಟ್ಟಿ, ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿನಂದಿಸಿ ಶುಭ ಕೋರಿದ್ದಾರೆಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಸಮಸ್ಯೆ ಇದ್ರು ನಮಗೆ ತಿಳಿಸಿ: ಚನ್ನಬಸವರಾಜ ಕಳ್ಳಿಮರದ

ದೊರೆನ್ಯೂಸ್: ರಾಜ್ಯದಲ್ಲಿ ಯಾವುದೇ ಸಮಸ್ಯೆ ಇದ್ದರು ನಮಗೆ ತಿಳಿಸಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆಂದು ಕನ್ನಡ ರಕ್ಷಣಾ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ತಿಳಿಸಿದ್ದಾರೆ.
ದೊರೆನ್ಯೂಸ್ ಜೊತೆಗೆ ಮಾತನಾಡಿದ ಚನ್ನಬಸವರಾಜ ಕಳ್ಳಿಮರದ, ಈ ನಾಡು, ನುಡಿ, ನೆಲ, ಜಲ ಮತ್ತು ಜನ ಸೇವೆಗಾಗಿ ಹೋರಾಡಲು ಕನ್ನಡ ರಕ್ಷಣಾ ಸೇನೆ  ಸದಾಕಾಲವೂ ಸಿದ್ಧವಾಗಿದೆ ಎಂದು ತಿಳಿಸಿದರು. 
ರಾಜ್ಯದ ವಿದ್ಯಾರ್ಥಿಗಳಿಗೆ, ಅಥವಾ ಸಾರ್ವಜನಿಕರಿಗೆ, ನೆಲ, ಜಲ, ನಾಡು ನುಡಿಯ ವಿಚಾರದಲ್ಲಿ ಸಮಸ್ಯೆಯಾಗುತ್ತಿದ್ದರೆ 9901751947 ಮೊಬೈಲ್ ಸಂಖ್ಯೆಯ ಮೂಲಕ ಸಮಸ್ಯೆಗಳನ್ನು ತಿಳಿಸಬಹುದೆಂದು ಚನ್ನಬಸವರಾಜ ಕಳ್ಳಿಮರದ ಹೇಳಿದ್ದಾರೆ.

ಸರ್ಜಾಪುರದಲ್ಲಿ ಇಬ್ಬರು ಮಹಾತ್ಮರ ನಡುವೆ ಒಂದೇ ಹಾರ, ಒಂದೇ ಕಾಯಿ..! ಏನಿದು ಘಟನೆ..?

ದೊರೆನ್ಯೂಸ್: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿಯಲ್ಲಿ ಒಂದೇ ಕಾಯಿ ಮತ್ತು ಒಂದೇ ಹಾರದಲ್ಲಿ ಇಬ್ಬರು ಮಹಾತ್ಮರ ಜಯಂತಿ ಆಚರಿಸುವ ಮೂಲಕ ಅನೇಕರ ಟೀಕೆಗೆ ಗುರಿಯಾದಂತಾಗಿದೆ.
ಸರ್ಜಾಪುರದಲ್ಲಿ ಆಚರಿಸಲಾದ ಮಹಾತ್ಮರ ಜಯಂತಿ, ಇಬ್ಬರು ಮಹಾತ್ಮರ ನಡುವೆ ಒಂದೇ ಹಾರ, ಒಂದೇ ಕಾಯಿ ಹಾಕುವ ಮೂಲಕ ಪೂಜೆ ಸಲ್ಲಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು.

ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಡಿಓ ಮತ್ತು ಜನಪ್ರತಿನಿಧಿಗಳ ಮುಖಂಡತ್ವದಲ್ಲಿ ಆಚರಿಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಾತ್ಮರ ಪೋಟೋಗಳನ್ನು ಜೊತೆಗೆ ಇಟ್ಟು ಒಂದೇ ಹಾರದಲ್ಲಿ ಮಹಾತ್ಮ ಗಾಂಧಿಯವರ ಪೋಟೋಕ್ಕೆ ಹಾರ ಹಾಕುವ ಮೂಲಕ ಅದರಲ್ಲಿನ ಒಂದು ಹೂ ಅನ್ನು ಶಾಸ್ತ್ರಿ ಯವರ ಪೋಟೋಕ್ಕೆ ಹಾಕಲಾಗಿದೆ. ಅಲ್ಲದೇ ಒಂದೇ ಒಂದು ಕಾಯಿಯನ್ನು ಹೊಡೆಯುವ ಮೂಲಕ ಇಬ್ಬರು ಮಹಾತ್ಮರ ಪೋಟೋಗಳ ಮುಂದೆ ಒಂದೊಂದು ಒಳುಗಳನ್ನು ಇಡಲಾಗಿದೆ.
ಇನ್ನೂ ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅನೇಕರು ಈ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಎರಡು ಕಾಯಿ ತರಲು ಆಗಲಿಲ್ಲವೇ..? ಅವರಿಗೆ ಕಾಯಿ ತರಲು ವಿಶೇಷ ಅನುಧಾನ ಬೇಕಿತ್ತೇ..? ಎರಡು ಹಾರ, ಎರಡು ಕಾಯಿ ತರುವಷ್ಟು ಅನುಧಾನ ಪಂಚಾಯತಿಯಲ್ಲಿ‌ ಇರಲಿಲ್ಲವೇ..? ಎಂಬ‌ ವಿವಿಧ ಪ್ರಶ್ನೆಗಳ ಮೂಲಕ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 
ಈ ರೀತಿ ಮಾಡಿ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರುವುದನ್ನು ಸರ್ಕಾರಿ ಅಧಿಕಾರಿಗಳು, ಸಂಬಂಧಿಸಿದ ಜನಪ್ರತಿನಿಧಿಗಳು ನಿಲ್ಲಿಸಬೇಕು, ಅಧಿಕಾರಿಗಳು ಈ ರೀತಿಯ ಧೋರಣೆಗಳನ್ನು ಮುಂದುವರೆಸಬಾರದು ಎಂದು ಕೆಲವರು ಅಗ್ರಹಿಸಿದ್ದಾರೆ.
ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

ಇದೇ ನಾಲ್ಕರಂದು ರಾಯಚೂರಿಗೆ ಆಗಮಿಸಲಿರುವ ವಾಲ್ಮೀಕಿ ಸಮಾಜದ ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ

ದೊರೆನ್ಯೂಸ್ (ರಾಯಚೂರು): ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಗುರುಗಳಾಗಿರುವ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ಇದೇ 4ರಂದು ರಾಯಚೂರಿಗೆ ಆಗಮಿಸಲಿದ್ದು ಅಂದು ಬೆಳಿಗ್ಗೆ 10.00 ಗಂಟೆಗೆ ಸಮಾಜದವರೊಂದಿಗೆ ಮಂತ್ರಿ ಗಾರ್ಡನನಲ್ಲಿ ಸಭೆ ನಡೆಸಲಿದ್ದಾರೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಹೇಳಿದರು. 
ಅವರಿಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರದಲ್ಲಿರುವಂತೆ 7.5% ಮೀಸಲಾತಿ  ಹೆಚ್ಚಳ ಹಾಗೂ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಕುರಿತು ಚರ್ಚಿಸಲು ಪ್ರಸನ್ನಾನಂದ ಪುರಿ ಸ್ವಾಮೀಜಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರವಾಸವನ್ನು ಹಮ್ಮಿಕೊಂಡಿದ್ದು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ವಿಜಯಪುರು  ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ರಾಯಚೂರಿನ ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ರಘುವೀರ್ ನಾಯಕ, ಜೊತೆಗಿದ್ದ ಮುಖಂಡರು.

ಇದೇ ದಿನಾಂಕ 15 ರಂದು ಕಲಬುರ್ಗಿಯ ಪ್ರಾದೇಶಿಕ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಬಗ್ಗೆ ಚರ್ಚಿಸಲು ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ, ಸಮಾಜದ ಬಂಧುಗಳು ,ಮುಖಂಡರು , ಚಿಂತಕರು ,  ಪ್ರತಿನಿಧಿಗಳು , ಸಂಘಟನೆಗಳ ಪದಾಧಿಕಾರಿಗಳು , ಬುದ್ದಿ ಜೀವಿಗಳು , ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ರಘುವೀರ್ ನಾಯಕ ಹೇಳಿದರು. 
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ನಾಯಕ, ವೀರೇಶ ನಾಯಕ,‌ ರಮೇಶ ನಾಯಕ, ಆಂಜಿನಯ್ಯ ನಾಯಕ, ಭೀಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Monday, October 1, 2018

ಶಾಸಕ ಪ್ರತಾಪಗೌಡ ಪಾಟೀಲ್ ರ 64ನೇ ವರ್ಷದ ಜನ್ಮ ದಿನದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ದೊರೆನ್ಯೂಸ್: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ರ 64ನೇ ವರ್ಷದ ಜನ್ಮ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಇಂದು ಮಸ್ಕಿಯ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಮಸ್ಕಿಯ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆದ ಶಾಸಕ ಪ್ರತಾಪಗೌಡ ಪಾಟೀಲ್ ರ ಹುಟ್ಟು ಹಬ್ಬ ಮತ್ತು ರಕ್ತದಾನ ಶಿಬಿರ

ಸಿಂಧನೂರಿನ ಶ್ರೀ ಶಕ್ತಿ ರಕ್ತ ಭಂಡಾರದ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪ್ರತಾಪಗೌಡ ಪಾಟೀಲ್ ಅಭಿಮಾನಿ ಬಳಗದ ಸದಸ್ಯರು ಸೇರಿದಂತೆ ಅನೇಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಶಾಸಕ ಪ್ರತಾಪಗೌಡ ಪಾಟೀಲ್ ರಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಅನೇಕರು ಶುಭ ಕೋರುವ ಮೂಲಕ‌ ಶಿಬಿರಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಮುಖಂಡರಾದ ಚೇತನ್ ಪಾಟೀಲ್‌, ಪ್ರಸನ್ನ ಪಾಟೀಲ್, ಬಸವರಾಜ ನಾಯಕ ಕೋಟೆಕಲ್, ಹುಚಪ್ಪ ನಾಯಕ ಕೋಟೆಕಲ್ ಮತ್ತು ಪ್ರತಾಪಗೌಡ ಪಾಟೀಲ್ ಅಭಿಮಾನಿ ಬಳಗದ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು‌.

ಬಸ್ ನಿಲ್ದಾಣ ನಿರ್ಮಿಸಲು ಕಾಲೇಜು ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ

ದೊರೆನ್ಯೂಸ್: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹತ್ತಿರ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಲಿಂಗಸುಗೂರಿನ ಶಾಸಕ ಡಿ.ಎಸ್ ಹುಲಿಗೇರಿಗೆ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣ ನಿರ್ಮಿಸುವ ಕುರಿತು ಶಾಸಕರಿಗೆ ಮನವಿ ಸಲ್ಲಿಸಿ ಸಮಸ್ಯೆಗಳನ್ನು ತಿಳಿಸುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು

ವಿದ್ಯಾರ್ಥಿ ಮುಖಂಡ ಲಕ್ಷ್ಮಣ ನಾಯಕ ನೇತೃತ್ವದಲ್ಲಿ ಕಾಲೇಜು ಆವರಣದಲ್ಲಿ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಕಾಲೇಜು ಪಟ್ಟಣದಿಂದ ದೂರವಿದ್ದ ಕಾರಣ ಸರಿಯಾದ ಸಮಯಕ್ಕೆ ಬರುವುದು, ಹೋಗುವುದು ಆಗುತ್ತಿಲ್ಲ, ನಿಲ್ದಾಣವಿಲ್ಲದ ಕಾರಣ ಬಸ್ ನಿಲ್ಲಿಸಲು ಚಾಲಕರು, ನಿರ್ವಾಹಕರು ಮುಂದಾಗುತ್ತಿಲ್ಲ, ಇದರಿಂದ ಸಮಸ್ಯೆಯಾಗುತ್ತಿದ್ದು ಕಾಲೇಜಿಗಾಗಿ ಬಸ್ ನಿಲ್ದಾಣ ನಿರ್ಮಿಸಿ, ಬಸ್ ನಿಲ್ಲಿಸುವ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸಿದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳದಲ್ಲೇ   ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ  ಕ್ರಮಕೈಗೊಳ್ಳಿ ಎಂದು ತಿಳಿಸುವ ಮೂಲಕ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಲಕ್ಷ್ಮಣ ನಾಯಕ ಸೇರಿದಂತೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ವರದಿ: ಲಕ್ಷ್ಮಣ ನಾಯಕ ಲಿಂಗಸುಗೂರು

ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸಿ, ಕಠೀಣ ಕಾನೂನು ಕ್ರಮ ಕೈಗೊಳ್ಳಿ

ದೊರೆನ್ಯೂಸ್: ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿ ಹೈದರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ  ರಾಯಚೂರು ಜಿಲ್ಲೆಯ ಲಿಂಗಸುಗೂರಿನ ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ  ಸಂಘದ ಮುಖಂಡರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಲಿಂಗಸುಗೂರಿನ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿರುವ ಮುಖಂಡರು




ಕಳೆದ ತಿಂಗಳು 21ರಂದು ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಲಾಗಿದ್ದು,  ಅಪಮಾನ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಅಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮವಹಿಸಬೇಕು,  ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಮೂಲಕ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಂದೀಶ ನಾಯಕ, ಮುಖಂಡರಾದ ಮುದುಕಪ್ಪ ನಾಯಕ,  ಪಿಡ್ಡಪ್ಪ ನಾಯಕ,  ಹುಲುಗಪ್ಪ ನಾಯಕ, ರಾಜಾ ಸೇತುರಾಮ್ ನಾಯಕ, ಚಿನ್ನು ನಾಯಕ, ಮೌನೇಶ ನಾಯಕ, ಹನುಮಂತ ನಾಯಕ, ಸುರೇಶ ನಾಯಕ, ದುರುಗಪ್ಪ ನಾಯಕ, ಯಲ್ಲನಗೌಡ, ಆಂಜನೇಯ,  ಸಂಜು ರಕ್ಕಸಗಿ, ಪ್ರೇಮಕುಮಾರ, ಅಶೋಕ ನಾಯಕ ದಿದ್ದಗಿ, ರವಿಕುಮಾರ್ ನಾಯಕ, ಲಕ್ಷ್ಮಣ ನಾಯಕ ಸೇರಿದಂತೆ ಅನೇಕರು ಇದ್ದರು.