ದೊರೆನ್ಯೂಸ್: ರಾಜ್ಯದಲ್ಲಿ ಯಾವುದೇ ಸಮಸ್ಯೆ ಇದ್ದರು ನಮಗೆ ತಿಳಿಸಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆಂದು ಕನ್ನಡ ರಕ್ಷಣಾ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ತಿಳಿಸಿದ್ದಾರೆ.
ದೊರೆನ್ಯೂಸ್ ಜೊತೆಗೆ ಮಾತನಾಡಿದ ಚನ್ನಬಸವರಾಜ ಕಳ್ಳಿಮರದ, ಈ ನಾಡು, ನುಡಿ, ನೆಲ, ಜಲ ಮತ್ತು ಜನ ಸೇವೆಗಾಗಿ ಹೋರಾಡಲು ಕನ್ನಡ ರಕ್ಷಣಾ ಸೇನೆ ಸದಾಕಾಲವೂ ಸಿದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದ ವಿದ್ಯಾರ್ಥಿಗಳಿಗೆ, ಅಥವಾ ಸಾರ್ವಜನಿಕರಿಗೆ, ನೆಲ, ಜಲ, ನಾಡು ನುಡಿಯ ವಿಚಾರದಲ್ಲಿ ಸಮಸ್ಯೆಯಾಗುತ್ತಿದ್ದರೆ 9901751947 ಮೊಬೈಲ್ ಸಂಖ್ಯೆಯ ಮೂಲಕ ಸಮಸ್ಯೆಗಳನ್ನು ತಿಳಿಸಬಹುದೆಂದು ಚನ್ನಬಸವರಾಜ ಕಳ್ಳಿಮರದ ಹೇಳಿದ್ದಾರೆ.
No comments:
Post a Comment