Tuesday, October 2, 2018

ಸರ್ಜಾಪುರದಲ್ಲಿ ಇಬ್ಬರು ಮಹಾತ್ಮರ ನಡುವೆ ಒಂದೇ ಹಾರ, ಒಂದೇ ಕಾಯಿ..! ಏನಿದು ಘಟನೆ..?

ದೊರೆನ್ಯೂಸ್: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿಯಲ್ಲಿ ಒಂದೇ ಕಾಯಿ ಮತ್ತು ಒಂದೇ ಹಾರದಲ್ಲಿ ಇಬ್ಬರು ಮಹಾತ್ಮರ ಜಯಂತಿ ಆಚರಿಸುವ ಮೂಲಕ ಅನೇಕರ ಟೀಕೆಗೆ ಗುರಿಯಾದಂತಾಗಿದೆ.
ಸರ್ಜಾಪುರದಲ್ಲಿ ಆಚರಿಸಲಾದ ಮಹಾತ್ಮರ ಜಯಂತಿ, ಇಬ್ಬರು ಮಹಾತ್ಮರ ನಡುವೆ ಒಂದೇ ಹಾರ, ಒಂದೇ ಕಾಯಿ ಹಾಕುವ ಮೂಲಕ ಪೂಜೆ ಸಲ್ಲಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು.

ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಡಿಓ ಮತ್ತು ಜನಪ್ರತಿನಿಧಿಗಳ ಮುಖಂಡತ್ವದಲ್ಲಿ ಆಚರಿಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಾತ್ಮರ ಪೋಟೋಗಳನ್ನು ಜೊತೆಗೆ ಇಟ್ಟು ಒಂದೇ ಹಾರದಲ್ಲಿ ಮಹಾತ್ಮ ಗಾಂಧಿಯವರ ಪೋಟೋಕ್ಕೆ ಹಾರ ಹಾಕುವ ಮೂಲಕ ಅದರಲ್ಲಿನ ಒಂದು ಹೂ ಅನ್ನು ಶಾಸ್ತ್ರಿ ಯವರ ಪೋಟೋಕ್ಕೆ ಹಾಕಲಾಗಿದೆ. ಅಲ್ಲದೇ ಒಂದೇ ಒಂದು ಕಾಯಿಯನ್ನು ಹೊಡೆಯುವ ಮೂಲಕ ಇಬ್ಬರು ಮಹಾತ್ಮರ ಪೋಟೋಗಳ ಮುಂದೆ ಒಂದೊಂದು ಒಳುಗಳನ್ನು ಇಡಲಾಗಿದೆ.
ಇನ್ನೂ ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅನೇಕರು ಈ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಎರಡು ಕಾಯಿ ತರಲು ಆಗಲಿಲ್ಲವೇ..? ಅವರಿಗೆ ಕಾಯಿ ತರಲು ವಿಶೇಷ ಅನುಧಾನ ಬೇಕಿತ್ತೇ..? ಎರಡು ಹಾರ, ಎರಡು ಕಾಯಿ ತರುವಷ್ಟು ಅನುಧಾನ ಪಂಚಾಯತಿಯಲ್ಲಿ‌ ಇರಲಿಲ್ಲವೇ..? ಎಂಬ‌ ವಿವಿಧ ಪ್ರಶ್ನೆಗಳ ಮೂಲಕ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 
ಈ ರೀತಿ ಮಾಡಿ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರುವುದನ್ನು ಸರ್ಕಾರಿ ಅಧಿಕಾರಿಗಳು, ಸಂಬಂಧಿಸಿದ ಜನಪ್ರತಿನಿಧಿಗಳು ನಿಲ್ಲಿಸಬೇಕು, ಅಧಿಕಾರಿಗಳು ಈ ರೀತಿಯ ಧೋರಣೆಗಳನ್ನು ಮುಂದುವರೆಸಬಾರದು ಎಂದು ಕೆಲವರು ಅಗ್ರಹಿಸಿದ್ದಾರೆ.
ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

No comments:

Post a Comment