ದೊರೆನ್ಯೂಸ್: ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿ ಹೈದರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
![]() |
ಲಿಂಗಸುಗೂರಿನ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿರುವ ಮುಖಂಡರು |
ಕಳೆದ ತಿಂಗಳು 21ರಂದು ಮಹರ್ಷಿ ವಾಲ್ಮೀಕಿ ಮೂರ್ತಿಗೆ ಅಪಮಾನ ಮಾಡಲಾಗಿದ್ದು, ಅಪಮಾನ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಅಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮವಹಿಸಬೇಕು, ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಂದೀಶ ನಾಯಕ, ಮುಖಂಡರಾದ ಮುದುಕಪ್ಪ ನಾಯಕ, ಪಿಡ್ಡಪ್ಪ ನಾಯಕ, ಹುಲುಗಪ್ಪ ನಾಯಕ, ರಾಜಾ ಸೇತುರಾಮ್ ನಾಯಕ, ಚಿನ್ನು ನಾಯಕ, ಮೌನೇಶ ನಾಯಕ, ಹನುಮಂತ ನಾಯಕ, ಸುರೇಶ ನಾಯಕ, ದುರುಗಪ್ಪ ನಾಯಕ, ಯಲ್ಲನಗೌಡ, ಆಂಜನೇಯ, ಸಂಜು ರಕ್ಕಸಗಿ, ಪ್ರೇಮಕುಮಾರ, ಅಶೋಕ ನಾಯಕ ದಿದ್ದಗಿ, ರವಿಕುಮಾರ್ ನಾಯಕ, ಲಕ್ಷ್ಮಣ ನಾಯಕ ಸೇರಿದಂತೆ ಅನೇಕರು ಇದ್ದರು.
No comments:
Post a Comment