Tuesday, October 2, 2018

ಇದೇ ನಾಲ್ಕರಂದು ರಾಯಚೂರಿಗೆ ಆಗಮಿಸಲಿರುವ ವಾಲ್ಮೀಕಿ ಸಮಾಜದ ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ

ದೊರೆನ್ಯೂಸ್ (ರಾಯಚೂರು): ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಗುರುಗಳಾಗಿರುವ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ಇದೇ 4ರಂದು ರಾಯಚೂರಿಗೆ ಆಗಮಿಸಲಿದ್ದು ಅಂದು ಬೆಳಿಗ್ಗೆ 10.00 ಗಂಟೆಗೆ ಸಮಾಜದವರೊಂದಿಗೆ ಮಂತ್ರಿ ಗಾರ್ಡನನಲ್ಲಿ ಸಭೆ ನಡೆಸಲಿದ್ದಾರೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಹೇಳಿದರು. 
ಅವರಿಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರದಲ್ಲಿರುವಂತೆ 7.5% ಮೀಸಲಾತಿ  ಹೆಚ್ಚಳ ಹಾಗೂ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಕುರಿತು ಚರ್ಚಿಸಲು ಪ್ರಸನ್ನಾನಂದ ಪುರಿ ಸ್ವಾಮೀಜಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರವಾಸವನ್ನು ಹಮ್ಮಿಕೊಂಡಿದ್ದು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ವಿಜಯಪುರು  ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ರಾಯಚೂರಿನ ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ರಘುವೀರ್ ನಾಯಕ, ಜೊತೆಗಿದ್ದ ಮುಖಂಡರು.

ಇದೇ ದಿನಾಂಕ 15 ರಂದು ಕಲಬುರ್ಗಿಯ ಪ್ರಾದೇಶಿಕ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಬಗ್ಗೆ ಚರ್ಚಿಸಲು ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ, ಸಮಾಜದ ಬಂಧುಗಳು ,ಮುಖಂಡರು , ಚಿಂತಕರು ,  ಪ್ರತಿನಿಧಿಗಳು , ಸಂಘಟನೆಗಳ ಪದಾಧಿಕಾರಿಗಳು , ಬುದ್ದಿ ಜೀವಿಗಳು , ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ರಘುವೀರ್ ನಾಯಕ ಹೇಳಿದರು. 
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ನಾಯಕ, ವೀರೇಶ ನಾಯಕ,‌ ರಮೇಶ ನಾಯಕ, ಆಂಜಿನಯ್ಯ ನಾಯಕ, ಭೀಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

No comments:

Post a Comment