![]() |
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ರೈತರ ತೊಗರಿ ಖರೀದಿಸಲು ಐದು ನೂರರಿಂದ ಎರಡು ಸಾವಿರ ಲಂಚ ಪಡೆಯುತ್ತಿದ್ದಾರೆಂದು ಗ್ರೇಡರ್ (ತೊಗರಿ ಪರಿಶೀಲನೆ ಅಧಿಕಾರಿ) ಅರುಣ್ ರಾಠೋಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವಿರುದ್ಧ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಛೇರಿಗೆ ದೂರು ನೀಡಿದ್ದರು.
ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವರ ಕಛೇರಿಯಿಂದ ಮಸ್ಕಿ ತಹಶಿಲ್ದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗೆ ತಹಶಿಲ್ದಾರ ಬಲರಾಮ ಕಟ್ಟಿಮನಿ ಸೂಚಿಸಿದರು. ಕಂದಾಯ ನಿರೀಕ್ಷಕ ಅಬ್ದುಲ್ ರಹೂಪ್, ಗ್ರಾಮ ಲೆಕ್ಕಾಧಿಕಾರಿ ರವಿ ಬೆಳ್ಳೂರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೆಕ್ರೆಟರಿ ಲಾಳೆ ಸಾಬ್, ಪರಿಶೀಲನಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿಗಳ ಮುಂದೆ ರೈತರು ಅಳಲು ತೊಡಿಕೊಂಡು, ಗ್ರೇಡರ್ ಅರುಣ್ ರಾಠೋಡ್ ವಿರುದ್ಧ ದೂರುಗಳ ಸುರಿಮಳೆ ಗೈದರು. ಅರುಣ್, ಸಮಯಕ್ಕೆ ಸರಿಯಾಗಿ ಬರಲ್ಲ, ರೈತರಿಗೆ ಅನಾವಶ್ಯಕ ಕಿರಿಕಿರಿ ಮಾಡ್ತಾನೆ. ಲಂಚ ಕೊಟ್ಟವರ ತೊಗರಿ ಖರೀದಿ ಮಾಡ್ತಾನೆ, ಲಂಚ ಕೊಡದಿದ್ದರೆ ದಿನಗಟ್ಟಲೇ ಕಾಯಿಸ್ತಾನೆ.
ನಿಮ್ಮ ತೊಗರಿ ಸರಿಯಿಲ್ಲ ತೆಗೆದುಕೊಳ್ಳಲ್ಲವೆಂದು ಸತಾಯಿಸ್ತಾನೆ, ಲಂಚ ಕೊಟ್ಟರೆ ಯಾವುದೇ ಪರಿಶೀಲನೆ ಮಾಡಲ್ಲ, ನಮ್ಮೂರಿಗೆ ಕಾಯಂ ಗ್ರೇಡರ್ ಬೇಕು, ಅರುಣ್ ಕುಮಾರ್ ಭೇಡವೆಂದು ರೈತರು ಒತ್ತಾಯಿಸಿದರು. ಮಾತಾಡಿ ಸಮಸ್ಯೆ ಪರಿಹಾರ ಮಾಡ್ತಿವಿ ಎಂದು ಅಧಿಕಾರಿಗಳು ಭರವಸೆ ನೀಡಿದರು.
Good job brother
ReplyDelete