Friday, July 10, 2020

ಡಿ.ಜಿ ಗುರಿಕಾರ್ ಗೆ ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019

ದೊರೆ ನ್ಯೂಸ್ ಕನ್ನಡ ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ದುರುಗಪ್ಪ ಗುರಿಕಾರ್ (ಡಿ.ಜಿ ಗುರಿಕಾರ್) ರವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019' ಲಭಿಸಿದೆ. 
ಡಿ.ಜಿ ಗುರಿಕಾರ್ ರವರ ಸಮಾಜ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಅವಾರ್ಡ್ ನೀಡಲಾಗಿದ್ದು, ಕೊರೊನಾ ವೈರಸ್ ಕಾರಣದಿಂದ ಲಾಕ್ ಡೌನ್ ಉಂಟಾದ ಹಿನ್ನೆಲೆಯಲ್ಲಿ ಅವಾರ್ಡ್ ಅನ್ನು ಅಂಚೆ ಮೂಲಕ ಗುರಿಕಾರ್ ರವರ ಮನೆಗೆ ತಲುಪಿಸಲಾಗಿದೆ.
ಆನೆಹೊಸೂರು ಗ್ರಾಮದ ಡಿ.ಜಿ ಗುರಿಕಾರ್ (ದುರುಗಪ್ಪ ಗುರಿಕಾರ್), ಸಮಾಜ ಸೇವೆಯ ಮೂಲಕ ರಾಯಚೂರು ಜಿಲ್ಲೆಯಾದ್ಯಂತ ಗುರುತಿಸಿಕೊಂಡಿದ್ದಾರೆ. ದಲಿತ ಸಮುದಾಯಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಗುರಿಕಾರ್ ಆ ಸಮುದಾಯಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 
ಹಿಂದುಳಿದ, ದಲಿತ ವರ್ಗಗಳ ಬಗ್ಗೆ ಡಿ.ಜಿ ಗುರಿಕಾರ್ ರವರಿಗೆ ಇರುವ ಕಾಳಜಿಯನ್ನು ಗುರುತಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅವರನ್ನು ಪ್ರತಿಷ್ಠಿತ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019'ಕ್ಕೆ ಆಯ್ಕೆ ಮಾಡಿ, ಅವರ ಮನೆಗೆ ಅವಾರ್ಡ್ ಅನ್ನು ತಲುಪಿದೆ.
ಗುರಿಕಾರ್ ರವರಿಗೆ ನ್ಯಾಷನಲ್ ಅವಾರ್ಡ್ ದೊರೆತಿರುವ ವಿಷಯ ತಿಳಿದ ಅವರ ಅಭಿಮಾನಿಗಳು, ವಿವಿಧ ಸಮುದಾಯದ ಮುಖಂಡರು ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ಲಿಂಗಸುಗೂರಿನ ವಾಲ್ಮೀಕಿ ನಾಯಕ ಸಮುದಾಯದ ಯುವಕರು ಮುಂದಿನ ದಿನಗಳಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

No comments:

Post a Comment