![]() |
ಸನ್ಮಾನ ಸ್ವೀಕರಿಸಿದ ಭಾಗ್ಯಶ್ರೀ, ಚಂದ್ರಶೇಖರ ನಾಯಕ |
ದೊರೆ ನ್ಯೂಸ್ ಕನ್ನಡ, ರಾಯಚೂರು: ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97.75% ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಭಾಗ್ಯಶ್ರೀ ತಂದೆ ಚಂದ್ರಶೇಖರ ನಾಯಕ ಎಂಬ ವಿದ್ಯಾರ್ಥಿನಿಯನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಲಿಂಗಸುಗೂರು ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಭಾಗ್ಯಶ್ರೀ ಕಠಿಣ ಪರಿಶ್ರಮದೊಂದಿಗೆ ಉತ್ತಮ ಫಲಿತಾಂಶ ಪಡೆದುದರಿಂದ ಕರವೇ ಮುಖಂಡರು ಗೆಜ್ಜಲಗಟ್ಟ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಭಾಗ್ಯಶ್ರೀ ಜೊತೆಗೆ ಅವರ ತಂದೆ ಚಂದ್ರಶೇಖರ ನಾಯಕರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆ ಮಾತನಾಡಿದ ಕರವೇ ಮುಖಂಡರು, ಭಾಗ್ಯಶ್ರೀಯ ಸಾಧನೆ ನಮ್ಮೂರಿಗೆ ಮಾತ್ರವಲ್ಲ ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ವಿದ್ಯಾರ್ಥಿನಿಯ ಸಾಧನೆ ಇತರರಿಗೂ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ. ಭಾಗ್ಯಶ್ರೀ ನಮ್ಮೂರಿನ ಕೀರ್ತಿ ಹೆಚ್ಚಿಸಲಿ, ಈಕೆಯ ಸಾಧನೆ ಊರಿನ ಜನರು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ, ಉಪಾಧ್ಯಕ್ಷ ಗಫೂರ್, ಸಹಕಾರ್ಯದರ್ಶಿ ಸದ್ದಾಮ್, ಮುಖಂಡರಾದ ಪ್ರದೀಪ್, ದಾದಾವಲಿ, ಅಮರೇಶ, ವಸಂತ, ಎಂಡಿ ರಫಿ ಗ್ರಾಮಸ್ಥರಾರ ಶರಣಪ್ಪ ಸಾಲಿ, ಚನ್ನಬಸವ, ಕರ್ನಟಗಿ, ರವಿ ಗುತ್ತೇದಾರ್, ಪ್ರಕಾಶ ಗುತ್ತೇದಾರ್, ಇಬ್ರಾಹಿಂ ಜಂಡಾಕಟ್ಟಿ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..
ಅಭಿನಂದನೆಗಳು ಸಹೋದರಿ
ReplyDeleteಅಭಿನಂದನೆಗಳು ಸಹೋದರಿ
ReplyDelete