![]() |
| ಕವಾಯತು ಮೈದಾನ ಬೀದರ್ |
ಬೀದರ್
(ಆ.15):
ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ತವಾಗಿ ಬೀದರ್ ನಗರದ ತಮ್ಮ ನಿವಾಸದಲ್ಲಿ
ಮಧ್ಯರಾತ್ರಿ ಹನ್ನೆರಡು ಗಂಟೆ ಎರಡು ನಿಮಿಷಕ್ಕೆ ಧ್ವಜಾರೋಹಣ ನಡೆಸಿದ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ
ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ
ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಸೋಮವಾರ ಬೆಳಗ್ಗೆ ನಗರದ ಶ್ರೀಸಾಯಿ ಆದರ್ಶ ಶಿಕ್ಷಣ
ಸಂಸ್ಥೆ, ಜೆಡಿಎಸ್ ಜಿಲ್ಲಾ ಕಛೇರಿ, ಭಗತ್ ಸಿಂಗ್ ವೃತ್ತ, ಪೊಲೀಸ್ ಕವಾಯತು ಮೈದಾನ ಸೇರಿದಂತೆ
ವಿವಿಧೆಡೆ ನಡೆದ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ತಮ್ಮ ನಿವಾಸದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ
ಅವರು, ನಮ್ಮ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮನ್ನು ತಾವು
ಸಮರ್ಪಿಸಿಕೊಂಡಿದ್ದಾರೆ. ಅವರನ್ನು ನಾವು ಎಷ್ಟು ಸ್ಮರಿಸಿದರು ಕೂಡ ಕಡಿಮೆ ಎನಿಸುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಆಗ್ತಿರೋದು ಒಂದು ರೀತಿಯ ಹಬ್ಬದ
ವಾತವರಣವಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಎಂಬುದು ಯಾವುದೇ ಜಾತಿ,
ಧರ್ಮಗಳಿಗೆ ಸೀಮಿತವಾಗಿಲ್ಲ. ನಾಡಿನೆಲ್ಲಡೇ ಎಲ್ಲರೂ ಆಚರಣೆ ಮಾಡಬೇಕಾಗಿರುವ ಹಬ್ಬವಾಗಿದೆ.
ನಾವೆಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು
ಹೇಳಿದರು.
ಜೆಡಿಎಸ್ ಜಿಲ್ಲಾ ಕಛೇರಿ ಆವರಣದಲ್ಲಿ ನಡೆದ
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಾವೆಲ್ಲರೂ ಅದೃಷ್ಟವಂತರಾಗಿದ್ದೇವೆ. ನಮ್ಮ
ಹಿರಿಯರು, ಪೂರ್ವಜರು ಮಾಡಿದ ತ್ಯಾಗ, ಬಲಿದಾನದ ಫಲವಾಗಿ ನಾವು ಸ್ವಾತಂತ್ರ್ಯವಾಗಿ ಬದುಕು
ಸಾಗಿಸುತ್ತಿದ್ದೇವೆ. ನಾವೆಲ್ಲರೂ ಈಗ ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರೇ, ಅದು
ನಮ್ಮ ಹಿರಿಯರ ತ್ಯಾಗದ ಫಲವಾಗಿದೆ ಎಂದರು.
ಸ್ವಾತಂತ್ರ್ಯ ಭಾರತದಲ್ಲಿ ಬದುಕುತ್ತಿರುವ
ನಾವೆಲ್ಲರೂ ಜವಾಬ್ದಾರಿಯುತವಾಗಿ, ಮಾದರಿಯಾಗಿ ಬದುಕಬೇಕಾಗಿದೆ. ನಾಡಿನಲ್ಲಿರುವ ಬಡವರ, ಇಲ್ಲದವರ
ಪರವಾಗಿ ಕೆಲಸ ಮಾಡಬೇಕಾಗಿದೆ. ನಾವೆಲ್ಲರೂ ಸೇರಿ ದೇಶದ, ನಾಡಿನ ಅಭಿವೃದ್ಧಿ ಮಾಡುವ ಕೆಲಸ
ಮಾಡಬೇಕಾಗಿದೆ. ನಾಡಿನ ಒಳಿತಿಗಾಗಿ ನಾವೆಲ್ಲರೂ ಸೇರಿ ಕಾರ್ಯನಿರ್ವಹಿಸೋಣ ಎಂದು ಶಾಸಕ ಬಂಡೆಪ್ಪ
ಖಾಶೆಂಪುರ್ ರವರು ಕರೆ ನೀಡಿದರು.
ಬೀದರ್ ನಗರದ ಅವರ ನಿವಾಸದಲ್ಲಿ ನಡೆದ ಧ್ವಜಾರೋಹಣ
ಕಾರ್ಯಕ್ರಮದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಸಹೋದರರಾದ ರವಿ ಖಾಶೆಂಪುರ್, ರಾಜು
ಖಾಶೆಂಪುರ್, ಸಂಜು ಖಾಶೆಂಪುರ್ ಮತ್ತು ಕುಟುಂಬಸ್ಥರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
ಶ್ರೀಸಾಯಿ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ನಡೆದ
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಾಬುರಾವ್ ಮಲ್ಕಾಪೂರೆ, ರಾಜಶೇಖರ್ ಜವಳೆ, ಸಂಸ್ಥೆಯ
ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.
ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ನಡೆದ ಧ್ವಜಾರೋಹಣ
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಸುದರ್ಶನ್, ವಿನಾಯಕ, ಸೋಮನಾಥ,
ಅಶೋಕಕುಮಾರ್ ಕರಂಜೆ, ಶಿವರಾಜ್, ಬೊಮ್ಮಗೊಂಡ ಚಿಟ್ಟವಾಡಿ, ನಬಿ ಖುರೇಷಿ, ರೇವಣಸಿದ್ದಪ್ಪ,
ಲಲಿತಾ, ಸಂಗೀತಾ, ಐಲಿನ್ ಜಾನ್ ಮಠಪತಿ, ಅಶೋಕ್ ಸೇರಿದಂತೆ ಅನೇಕರಿದ್ದರು.
ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಧ್ವಜಾರೋಹಣ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಎಸ್.ಪಿ, ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳು,
ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.
ಕ್ರಾಂತಿವೀರ
ಸಂಗೊಳ್ಳಿ ರಾಯಣ್ಣ ಜಯಂತೋತ್ಸವ:
ಬೀದರ್ ನಗರದ ಶ್ರೀ ಸಾಯಿ ಆದರ್ಶ ಶಿಕ್ಷಣ
ಸಂಸ್ಥೆಯ ಮುಂಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮಾಲಾರ್ಪಣೆ ಮಾಡುವ
ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್
ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಬುರಾವ್
ಮಲ್ಕಾಪೂರೆ, ರಾಜಶೇಖರ ಜವಳೆ, ಬೊಮ್ಮಗೊಂಡ ಚಿಟ್ಟವಾಡಿ ಸೇರಿದಂತೆ ಅನೇಕರಿದ್ದರು. ಇದೇ ವೇಳೆ
ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮ
ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.

No comments:
Post a Comment