ಬೀದರ್ (ಆ.20): ಸಾರ್ವಜನಿಕ ಜೀವನದಲ್ಲಿ ನಾವು ಎಷ್ಟು ಸಲ ಅಧಿಕಾರಕ್ಕೆ ಬಂದಿದ್ದಿವಿ ಎಂಬುದು ಮುಖ್ಯವಲ್ಲ. ಅಧಿಕಾರಕ್ಕೆ ಬಂದಾಗ ಏನು ಮಾಡಿದ್ದಿವಿ ಎಂಬುದು ಮುಖ್ಯವಾಗುತ್ತದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ್ ಗಳ ಸಂಯುಕ್ತಾಶ್ರಯದಲ್ಲಿ ಬೀದರ್ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ನಾವು ಎಷ್ಟು ದಿನ ಅಧಿಕಾರದಲ್ಲಿ ಇರ್ತಿವಿ ಎಂಬುದು ಮುಖ್ಯವಾಗುವುದಿಲ್ಲ. ಏನು ಮಾಡಿದ್ದಿವಿ ಎಂಬುದು ಮುಖ್ಯವಾಗುತ್ತದೆ ಎಂದರು.
ಕೆಲವರು ನಾನು ಒಂದು ಬಾರಿ ಎಮ್ಎಲ್ಎ ಆದೇ, ಎರಡು ಬಾರಿ ಆದೆ, ಐದು ಬಾರಿ ಆದೆ ಅಂತ ಹೇಳ್ತಾರೆ. ಇನ್ನೂ ಕೆಲವರು ನಾನು ಒಂದು ಬಾರಿ ಸಿಎಂ ಆದೆ. ಎರಡು ಮೂರು ಬಾರಿ ಸಿಎಂ ಆದೆ ಅಂತ ಹೇಳುತ್ತಾರೆ. ಆದರೆ ಅಷ್ಟು ಸಲ ಅಧಿಕಾರ ಸಿಕ್ಕಾಗ ಅವರು ಏನೇನು ಮಾಡಿದ್ದಾರೆ ಎಂಬುದು ಬಹಳಷ್ಟು ಮುಖ್ಯವಾಗುತ್ತದೆ.
ಸಾರ್ವಜನಿಕರ ಒಳಿತಿಗಾಗಿ ಒಳ್ಳೊಳ್ಳೆ ಕೆಲಸವನ್ನು ಮಾಡಬೇಕಾಗುತ್ತದೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ, ನಾನು ಮಂತ್ರಿಯಾಗಿದ್ದಾಗ ರೈತರ, ಬಡವರ ಪರವಾಗಿ ಕೆಲಸ ಮಾಡಿದ್ದೇವೆ. ನಾನು ಮಂತ್ರಿಯಾಗಿದ್ದಾಗ ಜನಸಾಮಾನ್ಯರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಅರಸರು ಅನೇಕರನ್ನು ಗುರುತಿಸಿ ಅಧಿಕಾರಕ್ಕೆ ತಂದಿದ್ದರು:
ಡಿ ದೇವರಾಜ ಅರಸರು ಅಂದಿನ ದಿನಗಳಲ್ಲಿ ಅನೇಕರನ್ನು ಗುರುತಿಸಿ ಅಧಿಕಾರಕ್ಕೆ ತಂದಿದ್ದರು. ಡಿ. ದೇವರಾಜ ಅರಸರನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ. ಮನೆಯಲ್ಲಿ ಕುಳಿತಿದ್ದ ನಮ್ಮನ್ನು ಅರಸರು ಗುರುತಿಸಿ ಎಮ್ಎಲ್ಎ, ಮಂತ್ರಿ ಮಾಡಿದ್ದಾರೆ ಎಂದು ಅನೇಕರು ಹೇಳುತ್ತಿರುತ್ತಾರೆ. ಅವರು ಅನೇಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅಭಿವೃದ್ಧಿ ಪರವಾದ ಕೆಲಸಗಳನ್ನು ದೇವರಾಜ ಅರಸರು ಮಾಡಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಮ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸದಾಶಿವ ಎಸ್ ಬಡಿಗೇರ್, ಹಿರಿಯ ಪತ್ರಕರ್ತ ಗಂಧರ್ವ ಸೇನಾ, ವಿಶೇಷ ಉಪನ್ಯಾಸಕ ಡಾ. ಬಸವರಾಜ ಬಲ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮಹಿಳೆಯರು, ಮಕ್ಕಳು ಇದ್ದರು.
No comments:
Post a Comment