ಬೀದರ್ (ಆ.09): ಜಾತಿ, ಧರ್ಮದ ಭೇದಭಾವ ತೊರೆದು ಹಿಂದೂ, ಮುಸ್ಲಿಮರೆಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸುವ ಮೊಹರಂ ಹಬ್ಬ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಮೊಹರಂ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪಿರ್ (ಅಲಾಯಿ ದೇವರ) ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಮೊಹರಂ ವಿಶೇಷವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳುತ್ತಾರೆ. ಹಿಂದೂಗಳ ಮನೆಯಲ್ಲಿ ಕೂಡ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿರುತ್ತದೆ ಎಂದರು.
ಹಾಲಳ್ಳಿ - ಖಾಶೆಂಪುರ್ ಗ್ರಾಮಗಳ ಮೊಹರಂಗೆ ಇತಿಹಾಸವಿದೆ:
ಹಾಲಳ್ಳಿ - ಖಾಶೆಂಪುರ್ ಗ್ರಾಮಗಳ ಮೊಹರಂ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಎರಡು ಊರುಗಳ ಜನರು ನೂರಾರು ವರ್ಷಗಳಿಂದ ಒಟ್ಟಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಬೇರೆ ಬೇರೆ ಕಡೆಗಳಲ್ಲಿ ಆ ಧರ್ಮ ಈ ಧರ್ಮ ಎಂದು ದಿನನಿತ್ಯ ಬಡೆದಾಡುವ ಘಟನೆಗಳನ್ನು ನಾವು ಮಾಧ್ಯಮಗಳಲ್ಲಿ ಕಾಣುತ್ತೇವೆ. ಆದರೇ ನಮ್ಮಲ್ಲಿ ಯಾವುದೇ ಜಾತಿ, ಮತದ ಭೇದಭಾವವಿಲ್ಲ. ಇಲ್ಲಿ ಎಲ್ಲರೂ ಸೇರಿ ಒಗ್ಗಟ್ಟಾಗಿ ಏಕತೆ, ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡುತ್ತಾರೆ. ಇಲ್ಲಿ ಮುಸ್ಲಿಂ ಸಮುದಾಯದ ಮನೆಗಳು ಕಡಿಮೆಯಿವೆಯಾದರು, ಯಾವುದೇ ರೀತಿಯ ಕೊರತೆಯಾಗದಂತೆ ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ ಮಾಡುತ್ತಾರೆ.
ಹಳ್ಳಿಗಳಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ, ಭಾವೈಕ್ಯತೆ ಎದ್ದು ಕಾಣುತ್ತದೆ. ಇಲ್ಲಿ ಯಾವುದೇ ಜಾತಿ ಧರ್ಮದ ಭಾವನೆಗಳು ಕಾಣುವುದಿಲ್ಲ. ಮೊಹರಂ ಹಬ್ಬದಲ್ಲಿ ಪ್ರತಿಯೊಬ್ಬ ಹಿಂದೂಗಳು ಕೂಡ ಪಾಲ್ಗೊಳ್ಳುತ್ತಾರೆ. ಎಲ್ಲಾ ಜನಾಂಗದವರು ಸೇರಿ ಮೊಹರಂ ಆಚರಣೆ ಮಾಡುತ್ತಾರೆ. ಇದು ಭಾರತ ದೇಶದ ಅಸಲಿ ಸಂಸ್ಕ್ರತಿ ಅಂತ ನಾನು ಹೇಳುತ್ತೇನೆ. ಹಾಲಳ್ಳಿ ಮತ್ತು ಖಾಶೆಂಪುರ್ ಪಿ ಗ್ರಾಮದ ನಡುವಿನ ಸಂಬಂಧ ನೂರಾರು ವರ್ಷಗಳ ಸಂಬಂಧವಾಗಿದೆ. ಇದನ್ನು ಹೀಗೆ ಮುಂದುವರೆಸುಕೊಂಡು ಹೋಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬಂಡೆಪ್ಪ ಖಾಶೆಂಪುರ್ ರವರು ನಮ್ಮ ಹಾಲಳ್ಳಿ ಗ್ರಾಮದ ಭವಾನಿ ದೇವಸ್ಥಾನಕ್ಕೆ ವೈಯಕ್ತಿಕವಾಗಿ ಐವತ್ತು ಸಾವಿರ ರೂ. ಕೊಡುತ್ತೇನೆ ಎಂದು ಹೇಳಿದ್ದಾರೆ. ನಮ್ಮೂರು ಅವರ ಕ್ಷೇತ್ರಕ್ಕೆ ಸಂಬಂಧ ಪಡದಿದ್ದರು ಕೂಡ ನಮ್ಮೂರಿನ ದೇವಸ್ಥಾನಕ್ಕೆ ಧನಸಹಾಯ ಮಾಡುತ್ತಿರುವ ಅವರಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹಾಲಳ್ಳಿ ಗ್ರಾಮದ ಯುವಕರು ಹೇಳಿದರು.
ಜನರೊಂದಿಗೆ ಅಲಾಯಿ ಆಡಿದ ಶಾಸಕ ಬಂಡೆಪ್ಪ ಖಾಶೆಂಪುರ್:
ಖಾಶೆಂಪುರ್ ಪಿ ಗ್ರಾಮದ ಮಸೀದಿ (ಅಲಾಯಿ ದೇವರನ್ನು ಕೂಡಿಸುವ ಸ್ಥಳ)ಕ್ಕೆ ಭೇಟಿ ನೀಡಿ, ಅಲಾಯಿ ದೇವರು (ಪಿರ್) ದರ್ಶನ ಪಡೆದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಇದೇ ವೇಳೆ ಮಸೀದಿಯ ಆವರಣದಲ್ಲಿ ಜನರೊಟ್ಟಿಗೆ ಅಲಾಯಿ ಆಡಿದರು. ಮೊಹರಂ ಪದಗಳ ತಾಳಕ್ಕೆ ತಕ್ಕಂತೆ ಶಾಸಕರೊಂದಿಗೆ ಹೆಜ್ಜೆಯಾಕಿದ ಗ್ರಾಮಸ್ಥರು ಸಂತಸದಿಂದ ಕುಣಿದು ಕುಪ್ಪಳಿಸಿ, ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಸನ್ಮಾನಿಸಿ ಗೌರವಿಸಿದರು. ಹಾಲಳ್ಳಿ, ಖಾಶೆಂಪುರ್ ಪಿ ಗ್ರಾಮಗಳ ಗ್ರಾಮಸ್ಥರು, ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಅನೇಕರಿದ್ದರು.
ಮರಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ, ಪೂಜೆ:
ಖಾಶೆಂಪುರ್ ಪಿ ಗ್ರಾಮಕ್ಕೆ ಭೇಟಿ ನೀಡಿ ಮೊಹರಂ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಂಚೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಗ್ರಾಮದ ಮರಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಕ್ಷೇತ್ರದ, ನಾಡಿನ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿದರು. ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R #bandeppa_khashempur #bidar_south_mla #bandeppa #khashempur #ಬಂಡೆಪ್ಪ_ಖಾಶೆಂಪುರ್ #ಬಂಡೆಪ್ಪ #ಖಾಶೆಂಪುರ್
No comments:
Post a Comment