ದೊರೆನ್ಯೂಸ್: ಕ್ರಾಂತಿಕಾರಿ ನಾಯಕ, ಭಾರತ ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟ ಭಗತ್ ಸಿಂಗ್ ರ ಜನ್ಮದಿನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿರುಗುಪ್ಪ ಘಟಕದ ಮುಖಂಡರು ತೆಕ್ಕಲಕೋಟೆಯಲ್ಲಿ ಆಚರಿಸಿದರು.
![]() |
ಕ್ರಾಂತಿಕಾರಿ ನಾಯಕ ಭಗತ್ ಸಿಂಗ್ ಜಯಂತೋತ್ಸವದಲ್ಲಿ ಭಾಗವಹಿಸಿರುವ ನೂರಾರು ವಿದ್ಯಾರ್ಥಿಗಳು, ಸಂಘಟನೆಯ ಮುಖಂಡರು. |
ತೆಕ್ಕಲಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು, ನೂರಾರು ವಿದ್ಯಾರ್ಥಿಗಳ ನೇತೃತ್ವದಲ್ಲಿ ಭಗತ್ ಸಿಂಗ್ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆ, ಭಾರತ ಸ್ವತಂತ್ರ್ಯಕ್ಕಾಗಿ ತಮ್ಮ ಪ್ರಾಣ ಸಮರ್ಪಿಸಿದ ಹೋರಾಟಗಾರ ಜೀವನ ಚರಿತ್ರೆಯನ್ನು ಅನೇಕರು ತಿಳಿಸಿದರು.
No comments:
Post a Comment