Wednesday, October 3, 2018

ಬಳ್ಳಾರಿ ಪ್ರವಾಸದ ನಂತರ ರಾಯಚೂರು ಪ್ರವಾಸ ಕೈಗೊಂಡಿರುವ ವಾಲ್ಮೀಕಿ ಸಮಾಜದ ಗುರುಗಳು

ದೊರೆನ್ಯೂಸ್ (ರಾಯಚೂರು): ಬಳ್ಳಾರಿ ಜಿಲ್ಲೆಯ ಪ್ರವಾಸದ ನಂತರ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರು ಪೀಠದ ಗುರುಗಳಾದ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. 
ಬುಧುವಾರ ಸಂಜೆ ರಾಯಚೂರು ಜಿಲ್ಲೆಗೆ ಆಗಮಿಸಿದ ಶ್ರೀಗಳು ಸಿಂಧನೂರಿನ ವಾಲ್ಮೀಕಿ ಸಮಾಜದ ಮುಖಂಡ ಶಂಕರಗೌಡ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ರಾಯಚೂರು ಜಿಲ್ಲೆಗೆ ಆಗಮಿಸಿದ ವಾಲ್ಮೀಕಿ ಶ್ರೀಗಳನ್ನು ಸ್ವಾಗತಿಸುತ್ತಿರುವ ವಾಲ್ಮೀಕಿ ನಾಯಕ ಸಮಾಜದ ಮುಖಂಡರು.

ಅಲ್ಲದೇ ಮಸ್ಕಿ ಹತ್ತಿರದ ಗೌಡನಬಾವಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಅನ್ಯ ಸಮಾಜದವರ ಕಿರುಕುಳದಿಂದ ತಂದೆ - ಮಗಳು ಆತ್ಮಹತ್ಯೆ ಮಾಡಿಕೊಂಡ್ಡಿದ್ದರಿಂದ ಅವರ ಮನೆಗೆ ತೆರಳಿ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.
ಇನ್ನೂ ಗುರುವಾರದಂದು ರಾಯಚೂರು ನಗರದಲ್ಲಿ ಸಮಾಜದ ವಿಚಾರಗಳ ಬಗ್ಗೆ ಮತ್ತು ನಕಲಿ ಜಾತಿ‌ ಪ್ರಮಾಣಪತ್ರದ ವಿರುದ್ಧ ಕಲಬುರಗಿಯಲ್ಲಿ ನಡೆಯಲಿರುವ ಹೋರಾಟಗಳ ಬಗ್ಗೆ ಚರ್ಚೆ ನಡೆಯಲಿದ್ದು, ಗ್ರಾಮಗಳ ಭೇಟಿಯ ನಂತರ ಶ್ರೀಗಳು ರಾಯಚೂರಿಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ನಂದಕುಮಾರ್ ಮಾಲಿಪಾಟೀಲ್, ಮುಖಂಡರಾದ ಗುರುನಾಥ್ ಹುಲಕಲ್ ಸೇರಿದಂತೆ ಅನೇಕರು‌ ಉಪಸ್ಥಿತರಿದ್ದರು.

1 comment: