Thursday, October 31, 2019

ರೋಡಲಬಂಡಾ ಕ್ಯಾಂಪ್ ನ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಕ್ಯಾಂಪ್ ನ ಸರಕಾರಿ ಪ್ರೌಢ ಶಾಲೆಯಲ್ಲಿ ಇಂದು ರಾಷ್ಟ್ರೀಯ ಏಕತಾ ದಿನ ಆಚರಣೆ ಮಾಡಲಾಯಿತು.
ಮಾಜಿ ಉಪರಾಷ್ಟ್ರಪತಿ ಉಕ್ಕಿನ ಮನುಷ್ಯ ದಿ.ಸರದಾರ ವಲ್ಲಭಭಾಯಿ ಪಟೇಲರ 144ನೇ ವರ್ಷದ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ರಾಷ್ಟ್ರದಾದ್ಯಂತ ಇಂದು ಆಚರಣೆ ಮಾಡಲಾಗಿದ್ದು, ಅದರಂತೆ ಇಲ್ಲಿ ಕೂಡ ಏಕತಾ ನಡಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ರಾಮನಗೌಡ ಪಾಟೀಲ್, ಶೃತಿ, ಬಸಮ್ಮ, ಜಯಶ್ರೀ, ಸಿದ್ದರಾಮಪ್ಪ, ಗೀತಾ ಪಾಂಡೆ, ಗೀತಾ ಅಲೆಗಾವಿ, ಗಂಗಾ ಮೇಟಿ ಸೇರಿದಂತೆ ಅನೇಕ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಊರಿನ ಗಣ್ಯರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com

Tuesday, October 29, 2019

ಪಾಮನಕಲ್ಲೂರಿಗೆ ಬ್ರಹ್ಮಾನಂದ ಗುರೂಜಿ ಭೇಟಿ: ನೂತನ ವಾಲ್ಮೀಕಿ ಭವನ ವೀಕ್ಷಣೆ


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮಕ್ಕೆ ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಕುಲ ಪೀಠದ ಗುರುಗಳಾದ ಬ್ರಹ್ಮಾನಂದ ಗುರೂಜಿ ಭೇಟಿ ನೀಡಿದರು. ನಿನ್ನೆ ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಗಳು ಇಂದು ಪಾಮನಕಲ್ಲೂರಿಗೆ ಭೇಟಿ ನೀಡಿ ಸರ್ಕಲ್ ನಲ್ಲಿರುವ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಪೂಜೆ ಸಲ್ಲಿಸಿದರು. 
ನಂತರ ಗ್ರಾಮದ ಹೊರಭಾಗದಲ್ಲಿರುವ ನೂತನ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಮಹರ್ಷಿ ವಾಲ್ಮೀಕಿ ಪೋಟೋಗೆ ಪೂಜೆ ಸಲ್ಲಿಸಿ, ಭವನ ವೀಕ್ಷಣೆ ನಡೆಸಿ ನೂತನ ಕಟ್ಟಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ವಾಲ್ಮೀಕಿ ನಾಯಕ ಜನಾಂಗದ ಸ್ಥಿತಿಗತಿಗಳ ಬಗ್ಗೆ ಗ್ರಾಮದ, ಸುತ್ತಮುತ್ತಲಿನ ಗ್ರಾಮದ ವಾಲ್ಮೀಕಿ ನಾಯಕ  ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಪಾಮನಕಲ್ಲೂರು, ಕೋಟೆಕಲ್, ಉಸ್ಕಿಹಾಳ್ ಗ್ರಾಮದ ಯುವಕರು ಬ್ರಹ್ಮಾನಂದ ಗುರೂಜಿಯವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಾಮನಕಲ್ಲೂರು ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಲಚಮಪ್ಪ ಕೊಂಡಾಲ್, ನಾಗಪ್ಪ ತಳವಾರ್, ಅಯ್ಯಪ್ಪ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ್, ಶರಣಪ್ಪ ಕೊಂಡಾಲ್, ದುರುಗಪ್ಪ ಅರಕೇರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಮರೇಪ್ಪ ತಳವಾರ್, ಕೋಟೆಕಲ್ ಗ್ರಾಮದ ಬಸವರಾಜ ನಾಯಕ, ಹುಚ್ಚಪ್ಪ ನಾಯಕ, ಅಂಜಿ ನಾಯಕ, ಉಸ್ಕಿಹಾಳ್ ಗ್ರಾಮದ ಗ್ವಾಲಪ್ಪ ನಾಯಕ, ಆದಪ್ಪ ನಾಯಕ, ಚಿಕ್ಕಹೆಸರೂರು ಗ್ರಾಮದ ಮಹಾಂತೇಶ್ ನಾಯಕ ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Monday, October 28, 2019

ಬ್ರಹ್ಮಾನಂದ ಗುರೂಜಿ ಗ್ರಾಮ ವಾಸ್ತವ್ಯ: ವಾಲ್ಮೀಕಿ ನಾಯಕರಿಂದ ಗೌರವ, ಸನ್ಮಾನ


ದೊರೆ ನ್ಯೂಸ್ ಕನ್ನಡ: ಚಿಕ್ಕಬಳ್ಳಾಪುರದ ವಾಲ್ಮೀಕಿ ಗುರುಕುಲ ಪೀಠದ ಗುರುಗಳಾದ ಬ್ರಹ್ಮಾನಂದ ಗುರೂಜಿ ರಾಯಚೂರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ‌. ನಿನ್ನೆ ಲಿಂಗಸುಗೂರು ತಾಲ್ಲೂಕಿನ ಆಲಘಟ್ಟದಲ್ಲಿ ಗ್ರಾಮವಾಸ್ತವ್ಯ ಮಾಡಿ ಸಮುದಾಯದ ಕಷ್ಟ ಸುಖದಲ್ಲಿ ಭಾಗಿಯಾಗಿದ್ದ ಸ್ವಾಮೀಜಿ ಇಂದು ಮಸ್ಕಿ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. 

ಬ್ರಹ್ಮಾನಂದ ಶ್ರೀಗಳು ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಸುದ್ದಿ ತಿಳಿಯುತ್ತಿದ್ದಂತೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾಲ್ಮೀಕಿ ನಾಯಕ ಸಮುದಾಯದ ಯುವಕರು ಕೋಟೆಕಲ್ ಗ್ರಾಮಕ್ಕೆ ತೆರಳಿ ಬ್ರಹ್ಮಾನಂದ ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಯ್ಯಪ್ಪ ನಾಯಕ ಯದ್ದಲದೊಡ್ಡಿ, ಅಯ್ಯಪ್ಪ ನಾಯಕ ವಾಟರ್ಮ್ಯಾನ್, ಶರಣಪ್ಪ ಕೊಂಡಾಲ್, ಯಂಕೋಬ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ್, ಅಯ್ಯಣ್ಣ ನಾಯಕ ಪಾಮನಕಲ್ಲೂರು, ರಂಗಪ್ಪ ಅರಕೇರಿ, ಮರೇಪ್ಪ ತಳವಾರ್, ಹುಚ್ಚಪ್ಪ ನಾಯಕ ಕೋಟೆಕಲ್, ಅಂಜಿ ನಾಯಕ ಕೋಟೆಕಲ್ ಸೇರಿದಂತೆ ಪಾಮನಕಲ್ಲೂರು, ಕಾನ್ಯಾಳ್, ಕೋಟೆಕಲ್ ಗ್ರಾಮಸ್ಥರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Friday, October 25, 2019

ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು 7ನೇ ಬಾರಿ ಚಾಂಪಿಯನ್

ಇದೇ 22ರಂದು ರಾಯಚೂರು ಜಿಲ್ಲೆ ಲಿಂಗಸುಗೂರಿನ ವಿ.ಸಿ.ಬಿ ಮಹಾವಿದ್ಯಾಲಯದಲ್ಲಿ ಜರುಗಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಪುರುಷರ ಏಕವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಲಿಂಗಸುಗೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ‌ಈ ಮೂಲಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಚಾಂಪಿಯನ್ಸಿಪ್ ಅನ್ನು ಸತತವಾಗಿ 7ನೇ ಬಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜು  ತನ್ನದಾಗಿಸಿಕೊಂಡಿದೆ. 
ಈ ತಂಡದಲ್ಲಿ ಅಮರೇಶ ಜಿ (ಕ್ಯಾಪ್ಟನ್), ರಾಘವೇಂದ್ರ, ನಬೀರಸುಲ್, ಸುರೇಶ ಆರ್, ಬಸವರಾಜ ಕೆ, ಸುರೇಶ ಎಸ್, ಬಸವರಾಜ ಎನ್ ಇದ್ದು ಈ ವಿದ್ಯಾರ್ಥಿಗಳು ಕಾಲೇಜಿಗೆ ಹಾಗೂ ರಾಯಚೂರು ಜಿಲ್ಲೆಗೆ ಕೀರ್ತಿತಂದಿದ್ದಾರೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಿ.ಎಸ್ ಹೂಲಗೇರಿ, ಪ್ರಾಚಾರ್ಯರಾದ ಡಾ.ಮಹಾಂತಗೌಡ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಾನಂದ ನರಹಟ್ಟಿ ಹಾಗೂ ಉಪನ್ಯಾಸಕರು, ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

Monday, October 21, 2019

ಕಾಂಗ್ರೆಸ್ ಪಕ್ಷದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಬಿ.ವಿ ನಾಯಕ ಆಯ್ಕೆ


ರಾಯಚೂರು: ಕಾಂಗ್ರೆಸ್ ಪಕ್ಷದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಮಾಜಿ ಸಂಸದ ಬಿ.ವಿ ನಾಯಕ ಆಯ್ಕೆಯಾಗಿದ್ದಾರೆ. ಕರ್ನಾಟಕದ ಕಾಂಗ್ರೆಸ್  ಉಸ್ತುವಾರಿ ಕೆ.ಸಿ ವೇಣುಗೋಪಾಲ್, ರಾಯಚೂರು ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಬಿ.ವಿ ನಾಯಕರನ್ನು ನೇಮಿಸಿ ಆದೇಶಿಸಿದ್ದಾರೆ.
ಬಿ.ವಿ ನಾಯಕರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅವರ ಆಪ್ತರು, ಜಿಲ್ಲಾ ಮುಖಂಡರಿಗೆ, ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ,   ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ, ಪಕ್ಷದ ಕಾರ್ಯಾಧ್ಯಕ್ಷರ ಈಶ್ವರ ಖಂಡ್ರೆ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ನಾಯಕ ರಾಹುಲ್ ಗಾಂಧಿ‌ ಸೇರಿದಂತೆ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

ಏಕವಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೆಲುವು


ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರಿನ ವಿಸಿಬಿ ಕಾಲೇಜಿನಲ್ಲಿ  'ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ವಿಸಿಬಿ ಶಿಕ್ಷಣ ಸಂಸ್ಥೆಯ ಕಲಾ & ವಾಣಿಜ್ಯ ಪದವಿ  ಮಹಾವಿದ್ಯಾಲಯ ಲಿಂಗಸುಗೂರು ಸಂಯುಕ್ತಾಶ್ರಯದಲ್ಲಿ, ನಡೆದ ಅಂತರ ಮಹಾವಿದ್ಯಾಲಯಗಳ ಏಕವಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಲಿಂಗಸುಗೂರಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನ ವಿದ್ಯಾರ್ಥಿಗಳು ರನ್ನರ್ - ಅಪ್ ಆಗಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಲಿಂಗಸುಗೂರು ಈಗಾಗಲೇ ಆರು ಬಾರಿ ಚಾಂಪಿಯನ್ಶಿಪ್, ಒಂದು ಬಾರಿ ರನ್ನರ್ ಅಪ್ ಆಗಿದ್ದು, ಕಾಲೇಜಿನ ಪ್ರಾಂಶುಪಾಲರು, ಕ್ರೀಡಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )


ಸಡಗರ ಸಂಭ್ರಮದ ವಾಲ್ಮೀಕಿ ಜಯಂತೋತ್ಸವಕ್ಕೆ ಸಾಕ್ಷಿಯಾಯ್ತು ಗೆಜ್ಜಲಗಟ್ಟಾ


 ಸಹೋದರ ಸಂಬಂಧ, ಮಾನವೀಯ ಸಂಬಂಧಗಳನ್ನು ತಿಳಿಸಿಕೊಡುವ ಕೃತಿ "ರಾಮಾಯಣ" ರಚಿಸಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರತಿವರ್ಷವೂ ಸೀಗೆ ಹುಣ್ಣಿಮೆಯ ದಿನದಿಂದ ಒಂದು ತಿಂಗಳುಗಳ ಕಾಲ ವಿಶ್ವದೆಲ್ಲೆಡೆ ಆಚರಿಸಲಾಗುವ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತದೆ.
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ತತ್ವ ಆದರ್ಶಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅ.13ರಂದು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಗಿದ್ದು, ಇದಲ್ಲದೇ ವಾಲ್ಮೀಕಿ ನಾಯಕ ಸಮುದಾಯ ಒಂದು ತಿಂಗಳುಗಳ ಕಾಲ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಿಸುತ್ತದೆ. 

ಅದ್ರಂತೆ ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾದಲ್ಲಿ ಸಡಗರ, ಸಂಭ್ರಮದಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಗಿದೆ. ಗ್ರಾಮದ ಮಹಿಳೆಯರು, ಮಕ್ಕಳು,  ವಿವಿಧ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಜಯಂತೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇನ್ನೂ ಈ ಕಾರ್ಯಕ್ರಮದಲ್ಲಿ ತಾಲೂಕು ವಾಲ್ಮೀಕಿ ನಾಯಕ‌ ಸಂಘದ ಅಧ್ಯಕ್ಷ ನಂದೀಶ್ ನಾಯಕ, ಮುಖಂಡರಾದ ಮೌನೇಶ್ ನಾಯಕ, ರಾಜು ನಾಯಕ ಹಟ್ಟಿ, ಮುತ್ತಣ್ಣ ನಾಯಕ,  ಕಿರಣ್ ನಾಯಕ ಗೆಜ್ಜಲಗಟ್ಟಾ, ಗ್ರಾಮ ಪಂಚಾಯತಿ ಸದಸ್ಯ ಮಲ್ಲಯ್ಯ, ಲಕ್ಷ್ಮಣ ನಾಯಕ, ವೆಂಕಟೇಶ್ ನಾಯಕ, ಯಂಕಣ್ಣ, ರಮೇಶ್ ನಾಯಕ, ರಾಮಣ್ಣ, ಶಂಕರ್, ಮೌನೇಶ್, ಅಮರಪ್ಪ ದಳಪತಿ, ಲಚಮಪ್ಪ, ಅಯ್ಯಪ್ಪ, ಶಿವಾನಂದ ಸೇರಿದಂತೆ ಅನೇಕರಿದ್ದರು‌.
ವರದಿ: ಕಿರಣ್ ನಾಯಕ ಗೆಜ್ಜಲಗಟ್ಟಾ
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಅನಿಸಿಕೆ, ಲೇಖನಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Thursday, October 17, 2019

"ವಾಲ್ಮೀಕಿ ಯಾರು..?" ಪುಸ್ತಕ ವಿತರಣೆ: ಕ್ರಮಕ್ಕೆ ಡಿಸಿಎಂಗೆ ಮನವಿ


ಕಲಬುರಗಿ: ಕಳೆದ ಭಾನುವಾರ ಕಲಬುರಗಿ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ "ವಾಲ್ಮೀಕಿ ಯಾರು..?" ಎಂಬ ವಿವಾದಾತ್ಮಕ ಪುಸ್ತಕವನ್ನು ವೇದಿಕೆಯಲ್ಲಿದ್ದ ಗಣ್ಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳು  ಸೇರಿದಂತೆ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸಾಮಾನ್ಯರಿಗೂ ವಿತರಿಸಲಾಗಿತ್ತು.
ಸರ್ಕಾರದಿಂದ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಆಯೋಜಕರು ವಿವಾದಾತ್ಮಕ ಪುಸ್ತಕ ಹಂಚಿದ್ದು ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ ಮಹರ್ಷಿ ವಾಲ್ಮೀಕಿಯವರ ಅನುಯಾಯಿಗಳಿಗೆ ಬೇಸರ ತರಿಸಿತ್ತು.  ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಆ ಸಂಬಂಧ ವಿಶೇಷ ಲೇಖನವು ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ವಿವಾದಾತ್ಮಕ ಪುಸ್ತಕ ವಿತರಿಸಿದ ಅಧಿಕಾರಿಗಳ ಮೇಲೆ ಕಠೀಣ ಕ್ರಮ ಕೈಗೊಳ್ಳುವಂತೆ ಡಿಸಿಎಂ & ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ   ಶರಣು ಸುಬೇದಾರ, ಉಪಾಧ್ಯಕ್ಷ ನಂದಕುಮಾರ, ಮುಖಂಡರಾದ ಅಶೋಕ ಶಿರಸಗಿ, ಅಮರೇಶ್ ನಾಯಕ ಗೋವಾ ಹೋಟೆಲ್, ಅರವಿಂದ ನಾಯಕ, ಬಂಟಿ ಸುರಪುರಕರ್ ಸೇರಿದಂತೆ ಅನೇಕರಿದ್ದರು.