ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮಕ್ಕೆ ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಕುಲ ಪೀಠದ ಗುರುಗಳಾದ ಬ್ರಹ್ಮಾನಂದ ಗುರೂಜಿ ಭೇಟಿ ನೀಡಿದರು. ನಿನ್ನೆ ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಗಳು ಇಂದು ಪಾಮನಕಲ್ಲೂರಿಗೆ ಭೇಟಿ ನೀಡಿ ಸರ್ಕಲ್ ನಲ್ಲಿರುವ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಹೊರಭಾಗದಲ್ಲಿರುವ ನೂತನ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಮಹರ್ಷಿ ವಾಲ್ಮೀಕಿ ಪೋಟೋಗೆ ಪೂಜೆ ಸಲ್ಲಿಸಿ, ಭವನ ವೀಕ್ಷಣೆ ನಡೆಸಿ ನೂತನ ಕಟ್ಟಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ವಾಲ್ಮೀಕಿ ನಾಯಕ ಜನಾಂಗದ ಸ್ಥಿತಿಗತಿಗಳ ಬಗ್ಗೆ ಗ್ರಾಮದ, ಸುತ್ತಮುತ್ತಲಿನ ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಪಾಮನಕಲ್ಲೂರು, ಕೋಟೆಕಲ್, ಉಸ್ಕಿಹಾಳ್ ಗ್ರಾಮದ ಯುವಕರು ಬ್ರಹ್ಮಾನಂದ ಗುರೂಜಿಯವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಾಮನಕಲ್ಲೂರು ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಲಚಮಪ್ಪ ಕೊಂಡಾಲ್, ನಾಗಪ್ಪ ತಳವಾರ್, ಅಯ್ಯಪ್ಪ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ್, ಶರಣಪ್ಪ ಕೊಂಡಾಲ್, ದುರುಗಪ್ಪ ಅರಕೇರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಮರೇಪ್ಪ ತಳವಾರ್, ಕೋಟೆಕಲ್ ಗ್ರಾಮದ ಬಸವರಾಜ ನಾಯಕ, ಹುಚ್ಚಪ್ಪ ನಾಯಕ, ಅಂಜಿ ನಾಯಕ, ಉಸ್ಕಿಹಾಳ್ ಗ್ರಾಮದ ಗ್ವಾಲಪ್ಪ ನಾಯಕ, ಆದಪ್ಪ ನಾಯಕ, ಚಿಕ್ಕಹೆಸರೂರು ಗ್ರಾಮದ ಮಹಾಂತೇಶ್ ನಾಯಕ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
No comments:
Post a Comment