Monday, October 21, 2019

ಸಡಗರ ಸಂಭ್ರಮದ ವಾಲ್ಮೀಕಿ ಜಯಂತೋತ್ಸವಕ್ಕೆ ಸಾಕ್ಷಿಯಾಯ್ತು ಗೆಜ್ಜಲಗಟ್ಟಾ


 ಸಹೋದರ ಸಂಬಂಧ, ಮಾನವೀಯ ಸಂಬಂಧಗಳನ್ನು ತಿಳಿಸಿಕೊಡುವ ಕೃತಿ "ರಾಮಾಯಣ" ರಚಿಸಿದ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರತಿವರ್ಷವೂ ಸೀಗೆ ಹುಣ್ಣಿಮೆಯ ದಿನದಿಂದ ಒಂದು ತಿಂಗಳುಗಳ ಕಾಲ ವಿಶ್ವದೆಲ್ಲೆಡೆ ಆಚರಿಸಲಾಗುವ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತದೆ.
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ತತ್ವ ಆದರ್ಶಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅ.13ರಂದು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಗಿದ್ದು, ಇದಲ್ಲದೇ ವಾಲ್ಮೀಕಿ ನಾಯಕ ಸಮುದಾಯ ಒಂದು ತಿಂಗಳುಗಳ ಕಾಲ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಿಸುತ್ತದೆ. 

ಅದ್ರಂತೆ ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾದಲ್ಲಿ ಸಡಗರ, ಸಂಭ್ರಮದಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಗಿದೆ. ಗ್ರಾಮದ ಮಹಿಳೆಯರು, ಮಕ್ಕಳು,  ವಿವಿಧ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಜಯಂತೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇನ್ನೂ ಈ ಕಾರ್ಯಕ್ರಮದಲ್ಲಿ ತಾಲೂಕು ವಾಲ್ಮೀಕಿ ನಾಯಕ‌ ಸಂಘದ ಅಧ್ಯಕ್ಷ ನಂದೀಶ್ ನಾಯಕ, ಮುಖಂಡರಾದ ಮೌನೇಶ್ ನಾಯಕ, ರಾಜು ನಾಯಕ ಹಟ್ಟಿ, ಮುತ್ತಣ್ಣ ನಾಯಕ,  ಕಿರಣ್ ನಾಯಕ ಗೆಜ್ಜಲಗಟ್ಟಾ, ಗ್ರಾಮ ಪಂಚಾಯತಿ ಸದಸ್ಯ ಮಲ್ಲಯ್ಯ, ಲಕ್ಷ್ಮಣ ನಾಯಕ, ವೆಂಕಟೇಶ್ ನಾಯಕ, ಯಂಕಣ್ಣ, ರಮೇಶ್ ನಾಯಕ, ರಾಮಣ್ಣ, ಶಂಕರ್, ಮೌನೇಶ್, ಅಮರಪ್ಪ ದಳಪತಿ, ಲಚಮಪ್ಪ, ಅಯ್ಯಪ್ಪ, ಶಿವಾನಂದ ಸೇರಿದಂತೆ ಅನೇಕರಿದ್ದರು‌.
ವರದಿ: ಕಿರಣ್ ನಾಯಕ ಗೆಜ್ಜಲಗಟ್ಟಾ
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಅನಿಸಿಕೆ, ಲೇಖನಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment