Friday, October 25, 2019

ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು 7ನೇ ಬಾರಿ ಚಾಂಪಿಯನ್

ಇದೇ 22ರಂದು ರಾಯಚೂರು ಜಿಲ್ಲೆ ಲಿಂಗಸುಗೂರಿನ ವಿ.ಸಿ.ಬಿ ಮಹಾವಿದ್ಯಾಲಯದಲ್ಲಿ ಜರುಗಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಪುರುಷರ ಏಕವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಲಿಂಗಸುಗೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ‌ಈ ಮೂಲಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಚಾಂಪಿಯನ್ಸಿಪ್ ಅನ್ನು ಸತತವಾಗಿ 7ನೇ ಬಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜು  ತನ್ನದಾಗಿಸಿಕೊಂಡಿದೆ. 
ಈ ತಂಡದಲ್ಲಿ ಅಮರೇಶ ಜಿ (ಕ್ಯಾಪ್ಟನ್), ರಾಘವೇಂದ್ರ, ನಬೀರಸುಲ್, ಸುರೇಶ ಆರ್, ಬಸವರಾಜ ಕೆ, ಸುರೇಶ ಎಸ್, ಬಸವರಾಜ ಎನ್ ಇದ್ದು ಈ ವಿದ್ಯಾರ್ಥಿಗಳು ಕಾಲೇಜಿಗೆ ಹಾಗೂ ರಾಯಚೂರು ಜಿಲ್ಲೆಗೆ ಕೀರ್ತಿತಂದಿದ್ದಾರೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಿ.ಎಸ್ ಹೂಲಗೇರಿ, ಪ್ರಾಚಾರ್ಯರಾದ ಡಾ.ಮಹಾಂತಗೌಡ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಾನಂದ ನರಹಟ್ಟಿ ಹಾಗೂ ಉಪನ್ಯಾಸಕರು, ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

No comments:

Post a Comment