ದೊರೆ ನ್ಯೂಸ್ ಕನ್ನಡ: ಚಿಕ್ಕಬಳ್ಳಾಪುರದ ವಾಲ್ಮೀಕಿ ಗುರುಕುಲ ಪೀಠದ ಗುರುಗಳಾದ ಬ್ರಹ್ಮಾನಂದ ಗುರೂಜಿ ರಾಯಚೂರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ. ನಿನ್ನೆ ಲಿಂಗಸುಗೂರು ತಾಲ್ಲೂಕಿನ ಆಲಘಟ್ಟದಲ್ಲಿ ಗ್ರಾಮವಾಸ್ತವ್ಯ ಮಾಡಿ ಸಮುದಾಯದ ಕಷ್ಟ ಸುಖದಲ್ಲಿ ಭಾಗಿಯಾಗಿದ್ದ ಸ್ವಾಮೀಜಿ ಇಂದು ಮಸ್ಕಿ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬ್ರಹ್ಮಾನಂದ ಶ್ರೀಗಳು ಕೋಟೆಕಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಸುದ್ದಿ ತಿಳಿಯುತ್ತಿದ್ದಂತೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾಲ್ಮೀಕಿ ನಾಯಕ ಸಮುದಾಯದ ಯುವಕರು ಕೋಟೆಕಲ್ ಗ್ರಾಮಕ್ಕೆ ತೆರಳಿ ಬ್ರಹ್ಮಾನಂದ ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಯ್ಯಪ್ಪ ನಾಯಕ ಯದ್ದಲದೊಡ್ಡಿ, ಅಯ್ಯಪ್ಪ ನಾಯಕ ವಾಟರ್ಮ್ಯಾನ್, ಶರಣಪ್ಪ ಕೊಂಡಾಲ್, ಯಂಕೋಬ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ್, ಅಯ್ಯಣ್ಣ ನಾಯಕ ಪಾಮನಕಲ್ಲೂರು, ರಂಗಪ್ಪ ಅರಕೇರಿ, ಮರೇಪ್ಪ ತಳವಾರ್, ಹುಚ್ಚಪ್ಪ ನಾಯಕ ಕೋಟೆಕಲ್, ಅಂಜಿ ನಾಯಕ ಕೋಟೆಕಲ್ ಸೇರಿದಂತೆ ಪಾಮನಕಲ್ಲೂರು, ಕಾನ್ಯಾಳ್, ಕೋಟೆಕಲ್ ಗ್ರಾಮಸ್ಥರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
No comments:
Post a Comment