Thursday, October 17, 2019

"ವಾಲ್ಮೀಕಿ ಯಾರು..?" ಪುಸ್ತಕ ವಿತರಣೆ: ಕ್ರಮಕ್ಕೆ ಡಿಸಿಎಂಗೆ ಮನವಿ


ಕಲಬುರಗಿ: ಕಳೆದ ಭಾನುವಾರ ಕಲಬುರಗಿ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ "ವಾಲ್ಮೀಕಿ ಯಾರು..?" ಎಂಬ ವಿವಾದಾತ್ಮಕ ಪುಸ್ತಕವನ್ನು ವೇದಿಕೆಯಲ್ಲಿದ್ದ ಗಣ್ಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳು  ಸೇರಿದಂತೆ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸಾಮಾನ್ಯರಿಗೂ ವಿತರಿಸಲಾಗಿತ್ತು.
ಸರ್ಕಾರದಿಂದ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಆಯೋಜಕರು ವಿವಾದಾತ್ಮಕ ಪುಸ್ತಕ ಹಂಚಿದ್ದು ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ ಮಹರ್ಷಿ ವಾಲ್ಮೀಕಿಯವರ ಅನುಯಾಯಿಗಳಿಗೆ ಬೇಸರ ತರಿಸಿತ್ತು.  ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಆ ಸಂಬಂಧ ವಿಶೇಷ ಲೇಖನವು ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ವಿವಾದಾತ್ಮಕ ಪುಸ್ತಕ ವಿತರಿಸಿದ ಅಧಿಕಾರಿಗಳ ಮೇಲೆ ಕಠೀಣ ಕ್ರಮ ಕೈಗೊಳ್ಳುವಂತೆ ಡಿಸಿಎಂ & ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ   ಶರಣು ಸುಬೇದಾರ, ಉಪಾಧ್ಯಕ್ಷ ನಂದಕುಮಾರ, ಮುಖಂಡರಾದ ಅಶೋಕ ಶಿರಸಗಿ, ಅಮರೇಶ್ ನಾಯಕ ಗೋವಾ ಹೋಟೆಲ್, ಅರವಿಂದ ನಾಯಕ, ಬಂಟಿ ಸುರಪುರಕರ್ ಸೇರಿದಂತೆ ಅನೇಕರಿದ್ದರು.

No comments:

Post a Comment