ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜು ಈ ವರ್ಷದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದು, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕುಶಾ ರಾಠೋಡ್ ತಂದೆ ಜಗನ್ನಾಥ ರಾಠೋಡ್ 529 ಅಂಕಗಳನ್ನು ಪಡೆಯುವ ಮೂಲಕ ಶೇ. 88.16% ಫಲಿತಾಂಶ ಪಡೆದುಕೊಂಡಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಸುಜಾತ ತಂದೆ ಬಸವರಾಜ ಹಾಲಾಪೂರ 512 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶೇ. 85.33% ಫಲಿತಾಂಶ ಪಡೆದುಕೊಂಡಿದ್ದಾಳೆ.
ಈ ವರ್ಷ ಕಾಲೇಜಿನ ಒಟ್ಟು 60 ವಿದ್ಯಾರ್ಥಿಗಳು ದ್ವೀತಿಯ ಪಿಯು ಪರೀಕ್ಷೆ ಬರೆದಿದ್ದು, 07 ವಿದ್ಯಾರ್ಥಿಗಳು ಡಿಸ್ಟಿಂಕ್ಸನ್, 31 ವಿದ್ಯಾರ್ಥಿಗಳು ಪ್ರಥಮ, 04 ವಿದ್ಯಾರ್ಥಿಗಳು ದ್ವೀತಿಯ, 09 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ಪಾಸ್ ಆಗಿದ್ದಾರೆ. ಇದರೊಂದಿಗೆ ಕಾಲೇಜಿನ ಫಲಿತಾಂಶ ಶೇ. 85% ಇದ್ದು, ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ತಿಳಿಸಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..


ಅಭಿನಂದನೆಗಳು
ReplyDeleteCongratulations Friends
ReplyDelete