![]() |
ದೇವಿಕಾ ನಾಯಕ ದೊರೆ |
ರಾಯಚೂರು (ಫೆ.23): ಗ್ರಾಮೀಣ ಭಾಗದಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ಸೊಳ್ಳೆಗಳು ಹೆಚ್ಚಾಗಿದ್ದು, ಸೊಳ್ಳೆ ಕಡೆತದಿಂದ ಮಲೇರಿಯಾ ಕಾಯಿಲೆ ಹೆಚ್ಚುವ ಭೀತಿ ಉಂಟಾಗಿದ್ದು ಸಂಬಂಧಿಸಿದವರು ಕೂಡಲೇ ಸೊಳ್ಳೆ ಔಷದಿ ಸಿಂಪಡಿಸುವ ಕೆಲಸ ಮಾಡಬೇಕೆಂದು ರಾಯಚೂರು ಜಿಲ್ಲೆ ದೇವದುರ್ಗ ಮೂಲದ ವಾಲ್ಮೀಕಿ ನಾಯಕ ಸಮಾಜದ ಯುವತಿ ದೇವಿಕಾ ನಾಯಕ ದೊರೆ ಒತ್ತಾಯಿಸಿದ್ದಾಳೆ.
ಈ ಕುರಿತು ಮಾತನಾಡಿದ ದೇವಿಕಾ, ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗಿರುತ್ತದೆ. ಎಲ್ಲೆಂದರಲ್ಲಿ ನೀರು ನಿಂತಿರುತ್ತವೆ. ಹಾಗಾಗಿ ಸೊಳ್ಳೆಗಳು ಹುಟ್ಟಿಕೊಂಡು ಮಲೇರಿಯಾದಂತ ಕಾಯಿಲೆಗಳನ್ನು ಹರಡುತ್ತವೆ. ಆಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಸ ವಿಲೇವಾರಿ ಮಾಡಿಸಬೇಕು. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸರಾಗವಾಗಿ ನೀರು ಹೋಗುವ ವ್ಯವಸ್ಥೆ ಮಾಡಿಸಬೇಕು.
ವಾರಕ್ಕೆ ಎರಡು ಮೂರು ಬಾರಿಯಾದರೂ ಸೊಳ್ಳೆ ಔಷದಿ ಸಿಂಪಡಿಸಬೇಕು. ಆ ಮೂಲಕ ಮುಂದೆ ಆಗಬಹುದಾದ ಕಾಯಿಲೆ ಉಲ್ಬಣವನ್ನು ತಪ್ಪಿಸಬೇಕೆಂದು ದೇವಿಕಾ ನಾಯಕ ದೊರೆ ಮನವಿ ಮಾಡಿದ್ದಾಳೆ.
No comments:
Post a Comment