Thursday, November 10, 2022

ಚಾಂಗಲೇರಾ ಪುಣ್ಯಕ್ಷೇತ್ರವಾಗಿದೆ, ವೀರಭದ್ರೇಶ್ವರ ಮಹಿಮೆ ಅಪಾರವಾಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.10): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಪುಣ್ಯಕ್ಷೇತ್ರವಾಗಿದೆ. ಇಲ್ಲಿರುವ ವೀರಭದ್ರೇಶ್ವರ ದೇವರ ಮಹಿಮೆ ಅಪಾರವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲದೇ ಪಕ್ಕದ ರಾಜ್ಯಗಳಾದ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಲಕ್ಷಾಂತರ ಜನ ಭಕ್ತರು ವೀರಭದ್ರೇಶ್ವರ ದೇವರ ಸನ್ನಿಧಿಗೆ ಬರುತ್ತಾರೆ ಎಂದರೇ ಅದು ವೀರಭದ್ರೇಶ್ವರ ದೇವರ ಮಹಿಮೆಯಿಂದ ಸಾಧ್ಯವಾಗಿದೆ ಎಂದರು.
ಪುರಾಣ, ಪ್ರವಚನಗಳನ್ನು ನಾವೆಲ್ಲರೂ ಸಮಯ ಸಿಕ್ಕಾಗಲೆಲ್ಲ ಕೇಳುತ್ತಿರಬೇಕು. ಯಾಕೆಂದರೆ, ಯಾವ ಗುರುಗಳ ಮಾತು ಯಾವ ಸಮಯದಲ್ಲಿ ಯಾರ ಮನಸ್ಸು ಪರಿವರ್ತನೆ ಮಾಡುತ್ತೋ, ಯಾರ ವ್ಯಕ್ತಿತ್ವ ಸುಧಾರಣೆಗೆ ಕಾರಣವಾಗುತ್ತೊ ಗೋತ್ತಾಗುವುದಿಲ್ಲ. ಅಂತ ಶಕ್ತಿ ಪುರಾಣ, ಪ್ರವಚನಗಳಲ್ಲಿದೆ. ಈ ಭಾಗದಲ್ಲಿ ವೀರಭದ್ರೇಶ್ವರ ದೇವರ ಉದ್ಭವ ಲಿಂಗವಿದೆ. ಇದೊಂದು ಪುಣ್ಯ ಕ್ಷೇತ್ರವಾಗಿದೆ. ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ ಎಂದರೆ ಅದು ವೀರಭದ್ರಶ್ವರ ಶಕ್ತಿಯಿಂದ ಸಾಧ್ಯವಾಗಿದೆ.
ಈ ಪುಣ್ಯಕ್ಷೇತ್ರದ ಅಭಿವೃದ್ಧಿಗಾಗಿ ಐದು ಕೋಟಿ ರೂ. ಅನುದಾನ ಒದಗಿಸಿಕೊಡುತ್ತೇನೆ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗಾಗಲೇ ಸುಮಾರು ಮೂರುವರೆ ಕೋಟಿ. ರೂ. ಒದಗಿಸಿಕೊಟ್ಟಿದ್ದೇನೆ. ಇನ್ನೂ ಸುಮಾರು ಒಂದುವರೆ ಕೋಟಿ ರೂ. ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ನಾವೆಲ್ಲರೂ ಸೇರಿ ಈ ರೀತಿಯ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ.
ಸಮಾಧಾನ, ನೆಮ್ಮದಿ, ಸಂತೃಪ್ತಿ ಸಿಗುತ್ತದೆ ಎಂದು ಜನರು ದೇವಸ್ಥಾನಗಳಿಗೆ ಬರುತ್ತಾರೆ. ದೇವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬುದು ಭಕ್ತರ ಆಶಯವಾಗಿರುತ್ತದೆ. ನಾವು ನಾಡಿಗಾಗಿ, ನಾಡಿನ ಬಡಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ. ಜಾತಿ, ಮತ ಬೇಧ ಭಾವ ಮರೆತು, ನಮಗೆ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡೆಸಿಕೊಂಡು ನಾಡಿನ ಒಳಿತಿಗಾಗಿ ಕೆಲಸ ಮಾಡಬೇಕು. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು‌ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು‌.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಡೋಳಾ ಕಟ್ಟಿಮಠ ಸಂಸ್ಥಾನ ಮೇಹಕರ್ ಮಠದ ಪರಮಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು, ಹುಮಾನಾಬಾದ್  ಹಿರೇಮಠ ಸಂಸ್ಥಾನದ ಪರಮಪೂಜ್ಯ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು, ಬಸವಕಲ್ಯಾಣದ ತ್ರಿಪುರಾಂತ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ವಹಿಸಿದ್ದರು. ದೇವಸ್ಥಾನದ ಆಡಳಿತ ಅಧಿಕಾರಿ ಅನಂತ ಕುಲಕರ್ಣಿ, ಕೆಇಬಿ ಎಇಇ ಅನಿಲ್ ಕುಮಾರ್ ಪಾಟೀಲ್, ಸಂತೋಷ ರಾಸೂರ, ಸಂಜುಕುಮಾರ್ ಜುನ್ನಾ, ಕೃಷ್ಣ ಪಾಂಚಾಳ, ಶೈಲೇಂದ್ರ ಕವಡಿ, ಮಲ್ಲಪ್ಪ ಮನ್ನಾಎಖೇಳ್ಳಿ, ರಾಜಶೇಖರ ದಾನ, ನೀಲಕಂಠ, ಮಲ್ಲಪ್ಪ, ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #Bandeppa #Khashempur Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Kashempur Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Public Leader Bandeppa Kashempur

No comments:

Post a Comment