![]() |
ಸಿಎಂ ಬೊಮ್ಮಾಯಿಗೆ ಶಾಸಕ ಖಾಶೆಂಪುರ್ ಪತ್ರ |
ಬೀದರ್ (ನ.05): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಆಟೋ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ಗಾಯಗೊಂಡ ಮಹಿಳೆಯರ ಕುಟುಂಬಗಳಿಗೆ ತಲಾ 05 ಲಕ್ಷ ರೂ. ಪರಿಹಾರ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದ್ದಾರೆ.
![]() |
ಶಾಸಕ ಬಂಡೆಪ್ಪ ಖಾಶೆಂಪುರ್ |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಶನಿವಾರ ಪತ್ರ ಬರೆದಿರುವ ಅವರು, 'ನ. 04ರ ಸಂಜೆ ನನ್ನ ಮತಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಆಟೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಡಮನಳ್ಳಿಯ ಹದಿನೇಳು ಜನ ಕೂಲಿ ಕಾರ್ಮಿಕರ ಪೈಕಿ ಏಳು ಜನರು ಮೃತಪಟ್ಟಿರುತ್ತಾರೆ. ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮತ್ತು ಇನ್ನುಳಿದ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸದರಿ ಅಪಘಾತಕ್ಕೆ ಒಳಗಾದ ನನ್ನ ಮತಕ್ಷೇತ್ರದ ಉಡಮನಳ್ಳಿಯ ಬಡ ಕುಟುಂಬದ ಕೂಲಿ ಕಾರ್ಮಿಕರು, ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಇವರುಗಳು ಕುಟುಂಬ ಆದಾರ ಸ್ಥಂಭವಾಗಿದ್ದರು. ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಕುಟುಂಬದ ನಿರ್ವಹಣೆ ತುಂಬಾ ತೊಂದರಿಯಾಗಿರುತ್ತದೆ.
ಆದುದರಿಂದ, ನ. 04ರ ಸಂಜೆ ಬೇಮಳಖೇಡದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಹಾಗೂ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರು ಹಾಗೂ ಗಂಭೀರವಾಗಿ ಗಾಯಗೊಂಡ ಎಂಟು ಜನರಿಗೆ ಉತ್ತಮವಾದ ಉಚಿತ ಚಿಕಿತ್ಸೆ ನೀಡಿ ಅವರಿಗೆ ತಲಾ 05 ಲಕ್ಷ ರೂ. ಪರಿಹಾರವನ್ನು ನೀಡುವಂತೆ ತಮ್ಮಲ್ಲಿ ಕೋರುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಬರೆದಿರುವ ಪತ್ರದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.
ಬೇಮಳಖೇಡದ ಬಳಿ ನಡೆದ ಘಟನೆ ದುಃಖ ತರಿಸಿದೆ: ಶಾಸಕ ಬಂಡೆಪ್ಪ ಖಾಶೆಂಪುರ್
ನನ್ನ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ನಡೆದಿರುವ ಅಪಘಾತದಿಂದ ನನಗೆ ನೋವಾಗಿದೆ. ಘಟನೆಯಲ್ಲಿ ಉಡಮನಳ್ಳಿಯ ಏಳು ಜನ ಬಡ ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಘಟನೆ ಸಂಬಂಧ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಕಛೇರಿಯೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಘಟನೆ ಸಂಬಂಧ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಕಛೇರಿಯವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಸಚಿವರ ನೇತೃತ್ವದಲ್ಲಿ ಮೃತರ ಕುಟುಂಬಗಳನ್ನು ಭೇಟಿಯಾಗಿ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ಸಹ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಮನೆಗಳಿಗೆ ನಾನು ನ.06ರಂದು ಭಾನುವಾರ ಬೆಳ್ಳಗೆ ಭೇಟಿ ನೀಡಿ ಸಾಂತ್ವಾನ ಹೇಳುತ್ತೇನೆ. ಬಳಿಕ ಬೀದರ್ ನಗರದ ಬ್ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ದೈರ್ಯ ಹೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ನಡೆದಿರುವ ಕಹಿ ಘಟನೆಯಿಂದ ನನಗೆ ನೋವಾಗಿದೆ. ಕ್ಷೇತ್ರದ ಜನತೆಯೊಂದಿಗೆ ನಾನಿದ್ದೇನೆ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Kashempur #bandeppa #khashemur #ಬಂಡೆಪ್ಪ #ಖಾಶೆಂಪುರ್ Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Public Leader Bandeppa Kashempur
No comments:
Post a Comment