Monday, November 21, 2022

ಮಹಾತ್ಮರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.21): ಮಹಾತ್ಮರ ಇತಿಹಾಸ ತಿಳಿದುಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸೋಣ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ಪಟ್ಟಣದ ಶ್ರೀಬೊಮ್ಮಗೊಂಡೇಶ್ವರ ಚೌಕ್ ಹತ್ತಿರ ಸೋಮವಾರ ನಡೆದ ದಾಸ ಶ್ರೇಷ್ಠ ಭಕ್ತ ಶ್ರೀ ಕನಕದಾಸರ 535ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಹಾತ್ಮರ ಜೀವನ ಚರಿತ್ರೆ, ಇತಿಹಾಸವನ್ನು ಓದಿ ತಿಳಿದುಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದರು.
ಮಹಾತ್ಮರ ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳುವ ಔಷದಿ ಇದ್ದರೆ ಒಳ್ಳೆಯದಾಗುತ್ತಿತ್ತು. ನಾವು ಮಹಾತ್ಮರ ಇತಿಹಾಸವನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಬಿಡುತ್ತಿದ್ದೇವೆ. ಇತಿಹಾಸ ನೆನಪಿನಲ್ಲಿ ಇರುವಂತೆ ಮಾಡುವ ಯಾವುದಾದರೊಂದು ಔಷಧಿ ಕಂಡು ಹಿಡಿಯಬೇಕಾಗಿದೆ.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯರವರು ಮನುಷ್ಯರಾಗಿ ಹುಟ್ಟಿ ಮಹಾತ್ಮರಾಗಿದ್ದಾರೆ‌. ಅವರೆಲ್ಲರೂ ಒಂದೇ ಜನ್ಮದಲ್ಲಿ ಹೆಸರು ಮಾಡಿದ್ದಾರೆ. ಅವರ ಇತಿಹಾಸ ನಾವು ಓದುತ್ತಿದ್ದೇವೆ. ನಾವು ಮಹಾತ್ಮರ ಮೂರ್ತಿಗಳನ್ನು ನಿರ್ಮಾಣ ಮಾಡಿ ಜಯಂತಿ ಹೆಸರಲ್ಲಿ ಕುಣಿದುಕುಪ್ಪಳಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಅವರ ತತ್ವ ಸಿದ್ದಾಂತಗಳನ್ನು ಮರೆತುಬಿಡುತ್ತಿದ್ದೇವೆ‌ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.

ಚಿಟ್ಟಗುಪ್ಪಾ ಮಾದರಿ ತಾಲೂಕು ಮಾಡಲು ಪ್ರಯತ್ನಿಸುತ್ತೇವೆ:
ಇತ್ತೀಚೆಗೆ ಚಿಟ್ಟಗುಪ್ಪಾ ಹೊಸ ತಾಲೂಕು ಆಗಿದೆ. ನಾವು ಹೊಸ ತಾಲೂಕಿನ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕಾಗಿದೆ. ಚಿಟ್ಟಗುಪ್ಪಾ ತಾಲೂಕಿನ ಬಹುತೇಕ ಹಳ್ಳಿಗಳು ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇನ್ನೂ ಅನೇಕ ಹಳ್ಳಿಗಳು ರಾಜಶೇಖರ ಪಾಟೀಲ್ ರವರ ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತವೆ. ರಾಜಶೇಖರ ಪಾಟೀಲ್ ರವರು ಮತ್ತು ನಾನು ಇಬ್ಬರು ಸೇರಿ ಮಾದರಿ ತಾಲೂಕು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ. ಈ ವಿಷಯದ ಕುರಿತು ಅವರೊಂದಿಗೆ ಜಂಟಿ ಸಭೆ ನಡೆಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಗುರುಪೀಠ ತಿಂತಣಿಯ ಪರಮಪೂಜ್ಯ ಶ್ರೀ ಚಿಕ್ಕಲಿಂಗ ಬೀರದೇವರು, ಪರಮಪೂಜ್ಯರಾದ ರಾಜಪ್ಪ ಮುತ್ಯ ಕರಕನಳ್ಳಿ, ಶ್ರೀ ಮಲ್ಲಯ್ಯ ಮುತ್ಯ, ಮಚೇಂದ್ರ ಮುತ್ಯರವರು ವಹಿಸಿದ್ದರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಜಶೇಖರ ಬಿ ಪಾಟೀಲ್, ಉಪನ್ಯಾಸಕ ಡಾ. ಶರಣಪ್ಪ ಎಸ್ ಮಲಗೊಂಡ, ಪ್ರಮುಖರಾದ ಅಮೃತರಾವ್ ಚಿಮಕೋಡೆ, ಮಾಲಾಶ್ರೀ ಶಾಮರಾವ್ ಬುತಾಳೆ, ಸೌಭಾಗ್ಯವತಿ ಅಶೋಕಸ್ವಾಮಿ, ಬಸವರಾಜ ಮಾಳಗೆ, ಸಂತೋಷ ಜೋಳದಪಕೆ, ಶರಣಪ್ಪ ದಸ್ತಗೊಂಡ, ಭೀರಪ್ಪ ಕೊಂಡಬಲ್, ರಾಮಚಂದ್ರ ಒಳಕಿಂಡಿ, ಪಂಡಿತ್ ಕಲ್ಯಾಣಿ, ಶರತ್ ನಾರಣಪೇಟಕರ್, ಪ್ರಲಾದ್ ಪೂಜಾರಿ, ಬಸವರಾಜ ಮೊಳ್ಕೇರಾ, ಸತೀಶ್ ರಾಂಪೂರೆ, ಶಿವರಾಜ ಚಿನ್ಕೇರಾ, ಮಲ್ಲಪ್ಪ ಮನ್ನಾಎಖೇಳ್ಳಿ, ಅಶೋಕ ಚಳ್ಕಾಪೂರೆ, ಅಶೋಕ ಕಂಡಗೊಂಡ, ಅಶೋಕ ಸೊಂಡೆ, ಸಚಿನ್ ಕಲ್ಲೂರ, ಗುಂಡಪ್ಪ, ಪದ್ಮಾವತಿ ಪಾಟೀಲ್, ರೇಖಾ ಬಾಚಾ, ಮನೋಜ್, ದಿಲೀಪ್, ವಿಶಾಲ್ ಬೋರಾಳೆ, ಅನಿಲ್ ಕುಮಾರ್ ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur #Bandeppa #Khashempur #ಬಂಡೆಪ್ಪ #ಖಾಶೆಂಪುರ್

No comments:

Post a Comment