ತೊಗರಿ ಬೆಳೆಗಾರ ರೈತರ ಪರ ಸದನದಲ್ಲಿ ಧ್ವನಿ
ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್
ಹೆಕ್ಟರ್ ಗೆ ಕನಿಷ್ಟ 50 ಸಾ. ರೂ. ಪರಿಹಾರ
ಒದಗಿಸಲು ಸಿಎಂ ಬೊಮ್ಮಾಯಿಗೆ ಮನವಿ
ಬೀದರ್
(ಡಿ.21): ಬೀದರ್, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆ
ರೋಗದಿಂದ ಬೆಳೆ ಕಳೆದುಕೊಂಡಿರುವ ತೊಗರಿ ಬೆಳೆಗಾರ ರೈತರಿಗೆ ಹೆಕ್ಟರ್ ಗೆ ಕನಿಷ್ಟ 50 ಸಾ. ರೂ. ಪರಿಹಾರ
ಒದಗಿಸಬೇಕೆಂದು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ
ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತೊಗರಿ
ಬೆಳೆಗಾರ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ
ವಿಧಾನ ಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ
ಮೂರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ರೋಗಬಾಧೆಯಿಂದ ನಾಶವಾಗಿರುವ ತೊಗರಿ ಬೆಳೆ ಮತ್ತು ಪರಿಹಾರ ವಿಷಯಕ್ಕೆ
ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಅವರು ಮಾತನಾಡಿದರು.
ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ
ನೀರಾವರಿ ಹೊರತಾಗಿ ಕ್ಯಾಶ್ ಕ್ರಾಪ್ ಅಂತ ಇರುವುದು ತೊಗರಿ ಬೆಳೆಯಾಗಿದೆ. ಬೀದರ್ ನಲ್ಲಿ ಸುಮಾರು
1.25 ಲಕ್ಷ ಹೆಕ್ಟರ್, ಕಲಬುರಗಿಯಲ್ಲಿ 6.50 ಲಕ್ಷ ಹೆಕ್ಟರ್ ತೊಗರಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯವರ
ವರದಿಯ ಪ್ರಕಾರ ನೆಟೆ ರೋಗದಿಂದ ಬೀದರ್ ನಲ್ಲಿ 15 ಸಾವಿರ ಹೆಕ್ಟರ್, ಕಲಬುರಗಿಯಲ್ಲಿ 69 ಸಾವಿರ ಹೆಕ್ಟರ್
ತೊಗರಿ ಬೆಳೆ ಹಾಳಾಗಿದೆ. ನನ್ನ ಮಾಹಿತಿಯ ಪ್ರಕಾರ ಬಹುತೇಕ ಶೇ. 90% ರಷ್ಟು ಬೆಳೆ ನಾಶವಾಗಿದೆ. ಮುಖ್ಯಮಂತ್ರಿಗಳು
ಇದನ್ನು ಗಂಭೀರವಾಗಿ ಪರಿಗಣಿಸಿ ತೊಗರಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸಿಹಿ ಸುದ್ದಿ ನೀಡಬೇಕು ಎಂದು
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
ತೊಗರಿ ಬೆಳೆಗಾರ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್ ವಿಡಿಯೋಗಾಗಿ ಕ್ಲಿಕ್ ಮಾಡಿ
ಈ ವೇಳೆ ಮಾತನಾಡಿದ ಆಳಂದ ಶಾಸಕ
ಸುಭಾಷ್ ಗುತ್ತೇದಾರ್ ರವರು, ನೆಟೆ ರೋಗದಿಂದ ಆಳಂದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ತೊಗರಿ ಬೆಳೆ
ಹಾಳಾಗಿದೆ. ಬಂಡೆಪ್ಪ ಖಾಶೆಂಪುರ್ ರವರು ಹೇಳಿದಂತೆ ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರಿಂದ
ರೈತರು ಕಂಗಾಲಾಗಿದ್ದಾರೆ ಎಂದರು.
ಉತ್ತರ ನೀಡಿ ಮಾತನಾಡಿದ ಸಹಕಾರ
ಸಚಿವ ಎಸ್.ಟಿ ಸೋಮಶೇಖರ್ ರವರು, ಜುಲೈ, ಆಗಷ್ಟ್, ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ, ಕಲಬುರಗಿ
ಜಿಲ್ಲೆಯಲ್ಲಿ 69776 ಹೆಕ್ಟರ್, ಬೀದರ್ ಜಿಲ್ಲೆಯಲ್ಲಿ 10426 ಹೆಕ್ಟರ್ ತೊಗರಿ ಬೆಳೆ ನಾಶವಾಗಿದೆ.
ಇನ್ನೂಳಿದಂತೆ ಸ್ಥಳಕ್ಕೆ ಕೃಷಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿಕೊಡುವ ಕೆಲಸ
ಮಾಡುತ್ತಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಸುಮಾರು
259404 ಜನ ರೈತರಿಗೆ 239.91 ಲಕ್ಷ ರೂ. ಬೆಳೆ ವಿಮೆ ಆಧಾರಿತ ಪರಿಹಾರ ಒದಗಿಸಲಾಗುತ್ತದೆ. ಖಾಶೆಂಪುರ್
ರವರು ಹೇಳಿದ ಸಮಸ್ಯೆಯನ್ನು ಕೃಷಿ ಸಚಿವರ ಗಮನಕ್ಕೆ ತಂದು ಪರಿಹಾರ ಒದಗಿಸಲು ತಿಳಿಸುತ್ತೇನೆ ಎಂದರು.
ಮರು ಪ್ರಶ್ನೆ ಕೇಳಿ ಮಾತನಾಡಿದ
ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಚಿವರ ಉತ್ತರ ಸಮರ್ಪಕವಾಗಿಲ್ಲ. ಕನಿಷ್ಟ ಶೇ.90% ನಷ್ಟು ಬೆಳೆ
ನಾಶವಾಗಿದೆ. ಇದನ್ನು ಎನ್.ಡಿ.ಆರ್.ಎಫ್ ನಲ್ಲಿ ತೆಗೆದುಕೊಳ್ಳಬೇಕು. ಕನಿಷ್ಟ ಹೆಕ್ಟರ್ ಗೆ 50 ಸಾವಿರ
ರೂ. ನಂತೆ ಪರಿಹಾರ ನೀಡಬೇಕು. ಬೆಳೆ ವಿಮಾ ಪರಿಹಾರ ರೈತರು ಮಾಡಿದ ಬೆಳೆ ವಿಮೆಯ ಆಧಾರದ ಮೇಲೆ ನೀಡಲಾಗುತ್ತದೆ.
ಅದು ಸರ್ಕಾರ ನೀಡುವ ಪರಿಹಾರವಲ್ಲ. ಸಚಿವರು ಉದ್ರಿಯಾಗಿ ಸರ್ಕಾರ ನಡೆಸಬಾರದು. ರೈತರಿಗೆ ನಗದಿಯಾಗಿ
ಪರಿಹಾರದ ದುಡ್ಡು ಒದಗಿಸಬೇಕು.
ಮುಖ್ಯಮಂತ್ರಿಗಳು, ಸಚಿವರು ಸದನದಲ್ಲಿಯೇ
ಏನಾದರು ಒಂದು ಸಿಹಿ ಸುದ್ದಿ ನೀಡುತ್ತಾರೆ ಎಂದುಕೊಂಡಿದ್ದೇನೆ. ಸದನದಲ್ಲೇ ಮುಖ್ಯಮಂತ್ರಿಗಳು ಪರಿಹಾರ
ಘೋಷಣೆ ಮಾಡಬೇಕು. ಕೂಡಲೇ ಪರಿಹಾರ ಒದಗಿಸಬೇಕು. ಮುಖ್ಯಮಂತ್ರಿಗಳಿಂದ ಮಾತ್ರ ಪರಿಹಾರ ಒದಗಿಸಲು ಸಾಧ್ಯ.
ಯಾವ ಮಂತ್ರಿಯಿಂದಲೂ ಪರಿಹಾರ ಒದಗಿಸಲಾಗದು. ಮುಖ್ಯಮಂತ್ರಿಗಳು ದೊಡ್ಡಮನಸ್ಸು ಮಾಡಿ ಪರಿಹಾರ ಘೋಷಣೆ
ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿರವರಿಗೆ ಮನವಿ
ಮಾಡಿದರು.
No comments:
Post a Comment