Monday, December 5, 2022

ಜಿಲ್ಲಾ ಮಟ್ಟದಲ್ಲೊಂದು ಪ್ಲಾನಿಟೋರಿಯಂ ಅಗತ್ಯ: ಶಾಸಕ ಬಂಡೆಪ್ಪ ಖಾಶೆಂಪುರ್


ಬೀದರ್ (ಡಿ.05): ಪ್ರತಿ ಜಿಲ್ಲೆಗೆ ಒಂದರಂತೆ ಜಿಲ್ಲಾ ಮಟ್ಟದಲ್ಲೊಂದು ಪ್ಲಾನಿಟೋರಿಯಂ ಮಾಡುವುದು ಅಗತ್ಯವಾಗಿದೆ. ಅದರಿಂದ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಲಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ 'ಶಾಲೆಯ ಅಂಗಳದಲ್ಲೆ ತಾರಾಲಯ' ಯೋಜನೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಚಾರಿ ತಾರಾಲಯ ಎಂಬ ಯೋಜನೆ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಸಂಚಾರಿ ತಾರಾಲಯ ಎಂಬ ಯೋಜನೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳಲ್ಲಿನ ಮಕ್ಕಳಿಗೆ ತಾರಾಲಯ ಪರಿಚಯಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿಜ್ಞಾನ ವಿಭಾಗದಿಂದ ಒಳ್ಳೆಯ ಕೆಲಸವಾಗುತ್ತಿದೆ. ಅಬ್ದುಲ್ ಕಲಾಂರವರು ಗ್ರಾಮೀಣ ಭಾಗದಲ್ಲಿ ಜನಿಸಿ ವಿಜ್ಞಾನಿಯಾಗಿರುವುದು ಅವರಲ್ಲಿರುವ ಶಕ್ತಿ ಸಾಮರ್ಥ್ಯದಿಂದಲೇ ಸಾಧ್ಯವಾಗಿದೆ. ಅದರಂತೆಯೇ ಅಂಬೇಡ್ಕರ್ ರವರು ತಮ್ಮ ಶಕ್ತಿ ಸಾಮರ್ಥ್ಯದಿಂದಲೇ ಭಾರತ ಸಂವಿಧಾನ ರಚಿಸಿದ್ದಾರೆ ಅಂತವರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಸಾಗಬೇಕು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ತಾರಾಲಯದಂತಹ ಯೋಜನೆಗಳಿಂದ ಸಾಧ್ಯವಾಗುತ್ತದೆ. ಕನಿಷ್ಠ ಪಕ್ಷ ಜಿಲ್ಲಾ ಮಟ್ಟದಲ್ಲಿ ಒಂದೊಂದು ತಾರಾಲಯಗಳನ್ನು ಸ್ಥಾಪಿಸಬೇಕು ಎಂಬುದು ನನ್ನ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಮುಖ್ಯ ವ್ಯವಸ್ಥಾಪಕ ವೀರೇಶ ಹಂಚಿನಾಳರವರು, ಸಂಚಾರಿ ತಾರಾಲಯ ಎಂದರೆ ಶಾಲೆಯ ಅಂಗಳದಲ್ಲಿಯೇ ಮಕ್ಕಳಿಗೆ ತಾರಾಲಯ ತೋರಿಸುವ ಯೋಜನೆಯಾಗಿದೆ. ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಿಜವಾದ ನಕ್ಷತ್ರಗಳು ಇದ್ದಂತೆ. ಅಂತವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಂತಹ ಯೋಜನೆ ರೂಪಿಸಿದೆ. ಮಕ್ಕಳಲ್ಲಿ ವೈಜ್ಞಾನಿಕ ಪ್ರವೃತ್ತಿ ಬೆಳೆಸುವ ಕೆಲಸವನ್ನು ಸಂಚಾರಿ ತಾರಾಲಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿ ಇಂದುಮತಿ, ಯೋಜನೆಯ ಮುಖ್ಯ ವ್ಯವಸ್ಥಾಪಕ ವೀರೇಶ ಹಂಚಿನಾಳ, ನಿವೃತ್ತ ಕುಲಪತಿ ಬಿ.ಜಿ ಮೂಲಿಮನಿ, ಅಗಸ್ತ್ಯ ಫೌಂಡೇಶನ್ ನ ಮುಖ್ಯಸ್ಥ ಬಾಬುರಾವ್ ಸಲಾಸರೆ, ಎಸ್ಡಿಎಮ್ಸಿ ಅಧ್ಯಕ್ಷ ಸೂರ್ಯಕಾಂತ್ ಜ್ಯೋತಿ, ಪ್ರಮುಖರಾದ ಭಜರಂಗ ತಮಗೊಂಡ, ಮಂಜುನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಸುನೀಲ್ ಗುಮಾಸ್ತಿ, ಸಂತೋಷ ಗುಮಾಸ್ತಿ, ನಾಗೇಶ ಪಾಟೀಲ್, ಸಚ್ಚಿದಾನಂದ, ಮಚೇಂದ್ರ ಮುತ್ತಂಗಿ, ಸುಪ್ರಿಯಾ, ದಿನೇಶ್, ವಿಶ್ವನಾಥ, ತುಕ್ಕರಾಮ್, ಸದಾನಂದ, ಸಂಜುಕುಮಾರ್, ದೀಪಾ, ಶಶಿಕಲಾ, ಅಶೋಕ್ ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಶಾಸಕರು #Bandeppa #Khashempur #Bidar #South #MLA

No comments:

Post a Comment