ಸಂತಸ ವ್ಯಕ್ತಪಡಿಸಿದ ಪಾಮನಕಲ್ಲೂರು ಗ್ರಾಮಸ್ಥರು
![]() |
ನಾಗರಾಜ್ ಭೋವಿ ಪಿಎಸ್ಐ |
ದೊರೆ ನ್ಯೂಸ್ ಕನ್ನಡ ವೆಬ್ ಪೋರ್ಟಲ್ Dore News Kannada Web Portal
ರಾಯಚೂರು (ಮೇ.07): ಬಡತನದಲ್ಲಿ ಹುಟ್ಟಿ ಬೆಳೆದು ಕಷ್ಟಪಟ್ಟು ಓದಿ, ಪರೀಕ್ಷೆ ಬರೆದು ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವ ಮೂಲಕ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕಾರವಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ನಾಗರಾಜ್ ಭೋವಿ (ನಾಗಪ್ಪ) ರವರು ಬರೆದಿರುವ ಚೊಚ್ಚಲ ಅಪ್ರಕಟಿತ ಕವನ ಸಂಕಲನವಾದ 'ನೆತ್ತರಲಿ ನೆಂದ ಹೂವು' ಕವನ ಸಂಕಲನದ ಹಸ್ತಪ್ರತಿಯೂ ವಿಧ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ - ಧಾರವಾಡರವರು ನೀಡುವ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 'ದ.ರಾ ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ 2022ರ ಪ್ರೋತ್ಸಾಹಕರ ವಿಭಾಗ'ದ ಪ್ರಶಸ್ತಿಗೆ ಆಯ್ಕೆಯಾಗಿದೆ.
ವಿಧ್ಯಾದರ ಕನ್ನಡ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪಿಎಸ್ಐ ನಾಗರಾಜ್ ಭೋವಿರವರಿಗೆ ದ.ರಾ ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ, ಅಭಿನಂದನಾ ಪತ್ರ, ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾಗಿರುವ ವಿಧ್ಯಾದರ ಮುತಾಲಿಕ ದೇಸಾಯಿರವರು ತಿಳಿಸಿದ್ದಾರೆ.
ತಮ್ಮೂರಿನ ಯುವಕನೊಬ್ಬ ಪಿಎಸ್ಐ ಹುದ್ದೆಯಲ್ಲಿದ್ದುಕೊಂಡು ಲಾಠಿಯೊಂದಿಗೆ ಲೇಖನಿ ಹಿಡಿದು ಉತ್ತಮ ಕವನ ಸಂಕಲನ ರಚಿಸಿ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಪಾಮನಕಲ್ಲೂರು ಗ್ರಾಮದ ಹಿರಿಯರು, ಯುವ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ನಾಗರಾಜ್ ಭೋವಿರವರು ಇನ್ನೂ ಉನ್ನತಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಅವರ ಸಾಹಿತ್ಯ ಅಭಿರುಚಿ ಇನ್ನೂ ಹೆಚ್ಚಾಗಲಿ ಎಂದು ಶುಭ ಹಾರೈಸಿದ್ದಾರೆ.
ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು
Congratulations sir
ReplyDelete