ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು. |
ಬೆಂಗಳೂರಿನ
ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಜೆಟ್ ಅಧಿವೇಶನದ ಎಂಟನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬಜೆಟ್
ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದಲ್ಲಿ ಬದುಕುತ್ತಿರುವ ನಾವೆಲ್ಲ ಅದೃಷ್ಟವಂತರು,
ಈ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಹೆಸರಲ್ಲಿ ಬಜೆಟ್ ಮಂಡನೆ ಮಾಡಿದೆ. ಸ್ವತಂತ್ರ್ಯ ಹೋರಾಟಗಾರರ
ಕುಟುಂಬಗಳಿಗೆ ಮತ್ತು ದೇಶಕಾಯುವ ಸೈನಿಕರಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿರುವುದು ಅವಶ್ಯಕವಾಗಿದೆ
ಎಂದರು.
ಚರ್ಚೆಯ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ
ಯೋಧರ, ಸ್ವತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಜಮೀನು ನೀಡಿ:
ಸ್ವತಂತ್ರ್ಯ
ಹೋರಾಟಗಾರರ ಕುಟುಂಬಗಳಿಗೆ ಮತ್ತು ಸೈನಿಕರ ಕುಟುಂಬಗಳಿಗೆ ಸರ್ಕಾರದಿಂದ ಗೌರವಧನ ಹಾಗೂ ಆ ಕುಟುಂಬಗಳಿಗೆ
ಜಮೀನು ಒದಗಿಸಿಕೊಡುವ ಕೆಲಸವನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು
ಮಾಡಬೇಕು. ಅವರಿಗಾಗಿ ಸರ್ಕಾರಗಳಿಂದ ವಿಶೇಷ ಯೋಜನೆ, ಕಾರ್ಯಕ್ರಮಗಳನ್ನು ಮಾಡಬೇಕು.
ಕೃಷಿ, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು:
ಈ
ಸರ್ಕಾರ ಅಮೃತ ಮಹೋತ್ಸವ ಸಂಭ್ರಮದ ವೇಳೆಯಲ್ಲಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದೆ. ಆದರೇ
ಹೇಗೆ ದ್ವಿಗುಣ ಮಾಡುತ್ತೇವೆಂದು ಹೇಳಿಲ್ಲ. ರೈತರೆಲ್ಲರೂ ನಷ್ಟದಲ್ಲಿ ಜೀವನ ಮಾಡುತ್ತಿದ್ದಾರೆ. ನಾನು
ಕೂಡ ರೈತನಾಗಿ ನಷ್ಟದಲ್ಲಿದ್ದೇನೆ. ನಾವು ಸರ್ಕಾರದಿಂದ ರೈತರಿಗೆ ಎಷ್ಟರ ಮಟ್ಟಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ
ಎಂಬುದರ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ನಾನು
ಕೃಷಿ ಸಚಿವನಾಗಿದ್ದಾಗ ಕುಮಾರಸ್ವಾಮಿರವರು ಮಂಡಿಸಿದ ಬಜೆಟ್ ನಲ್ಲಿ ಕೃಷಿಗೆ ಶೇ.70% ಪ್ರಾಮುಖ್ಯತೆ
ನೀಡಿದ್ದರು. ಆದರೇ ಈಗ ಶೇ.50% ರಷ್ಟು ಕೂಡ ಕೃಷಿಗೆ ಪ್ರಾಮುಖ್ಯತೆ ನೀಡಿಲ್ಲ. ಕುಮಾರಸ್ವಾಮಿರವರು
ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ರೈತರ ಸಾಲಮನ್ನಾದಷ್ಟು ಈಗ ರೈತರಿಗೆ ಸಾಲ ನೀಡಿಲ್ಲ. ರೈತರು ಬೆಳೆದಿರುವ
ಬೆಳೆಗಳಿಗೆ ಸರ್ಕಾರದಿಂದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರಿಗೆ ಉತ್ತಮವಾಗಿರುವ ಇನ್ಸೂರೆನ್ಸ್
ಯೋಜನೆ ತರಬೇಕು. ಕೆಎಮ್ಎಫ್, ಡಿಸಿಸಿ ಬ್ಯಾಂಕ್ ಗಳ ಸುಧಾರಣೆ, ಎಫಿಎಮ್ಸಿ ಸುಧಾರಣೆಗೆ ಹೆಚ್ಚಿನ ಆಧ್ಯತೆ
ನೀಡಬೇಕು.
ಕುರಿ, ಮೇಕೆ ಸಾವಿನ ಪರಿಹಾರ ಹೆಚ್ಚಿಸಬೇಕು:
ಪ್ರಸ್ತುತ
ಕುರಿ, ಮೇಕೆಗಳ ಸಾವಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತ ವೈಜ್ಞಾನಿಕವಾಗಿಲ್ಲ. ಪರಿಹಾರದ ಮೊತ್ತವನ್ನು
ಹೆಚ್ಚಿಸಬೇಕು. ಕುರಿ, ಮೇಕೆ ಸಾಕಾಣಿಕೆದಾರರಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದ ಕುರಿ, ಮೇಕೆಗಳಿಗೆ
ಇನ್ಸೂರೆನ್ಸ್ ಯೋಜನೆಗಳನ್ನು ರೂಪಿಸಬೇಕು. ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಸರ್ಕಾರದಿಂದ
ಆಗಬೇಕು.
09, 10ನೇ ತರಗತಿ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ನೀಡಬೇಕು:
ಪ್ರಸ್ತುತ
01 ರಿಂದ 08ನೇ ತರಗತಿಯವರೆಗಿನ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಆದರೇ ಅದೇ
ಶಾಲಾ ಕಾಂಪೌಂಡ್ ಗಳೊಳಗೆ ಇರುವ 09, 10ನೇ ತರಗತಿ ಮಕ್ಕಳಿಗೆ ನೀಡುತ್ತಿಲ್ಲ. ಇದರಿಂದ ಮಕ್ಕಳಲ್ಲಿ
ಬಿನ್ನಾಭಿಪ್ರಾಯ ಮೂಡುತ್ತದೆ. 09 ಮತ್ತು 10ನೇ ತರಗತಿಯ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸುವ ಕೆಲಸ
ಸರ್ಕಾರ ಮಾಡಬೇಕು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮಹತ್ವ ನೀಡಬೇಕು:
ಆರೋಗ್ಯ
ಕ್ಷೇತ್ರದ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಸ್ಪೇಷಲ್, ಸುಪರ್ ಸ್ಪೇಷಲ್
ಆಸ್ಪತ್ರೆಗಳನ್ನು ಸರ್ಕಾರದಿಂದ ನಿರ್ಮಿಸಬೇಕು. ಅವುಗಳ ಸುಧಾರಣೆಗೆ ಆದ್ಯತೆ ನೀಡಬೇಕು. ರಾಜ್ಯದ ರೋಗಿಗಳು
ಹೊರರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಇಲ್ಲದಂತೆ ನೋಡಿಕೊಳ್ಳಬೇಕು.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು:
ಆಶಾ
ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅವರಿಗೆ ನೀಡುತ್ತಿರುವ ಗೌರವಧನದಲ್ಲಿ ಅವರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಅನೇಕ ವರ್ಷಗಳಿಂದ
ಅವರು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಗೌರವಧನ ಹೆಚ್ಚಿಸಬೇಕು ಹಾಗೂ ಇತರೆ ಸೌಲಭ್ಯಗಳನ್ನು
ಒದಗಿಸಿಕೊಡುವ ಕೆಲಸ ಮಾಡಬೇಕು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು:
ನಮ್ಮ
ಕಲ್ಯಾಣ ಕರ್ನಾಟಕ ಭಾಗ ಕಲ್ಯಾಣವಿಲ್ಲದ ಭಾಗವಾಗಿದೆ. ಈ ಭಾಗಕ್ಕೆ ಅನ್ಯಾಯವಾಗುತ್ತಿದೆ. ಕೃಷಿ, ಶಿಕ್ಷಣ,
ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಖ್ಯಮಂತ್ರಿಗಳು ಈ ಭಾಗದ ಅಭಿವೃದ್ಧಿಗೆ
ಹೆಚ್ಚಿನ ಅನುದಾನ ಒದಗಿಸಿಕೊಡಬೇಕು.
ಕಾರಂಜಾ ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡಬೇಕು:
ಕಾರಂಜಾ
ಡ್ಯಾಮ್ನ ಹಿನ್ನಿರಿನಿಂದ ರೈತರ ಹೆಚ್ಚುವರಿ ಭೂಮಿ ಮುಳುಗಡೆಯಾಗುತ್ತಿದೆ. ಕಾರಂಜಾ ಸಂತ್ರಸ್ತ ರೈತರು
ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ನ್ಯಾಯಯುತವಾದ
ಪರಿಹಾರ ಸಿಗುತ್ತಿಲ್ಲ. ಕೂಡಲೇ ಅವರಿಗೆ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು.
ಬೀದರ್
ನ ಬಿಎಸ್ಎಸ್ಕೆಗೆ ಅನುದಾನ ನೀಡಬೇಕು. ಪ್ರವಾಸೋಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಅನುಭವ ಮಂಟಪದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ನೌಕರರ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಸೆವೆಂತ್ ಪೇ ಕಮಿಷನ್ ಜಾರಿಗೊಳಿಸಬೇಕು. ಶಾಸಕರ ನಿಧಿಯನ್ನು 2 ರಿಂದ ನಾಲ್ಕು ಕೋಟಿ ರೂ.ಗೆ ಹೆಚ್ಚಿಸಬೇಕು.
ಒಟ್ಟಾರೆಯಾಗಿ
2019-20, 2020-21, 2021-22, 2022-23ನೇ ಬಜೆಟ್ ನಲ್ಲಿ ಘೋಷಿಸಿದಂತ ಪ್ರತಿಯೊಂದು ಯೋಜನೆಗಳು ಜಾರಿಗೊಳಿಸಬೇಕು.
ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಪ್ರವಾಸೋಧ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ
ನಿಟ್ಟಿನಲ್ಲಿ ವಿನೂತನ ಯೋಜನೆ, ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಲ್ಯಾಣ ಕರ್ನಾಟಕ, ಕರ್ನಾಟಕದ ಅಭಿವೃದ್ಧಿಗೊಳಿಸುವ
ಕೆಲಸವನ್ನು ಸರ್ಕಾರ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬಜೆಟ್ ಮೇಲಿನ ಚರ್ಚೆಯಲ್ಲಿ ಸರ್ಕಾರವನ್ನು
ಒತ್ತಾಯಿಸಿದರು.
No comments:
Post a Comment