ಅಧಿವೇಶನದ ಹದಿಮೂರನೇ ದಿನದ ಕಲಾಪದಲ್ಲಿ
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು.
ಬೀದರ್ (ಮಾ.22):
ಕಾರಂಜಾ ಅಣೆಕಟ್ಟಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅತಿವಾಳ ಏತ ನೀರಾವರಿ ಯೋಜನೆ, ಕಾರಂಜಾ
ಲಿಫ್ಟ್ ಇರಿಗೇಶನ್ ಗಳ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಧ್ವನಿ ಎತ್ತಿದರು.
ಬೆಂಗಳೂರಿನ
ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಜೆಟ್ ಅಧಿವೇಶನದ ಹದಿಮೂರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಅತಿವಾಳ ಏತ ನೀರಾವರಿ ಯೋಜನೆ, ಕಾರಂಜಾ ಲಿಫ್ಟ್ ಇರಿಗೇಶನ್ ಗಳ ಬಗ್ಗೆ
ಚುಕ್ಕೆಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಅತಿವಾಳ ಏತ ನೀರಾವರಿ ಯೋಜನೆ ಜೊತೆಜೊತೆಯಲ್ಲಿ ಕಾರಂಜಾ ಲಿಫ್ಟ್ ಇರಿಗೇಶನ್
ಎಂಬ ಯೋಜನೆ ಕೂಡ ಕಾರಂಜಾ ಜಲಾಶಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದರು.
ಅತಿವಾಳ
ಏತ ನೀರಾವರಿ ಯೋಜನೆ ಹುಮನಾಬಾದ್ ತಾಲೂಕಿನ ಹುಮನಾಬಾದ್, ಅಮೀರಾಬಾದ್ ವಾಡಿ, ಹಳ್ಳಿಖೇಡ ಬಿ ಸೇರಿದಂತೆ
ವಿವಿಧ ಹಳ್ಳಿಗಳ ಜಮೀನುಗಳಿಗೆ ನೀರು ಒದಗಿಸಿಕೊಡುವ ಯೋಜನೆಯಾಗಿದೆ. 4 ಕೋಟಿ ರೂ. ಅನುದಾನದ ಕಾರಂಜಾ ಲಿಫ್ಟ್ ಇರಿಗೇಶನ್ ನನ್ನ ಕ್ಷೇತ್ರದ ವ್ಯಾಪ್ತಿಗೆ
ಬರುವ ಯೋಜನೆಯಾಗಿದೆ. ಈ ಯೋಜನೆಗೆ ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಜಲಸಂಪನ್ಮೂಲ
ಸಚಿವರಿದ್ದಾಗಲೇ ಚಾಲನೆ ಕೊಟ್ಟಿದ್ದರು. ಈ ಯೋಜನೆಯಿಂದ ನಮ್ಮ ಕ್ಷೇತ್ರ ವ್ಯಾಪ್ತಿಯ ಸಿರ್ಸಿ, ಬಾವಗಿ
ಸೇರಿದಂತೆ ಅನೇಕ ಗ್ರಾಮಗಳ ಜಮೀನುಗಳಿಗೆ ನೀರು ಸಿಗುತ್ತದೆ.
ಶಾಸಕರು ಮಾತನಾಡಿರುವ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ..
ಕಾರಂಜಾ
ಲಿಫ್ಟ್ ಇರಿಗೇಶನ್ ಯೋಜನೆ ಯಾವ ಹಂತದಲ್ಲಿದೆ. ಎಷ್ಟು ಜಮೀನುಗಳಿಗೆ ಈ ಯೋಜನೆಯಿಂದ ನೀರು ಒದಗಿಸಿಕೊಡಲು
ಸಾಧ್ಯವಾಗುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರ ನೀಡಬೇಕು. ಅಧಿಕಾರಿಗಳು ಮತ್ತು ನನ್ನ ನೇತೃತ್ವದಲ್ಲಿ
ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವರಿಗೆ ಮನವಿ
ಮಾಡಿದರು.
ಈ
ವೇಳೆ ಉತ್ತರ ನೀಡಿ ಮಾತನಾಡಿದ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ಹಾಗೂ ಸಣ್ಣ ನೀರಾವರಿ ಇಲಾಖೆಯ
ಸಚಿವ ಜೆ.ಸಿ ಮಾಧುಸ್ವಾಮಿಯವರು, ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. 3873 ಹೆಕ್ಟರ್ ಜಮೀನಿಗೆ ನೀರು
ಒದಗಿಸುವ ಕಾರ್ಯಕ್ರಮ ಇದಾಗಿದೆ. ಜೂನ್ ತಿಂಗಳೊಳಗೆ ಈ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಅತಿವಾಳ
ಏತ ನೀರಾವರಿ ಯೋಜನೆಯ ಮಾಹಿತಿ ನೀಡಿದರು.
ಮರುಪ್ರಶ್ನೆ
ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಉತ್ತರದಲ್ಲಿ ಅತಿವಾಳ ಏತ ನೀರಾವರಿ ಯೋಜನೆಯ ಬಗ್ಗೆ
ಮಾಹಿತಿ ನೀಡಿದ್ದಿರಿ. ಕಾರಂಜಾ ಲಿಫ್ಟ್ ಇರಿಗೇಶನ್ ಯೋಜನೆಯ ಬಗ್ಗೆ ಕೂಡ ಮಾಹಿತಿ ನೀಡಬೇಕೆಂದು ಮನವಿ
ಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ಸಭೆ ನಡೆಸುವಂತೆ
ಸಚಿವರಾದ ಗೋವಿಂದ ಕಾರಜೋಳರವರಿಗೆ ತಿಳಿಸುತ್ತೇನೆಂದು ಸಚಿವ ಮಾಧುಸ್ವಾಮಿರವರು ಮರುಉತ್ತರದಲ್ಲಿ ತಿಳಿಸಿದರು.
No comments:
Post a Comment