ದೊರೆನ್ಯೂಸ್: ಜನಪದ ಹಾಡು, ಸಾಹಿತ್ಯದ ಆಸಕ್ತಿ ಇಂದಿನ ಯುವ ಸಮುದಾಯದಲ್ಲಿ ಕುಸಿಯುತ್ತಿದ್ದು, ಮೊಬೈಲ್, ಇಂಟರ್ನೆಟ್ ಗೆ ಯುವಜನತೆ ಮಹತ್ವ ನೀಡುತ್ತಿದ್ದಾರೆ. ಇಂತಹ ದಿನಗಳಲ್ಲಿ ಮೊಹರಂ ಪದ ಹಾಡುವ ಮೂಲಕ ಜನಮೆಚ್ಚುಗೆ ಪಡೆದ ತಂಡವೊಂದರ ಸ್ಟೋರಿ ಇಲ್ಲಿದೆ.
ಹೌದು ಮೊಹರಂ ಹಬ್ಬದ ಸಂದರ್ಭದಲ್ಲಿ ಮೊಹರಂ ಪದಗಳನ್ನು ಹಾಡುವುದು ಕೆಲವು ಗ್ರಾಮಗಳಲ್ಲಿ ಇನ್ನೂ ಕೂಡ ಕಾಣಬಹುದಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಭಾಗದ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಪದಗಳಿಗೆ ಹೆಚ್ಚಿನ ಮಹತ್ವ ಇದೆ. ಮೊಹರಂ ಪದಗಳಲ್ಲಿ ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಶಕ್ತಿಯಿದ್ದು, ಆ ಹಾಡುಗಳನ್ನು ಹಾಡುವ ಮೂಲಕ ಜನರಿಗೆ ಒಳ್ಳೆಯದನ್ನು ಹೇಳಿಕೊಡುವ ಕೆಲಸ ಈ ಭಾಗದಲ್ಲಿ ಸಾಗುತ್ತಿದೆ.
ಮೊಹರಂ ಪದಗಳನ್ನು ಹಾಡುವ ತಂಡಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮಸ್ಥರ ತಂಡ ಮಹತ್ವದಾಗಿದೆ. ಗೆಜ್ಜಲಗಟ್ಟ ಗ್ರಾಮಸ್ಥರು ಈಗಾಗಲೇ ಅನೇಕ ಕಡೆಗಳಲ್ಲಿ ಮೊಹರಂ ಪದಗಳನ್ನು ಹಾಡುವ ಮೂಲಕ ಬಹುಮಾನಗಳನ್ನು ಹಲವಾರು ವರ್ಷಗಳಿಂದ ತಮ್ಮದಾಗಿಸಿಕೊಳ್ಳುತ್ತಾ ಸಾಗಿದ್ದಾರೆ. ಅದರಂತೆ ಈ ವರ್ಷವೂ ಕೂಡ ಗೆಜ್ಜಲಗಟ್ಟ ಗ್ರಾಮಸ್ಥರು ಮೊಹರಂ ಪದಗಳನ್ನು ಹಾಡುವ ಮೂಲಕ ಬಹುಮಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಡದಲ್ಲಿ ಮೊಹರಂ ಪದ ಹಾಡುವ ಮೂಲಕ ಗೆಜ್ಜಲಗಟ್ಟ ಗ್ರಾಮದ ವೆಂಕಟೇಶ ನಾಯಕ, ಲಕ್ಷ್ಮಣ್ಣ ನಾಯಕರ ತಂಡ ಬಹುಮಾನ ಸನ್ಮಾನಗಳನ್ನು ಸ್ವೀಕರಿಸುವ ಮೂಲಕ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ.
ಗ್ರಾಮೀಣ ಸಂಸ್ಕೃತಿ ಅವನತಿಯತ್ತ ಸಾಗುತ್ತಿರುವ ಇಂತಹ ದಿನಮಾನಗಳಲ್ಲಿ ಗ್ರಾಮೀಣ ಕಲೆಯನ್ನು ಕಾಪಾಡಿಕೊಂಡು ಸಾಗುತ್ತಿರುವ ಇಂತಹ ಯುವ ಸಮುದಾಯವನ್ನು ಸರ್ಕಾರ, ಸಂಬಂಧಿಸಿದವರು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.
ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

![]() |
ಮೊಹರಂ ಪದಗಳನ್ನು ಹಾಡಿದ ವೆಂಕಟೇಶ ನಾಯಕ, ಲಕ್ಷ್ಮಣ ನಾಯಕ ತಂಡದವರನ್ನು ಸನ್ಮಾನಿಸಿದ ಅಮಿನಗಡ ಗ್ರಾಮಸ್ಥರು |
ಇತ್ತೀಚೆಗೆ ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಡದಲ್ಲಿ ಮೊಹರಂ ಪದ ಹಾಡುವ ಮೂಲಕ ಗೆಜ್ಜಲಗಟ್ಟ ಗ್ರಾಮದ ವೆಂಕಟೇಶ ನಾಯಕ, ಲಕ್ಷ್ಮಣ್ಣ ನಾಯಕರ ತಂಡ ಬಹುಮಾನ ಸನ್ಮಾನಗಳನ್ನು ಸ್ವೀಕರಿಸುವ ಮೂಲಕ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ.
ಗ್ರಾಮೀಣ ಸಂಸ್ಕೃತಿ ಅವನತಿಯತ್ತ ಸಾಗುತ್ತಿರುವ ಇಂತಹ ದಿನಮಾನಗಳಲ್ಲಿ ಗ್ರಾಮೀಣ ಕಲೆಯನ್ನು ಕಾಪಾಡಿಕೊಂಡು ಸಾಗುತ್ತಿರುವ ಇಂತಹ ಯುವ ಸಮುದಾಯವನ್ನು ಸರ್ಕಾರ, ಸಂಬಂಧಿಸಿದವರು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.
ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment