ದೊರೆನ್ಯೂಸ್ (ಕಲಬುರಗಿ): ಮಧ್ಯಕಾಲೀನ ಸಂದರ್ಭದಲ್ಲಿ ಸಮಾಜೋಧಾರ್ಮಿಕ ಅಂಧ ಶ್ರದ್ಧೆ ಮೌಢ್ಯಗಳನ್ನು ತೊಡೆದು ಹಾಕಲು ಹನ್ನೆರಡನೆಯ ಶತಮಾನದ ವಚನಕಾರರು ಹಾಗೂ ೧೬ನೇ ಶತಮಾನದ ದಾಸರು ಮಾಡಿದ ಹೋರಾಟ ಅವಿಸ್ಮರಣೀಯ ಎಂದು ಖ್ಯಾತ ವಿಮರ್ಶಕರಾದ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ಅಧ್ಯಾಯನ ಸಂಸ್ಥೆಯು ಸಾಹಿತಿ ದಿ. ಭೀಮಶೇನರಾವ ಕುಲಕರ್ಣಿ ತಲೇಖಾನ ಸ್ಮಾರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದ ಅವರು, ಭಾರತದ ಎರಡು ಧಾರೆಗಳಲ್ಲಿ ಭಕ್ತಿ ಚಳವಳಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ವಚನಕಾರರು ಸಮಾಜ ಮುಖಿಯಾಗಿ, ದಾಸರು ವ್ಯಕ್ತಿ ನೆಲೆಯ ಪರಂಪರೆಯೊಳಗೇ ಅಂತರ ಮುಖಿಯಾಗಿ ಭಕ್ತಿ ಚಳವಳಿ ನಡೆಸಿದರು.
ವಚನಕಾರರು ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿ ಮೂಢ ನಂಬಿಕೆ ಕುರಿತು ವೈಚಾರಿಕವಾಗಿ ಮಾತನಾಡಿದ್ದಲ್ಲದೆ. ಕಾಯಕ ದಾಸೋಹ ಮೂಲಕ ಸಮಾಜಿಕ ಸಮಾನತೆಗಾಗಿ ಶ್ರಮಿಸಿದರು.
ಕೀರ್ತನಕಾರರಲ್ಲಿ ವಚನಕಾರರಷ್ಟು ಹೋರಾಟ ಸ್ವರೂಪ ಕಾಣುವುದಿಲ್ಲವಾದರೂ ಇದ್ದ ವ್ಯವಸ್ಥೆಯೊಳಗೇನೇ ತಮ್ಮ ಪ್ರಗತಿ ಪರ ವಿಚಾರಗಳಿಂದ ಮಾಢ್ಯ ನಿವಾರಣೆಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಯಿಸಿ ಮಾತನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ವಚನ ಮತ್ತು ದಾಸ ಸಾಹಿತ್ಯ ಸಮಾಜಿಕ ಅವರಣದಲ್ಲಿ ಇಟ್ಟು ನೋಡಬೇಕು. ಯಾವುದು ಸಮಾಜ ಮುಖಿಯಾಗಿರುತ್ತದೆಯೇ ಅದು ಉಳಿಯುತ್ತದೆ. ಜನರನ್ನು ಅಪ್ಪಿಕೊಳ್ಳುತ್ತದೆ. ಯಾವುದೇ ಚಿಂತನೆ ಅದು ಜನರನ್ನ ಅಪ್ಪಿಕೊಳ್ಳಬೇಕು ಎಂದರು.
ದತ್ತಿ ದಾನಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು, ಡಾ. ಹಣಮಂತ ಮೇಲಕೇರಿ ನಿರೂಪಿಸಿದರು. ಈ ಸಂದರ್ಭದಲ್ಲಿ ನಾಟಕಕಾರಾದ ಶಂಕ್ರಯ್ಯ ಘಂಟಿ, ವಿಮರ್ಶಕ ಡಾ. ಶ್ರೀಶೈಲ ನಾಗರಾಳ ಸೇರಿದಂತೆ ಅನೇಕರು ಇದ್ದರು.
![]() |
ಖ್ಯಾತ ವಿಮರ್ಶಕರಾದ ಪ್ರೊ. ಬಸವರಾಜ ಕಲ್ಗುಡಿ ಮಾತನಾಡುತ್ತಿರುವುದು. |

No comments:
Post a Comment