ದೊರೆನ್ಯೂಸ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನಕೊಂದು ಆದೇಶ, ಯೋಜನೆಗಳನ್ನು ಬದಲಾಯಿಸುವ ಮೂಲಕ ಬಡಜನರನ್ನು ಸಾರ್ವಜನಿಕರನ್ನು ಒಂದಿಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಸಿಲುಕಿಸುತ್ತಿವೆ.
ಹೌದು ಈ ಮೊದಲು ಆಧಾರ್ ಕಾರ್ಡ್ ಗಳನ್ನು ಖಾಸಗಿ ಆನ್ಲೈನ್ ಸೆಂಟರ್ ಗಳಲ್ಲಿ ಪಡೆದುಕೊಳ್ಳುವ ಅವಕಾಶವಿತ್ತು. ತದನಂತರ ಕೇವಲ ಸರ್ಕಾರ ಗುರುತಿಸಿದ ಸೇವಾ ಕೇಂದ್ರಗಳಾದ ಪೋಸ್ಟ್ ಆಫೀಸ್, ಕೆಲವೊಂದು ಬ್ಯಾಂಕ್ ಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಪಡೆದುಕೊಳ್ಳುವ ಅವಕಾಶ ನೀಡಿದೆ. ಸರ್ಕಾರದ ಈ ನಡೆಯಿಂದ ಜನರು ಹಗಲು, ರಾತ್ರಿ ಎನ್ನದೇ ಆಧಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಧಾರ್ ಕಾರ್ಡ್ ಬೇಕಾದವರು ರಾತ್ರಿ ಪೂರ್ತಿ ಸೇವಾ ಕೇಂದ್ರಗಳ ಮುಂದೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳು ಈ ನಿಗಧಿತ ಕೇಂದ್ರಗಳಿಗೆ ಸೀಮಿತವಾಗಿದ್ದರಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆಧಾರ್ ಕಾರ್ಡ್ ಪಡೆಯುವ ಟೋಕನ್ ಗಾಗಿ ವಾರಗಟ್ಟಲೇ ಹಗಲು ರಾತ್ರಿ ಎನ್ನದೇ ಬ್ಯಾಂಕ್, ಪೋಸ್ಟ್ ಆಫೀಸ್ ಬಾಗಿಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಕೂಡ ದಿನಕ್ಕೆ ಇಪ್ಪತ್ತು, ಮೂವತ್ತು ಅರ್ಜಿ ಪಾರ್ಮ್, ಟೋಕನ್ ನೀಡುವುದರಿಂದ ನೂರಾರು ಜನ ಸೇರಿದ ಜನರು ಮತ್ತೆಮತ್ತೆ ನಿರಾಸೆಯಿಂದ ಮನೆ ಸೇರುವ ದುಸ್ಥಿತಿ ಆಧಾರ್ ಕೇಂದ್ರಗಳಲ್ಲಿದೆ.
ಅಂತಹ ಸಮಸ್ಯೆಗಳಿಗೆ ಲಿಂಗಸುಗೂರು ವರತಾಗಿಲ್ಲ. ಲಿಂಗಸುಗೂರಿನಲ್ಲಿ ಒಂದು ಬ್ಯಾಂಕ್, ಮತ್ತು ಪೋಸ್ಟ್ ಆಫೀಸ್ ನಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳಿದ್ದು ಐಬಿ ಮುಂದಿನ ಎಸ್ಬಿಐ ಬ್ಯಾಂಕ್ ಮತ್ತು ಸರ್ಕಾರಿ ಆಸ್ಪತ್ರೆ ಹತ್ತಿರದ ಪೋಸ್ಟ್ ಆಫೀಸ್ ಗಳ ಬಾಗಿಲುಗಳನ್ನು ಸಾರ್ವಜನಿಕರು ಹಗಲು ರಾತ್ರಿ ಕಾಯುವಂತಾಗಿದೆ.
![]() |
ಲಿಂಗಸುಗೂರಿನ ಆಧಾರ್ ಸೇವಾ ಕೇಂದ್ರಗಳಲ್ಲಿ ಟೋಕನ್ ಪಡೆದುಕೊಳ್ಳಲು ಬೆಳಂಬೆಳಿಗ್ಗೆ ಸೇರಿದ ಜನರು. |
ಸುತ್ತಲೂ ಸುಮಾರು ಹತ್ತಿಪ್ಪತ್ತು ಕಿಮೀ ದೂರದ ವಿವಿಧ ಊರುಗಳಿಂದ ಬರುವ ಜನರು ರಾತ್ರೋ ರಾತ್ರಿ ಬಾಗಿಲು ಕಾಯುವುದು ಸುಮಾರು ದಿನಗಳಿಂದ ಸರ್ವೇ ಸಾಮಾನ್ಯ ಎನ್ನುವಂತಾಗಿದ್ದು ಸರ್ಕಾರವಾಗಲಿ, ಸಂಬಂದಿಸಿದ ಇಲಾಖೆಯಾಗಲಿ ಆ ಬಗ್ಗೆ ತಲೆ ಕಡೆಸಿಕೊಳ್ಳುತ್ತಿಲ್ಲ ಎಂಬುದು ಅನೇಕರ ನೋವಿನ ಮಾತಾಗಿದೆ.
ಇನ್ನೂ ಆಧಾರ್ ಸೇವಾ ಕೇಂದ್ರದ ಅಧಿಕಾರಿಗಳು ನೀಡುವ ಉಢಾಪೆ ಉತ್ತರಗಳು ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಉಂಟಾಗುವಂತೆ ಮಾಡುತ್ತಿದ್ದು ಅಧಿಕಾರಿಗಳು ಮಾತ್ರ ಜಾಣಕುರುಡು ನಡೆ ಅನುಸರಿಸುವ ಮೂಲಕ ನಿದ್ರೆಗೆ ಜಾರಿದವರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಆಧಾರ್ ಸೇವಾ ಕೇಂದ್ರಗಳನ್ನು ಸುಧಾರಿಸುವತ್ತ ಸಂಬಂಧಿಸಿದವರು ಗಮನವಹಿಸಲಿ.
ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment