Thursday, September 27, 2018

ಇತನ ರಕ್ಷಣೆ ಯಾರ ಹೊಣೆ...? ಅನಾಥ, ಮಾನಸಿಕ ಅಸ್ವಸ್ಥತನ ಕಥೆ ಕೇಳುವವರು ಇಲ್ಲವೇ..?

ದೊರೆನ್ಯೂಸ್: ಈ ಪೋಟೋಗಳಲ್ಲಿ ನೋಡುತ್ತಿದ್ದಿರಲ್ಲ ಈ ವ್ಯಕ್ತಿಯನ್ನು, ಇತನ ಜೀವನದ ಬಗ್ಗೆ ಕೂಡ ಸ್ವಲ್ಪ ತಿಳಿದುಕೊಳ್ಳಿ.
ಲಿಂಗಸುಗೂರು - ರಾಯಚೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಲಿಂಗಸುಗೂರಿನ ಸಮೀಪ ಕಾಣಸಿಗುವ ಮಾನಸಿಕ ಅಸ್ವಸ್ಥ, ಅನಾಥ ವ್ಯಕ್ತಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ಸಮೀಪದ ರಾಯಚೂರು - ಲಿಂಗಸುಗೂರಿನ ಮುಖ್ಯರಸ್ತೆಯಲ್ಲಿ ಲಿಂಗಸುಗೂರಿನಿಂದ ಮೂರ್ನಾಲ್ಕು ಕಿಮೀ ದೂರದಲ್ಲಿ ಈ ವ್ಯಕ್ತಿ ಕಾಣಸಿಗುತ್ತಾನೆ. ಈ ಮೊದಲು ಆತ ಪಾಮನಕಲ್ಲೂರು, ಚಿಕ್ಕಹೆಸರೂರು, ಸರ್ಜಾಪುರ, ಕುಪ್ಪೆಗುಡ್ಡಗಳ ರಸ್ತೆ ಪಕ್ಕದ ಹೊಲಗಳಲ್ಲಿ ಕಾಣಸಿಗುತ್ತಿದ್ದ, ಹೊಲಗಳ ಜನರು ತೊಂದರೆ ಕೊಡಲು ಶುರುಮಾಡಿದ ನಂತರ ರಸ್ತೆಯ ಪಕ್ಕದಲ್ಲಿಯೇ ಕಾಣಿಸುತ್ತಿದ್ದಾನೆ.
ಹೌದು ಪಾಪ ಆತನೊಬ್ಬ ಮಾನಸಿಕ ಅಸ್ವಸ್ಥ, ಅನಾಥ ರಸ್ತೆಯೇ ಆತನ ಮನೆ, ಜೊತೆಗಿರುವ ಎರಡು ಚೀಲಗಳೆ ಆತನ ರಕ್ಷಣಾ ಕವಚಗಳು ಅಂದಹಾಗೇ ಆತನಿಗೆ ಆಹಾರ, ಊಟ, ಉಪಚಾರವಂತು ರಸ್ತೆಯಲ್ಲಿ ಹೋಗಿಬರುವ ಕೆಲವರು ಹೃದಯವಂತರು ತಮ್ಮಲ್ಲಿದ್ದ ನೀರು, ಬ್ರೇಡ್, ಬಿಸ್ಕೆಟ್, ಬಾಳೆಹಣ್ಣು, ಅಲ್ಪಸ್ವಲ್ಪ ಉಪಹಾರ ಊಟವನ್ನು ನೀಡಿ ಹೋಗುತ್ತಿರುತ್ತಾರೆ. ಅದರಲ್ಲಿಯೇ ಜೀವನ ಸಾಗಿಸುವ ಆತನಿಗೆ ಬಿಸಿಲು, ಮಳೆ, ಬಿರುಗಾಳಿಗಳು ಲೆಕ್ಕಕ್ಕೆ ಇಲ್ಲ.
ಮಳೆಯ ಬರಲಿ, ಬಿಸಿಲೇ ಇರಲಿ ತನ್ನಲ್ಲಿನ ಎರಡು ರಕ್ಷಣಾ ಕವಚಗಳಂತ್ತಿರುವ ಹರಿದ ಚೀಲಗಳು ಮಾತ್ರ ಗತಿ. ಅವುಗಳಿಂದಲ್ಲೇ ರಕ್ಷಣೆ ಮಾಡಿಕೊಳ್ಳುತ್ತಾನೆ. ಹಗಲು, ರಾತ್ರಿಯ ಪರಿವೇ ಇಲ್ಲದ ಆತ ಮಳೆ, ಚಳೆ ಎನ್ನದೇ ರಸ್ತೆಯ ಪಕ್ಕಕ್ಕೆ ಬಿದ್ದಿರುತ್ತಾನೆ. 
ದುರ್ದೈವದ ಸಂಗತಿ ಏನೆಂದರೆ, ಆತ ಸುಮಾರು ತಿಂಗಳುಗಳಿಂದ ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯಲ್ಲಿಯೇ ಕಾಲ ಕಳೆಯುತ್ತಾ ಬಂದಿದ್ದರು ಕೂಡ ಯಾರೊಬ್ಬರು ಆತನ ಬಗ್ಗೆ ಕೇರ್ ಮಾಡಿಲ್ಲ ಎಂಬುದಾಗಿದೆ.
ಹೌದು ಅನಾಥರಿಗೆ, ನಿರ್ಗತಿಕರಿಗೆ, ಮಾನಸಿಕ ಅಸ್ವಸ್ಥತರಿಗಾಗಿಯೇ ಸರ್ಕಾರ ಅನೇಕ ಇಲಾಖೆಗಳನ್ನು ಮಾಡಿದೆ, ಇನ್ನೂ ಅನೇಕ ಸಹಕಾರ ಸಂಘಗಳು ಇವೆ, ಅಲ್ಲದೇ ಸರ್ಕಾರ ಅನೇಕ ದೂರವಾಣಿ ಸಹಾಯಕ ಕೇಂದ್ರಗಳನ್ನು ಮಾಡಿದೆ ಇಷ್ಟೆಲ್ಲಾ ಇದ್ದಮೇಲೆ ಕೂಡ ಆತ ಇನ್ನೂ ಅನಾಥನಾಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಎನ್ನಬಹುದಾಗಿದೆ.
ಇದು ರಾಯಚೂರು - ಬೆಳಗಾವಿ ಮುಖ್ಯರಸ್ತೆಯಾಗಿದ್ದು ಏನಿಲ್ಲವೆಂದರೂ ದಿನಕ್ಕೆ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ತೆರಳುತ್ತವೆ. ನೂರಾರು ಅಧಿಕಾರಿಗಳು ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ತಿರುಗುತ್ತಾರೆ, ಅಲ್ಲದೇ ರಸ್ತೆ ಪಕ್ಕದಲ್ಲಿ ಸಸಿಗಳನ್ನು ನಾಟಿ ಮಾಡಿದ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಆ ಅನಾಥನ ಮುಂದುಗಡೆಯೇ ತಿರುತ್ತಾರೆ ಆದರೇ ಇವರ್ಯಾರು ಕೂಡ ಆತನ ಬಗ್ಗೆ ಕೇರ್ ಮಾಡುತ್ತಿಲ್ಲ. 
ಸರ್ಕಾರ ರಚಿಸಿದ ಅನೇಕ ಇಲಾಖೆಗಳು, ಅಧಿಕಾರಿಗಳು ಹೆಸರಿಗೆ ಮಾತ್ರವೇ ಇದ್ದಾರೆಯೇ..? ಭಾಷಣಗಳಲ್ಲಿ ದೊಡ್ಡದೊಡ್ಡ ಮಾತುಗಳನ್ನಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಷಣಗಳಿಗೆ ಮಾತ್ರ ಸೀಮಿತವೇ..? ಇಂತವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಸಬೇಕಾದವರು ಯಾರು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು..? ಎಂಬುದು ಅನೇಕರ ಮನದಾಳದ ಮಾತುಗಳಾಗಿವೆ. 
ಈಗಲಾದರೂ ಸಂಬಂದಿಸಿದ ಅಧಿಕಾರಿಗಳು, ಇಲಾಖೆಗಳು ಆ ಅನಾಥ, ಮಾನಸಿಕ ಅಸ್ವಸ್ಥತನ ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕಾಗಿದೆ. 

ವಿಶೇಷ ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

No comments:

Post a Comment