Wednesday, December 30, 2020

ತಿಮ್ಮಾಪೂರ: ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆ; ಅನೇಕ ವಿಷಯಗಳ ಚರ್ಚೆ


ರಾಯಚೂರು: ಉಸ್ಕಿಹಾಳ ವಾಲ್ಮೀಕಿ ಗುರುಪೀಠದ ಗುರುಗಳಾದ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ, ಜಿಲ್ಲೆಯ ಮಸ್ಕಿ ತಾಲೂಕಿನ ತಿಮ್ಮಾಪೂರ ಗ್ರಾಮದ ತಾತಪ್ಪನ ಗುದುಗೆ ಆವರಣದಲ್ಲಿ ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆ ನಡೆಯಿತು.

ಸಭೆಯಲ್ಲಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸಬೇಕಾದ ಹೋರಾಟಗಳು, ವಾಲ್ಮೀಕಿ ನಾಯಕ ಸಮಾಜದ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು, ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವುದು, ಸರ್ಕಾರದಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ವಾಲ್ಮೀಕಿ ನಾಯಕ ಸಮಾಜದ ಐತಿಹಾಸಿಕ ಪುರುಷರ (ಮಹಾತ್ಮರ) ಹೈಜಾಕ್ ತಡೆಗಟ್ಟುವುದು, ಸಮಾಜವನ್ನು ಬಲಿಷ್ಟಗೊಳಿಸುವುದು, ಎಸ್ಟಿ ಹೆಸರಿನಲ್ಲಿ ಬೇರೆ ಸಮುದಾಯದವರು ಪಡೆಯುತ್ತಿರುವ ನಕಲಿ ಜಾತಿ ಪ್ರಮಾಣಪತ್ರಗಳನ್ನು ತಡೆಗಟ್ಟುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಆತ್ಮಾನಂದ ಸ್ವಾಮೀಜಿಗಳು, ವಾಲ್ಮೀಕಿ ನಾಯಕ ಸಮಾಜವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಒಗ್ಗಟ್ಟಾಗಿಸಲು ಚಿಂತನ – ಮಂಥನ ಸಭೆಗಳು ಅವಶ್ಯಕವಾಗಿವೆ. ಮುಂದಿನ ದಿನಗಳಲ್ಲಿ ಕೂಡ ಚಿಂತನ ಮಂಥನ ಸಭೆಗಳು ನಡೆಯಲಿದ್ದು, ವಾಲ್ಮೀಕಿ ನಾಯಕ ಸಮಾಜದ ಯುವ ಜನತೆ ಸಭೆಗೆ ಆಗಮಿಸಬೇಕು. ಸಮಾಜದ ಏಳ್ಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆಗಳನ್ನು ನಡೆಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ರೀತಿಯ ಸಭೆಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಅನೇಕರು ಅಭಿಪ್ರಾಯ ಪಟ್ಟರು. 

ಉಸ್ಕಿಹಾಳ ಗ್ರಾಮದ ಆದಿತ್ಯ ನಾಯಕ ನಿರೂಪಿಸಿದರು. ಶೇಖರಗೌಡ ಕಾಟಗಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಾಲಿ ಶೇಖರಗೌಡ ಬಳಗಾನೂರು, ಶೇಖರಗೌಡ ಕಾಟಗಲ್, ಅಮರೇಶ್ ಪಾಟೀಲ್ ಮಸ್ಕಿ, ಭೀಮಬಾಯಿ ಪಾಟೀಲ್, ಲಕ್ಷ್ಮಿ, ಹನುಮೇಶ್ ನಾಯಕ, ಗೋವಿಂದ ನಾಯಕ ಗಾಣದಾಳ, ವೆಂಕೋಬ ನಾಯಕ, ಕರಿಗೌಡ, ರಂಗಪ್ಪ ಮಾಸ್ತಾರ, ವೆಂಕನಗೌಡ ಉಸ್ಕಿಹಾಳ, ಅಂಬಣ್ಣ ನಾಯಕ ಡೊಂಣಮರಡಿ ಗುಜ್ಜಲರ್, ವೆಂಕಟೇಶ ನಾಯಕ, ಅಮರೇಗೌಡ ವಕೀಲರು, ಹನುಮೇಶ್ ನಾಯಕ ಬಳಗಾನೂರು, ಪಂಪನಗೌಡ ತಿಮ್ಮಾಪೂರ, ಬಸವರಾಜ ನಾಯಕ ಆಸಿಹಾಳ, ಆದಿತ್ಯ ನಾಯಕ ಉಸ್ಕಿಹಾಳ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Saturday, December 5, 2020

ಉಸ್ಕಿಹಾಳ: ವಾಲ್ಮೀಕಿ ನಾಯಕ ಸಮಾಜದ ಚಿಂತನ – ಮಂಥನ ಸಭೆ; ಜಿಲ್ಲೆಯ ಅನೇಕರು ಭಾಗಿ

ರಾಯಚೂರು (ಡಿ.05): ಉಸ್ಕಿಹಾಳ ವಾಲ್ಮೀಕಿ ಗುರುಪೀಠದ ಗುರುಗಳಾದ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ, ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ನಾಯಕ ಸಮಾಜದ ಚಿಂತನಮಂಥನ ಸಭೆ ನಡೆಯಿತು.


ಸಭೆಯಲ್ಲಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸಬೇಕಾದ ಹೋರಾಟಗಳು, ವಾಲ್ಮೀಕಿ ನಾಯಕ ಸಮಾಜದ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು, ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸುವುದು, ಸರ್ಕಾರದಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ವಾಲ್ಮೀಕಿ ನಾಯಕ ಸಮಾಜದ ಐತಿಹಾಸಿಕ ಪುರುಷರ (ಮಹಾತ್ಮರ) ಹೈಜಾಕ್ ತಡೆಗಟ್ಟುವುದು, ಸಮಾಜವನ್ನು ಬಲಿಷ್ಟಗೊಳಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ವೇಳೆ ಮಾತನಾಡಿದ ಆತ್ಮಾನಂದ ಸ್ವಾಮೀಜಿಗಳು, ವಾಲ್ಮೀಕಿ ನಾಯಕ ಸಮಾಜವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜವನ್ನು ಒಗ್ಗಟ್ಟಾಗಿಸಲು ಚಿಂತನಮಂಥನ ಸಭೆಗಳು ಅವಶ್ಯಕವಾಗಿವೆ. ಇದೇ 29ರಂದು ಮಸ್ಕಿ ತಾಲೂಕಿನ ತಿಮ್ಮಾಪೂರದಲ್ಲಿ ಚಿಂತನಮಂಥನ ಸಭೆ ನಡೆಸಲಾಗುತ್ತದೆ. ವಾಲ್ಮೀಕಿ ನಾಯಕ ಸಮಾಜದ ಯುವ ಜನತೆ ಸಭೆಗೆ ಆಗಮಿಸಬೇಕು. ಸಮಾಜದ ಏಳ್ಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ವಾಲ್ಮೀಕಿ ನಾಯಕ ಸಮಾಜದ ಚಿಂತನಮಂಥನ ಸಭೆಗಳನ್ನು ನಡೆಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕಾಗಿದೆ. ಸಮಾಜವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರೀತಿಯ ಸಭೆಗಳ ಪಾತ್ರ ಮಹತ್ವದಾಗಿರುತ್ತದೆ ಎಂದು ಅನೇಕರು ಅಭಿಪ್ರಾಯ ಪಟ್ಟರು.

ಸಂದರ್ಭದಲ್ಲಿ ಮುಖಂಡರಾದ ಜಾಲಿ ಶೇಖರಗೌಡ ಬಳಗಾನೂರು, ಶೇಖರಗೌಡ ಕಾಟಗಲ್, ವಕೀಲರಾದ ಶಿವಕುಮಾರ ನಾಯಕ ರಾಯಚೂರು, ಗೋವಿಂದ ನಾಯಕ ರಾಯಚೂರು, ಮೌನೇಶ ನಾಯಕ ಪಂಚಮುಖಿ ಗಾಣದಾಳ, ಅಂಬಣ್ಣ ಡೋಣಮರಡಿ, ಉಸ್ಕಿಹಾಳದ ಆದಿತ್ಯ ನಾಯಕ, ಗ್ವಾಲಪ್ಪ ನಾಯಕ, ಮರಿಸ್ವಾಮಿ ನಾಯಕ, ಕನಕರಾಯ ಮಾಲೀಪಾಟೀಲ್, ಮೌನೇಶ್ ನಾಯಕ, ನರಸನಗೌಡ ಮಾಲೀಪಾಟೀಲ್ ಮ್ಯಾದರಹಾಳ, ವೆಂಕಟೇಶ ಕೋಳಬಾಳ, ಶಿವಪುತ್ರಪ್ಪ ಮಾರಲದಿನ್ನಿ, ಚಂದ್ರಶೇಖರ್ ಉದ್ಬಾಳ ಸೇರಿದಂತೆ ಅನೇಕರಿದ್ದರು.

-------------------------------------------------------

(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.

ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Monday, September 7, 2020

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೇ, ಕೃಷಿ ಸಚಿವರೇ ಇತ್ತ ನೋಡಿ.. ಅನಾಹುತ ತಡೆಗಟ್ಟಿ



(ಪಾಮನಕಲ್ಲೂರು: ಐವತ್ತು ಲಕ್ಷ ರೂ.ಗಳ ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಕಳಪೆ..!? ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು)


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಕಳಪೆ ಗುಣಮಟ್ಟದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು, ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಟ್ಟಡಕ್ಕೆ ಬಳಸಲಾದ ಸಿಮೆಂಟ್ ಎಳ್ಳೆಗಳು (ಹಾಲೋ ಬ್ಲಾಕ್ಗಳು) ಅದಕ್ಕೆ ಸಾಕ್ಷಿ ಎಂಬಂತೆ ಕಂಡುಬಂದಿವೆ.



ಪಾಮನಕಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಮಾಹಿತಿ:

ರಾಜ್ಯ ಸರ್ಕಾರದ ಅನುದಾನದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ (ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ) ನಿರ್ಮಾಣ ಮಾಡಲಾಗುತ್ತಿದ್ದು, ಅಂದಾಜು ಐವತ್ತು ಲಕ್ಷ ರೂ.ಗಳ ವೆಚ್ಚದ ಕಾಮಗಾರಿ ಇದಾಗಿದೆ. ಕಟ್ಟಡ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಯವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು, ಮಸ್ಕಿಯ ಶರವತಿ ಎಂಟರ್ ಪ್ರೈಸಸ್ ನ ಅಮರೇಶ್ ಎಂಬುವವರು ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಪ್ರಸಾದ್ ಎಂಬುವವರು ಕಟ್ಟಡ ಕೆಲಸ ಮಾಡುತ್ತಿದ್ದಾರೆ. ವಿನಾಯಕ್ ಎಂಬುವವರು ಸೈಟ್ ಇಂಜಿನಿಯರ್, ಅನಿಲ್ ಕುಮಾರ್ ಗೋಕುಲೆ ಎಂಬುವವರು ಇಇ ಇದ್ದಾರೆ.



ಕಳಪೆ ಮಟ್ಟದ ಕಾಮಗಾರಿ, ಸಾಕ್ಷಿ ನೀಡಿದ ಗ್ರಾಮಸ್ಥರು:

ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಿಲ್ಡಿಂಗ್ ಅನ್ನು ಬೇಕಾಬಿಟ್ಟಿಯಾಗಿ ಕಟ್ಟಲಾಗಿದೆ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ತಳದಲ್ಲೇ ಅನೇಕ ತಪ್ಪುಗಳಾಗಿವೆ. ಅಲ್ಲದೇ ಕಟ್ಟಡಕ್ಕೆ ಬಳಕೆ ಮಾಡಲಾಗಿರುವ ಸಿಮೆಂಟ್ ಎಳ್ಳೆಗಳು ಸಂಪೂರ್ಣ ಕಳಪೆ ಮಟ್ಟದ ಹಾಲೋ ಬ್ಲಾಕ್ ಗಳಾಗಿವೆ. ಅವುಗಳನ್ನು ಕೈಯಿಂದ ಮುರಿದು ಹಾಕಬಹುದಾಗಿದೆ. ತಿನ್ನೊ ಸ್ವೀಟ್ ಐಟೈಮ್ಸ್ ಗಳಂತೆ ಸಿಮೆಂಟ್ ಎಳ್ಳೆಗಳು ಸ್ಮೂತ್ ಆಗಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. 

ಎಳ್ಳೆಗಳು ಕಳಪೆ ಗುಣಮಟ್ಟದವುಗಳು ಎಂಬುದನ್ನು ಗ್ರಾಮಸ್ಥರು ವಿಡಿಯೋ, ಪೋಟೋಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಆ ಕಟ್ಟಡಕ್ಕೆ ಅವೇ ಎಳ್ಳೆಗಳನ್ನು ಹೆಚ್ಚಾಗಿ ಬಳಸಲಾಗಿದೆ. ಕಟ್ಟಡವನ್ನು ಒಡೆದು ಹಾಕಿ ಹೊಸದಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.



ಪೋನ್ ಮಾಡಿದ್ರು ಕೇರ್ ಮಾಡ್ತಿಲ್ಲ ಸಚಿವರು, ಅಧಿಕಾರಿಗಳು:

ನಮ್ಮೂರಿನಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾವು ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ, ಕೃಷಿ ಸಚಿವ ಬಿ.ಸಿ ಪಾಟೀಲ್, ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಆಪ್ತ ಸಹಾಯಕರ ಗಮನಕ್ಕೆ ತಂದಿದ್ದೇವೆ. ಅಲ್ಲದೇ ಮಸ್ಕಿಯ ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್ ರವರ ಗಮನಕ್ಕೆ ತಂದಿದ್ದೇವೆ. ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ, ಸೈಟ್ ಇಂಜಿನಿಯರ್ ವಿನಾಯಕ, ಇಇ ಅನಿಲ್ ಕುಮಾರ್ ಗೋಕುಲೆಯವರ ಗಮನಕ್ಕೆ ತಂದಿದ್ದೇವೆ ಇಷ್ಟೆಲ್ಲಾ ಆದರೂ ಕಳಪೆ ಮಟ್ಟದ ಕಾಮಗಾರಿ ತಡೆಗಟ್ಟಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಯಾರೊಬ್ಬರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.


ಎಸ್ಟಿಮೆಂಟ್ ಕಾಪಿ ಕೊಡಲು ಹಿಂದೇಟು:

ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಎಸ್ಟಿಮೆಂಟ್ ಕಾಪಿ ಕೊಡುವಂತೆ ಇಂಜಿನಿಯರ್, ಕಾಂಟ್ಯ್ರಾಕ್ಟರ್, ಮೇಸ್ತ್ರಿಗಳಿಗೆ ನಾವು ಅನೇಕ ಸಾರಿ ಮನವಿ ಮಾಡಿದ್ದೇವೆ. ಎಸ್ಟಿಮೆಂಟ್ ಕಾಪಿ ಇಲ್ಲದೆ ಕೆಲಸ ಮಾಡಬೇಡಿ ಎಂದು ಒತ್ತಾಯ ಕೂಡ ಮಾಡಿದ್ದೇವೆ. ಇದುವರೆಗೂ ಎಸ್ಟಿಮೆಂಟ್ ಕಾಪಿ ತೋರಿಸಿಲ್ಲ. ಇದರಲ್ಲಿ ಏನೇನೂ ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಹಾಗೂ ಸಂಬಂಧಿಸಿದವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.


ಕಟ್ಟಡ ನೆಲ ಸಮ ಮಾಡಿ ಹೊಸದಾಗಿ ನಿರ್ಮಿಸಿ ಅನಾಹುತ ತಪ್ಪಿಸಿ:

ರೈತ ಸಂಪರ್ಕ ಕೇಂದ್ರದ ಬಿಲ್ಡಿಂಗ್ ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದ್ದು ಈಗಾಗಲೇ ಅರ್ಧದಷ್ಟು ಕಟ್ಟಲಾಗಿರುವ ಕಟ್ಟಡವನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಅದನ್ನು ನೆಲ ಸಮಗೊಳಿಸಿ, ಕಳಪೆ ಮಟ್ಟದ ಕಟ್ಟಡ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕೈಗೊಂಡು ಹೊಸದಾಗಿ ಕಾಮಗಾರಿ ಆರಂಭಿಸುವ ಮೂಲಕ ಉತ್ತಮ ದರ್ಜೆಯ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.


ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸ್ವಲ್ಪ ಕಟ್ಟಡ ಕೆಡವಿ ಕಟ್ಟಲು ಮುಂದಾದ ಗುತ್ತಿಗೆದಾರರು: 

ಕಳಪೆ ಗುಣಮಟ್ಟದ ಕಟ್ಟಡ ಕಾಮಗಾರಿಯನ್ನು ಕಂಡ ಗ್ರಾಮಸ್ಥರು ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮಣಿದ ಗುತ್ತಿಗೆದಾರರು ಮೇಲಿನ ಸ್ವಲ್ಪ ಕಟ್ಟಡವನ್ನು ಕೆಡವಿ ಮತ್ತೆ ಕಟ್ಟಲು ಮುಂದಾಗಿದ್ದಾರೆ. ಒಟ್ಟು ಕಟ್ಟಡವನ್ನು ನೆಲ ಸಮಗೊಳಿಸಿ‌ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಆ ಮೂಲಕ ಈ ಕಳಪೆ ಗುಣಮಟ್ಟದ ಕಟ್ಟಡದಿಂದ ಮುಂದೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Friday, August 21, 2020

'ಉದ್ಯೋಗ ಖಾತ್ರಿ' ಕೆಲಸ ನೀಡದಿದ್ದರೆ ಪಂಚಾಯ್ತಿಗೆ ಮುತ್ತಿಗೆ: ತುಪ್ಪದೂರು ಜನರಿಂದ ಎಚ್ಚರಿಕೆ

ದೊರೆ ನ್ಯೂಸ್ ಕನ್ನಡ, ರಾಯಚೂರು (ಅ.21): ಮೂರ್ನಾಲ್ಕು ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡದಿದ್ದರೆ ಪಾಮನಕಲ್ಲೂರು ಗ್ರಾಮ ಪಂಚಾಯ್ತಿ ಕಛೇರಿಗೆ ಮುತ್ತಿಗೆ ಹಾಕುತ್ತೇವೆಂದು ಛಲವಾದಿ ಮಹಾಸಭಾದ ಮುಖಂಡರು, ತುಪ್ಪದೂರು ಗ್ರಾಮಸ್ಥರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯ್ತಿ ಕಛೇರಿಗೆ ಆಗಮಿಸಿದ ಛಲವಾದಿ ಮಹಾಸಭಾ ತುಪ್ಪದೂರು ಗ್ರಾಮ ಘಟಕದ ಮುಖಂಡರು, ಗ್ರಾಮಸ್ಥರು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತುಪ್ಪದೂರು ಗ್ರಾಮದ ಜನರಿಗೆ ಕೆಲಸ ನೀಡುವಂತೆ ಪಂಚಾಯ್ತಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ನಾವು ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಇದುವರೆಗೂ ಸ್ಪಂದಿಸಿಲ್ಲ.
ಬೇರೆ ಬೇರೆ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಲಾಗಿದೆ. ಆದರೆ ತುಪ್ಪದೂರು ಗ್ರಾಮವನ್ನು ಕಡೆಗಣನೆ ಮಾಡಿದ್ದಾರೆ. ನಾವು ಎಷ್ಟು ಸಾರಿ ಮನವಿ ಮಾಡಿದರು ನಮ್ಮ ಗ್ರಾಮಕ್ಕೆ ಕೆಲಸ ನೀಡಿಲ್ಲ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೆಲಸ ನೀಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆಂದು ಛಲವಾದಿ ಮಹಾಸಭಾದ ಮುಖಂಡರು, ವಿವಿಧ ಸಂಘಟನೆಯ ಮುಖಂಡರು, ಗ್ರಾಮಸ್ಥರ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಚಲುವಾದಿ ಮಹಾಸಭಾದ ಗೌರವಾಧ್ಯಕ್ಷ ಕನಕಪ್ಪ ತುಪ್ಪದೂರು, ಅಧ್ಯಕ್ಷ ಚನ್ನಬಸವ ತುಪ್ಪದೂರು, ಉಪಾಧ್ಯಕ್ಷ ಸುವರ್ಣಪ್ಪ ತುಪ್ಪದೂರು, ಪ್ರಧಾನ ಕಾರ್ಯದರ್ಶಿ ಬಸಪ್ಪ ತುಪ್ಪದೂರು, ಮುಖಂಡರಾದ ಮಲ್ಲಪ್ಪ ತುಪ್ಪದೂರು, ರಾಮಪ್ಪ ತುಪ್ಪದೂರು, ಗುರುದೇವ್, ಗ್ರಾಮಸ್ಥರಾದ ಚನ್ನಬಸವ, ವೀರಭದ್ರಪ್ಪ, ನಾಗರಾಜ್ ಹೊಸಮನಿ, ಕಮಲರಾಜ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Sunday, August 16, 2020

ಪಾಮನಕಲ್ಲೂರು: ಎಸ್ಎಸ್ಎಲ್ಸಿ, ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

ದೊರೆ ನ್ಯೂಸ್ ಕನ್ನಡ, ರಾಯಚೂರು(ಆ.15): 74ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ಧ್ವಜಾರೋಹಣ ಕಾರ್ಯಕ್ರಮಗಳು ನಡೆದಿವೆ. ಸರ್ಕಾರಿ ಕನ್ನಡ ಮಾಧ್ಯಮ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಕೆಲ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರ್ಕಾರಿ ಕನ್ನಡ ಮಾಧ್ಯಮ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ: 

ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ ಪವಿತ್ರ ತಂದೆ ಶಿವಗೇನಪ್ಪ ಚೌಡ್ಲಿ, ಸೋಫಿಯಾಬೇಗಂ ತಂದೆ ಮದರಸಾಬ್, ಬಸವರಾಜ್ ತಂದೆ ಸಂಜೀವಪ್ಪ, ಜಾನಕಿ ತಂದೆ ಯಂಕಪ್ಪ, ಪ್ರವೀಣ್ ಕುಮಾರ್ ತಂದೆ ಸಂಜೀವಪ್ಪ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಿದ್ದಣ್ಣ ತಂದೆ ಯಂಕಪ್ಪ, ಹನುಮಂತ ತಂದೆ ದುರುಗಪ್ಪ ಎಂಬ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮುಖ್ಯೋಪಾಧ್ಯಾಯ ಮಹಾಮನಿಯಪ್ಪ, ದೈಹಿಕ ಶಿಕ್ಷಕ ಮುಸ್ತಾಕ್ ಅಹಮ್ಮದ್ ಗ್ರಾಮಸ್ಥರಾದ ದುರುಗಪ್ಪ ಗಂಟ್ಲಿ, ರಮೇಶ್ ಗಂಟ್ಲಿ, ಲಚಮಪ್ಪ ಕೊಂಡಾಲ್, ವಿಜಯಕುಮಾರ್ ಗುತ್ತೇದಾರ್, ಅಮರೇಶ್ ಕರಿವಾಳಪ್ಪ ಸೇರಿದಂತೆ ಅನೇಕರಿದ್ದರು‌.

ಗ್ರಾಮದ ನಾಡ ಕಛೇರಿ, ಗ್ರಾಮ ಪಂಚಾಯ್ತಿ, ರೈತ ಸಂಪರ್ಕ ಕೇಂದ್ರ, ಸರ್ಕಾರಿ ಪ್ರೌಡ ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಬಂಧಿಸಿದವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಚಿತ್ರ & ಸುದ್ದಿ: ಶ್ರೀನಿವಾಸ್ ಸಾನಬಾಳ್, ಪಾಮನಕಲ್ಲೂರು

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Saturday, August 15, 2020

'ಬೆಳೆ ಸಮೀಕ್ಷೆ' ಸರ್ಕಾರಿ ಸೌಲಭ್ಯಗಳಿಗೆ ಅವಶ್ಯಕ: ಶ್ರೀಶೈಲ್ ಬಿ.ಆರ್


ದೊರೆ ನ್ಯೂಸ್ ಕನ್ನಡ, ರಾಯಚೂರು (ಆ.15):
ಸರ್ಕಾರ ಜಾರಿಗೆ ತಂದಿರುವ 'ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ವಿನೂತನ ಯೋಜನೆ' "ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್" (2020-21ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆ) ಅಡಿಯಲ್ಲಿ ಬೆಳೆ ನೊಂದಾಯಿಸುವ ಮೂಲಕ ರೈತರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಶ್ರೀಶೈಲ್ ಬಿ.ಆರ್ ರವರು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸುವ ವೇಳೆ ಮಾತನಾಡಿದ ಅವರು, ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳ ಸಮೀಕ್ಷೆ ಪ್ರಾರಂಭವಾಗುತ್ತಿದ್ದು. ರೈತರು ಈ ವರ್ಷ ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನ ತಾವೇ ಮಾಡಿಕೊಳ್ಳಬಹುದಾಗಿದೆ. ಸರ್ಕಾರ "ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್" ಮೂಲಕ ರೈತರು ಬೆಳೆ ಸಮೀಕ್ಷೆ ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದೆ.
ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಆ್ಯಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿದ್ದು. ಆ್ಯಪ್ ಮೂಲಕ ಬೆಳೆ ನೊಂದಾಯಿಸುವ ಮೂಲಕ ರೈತರು ಕಾಲಕಾಲಕ್ಕೆ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ಯೋಜನೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಶ್ರೀಶೈಲ್ ಬಿ.ಆರ್ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ಜಯಶ್ರೀ ವಸ್ತ್ರದ್, ಚಂದನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕ ಅಧಿಕಾರಿಗಳು, ರೈತರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.

ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Monday, July 20, 2020

ತಾ.ಪಂ ಅಧ್ಯಕ್ಷ, ಬಿಜೆಪಿ ನಾಯಕರಿಗೆ ಯುವ ಮುಖಂಡರಿಂದ ಸನ್ಮಾನ


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಇತ್ತಿಚೆಗೆ ಆಯ್ಕೆಯಾದ ಶಿವಣ್ಣ ನಾಯಕ ವೆಂಕಟಾಪುರ ಹಾಗೂ ಬಿಜೆಪಿಯ ಯುವ ನಾಯಕ ಆರ್ ಸಿದ್ದನಗೌಡ ತುರವಿಹಾಳರವರನ್ನು ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ತಾಲೂಕಿನ ಜಿನ್ನಾಪುರ, ಹಾಲಾಪೂರ ಗ್ರಾಮಗಳಿಗೆ ಭೇಟಿ ನೀಡಿದ ಶಿವಣ್ಣ ನಾಯಕ, ಆರ್. ಸಿದ್ದನಗೌಡ ತುರವಿಹಾಳರವರನ್ನು ಎರಡು ಗ್ರಾಮಗಳ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ ಹೇಮಂತ್ ಕುಮಾರ್ ಜಿನ್ನಾಪುರ, ಹಿರೇನಾಯಕ ಸುಬೇದಾರ್ ಜಿನ್ನಾಪುರ, ಬಸವರಾಜ್ ತಡಕಲ್, ಬಸನಗೌಡ ಅಗದಾಳ, ಸೋಮನಾಥ ಪೊಲೀಸ್ ಪಾಟೀಲ್, ದೇವಣ್ಣ ಪೊಲೀಸ್ ಪಾಟೀಲ್, ಮರಿಸ್ವಾಮಿ ಯದ್ದಲದಿನ್ನಿ, ವಿಜಯಕುಮಾರ್ ನಾಯಕ ಹಣಿಗಿ, ಸೋಮನಗೌಡ ಮಾಲಿ ಪಾಟೀಲ್, ಸೋಮಣ್ಣ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Friday, July 17, 2020

ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಪಡೆದ ಭಾಗ್ಯಶ್ರೀಗೆ ಕರವೇಯಿಂದ ಸನ್ಮಾನ

ಸನ್ಮಾನ ಸ್ವೀಕರಿಸಿದ ಭಾಗ್ಯಶ್ರೀ,
ಚಂದ್ರಶೇಖರ ನಾಯಕ

ದೊರೆ ನ್ಯೂಸ್ ಕನ್ನಡ, ರಾಯಚೂರು: ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97.75% ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಭಾಗ್ಯಶ್ರೀ ತಂದೆ ಚಂದ್ರಶೇಖರ ನಾಯಕ ಎಂಬ ವಿದ್ಯಾರ್ಥಿನಿಯನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ಮುಖಂಡರು ಸನ್ಮಾನಿಸಿ ಗೌರವಿಸಿದರು. 
ಲಿಂಗಸುಗೂರು ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಭಾಗ್ಯಶ್ರೀ ಕಠಿಣ ಪರಿಶ್ರಮದೊಂದಿಗೆ ಉತ್ತಮ ಫಲಿತಾಂಶ ಪಡೆದುದರಿಂದ ಕರವೇ ಮುಖಂಡರು ಗೆಜ್ಜಲಗಟ್ಟ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಭಾಗ್ಯಶ್ರೀ ಜೊತೆಗೆ ಅವರ ತಂದೆ ಚಂದ್ರಶೇಖರ ನಾಯಕರನ್ನು ಸನ್ಮಾನಿಸಿ ಗೌರವಿಸಿದರು. 
ಇದೇ ವೇಳೆ ಮಾತನಾಡಿದ ಕರವೇ ಮುಖಂಡರು, ಭಾಗ್ಯಶ್ರೀಯ ಸಾಧನೆ ನಮ್ಮೂರಿಗೆ ಮಾತ್ರವಲ್ಲ ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ವಿದ್ಯಾರ್ಥಿನಿಯ ಸಾಧನೆ ಇತರರಿಗೂ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ. ಭಾಗ್ಯಶ್ರೀ ನಮ್ಮೂರಿನ ಕೀರ್ತಿ ಹೆಚ್ಚಿಸಲಿ, ಈಕೆಯ ಸಾಧನೆ ಊರಿನ ಜನರು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ, ಉಪಾಧ್ಯಕ್ಷ ಗಫೂರ್, ಸಹಕಾರ್ಯದರ್ಶಿ ಸದ್ದಾಮ್, ಮುಖಂಡರಾದ ಪ್ರದೀಪ್, ದಾದಾವಲಿ, ಅಮರೇಶ, ವಸಂತ, ಎಂಡಿ ರಫಿ ಗ್ರಾಮಸ್ಥರಾರ ಶರಣಪ್ಪ ಸಾಲಿ, ಚನ್ನಬಸವ, ಕರ್ನಟಗಿ, ರವಿ ಗುತ್ತೇದಾರ್, ಪ್ರಕಾಶ ಗುತ್ತೇದಾರ್, ಇಬ್ರಾಹಿಂ ಜಂಡಾಕಟ್ಟಿ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Wednesday, July 15, 2020

ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ 'ಜನನಿ'ಯ ಸಾಧನೆಗೆ ಮೆಚ್ಚುಗೆ


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜು ಈ ವರ್ಷದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದು, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕುಶಾ ರಾಠೋಡ್ ತಂದೆ ಜಗನ್ನಾಥ ರಾಠೋಡ್ 529 ಅಂಕಗಳನ್ನು ಪಡೆಯುವ ಮೂಲಕ ಶೇ. 88.16% ಫಲಿತಾಂಶ ಪಡೆದುಕೊಂಡಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಸುಜಾತ ತಂದೆ ಬಸವರಾಜ ಹಾಲಾಪೂರ 512 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶೇ. 85.33% ಫಲಿತಾಂಶ ಪಡೆದುಕೊಂಡಿದ್ದಾಳೆ.
ಈ ವರ್ಷ ಕಾಲೇಜಿನ ಒಟ್ಟು 60 ವಿದ್ಯಾರ್ಥಿಗಳು ದ್ವೀತಿಯ ಪಿಯು ಪರೀಕ್ಷೆ ಬರೆದಿದ್ದು, 07 ವಿದ್ಯಾರ್ಥಿಗಳು ಡಿಸ್ಟಿಂಕ್ಸನ್, 31 ವಿದ್ಯಾರ್ಥಿಗಳು ಪ್ರಥಮ, 04 ವಿದ್ಯಾರ್ಥಿಗಳು ದ್ವೀತಿಯ, 09 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ಪಾಸ್ ಆಗಿದ್ದಾರೆ. ಇದರೊಂದಿಗೆ ಕಾಲೇಜಿನ ಫಲಿತಾಂಶ ಶೇ. 85% ಇದ್ದು, ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ತಿಳಿಸಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

ಬಿಜೆಪಿ ಎಸ್ಟಿ ಮೋರ್ಚಾದ ನೂತನ ಅಧ್ಯಕ್ಷರಿಗೆ ಮುಖಂಡರಿಂದ ಸನ್ಮಾನ

ನಾಗರಾಜ್ ತಳವಾರ ನವಲಿಯವರಿಗೆ
ಸನ್ಮಾಸಿದ ಬಿಜೆಪಿ ಮುಖಂಡರು
ದೊರೆ ನ್ಯೂಸ್ ಕನ್ನಡ, ಕೊಪ್ಪಳ: ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ಕೊಪ್ಪಳ ಜಿಲ್ಲಾ ಎಸ್ಟಿ ಮೋರ್ಚಾದ ನೂತನ ಕೋಶಾಧ್ಯಕ್ಷ ಹಾಗೂ ಖಜಾಂಚಿಯಾಗಿ ಆಯ್ಕೆಯಾಗಿರುವ ನಾಗರಾಜ್ ತಳವಾರ ನವಲಿಯವರನ್ನು ಜಿಲ್ಲೆಯ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕನಕಗಿರಿ ಮಂಡಲದ ಪ್ರಧಾನ ಕಾರ್ಯದರ್ಶಿ ವಿರುಪಣ್ಣ ಕಲ್ಲೂರು, ವಿಎಸ್ಎಸ್ಎನ್ ನವಲಿ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಯುವ ಮುಖಂಡರಾದ ವೆಂಕಟೇಶ್ ಸಂಕನಾಳ, ಗಾದೆಪ್ಪ ಉದ್ದಿಹಾಳ, ಹುಸೇನಪ್ಪ ನಾಯಕ ಈಚನಾಳ,  ಬೀರಪ್ಪ ಚನ್ನಳ್ಳಿ, ಹನುಮೇಶ ನಾಯಕ ಗಂಗಾವತಿ, ಮಲ್ಲು, ವೆಂಕಟೇಶ ಪೂಜಾರಿ, ದೇವರಾಜ ತಳವಾರ ಕಲ್ಗುಡಿ ಸೇರಿದಂತೆ ಅನೇಕರಿದ್ದರು.

Saturday, July 11, 2020

ಮಸ್ಕಿ: ತಾಲೂಕು ಪಂಚಾಯ್ತಿ ಅಧ್ಯಕ್ಷರಿಗೆ ಅಂಜನ್ ಸೇನಾ ಸಮಿತಿಯಿಂದ ಸನ್ಮಾನ

ದೊರೆ ನ್ಯೂಸ್ ಕನ್ನಡ ರಾಯಚೂರು (ಜು.11): ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯ್ತಿಯ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರನ್ನು ರೂರಲ್ ಅಂಜನ್ ಸೇನಾ ಸಮಿತಿಯ ಮಸ್ಕಿ ತಾಲೂಕ ಘಟಕದ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ.
ಶನಿವಾರ ಮಸ್ಕಿಯ ತಾಲೂಕು ಪಂಚಾಯ್ತಿ ಕಾರ್ಯಾಲಯಕ್ಕೆ ಆಗಮಿಸಿದ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರಿಗೆ ಶ್ಯಾಲು, ಹಾರ ಹಾಕಿ ಸನ್ಮಾನಿಸಿದ ರೂರಲ್ ಅಂಜನ್ ಸೇನಾ ಸಮಿತಿಯ ಮುಖಂಡರು ಶಿವಣ್ಣನವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗ್ವಾಲಪ್ಪ ನಾಯಕ ಉಸ್ಕಿಹಾಳ, ವೆಂಕಟೇಶ ನಾಯಕ ನಂಜಲದಿನ್ನಿ, ವೆಂಕಟೇಶ ನಾಯಕ ಉಸ್ಕಿಹಾಳ, ಹೀರೆನಾಯಕ ಸುಭೇದರ, ರಾಜ ಹೇಮಂತ್ ಕುಮಾರ್, ಮಾರುತೇಶ ನಾಯಕ ಬುನ್ನಟ್ಟಿ, ಯಂಕೋಬ ನಾಯಕ ಬುನ್ನಟ್ಟಿ, ಸಂತೋಷ ನಾಯಕ ಬುನ್ನಟ್ಟಿ ಸೇರಿದಂತೆ ಅನೇಕರಿದ್ದರು.

Friday, July 10, 2020

ಡಿ.ಜಿ ಗುರಿಕಾರ್ ಗೆ ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019

ದೊರೆ ನ್ಯೂಸ್ ಕನ್ನಡ ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ದುರುಗಪ್ಪ ಗುರಿಕಾರ್ (ಡಿ.ಜಿ ಗುರಿಕಾರ್) ರವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019' ಲಭಿಸಿದೆ. 
ಡಿ.ಜಿ ಗುರಿಕಾರ್ ರವರ ಸಮಾಜ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಅವಾರ್ಡ್ ನೀಡಲಾಗಿದ್ದು, ಕೊರೊನಾ ವೈರಸ್ ಕಾರಣದಿಂದ ಲಾಕ್ ಡೌನ್ ಉಂಟಾದ ಹಿನ್ನೆಲೆಯಲ್ಲಿ ಅವಾರ್ಡ್ ಅನ್ನು ಅಂಚೆ ಮೂಲಕ ಗುರಿಕಾರ್ ರವರ ಮನೆಗೆ ತಲುಪಿಸಲಾಗಿದೆ.
ಆನೆಹೊಸೂರು ಗ್ರಾಮದ ಡಿ.ಜಿ ಗುರಿಕಾರ್ (ದುರುಗಪ್ಪ ಗುರಿಕಾರ್), ಸಮಾಜ ಸೇವೆಯ ಮೂಲಕ ರಾಯಚೂರು ಜಿಲ್ಲೆಯಾದ್ಯಂತ ಗುರುತಿಸಿಕೊಂಡಿದ್ದಾರೆ. ದಲಿತ ಸಮುದಾಯಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಗುರಿಕಾರ್ ಆ ಸಮುದಾಯಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 
ಹಿಂದುಳಿದ, ದಲಿತ ವರ್ಗಗಳ ಬಗ್ಗೆ ಡಿ.ಜಿ ಗುರಿಕಾರ್ ರವರಿಗೆ ಇರುವ ಕಾಳಜಿಯನ್ನು ಗುರುತಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅವರನ್ನು ಪ್ರತಿಷ್ಠಿತ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019'ಕ್ಕೆ ಆಯ್ಕೆ ಮಾಡಿ, ಅವರ ಮನೆಗೆ ಅವಾರ್ಡ್ ಅನ್ನು ತಲುಪಿದೆ.
ಗುರಿಕಾರ್ ರವರಿಗೆ ನ್ಯಾಷನಲ್ ಅವಾರ್ಡ್ ದೊರೆತಿರುವ ವಿಷಯ ತಿಳಿದ ಅವರ ಅಭಿಮಾನಿಗಳು, ವಿವಿಧ ಸಮುದಾಯದ ಮುಖಂಡರು ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ಲಿಂಗಸುಗೂರಿನ ವಾಲ್ಮೀಕಿ ನಾಯಕ ಸಮುದಾಯದ ಯುವಕರು ಮುಂದಿನ ದಿನಗಳಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

Friday, June 19, 2020

ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಎರಡು ಕಿಡ್ನಿ ಕಳೆದುಕೊಂಡು ಅತಿಥಿ ಉಪನ್ಯಾಸಕ

(ತನ್ನ ಎರಡು ಕಿಡ್ನಿಯೂ ಇಲ್ಲ, ತನ್ನನ್ನು ಆರೈಕೆ ಮಾಡ್ತಿದ್ದ ಮಡದಿಯೂ ಇಲ್ಲ, ಚಿಕಿತ್ಸೆಗಾಗಿ ಮಾಡಿದ್ದ 15-20 ಲಕ್ಷ ರೂ. ಸಾಲ, ಮಕ್ಕಳ ಪಾಲನೆಗೆ ಸರ್ಕಾರ ನೆರವಾಗಬೇಕೆಂದು ವಿಡಿಯೋ ಮಾಡುವ ಮೂಲಕ ಸಿ‌‌.ಎಂ ಹಾಗೂ ಡಿ.ಸಿ.ಎಂ ಗಳಿಗೆ ಮನವಿ ಮಾಡಿದ್ದಾರೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅತಿಥಿ ಉಪನ್ಯಾಸಕ ಡಾ.ಅಮರೇಶ್ ಆಲ್ಕೋಡ್)
ರಾಯಚೂರು: ಕಳೆದ ಆರು ವರ್ಷಗಳಿಂದ ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಡಾ.ಅಮರೇಶ್ ತಂದೆ ಹನುಮಂತ ಆಲ್ಕೋಡ್ ಕಳೆದ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.
ಅವರು ವಾರಕ್ಕೆ ಎರಡು ಸಾರಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದು, ಡಯಾಲಿಸಸ್ ಮತ್ತು ಕಿಡ್ನಿಗಳ ಚಿಕಿತ್ಸೆಯ ಸಲುವಾಗಿ ಇದುವರೆಗೂ ಸುಮಾರು 15-20 ಲಕ್ಷ ರೂ.ಗಳನ್ನು ಈಗಾಗಲೇ ಸಾಲಸೂಲ ಮಾಡಿ ಕರ್ಚು ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಇವರ ಪತ್ನಿ ಕೂಡ ಮೃತಪಟ್ಟಿದ್ದಾರೆ. ಮನೆಯಲ್ಲಿ ಉಂಟಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೆ ಡಾ.ಅಮರೇಶ್ ಆಲ್ಕೋಡ್ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. 
ಇನ್ನೂ ತನ್ನ ಮಕ್ಕಳ ಪಾಲನೆಗಾಗಿ ಮತ್ತು ತನ್ನ ಮುಂದಿನ ಜೀವನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಡಿಯೋವೊಂದನ್ನು ಮಾಡಿರುವ ಇವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವತ್ ನಾರಾಯಣರವರಿಗೆ ವಿಡಿಯೋ ಮೂಲಕ ತನ್ನ ಕುಟುಂಬದ ನೋವನ್ನು ತಿಳಿಸಿದ್ದಾರೆ. ಅಲ್ಲದೇ ನೆರವು ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇವರ ಆರೋಗ್ಯ ದೃಷ್ಟಿಯಿಂದ ಹಾಗೂ ಇವರ  ಮಕ್ಕಳ ಭವಿಷ್ಯದ ಸಲುವಾಗಿ ಆದರೂ ಸರ್ಕಾರ ಇವರ ನೆರವಿಗೆ ಮುಂದಾಗಲಿ. ಇವರಿಗೆ ಸರ್ಕಾರದ ವತಿಯಿಂದ ಒಳ್ಳೆಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿ ಎಂಬುದು ಈ ಭಾಗದ ಜನರ ಮತ್ತು ಇವರ ಕುಟುಂಬದ ಮನವಿಯಾಗಿದೆ. 
ಡಾ.ಅಮರೇಶ್ ಆಲ್ಕೋಡ್ ರವರ ನೋವಿಗೆ ಸ್ಪಂದಿಸುವ ಮನಸ್ಸುಗಳು, ಇವರ ಕುಟುಂಬಕ್ಕೆ ನೆರವಾಗುವ ಹೃದಯವಂತರು ಇವರ ದೂರವಾಣಿ ಸಂಖ್ಯೆ: 6364056438‌ & 8105559685 ಗೆ ಕರೆಮಾಡಿ ಧೈರ್ಯ ಹೇಳಿ, ಬ್ಯಾಂಕ್ ಖಾತೆಯ ವಿವರ: ಡಾ. ಅಮರೇಶ್ ಆಲ್ಕೋಡ್, ಎಸ್.ಬಿ.ಐ ಬ್ಯಾಂಕ್, ಸಿರವಾರ ಶಾಖೆ, ಖಾತೆ ಸಂಖ್ಯೆ 31090846274 ಐ.ಎಫ್.ಎಸ್.ಸಿ ಕೋಡ್: SBIN0011137 ಮೂಲಕ ಕೈಲಾದ ಸಹಾಯ ಮಾಡಬಹುದಾಗಿದೆ.

Tuesday, May 19, 2020

ಪಾಮನಕಲ್ಲೂರು: ತುಂಬಿದ ಚರಂಡಿ, ಬಂದು ನೋಡದ ಅಧಿಕಾರಿಗಳು

ಸಾಂಕ್ರಾಮಿಕ ರೋಗ ಹೆಚ್ಚಳಕ್ಕೆ ಕಾರಣವಾಗ್ತಾರಾ ಪಾಮನಕಲ್ಲೂರು ಪಿಡಿಒ..!?
ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಅನೇಕ ಕಡೆಗಳಲ್ಲಿ ಚರಂಡಿಗಳು ತುಂಬಿದ್ದು, ಅಧಿಕಾರಿಗಳು ಮಾತ್ರ ಡೊಂಟ್ ಕೇರ್ ಅಂತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.  
ಗ್ರಾಮದ ಮುಖ್ಯ ರಸ್ತೆಯಲ್ಲಿ ಬರುವ ಬಂಗಾರದ ಅಂಗಡಿ (ಕುರುಡಿಯವರ ಹೊಲ) ಹತ್ತಿರದ ಚರಂಡಿ ಕೊಳಚೆ ನೀರು, ವಿವಿಧ ಪ್ಲಾಸ್ಟಿಕ್ ವಸ್ತುಗಳಿಂದು ತುಂಬಿದ್ದು ಹತ್ತಿರದ ಮನೆಗಳಲ್ಲಿ ವಾಸಿಸುವ ನಾವು ದುರ್ನಾತದೊಡನೆ  ಜೀವನ ನಡೆಸುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಸಂಕಷ್ಟ ಎದುರಾಗಿದ್ದು, ಲಾಕ್ ಡೌನ್ ನಿಂದಾಗಿ ಎಲ್ಲೂ ಕೆಲಸವಿಲ್ಲದೆ ಮನೆಯಲ್ಲಿ ಜೀವನ ಕಳೆಯುವ ಪರಿಸ್ಥಿತಿ ಎದುರಾಗಿದೆ. ದಿನವಿಡೀ ಮನೆಯಲ್ಲಿಯೇ ಇರುವ ನಾವು ಚರಂಡಿಯ ಕೆಟ್ಟ ವಾಸನೆ ಸೇವಿಸುತ್ತಿದ್ದೇವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭಯ ಉಂಟಾಗಿದೆ. 
ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರು, ಪಿಡಿಒ ಸೇರಿದಂತೆ ಅನೇಕರಿಗೆ ನಾವು ಅನೇಕ ಬಾರಿ ಮನವಿ ಮಾಡಿದ್ದೇವೆ. ಆದ್ರೆ ಇದುವರೆಗೂ ಯಾರೊಬ್ಬರೂ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ.
ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು ಪಿಡಿಒ ಮಾತ್ರ ಡೊಂಟ್ ಕೇರ್ ಅಂತಿದ್ದಾರೆ. ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳೇ ಹೀಗೆ ಮಾಡಿದರೆ ನಾವು ಯಾರನ್ನು ಕೇಳ್ಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಈ ಹಿಂದೆ ಅನೇಕ ಬಾರಿ ಚರಂಡಿ ಸ್ವಚ್ಛಗೊಳಿಸಿದಾಗ  ಚರಂಡಿಯಿಂದ ತೆಗೆದ ಕಸವನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆ ಕಸ ಮಳೆ, ಗಾಳಿ, ವಾಹನಗಳ ಓಡಾಟದಿಂದಾಗಿ ಮತ್ತೆ ಚರಂಡಿ ಸೇರಿ ಕೊಂಡಿದೆ. ಇನ್ನುಮುಂದೆ ಚರಂಡಿ ಸ್ವಚ್ಛಗೊಳಿಸಿದ ನಂತರ ಅಲ್ಲಿನ ಕಸವನ್ನು ವಿಲೇವಾರಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Wednesday, April 8, 2020

ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಸಂಕಷ್ಟದಲ್ಲಿ ಅನ್ನದಾತರು

ರಾಯಚೂರು: ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದಲ್ಲಿ ರೈತರು ಬೆಳೆದಿದ್ದ ಭತ್ತ ನೆಲಕ್ಕುರುಳಿದೆ. ಕಟಾವಿಗೆ ಬಂದ ಭತ್ತ ನೆಲಸಮವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುತ್ತಿದ್ದಾರೆ. 
ಗ್ರಾಮದ ರೈತ ರಂಗನಗೌಡ ತಂದೆ ಹನುಮನಗೌಡ ಎಂಬುವವರು 6 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು, ಭತ್ತದ ನಾಟಿಗೆ ಅವರು 2 ಲಕ್ಷ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದ್ದರು. ಎಕರೆಗೆ 40 ಚೀಲ ಇಳುವರಿಯ ನಿರೀಕ್ಷೆಯಲ್ಲಿ ರಂಗನಗೌಡ ಇದ್ದರು, ಆದ್ರೆ ವರುಣನ ಆರ್ಭಟಕ್ಕೆ ಸಿಲುಕಿದ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು ರೈತ ಕಣ್ಣಿರಿಟ್ಟಿದ್ದಾರೆ. ಇದೇ ಗ್ರಾಮದ ರೈತರಾದ ತಿಮ್ಮನಗೌಡ ತಂದೆ ಹನುಮನಗೌಡ 2.5 ಎಕರೆ, ಮಲ್ಲನಗೌಡ ತಂದೆ ಭೀಮನಗೌಡ 4 ಎಕರೆ, ಈರಪ್ಪ ಅಡವಿಬಾವಿ ಎಂಬ ರೈತರ ಭತ್ತ ನಾಶವಾಗಿದ್ದು, ಅನ್ನದಾತರು ಕಣ್ಣೀರಿಟ್ಟಿದ್ದಾರೆ.
ಅಲ್ಲದೇ ತಾಲೂಕಿನ ಪಾಮನಕಲ್ಲೂರು ಹೋಬಳಿಯ ಪಾಮನಕಲ್ಲೂರು, ಕೋಟೆಕಲ್, ಆನಂದಗಲ್, ಹರ್ವಾಪುರ, ತುಪ್ಪದೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಬೋರ್ ವೆಲ್ ನೀರಿನಿಂದ ಬೆಳೆದಿದ್ದ ಸಜ್ಜೆ  ನೆಲಕ್ಕುರುಳಿದ್ದು ಈ ಭಾಗದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಪ್ರಸ್ತುತ ಕೊರೊನಾ ಎಂಬ ಮಹಾಮಾರಿ ಜಗತ್ತನೇ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಭಾಗದ ರೈತರು ತಮ್ಮ ಕುಟುಂಬದ ಕೆಲ ಸದಸ್ಯರನ್ನು ಬೆಂಗಳೂರು, ಮುಂಬೈ, ಪುಣೆ, ಪಣಜಿ ಸೇರಿದಂತೆ ಮಹಾನಗರಗಳಿಗೆ ದುಡಿಯಲು ಕಳುಹಿಸಿ, ಕುಟುಂಬದಲ್ಲಿ ಕೆಲವರು ಕೃಷಿಯಲ್ಲಿ ತೊಡಗಿಕೊಂಡಿರುತ್ತಿದ್ದರು. ಕೃಷಿಯಲ್ಲಿ ಸಂಕಷ್ಟ ಎದುರಾದಾಗ ಮಹಾನಗರದಲ್ಲಿ ಕುಟುಂಬಸ್ಥರು ದುಡಿದು ತರುತ್ತಿದ್ದ ಹಣವನ್ನೇ ಅನ್ನದಾತರು ತಮ್ಮ ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು.
ಆದರೆ ಈಗ ಮಹಾನಗರಗಳಲ್ಲಿರೋ ಅನ್ನದಾತರ ಕುಟುಂಬಸ್ಥರು ಕೊರೊನಾ ಮಹಾಮಾರಿಗೆ ಎದುರಿ, ಕೆಲಸ ಸಿಗದೇ ಊರು ಸೇರಿಕೊಂಡಿದ್ದು ಕೃಷಿಯನ್ನೇ ನಂಬಿಕೊಂಡು ಕುಳಿತಿರುವ ಅನ್ನದಾತರಿಗೆ ಬೇರೆ ದಾರಿ ಕಾಣದಾಗಿದೆ. 
ಬೆಳೆಯೇ ಬದುಕು ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರು ಬೆಳೆ ಕಳೆದುಕೊಂಡಿದ್ದಾರೆ. ಮುಂದಿನ ಬದುಕು ಹೇಗೆ ಎಂದು ತಿಳಿಯದ   ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಅನೇಕ ರೈತರು ಆಗ್ರಹಿಸಿದ್ದಾರೆ. ಈ ಭಾಗದ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಲಿ ಎಂಬುದೇ ಈ ವರದಿಯ ಆಶಯವಾಗಿದೆ.

Wednesday, March 25, 2020

ರಾಯಚೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಹುಚ್ಚು..!?

ಕೊರೊನಾ ವೈರಸ್ ಕೋವಿಡ್ ೧೯ ಜನರಲ್ಲಿ ಎಷ್ಟರ ಮಟ್ಟಿಗೆ ಭಯ, ಆತಂಕ ಹುಟ್ಟಿಸಿದೆ ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳು ಜನರಿಗೆ ತಿಳುವಳಿಕೆ ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರ ಇರಲಿ ಎಂಬ ಸಂದೇಶಗಳನ್ನು ದೃಶ್ಯ, ಶ್ರವಣ, ಮುದ್ರಣ ಮಾಧ್ಯಮಗಳು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ.
ಈ ನಡುವೆ ಬರದ ನಾಡು ಚಿನ್ನದ ಬಿಡು ಎಂದು ಕರೆಯುವ ಬಿಸಿಲು ನಾಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಯರಗುಡ್ಡದ ರಂಗಪ್ಪ ದಂಡಪ್ಪ ಎಂಬ ವ್ಯಕ್ತಿಯೋರ್ವ ಕೊರೊನಾ ವೈರಸ್ ಬಗ್ಗೆ ತೀವ್ರವಾಗಿ ತಲೆ ಕೆಡಸಿಕೊಂಡಿದ್ದಾನೆ.
ಪದವಿ ಪೂರ್ವದ ವರೆಗೂ ಶಿಕ್ಷಣ ಪಡೆದ ರಂಗಪ್ಪ ಕುರಿ ಕಾಯುವ ಕೆಲಸ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬರುವ ಕೊರೊನಾ ವೈರಸ್ ಸುದ್ದಿಗಳನ್ನು ನೋಡಿ ಮಾನಸಿಕ ಕಿನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ರಂಗಪ್ಪನಿಗೆ ಸ್ಥಳೀಯ ವೈದ್ಯ ಡಾ.ಆರ್.ಎಸ್ ಹುಲಿಮನಿ ಎಂಬುವವರು ಚಿಕಿತ್ಸೆ ನೀಡಿದ್ದು, ಅವರಿಗೆ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಿ ಧೈರ್ಯದಿಂದ ಇರುವಂತೆ ತಿಳಿ ಹೇಳಿದ್ದಾರೆ‌. ವೈದ್ಯರ ಸಲಹೆಯ ನಂತರ ರಂಗಪ್ಪ ಕೊರೊನಾ ವೈರಸ್ ಬಗೆಗಿನ ಭಯದಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿದ್ದಾರೆ ಎನ್ನಲಾಗಿದೆ. 
ಒಟ್ಟಾರೆಯಾಗಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಸಮಾಜದಲ್ಲಿ ಧೈರ್ಯದಿಂದ ಬಾಳಿ ಬದುಕ ಬೇಕಾಗಿರುವ ಜನರು ಕೊರೊನಾ ವೈರಸ್ ಬಗ್ಗೆ ತಲೆ ಕೆಡಸಿಕೊಂಡು ಮಾನಸಿಕ ಅಸ್ವಸ್ಥರಂತೆ ಆಗುತ್ತಿರುವುದು ದುರಂತದ ಸಂಗತಿ ಎನ್ನಬಹುದಾಗಿದೆ.

Thursday, March 19, 2020

ಪಿಡಿಒ ನಿರ್ಲಕ್ಷ್ಯ: ಪುಟ್ಟ ಮಕ್ಕಳೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಗ್ರಾ.ಪಂ ಸದಸ್ಯೆ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ರಂಗಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಘಟನೆಯೊಂದು ನಡೆದಿದೆ.
ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ಬಸವರಾಜ  ಚರಂಡಿ ಸ್ವಚ್ಛಗೊಳಿಸಿದವರಾಗಿದ್ದಾರೆ. ಸುನೀತಾ ತಮ್ಮೂರಿನ ಚರಂಡಿ ಸ್ವಚ್ಛಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಗುಡದೂರು ಪಿಡಿಒ ಸರಸ್ವತಿಯವರಿಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರು. ಸದಸ್ಯೆಯ ಮನವಿಗೆ ಕ್ಯಾರೇ ಅನ್ನದೇ ಪಿಡಿಒ ಸರಸ್ವತಿ ನಿರ್ಲಕ್ಷ್ಯವಹಿಸಿದ್ದರು. ಇತ್ತ ಗ್ರಾಮಸ್ಥರು ಪ್ರತಿನಿತ್ಯ ಸದಸ್ಯೆ ಸುನೀತಾ ಬಸವರಾಜರವರಿಗೆ ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಒತ್ತಡ ಹಾಕುತ್ತಿದ್ದರು. ಪಿಡಿಒ ನಿರ್ಲಕ್ಷ್ಯ, ಗ್ರಾಮಸ್ಥರ ಒತ್ತಡದಿಂದ ಬೇಸತ್ತ ಸದಸ್ಯೆ ಸುನೀತಾ ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ತಾನೇ ಚರಂಡಿ ಸ್ವಚ್ಛಗೊಳಿಸಿದ್ದಾರೆ.
ಈ ಘಟನೆಯ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುನೀತಾ ಬಸವರಾಜ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಪಿಡಿಒ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಿಡಿಒ ಸರಸ್ವತಿಯವರ ನಿರ್ಲಕ್ಷ್ಯ ಪ್ರವೃತ್ತಿಯಿಂದ ಅಧಿಕಾರಿ ವರ್ಗವೇ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
----------------------------------
ರಂಗಾಪೂರ ಗ್ರಾಮದ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಮ್ಮ ಸಿಬ್ಬಂದಿ ಜಿಪಿಎಸ್ ಮಾಡಿಕೊಂಡು ಬಂದಿದ್ದಾರೆ. ಆದಷ್ಟೂ ಬೇಗನೆ ಸ್ವಚ್ಚಗೊಳಿಸುತ್ತೇವೆ. ಕಳೆದ ಆರು ತಿಂಗಳುಗಳ ಹಿಂದೆ ಕ್ಲೀನ್ ಮಾಡಿದ್ವಿ. ಈಗ ಮತ್ತೆ ಸ್ವಚ್ಛಗೊಳಿಸುತ್ತೇವೆ. ಅಂತಹ ಸಮಸ್ಯೆ ಏನು ಆಗಿಲ್ಲ. 
ಸರಸ್ವತಿ, ಪಿಡಿಒ, ಗುಡದೂರು ಗ್ರಾಮ ಪಂಚಾಯ್ತಿ

Wednesday, March 4, 2020

ದುರಸ್ತಿಯಾಗದ ಹಟ್ಟಿ - ಪಾಮನಕಲ್ಲೂರು ರಸ್ತೆ, ಮುಂದುವರಿದ ಪ್ರಯಾಣಿಕರ ಪರದಾಟ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಗೆ ಸಂಪರ್ಕ ಕಲ್ಪಸುವ ರಸ್ತೆ ಪಾಮನಕಲ್ಲೂರು - ಗೆಜ್ಜಲಗಟ್ಟಾ ಹಾಗೂ ವೀರಾಪೂರು - ಹಟ್ಟಿ ನಡುವೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಈ ಮಾರ್ಗದಲ್ಲಿ ದಿನನಿತ್ಯ ಬೈಕ್, ಕಾರು, ಜೀಪ್, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಹಟ್ಟಿ ಚಿನ್ನದಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿನಿತ್ಯ ಹಗಲು - ರಾತ್ರಿ ಲೆಕ್ಕಿಸದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹದಗೆಟ್ಟ ರಸ್ತೆಯಿಂದ ಈಗಾಗಲೇ ಅನೇಕ ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ದಿನನಿತ್ಯ ನೂರಾರು ಜನ ಸುತ್ತಾಡುವ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಈ ಭಾಗದ ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಇವೆಯೋ..? ತಗ್ಗು ಗುಂಡಿಗಳಲ್ಲಿ ರಸ್ತೆ ಇದೆಯೋ..? ಎಂಬುದು ವಾಹನ ಸವಾರರ ಹಾಗೂ ಈ ಭಾಗದ ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಈ ರಸ್ತೆ ಮಸ್ಕಿ ಕ್ಷೇತ್ರ ಹಾಗೂ ಲಿಂಗಸುಗೂರು ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಂಡಿದ್ದು ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಗೇರಿ ಹಾಗೂ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ರ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ‌. 
ಅನೇಕ ಅಪಘಾತಗಳಿಗೆ ಕಾರಣವಾದ ರಸ್ತೆ ದುರಸ್ತಿ ಮಾಡದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದು, ಈಗಲೇ ರಸ್ತೆ ದುರಸ್ತಿ ಮಾಡಿಸುವ ಮೂಲಕ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಕೆಲಸ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾಗಿದೆ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ‌ಈ ಭಾಗದ ಜನ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂದಾಗುವ ದುರಂತಗಳನ್ನು ತಪ್ಪಿಸಲಿ.

Monday, March 2, 2020

ಪಾಮನಕಲ್ಲೂರು: ಬೆಂಬಲ ಬೆಲೆ‌ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್..?


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ‌ಗ್ರಾಮದ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್‌ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ  ಸೋಮವಾರ ಸಂಜೆ ನಡೆದಿದೆ. 
ರೈತರ ತೊಗರಿ ಖರೀದಿಸಲು ಐದು ನೂರರಿಂದ ಎರಡು ಸಾವಿರ ಲಂಚ ಪಡೆಯುತ್ತಿದ್ದಾರೆಂದು‌ ಗ್ರೇಡರ್ (ತೊಗರಿ ಪರಿಶೀಲನೆ ಅಧಿಕಾರಿ) ಅರುಣ್ ರಾಠೋಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವಿರುದ್ಧ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಛೇರಿಗೆ  ದೂರು ನೀಡಿದ್ದರು.
ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವರ ಕಛೇರಿಯಿಂದ ಮಸ್ಕಿ ತಹಶಿಲ್ದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗೆ ತಹಶಿಲ್ದಾರ ಬಲರಾಮ ಕಟ್ಟಿಮನಿ ಸೂಚಿಸಿದರು. ಕಂದಾಯ ನಿರೀಕ್ಷಕ ಅಬ್ದುಲ್‌ ರಹೂಪ್, ಗ್ರಾಮ ಲೆಕ್ಕಾಧಿಕಾರಿ ರವಿ ಬೆಳ್ಳೂರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೆಕ್ರೆಟರಿ ಲಾಳೆ ಸಾಬ್, ಪರಿಶೀಲನಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿಗಳ ಮುಂದೆ ರೈತರು ಅಳಲು ತೊಡಿಕೊಂಡು, ಗ್ರೇಡರ್ ಅರುಣ್ ರಾಠೋಡ್ ವಿರುದ್ಧ ದೂರುಗಳ ಸುರಿಮಳೆ ಗೈದರು. ಅರುಣ್, ಸಮಯಕ್ಕೆ ಸರಿಯಾಗಿ ಬರಲ್ಲ, ರೈತರಿಗೆ ಅನಾವಶ್ಯಕ ಕಿರಿಕಿರಿ ಮಾಡ್ತಾನೆ. ಲಂಚ ಕೊಟ್ಟವರ ತೊಗರಿ ಖರೀದಿ ಮಾಡ್ತಾನೆ, ಲಂಚ ಕೊಡದಿದ್ದರೆ ದಿನಗಟ್ಟಲೇ ಕಾಯಿಸ್ತಾನೆ.
ನಿಮ್ಮ ತೊಗರಿ ಸರಿಯಿಲ್ಲ ತೆಗೆದುಕೊಳ್ಳಲ್ಲವೆಂದು ಸತಾಯಿಸ್ತಾನೆ, ಲಂಚ ಕೊಟ್ಟರೆ ಯಾವುದೇ ಪರಿಶೀಲನೆ ಮಾಡಲ್ಲ, ನಮ್ಮೂರಿಗೆ ಕಾಯಂ ಗ್ರೇಡರ್ ಬೇಕು, ಅರುಣ್ ಕುಮಾರ್ ಭೇಡವೆಂದು ರೈತರು ಒತ್ತಾಯಿಸಿದರು. ಮಾತಾಡಿ ಸಮಸ್ಯೆ ಪರಿಹಾರ ಮಾಡ್ತಿವಿ ಎಂದು ಅಧಿಕಾರಿಗಳು ಭರವಸೆ ನೀಡಿದರು.

Thursday, February 27, 2020

ರಾಯಚೂರು: ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷ

ದೊರೆ ನ್ಯೂಸ್ ಕನ್ನಡ: ರಾಯಚೂರು ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಹೀರಾಪುರ್ ಈರಣ್ಣ ಉಪಾಧ್ಯಕ್ಷರಾಗಿ, ಶಿವಕುಮಾರ್ ನಾಯಕ ಪ್ರಧಾನ ಕಾರ್ಯದರ್ಶಿಯಾಗಿ, ಜಗದೀಶ್ ಹಿರೇಮಠ ಜಂಟಿ ಕಾರ್ಯದರ್ಶಿಯಾಗಿ, ಪ್ರಸಾದ್ ಎಚ್.ಬಿ ಜೈನ್ ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ.
ಸಹಾಯಕ ಚುನಾವಣಾ ಅಧಿಕಾರಿ ವಕೀಲರಾದ ರಾಜಕುಮಾರ, ಚುನಾವಣಾಧಿಕಾರಿ ವಕೀಲರಾದ ಎ ಶ್ರೀನಿವಾಸ ನೇತೃತ್ವದಲ್ಲಿ ರಾಯಚೂರು ನ್ಯಾಯವಾದಿಗಳ ಸಂಘದ ನೂತನ ಘಟಕದ ಚುನಾವಣೆ ನಡೆಸಲಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿಯಾಗಿ ಚುನಾಯಿತರಾದ ವಕೀಲರಿಗೆ ಅನೇಕರು ಶುಭ ಹಾರೈಸಿದ್ದಾರೆ.

Thursday, January 30, 2020

ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ: ಎನ್.ರಘುವೀರ ನಾಯಕ


ದೊರೆ ನ್ಯೂಸ್ ಕನ್ನಡ (ರಾಯಚೂರು, ಜ.30): ರಾಯಚೂರು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಯಮ ಉಲ್ಲಂಘಿಸಿ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಅಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಜಿ.ಕುಮಾರ್ ನಾಯಕ ರಾಯಚೂರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಿದ ರಘುವೀರ ನಾಯಕ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವದನ್ನು ತಕ್ಷಣ ಕೈಬಿಡಬೇಕು. ಲಾಟರಿ ಅಂದರೆ ಸಿಕ್ಕವರಿಗೆ ಮುಕ್ಕಣ್ಣ ಅನ್ನುವಂತಾಗುತ್ತದೆ. ಇದರಿಂದ ವಯೋಮಾನ ಮೀರುತ್ತಿರುವ ನೈಜ ಫಲಾನುಭವಿಗಳಿಗೆ ಅನ್ಯಾಯಾವಾಗುತ್ತಿದೆ. ಈ ಕುರಿತು  ಅಪರ ಜಿಲ್ಲಾಧಿಕಾರಿಗಳು ರಾಯಚೂರು ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ರಾಯಚೂರುರವರಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಜರುಗಿಸದೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ವಯಸ್ಸು, ವಿದ್ಯಾಬ್ಯಾಸ ಮತ್ತು ಅನುಭವ ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆದರೆ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಈ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿ ಕೇವಲ ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇಲ್ಲಿಯ ತನಕ ಇದೇ ಇಲಾಖೆಯಿಂದ ಅನೇಕ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಲಾಟರಿ ಮೂಲಕ ಮಾಡಿಲ್ಲ. ಯಾವುದೇ ಯೋಜನೆಗೆ ಅರ್ಜಿ ಕರೆದಾಗ ನೂರಾರು ಅರ್ಜಿ ಬರುವುದು ಸಹಜ. ಅದರಲ್ಲಿ ಅರ್ಹತೆಯನ್ನು ಪರಿಗಣಿಸಬೇಕೆ ವಿನ: ಲಾಟರಿ ಅಲ್ಲ. ವಯೋಮಾನ ಮತ್ತು ವಿದ್ಯಾರ್ಹತೆ ಪರಿಗಣಿಸಬೇಕು. 
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು  ಕಾಯ್ದಿರಿಸಿದ ಪಟ್ಟಿ ತಯಾರಿಸಿ ಮುಂದೆ ಟಾರ್ಗೇಟ ಬಂದಾಗ ಈ ಕಾಯ್ದಿರಿಸಿದ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿಗಳು  ಮುಂದಿನ ವರ್ಷ ಅರ್ಜಿ ಕರೆದಾಗ ಪುನಹ ಹೊಸದಾಗಿ ನೂರಾರು ಜನ ಅರ್ಜಿದಾರರು ಅರ್ಜಿ ಹಾಕುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಏನು ಮಾಡುತ್ತಾರೆ? ಜೊತೆಗೆ  ಕಾಯ್ದಿರಿಸಿದ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದು ಸರಕಾರದ ಸುತ್ತೋಲೆಯಲ್ಲಿ ಇಲ್ಲ. ಅದ್ದರಿಂದ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆಯನ್ನು ಬಿಟ್ಟು ವಯೋಮಾನದ ಆಧಾರದ ಮೇಲೆ ಆಯ್ಕೆ ಮಾಡಬೇಕು ಮತ್ತು ನಿಯಮ ಉಲ್ಲಂಘಿಸಿ ಆಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ರಘುವೀರ ನಾಯಕ, ಕುಮಾರ್ ನಾಯಕರಿಗೆ  ಮನವಿಯ ಮೂಲಕ ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಮುಖಂಡರಾದ ರಮೇಶ ನಾಯಕ, ವಿರುಪಾಕ್ಷಿ ನಾಯಕ, ವೀರೇಶ ನಾಯಕ, ಹನುಮಂತ ನಾಯಕ, ರಂಗನಾಥ ನಾಯಕ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )