Friday, December 30, 2022

ಕಪಲಾಪೂರ (ಎ): ವಿಶ್ವಗುರು ಬಸವಣ್ಣ, ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಮೂರ್ತಿ ಅನಾವರಣಗೊಳಿಸಿದ ಗಣ್ಯರು

 


ಕಪಲಾಪೂರ (ಎ): ವಿಶ್ವಗುರು ಬಸವಣ್ಣ, ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಮೂರ್ತಿ ಅನಾವರಣಗೊಳಿಸಿದ ಗಣ್ಯರು

ಬೀದರ್ (ಡಿ.30): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಲಾಪೂರ (ಎ) ಗ್ರಾಮದಲ್ಲಿ ನಿರ್ಮಿಸಲಾದ ವಿಶ್ವಗುರು ಬಸವಣ್ಣನವರ ಮತ್ತು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಕೇಂದ್ರ ರಾಜ್ಯ ರಸಗೊಬ್ಬರ ಸಚಿವರಾದ ಭಗವಂತ ಖೂಬಾ, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸೇರಿದಂತೆ ಅನೇಕ ಗಣ್ಯರ ಮತ್ತು ಪರಮಪೂಜ್ಯರ ನೇತೃತ್ವದಲ್ಲಿ ಶುಕ್ರವಾರ ಅನಾವರಣ ಮಾಡಲಾಯಿತು.


ಮೂರ್ತಿ ಅನಾವರಣದ ಬಳಿಕ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾರವರು, 12ನೇ ಶತಮಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಮೂರ್ತಿ ಮತ್ತು 21ನೇ ಶತಮಾನದ ಪಕ್ಕ ಬಸವಣ್ಣನವರ ಅನುಯಾಯಿಯಾಗಿ ಈ ಭಾಗದಲ್ಲಿ ನಿಜಾಮರ ಕಾಲದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿ ನಡೆದಾಡುವ ದೇವರು ಎಂಬ ಪ್ರಖ್ಯಾತಿ ಪಡೆದ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರುರವರ ಮೂರ್ತಿಗಳನ್ನು ಅನಾವರಣ ಮಾಡಿರುವುದು ನಮ್ಮ ಪೂರ್ವ ಜನ್ಮದ ಪೂಣ್ಯವಾಗಿದೆ ಎಂದರು.

ಮನುಷ್ಯ ಸುಖ, ಶಾಂತಿಯಿಂದ ಜೀವನ ಸಾಗಿಸಲು ಮಹಾಪುರುಷರ ಆಶೀರ್ವಾದ ಸದಾ ನಮ್ಮ ಮೇಲೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಇಬ್ಬರು ಮಹಾಪುರುಷರು ತಮ್ಮ ತಮ್ಮ ಕಾಲದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರ ನಡೆ, ನುಡಿ ಸಮಾಜಕ್ಕೆ ಮಾದರಿಯಾಗಿದೆ. ಅದೇ ಕಾರಣಕ್ಕಾಗಿ ಮಹಾತ್ಮರು ನಮ್ಮ ಮಧ್ಯದಲ್ಲಿ ಇನ್ನೂ ಇದ್ದಾರೆ ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಹೇಳಿದರು.


ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, 12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವಕ್ಕೆ ಮಾದರಿಯಾಗುವಂತ ಸಾಮಾಜಿಕ ಕ್ರಾಂತಿ ಮಾಡಿದ್ದರು. ನಿಜಾಮರ ಕಾಲದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವ ಕೆಲಸವನ್ನು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೆವರು ಮಾಡಿದ್ದಾರೆ. ಅಂತ ಇಬ್ಬರು ಮಹಾತ್ಮರ ಮೂರ್ತಿಗಳನ್ನು ಅನಾವರಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು‌.


ನಾವು ಮಹಾತ್ಮರ ಮೂರ್ತಿಗಳನ್ನು ನಿರ್ಮಿಸುವುದಷ್ಟೇ ಅಲ್ಲ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ. ಬಸವಣ್ಣನವರು ಆಗಿನ ಕಾಲದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಅಂದಿನ ಕಾಲದಲ್ಲಿ ಅವರು ಅನುಭವ ಮಂಟಪದಲ್ಲಿ ಮೀಸಲಾತಿ ಕಲ್ಪಿಸಿ, 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ್ದರು.

21ನೇ ಶತಮಾನದಲ್ಲಿ ಚನ್ನಬಸವ ಪಟ್ಟದ್ದೆವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅದರಂತೆಯೇ ಬಾಬಾ ಸಾಹೇಬ್ ಡಾ. ಬಿ..ಆರ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ. ಸಮಾನತೆಗಾಗಿ ಹೋರಾಡಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ಕ್ರಾಂತಿಯಾಗುವುದು ಅವಶ್ಯಕವಾಗಿದೆ. ಶಿಕ್ಷಣದಲ್ಲಿ ಕ್ರಾಂತಿ ಆಗಬೇಕೆಂದರೆ, ಪ್ರತಿ ಹಳ್ಳಿಯಲ್ಲಿನ ಮಕ್ಕಳು ಶಿಕ್ಷಣವಂತರಾಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಿಕೊಡಬೇಕು ಎಂಬ ಗುರಿಯೊಂದಿಗೆ ಚನ್ನಬಸವ ಪಟ್ಟದ್ದೆವರು ಕೆಲಸ ಮಾಡಿದ್ದಾರೆ.

ಸಿದ್ದರಾಮಪ್ಪ ಕಪಲಾಪೂರೆರವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಪ್ರೋತ್ಸಾಹಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಕಪಲಾಪೂರದ ಈ ಆಶ್ರಮಕ್ಕೆ ಅನುದಾನ ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು, ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೆವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಕಪಲಾಪೂರದ ಪೂರ್ಣಾನಂದ ಮಹಾಸ್ವಾಮಿಗಳು, ಕೆಎಸ್ಐಐಡಿಸಿ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಳ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಪ್ರಮುಖರಾದ ಸೂರ್ಯಕಾಂತ್ ನಾಗಮರಪಳ್ಳಿ, ಶಂಕರ್ ಪಾಟೀಲ್, ಈಶ್ವರಿ, ಹಣುಮಂತರಾವ್ ಮೈಲಾರಿ, ಸಿದ್ದರಾಮಪ್ಪ ಕಪಲಾಪೂರೆ, ಶಕುಂತಲಾ ಬೆಲ್ದಾಳೆ, ಶಂಕರಪ್ಪ ಪಾಟೀಲ್, ನವಲಿಂಗ ಪಾಟೀಲ್ ರವರು ಸೇರಿದಂತೆ ಅನೇಕರಿದ್ದರು.

Tuesday, December 27, 2022

‘ರೈತರಿಗೆ ಜಮೀನು ವಾಪಸ್ ಕೊಟ್ಬಿಡಿ’ ಬಿಲ್ ಮೇಲಿನ ಚರ್ಚೆಯ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

 


‘ರೈತರಿಗೆ ಜಮೀನು ವಾಪಸ್ ಕೊಟ್ಬಿಡಿ’ ಬಿಲ್ ಮೇಲಿನ ಚರ್ಚೆಯ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಏಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬಿಲ್ ಮೇಲಿನ ಚರ್ಚೆಯ ವೇಳೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ 1982ರಲ್ಲಿ ರೈತರಿಂದ ಕೇವಲ 08 ಸಾ. ರೂ.ಗೆ ಎಕರೆಯಂತೆ ಜಮೀನನ್ನು ವಶಪಡಿಸಿಕೊಂಡಿದ್ದರು. ಆದರೇ ಇದುವರೆಗೂ ಪೂರ್ಣ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹಾಗಾಗಿ ರೈತರ ಜಮೀನನ್ನು ವಾಪಸ್ಸು ನೀಡಬೇಕೆಂದು ಒತ್ತಾಯಿಸಿದರು.

‘ರೈತರಿಗೆ ಜಮೀನು ವಾಪಸ್ ಕೊಟ್ಬಿಡಿ’ ಬಿಲ್ ಮೇಲಿನ ಚರ್ಚೆಯ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

 


ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.27): ನಮ್ಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯವಾಗಿದ್ದು,  ಕೂಡಲೇ ಕ್ಷೇತ್ರದೆಲ್ಲಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಏಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದ ವೇಳೆ ಜಲಜೀವನ್ ಮಿಷನ್‌ ಯೋಜನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಅವರು ಮಾತನಾಡಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮಾತ್ರ ಮಲ್ಟಿ ವಿಲೇಜ್ ಸ್ಕೀಮ್ ಜಾರಿಯಿದೆ. ಮನ್ನಾಎಖ್ಖೇಳ್ಳಿ ಭಾಗದ 31 ಹಳ್ಳಿಗಳು, ಬಗದಲ್ ಭಾಗದ 38 ಹಳ್ಳಿಗಳು ಸೇರಿದಂತೆ ಎಲ್ಲಾ ಹಳ್ಳಿಗಳಿಗೂ ಮಲ್ಟಿ ವಿಲೇಜ್ ಸ್ಕೀಮ್ ನಲ್ಲಿ ನೀರಿನ ಸೌಲಭ್ಯ ಒದಗಿಸಿಕೊಡಬೇಕು. ಶೀಘ್ರದಲ್ಲೇ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿ ಯೋಜನೆ ಜಾರಿಗೊಳಿಸಬೇಕು.

ನಮ್ಮ ಭಾಗದಲ್ಲಿ ಬೋರ್ವೆಲ್ ಆಧಾರಿತವಾಗಿ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬೋರ್ವೆಲ್ ಗಳಲ್ಲಿ ಇವತ್ತು ಇರುವ ನೀರು ನಾಳೆ ಇರುವುದಿಲ್ಲ. ಹಾಗಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ತರಬೇಕಾಗಿದೆ. ಮನ್ನಾಎಖ್ಖೇಳ್ಳಿ, ಬಗದಲ್ ಭಾಗಗಳ ಸುಮಾರು 69 ಹಳ್ಳಿಗಳು ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಜಾರಿಗೊಳಿಸಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

 ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

ಇದು ಕೇವಲ ನನ್ನ ಕ್ಷೇತ್ರದ ಸಮಸ್ಯೆಯಲ್ಲ, ರಾಜ್ಯದ ಸಮಸ್ಯೆ:

ಜಲಜೀವನ್ ಮಿಷನ್ ಯೋಜನೆ ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಸಮಸ್ಯೆಯಾಗಿದೆ. ನಾವು ಈ ಯೋಜನೆಯನ್ನು ಮೊದಲು ಸ್ವಾಗತಿಸಿದ್ದೇವು. ಕೇಂದ್ರ ಸರ್ಕಾರ ದುಡ್ಡು ಕೊಡ್ತಿದೆ. ಮನೆಮನೆಗೆ ನೀರು ಹೋಗ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದೇವು. ಆದರೆ ಪ್ರಾಯೋಗಿಕವಾಗಿ ನೋಡಿದಾಗ ಸಮಸ್ಯೆಯಿದೆ. ನೀರು ನೀಡುವ ಸಲುವಾಗಿ ನಡುರಸ್ತೆಯನ್ನು  ಅಗೆಯುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.

 

ನಾವು ಕಷ್ಟಪಟ್ಟು ರಸ್ತೆ ಮಾಡಿಸಿರುತ್ತೇವೆ:

ನಾವು ಕಷ್ಟಪಟ್ಟು ಯಾವ್ಯಾವೋದೋ ಯೋಜನೆಗಳಲ್ಲಿ ರಸ್ತೆಗಳನ್ನು ಮಾಡಿಸಿದ್ದೇವೆ. ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಸುವರ್ಣ ಗ್ರಾಮಗಳಲ್ಲಿ ಸಿಸಿ ರಸ್ತೆ ಮಾಡಿಸಿದ್ದೇವೆ. ಜೆಜೆಎಮ್ ನವರು ನಡುರಸ್ತೆಯಲ್ಲಿ 1.50 ಅಡಿ ರಸ್ತೆ ಕಟ್ ಮಾಡಿ, ಎಸ್ಡಿಪಿ ಪೈಪ್ ಹಾಕುತ್ತಿದ್ದಾರೆ. ಯಾವುದಾದರು ಒಂದು ದೊಡ್ಡ ಲಾರಿ ಬಂದರೆ ಪೈಪ್ ಗಳು ಕಂಪ್ಲಿಟ್ ಡ್ಯಾಮೇಜ್ ಹಾಗುತ್ತವೆ. ಅದರಿಂದ ಇದನ್ನು ಮರುಪರಿಶೀಲನೆ ಮಾಡಬೇಕಾಗಿದೆ. ಎಸ್ಡಿಪಿ ಬದಲಿಗೆ ಎಮ್ಎಸ್ ಪೈಪ್ ಹಾಕಿದರೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.

ಉತ್ತರ ನೀಡಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ್ ರವರು, ಬಂಡೆಪ್ಪ ಖಾಶೆಂಪುರ್ ರವರು ಒಳ್ಳೆಯ ಪ್ರಶ್ನೆ ಕೇಳಿದ್ದಾರೆ. ಇದು ಅವರ ಕ್ಷೇತ್ರಕ್ಕೆ ಮಾತ್ರ ಸಿಮಿತವಾದದ್ದಲ್ಲ. ರಾಜ್ಯಾದ್ಯಂತ  ಇರುವ ಪ್ರಶ್ನೆಯಾಗಿದೆ. ಜೆಜೆಎಮ್ ನವರು ಕಟ್ ಮಾಡಿದ ರಸ್ತೆ ಸರಿಪಡಿಸುತ್ತಾರೆ. ಒಂದು ವೇಳೆ ರಸ್ತೆ ಸರಿ ಪಡಿಸದಿದ್ದಲ್ಲಿ ಅಂತವರ ಬಿಲ್ ನೀಡಬಾರದು ಎಂದು ಜಿಲ್ಲಾ ಪಂಚಾಯತಿ ಸಿಇಒರವರಿಗೆ ಸೂಚನೆ ನೀಡಲಾಗಿದೆ. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಮತ್ತೇ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಮರುಪ್ರಶ್ನೆ ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕಮಠಾಣಾ ವ್ಯಾಪ್ತಿಯ 18 ಹಳ್ಳಿಗಳಿಗೆ ಮಾತ್ರ ಬಹುಗ್ರಾಮ ಕುಡಿಯುವ ನೀರು ಸಿಗುತ್ತಿವೆ. ಇನ್ನುಳಿದಂತೆ ಮನ್ನಾಎಖ್ಖೇಳ್ಳಿಯ 31 ಹಳ್ಳಿಗಳು, ಬಗದಲ್ 38 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನು ತಾಂತ್ರಿಕ ಹಂತದಲ್ಲಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಸರ್ಕಾರದಲ್ಲಿ ದುಡ್ಡು ಕೊಳೆಯುತ್ತಿದೆ. ಇಲಾಖೆಯ ಎಮ್.ಡಿ ಸೇರಿದಂತೆ ಅನೇಕ ಅಧಿಕಾರಿಗಳಿಗೆ ನಾನು ಸುಮಾರು ಸಲ ಮಾತನಾಡಿದ್ದೇನೆ. ಡಿಪಿಆರ್ ತರೆಸಿಕೊಂಡು 08-10 ದಿನಗಳಲ್ಲಿ ಕ್ಯಾಬಿನೆಟ್ ಗೆ ತಂದು ಕ್ಲಿಯರ್ ಮಾಡಿ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಯಾವುದೇ ರೀತಿಯಲ್ಲಿ ವಿಳಂಭವಾಗದಂತೆ ಆದಷ್ಟು ಬೇಗ ಈ ಯೋಜನೆ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸಚಿವರು ತಿಳಿಸಿದರು. ಶಾಸಕರಾದ ರಮೇಶ್ ಕುಮಾರ್, ಹೆಚ್.ಕೆ ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡರವರು ಸೇರಿದಂತೆ ಅನೇಕರು ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ಧ್ವನಿಗೂಡಿಸಿದರು.

Monday, December 26, 2022

ಕಾರಂಜಾ ಸಂತ್ರಸ್ತ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

 


ಕಾರಂಜಾ ಸಂತ್ರಸ್ತ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.26): ಸೂಕ್ತ ಪರಿಹಾರಕ್ಕಾಗಿ ಸುಮಾರು 180 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬೀದರ್ ಜಿಲ್ಲೆಯ ಕಾರಂಜಾ ಸಂತ್ರಸ್ತ ರೈತರಿಗೆ ಕೂಡಲೇ ನ್ಯಾಯಯುತವಾದ ಪರಿಹಾರ ಒದಗಿಸಿಕೊಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕಾರಂಜಾ ಸಂತ್ರಸ್ತ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಆರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕಾರಂಜಾ ಸಂತ್ರಸ್ತ ರೈತರ ವಿಷಯವಾಗಿ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಕಾರಂಜಾ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಬೀದರ್ ಜಿಲ್ಲೆಯಲ್ಲಿರುವ ಒಂದೇ ಒಂದು ನೀರಾವರಿ ಯೋಜನೆ ಕಾರಂಜಾ. ಕಾರಂಜಾ ನೀರಾವರಿ ಯೋಜನೆಗೆ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿರವರು ಅಡಿಗಲ್ಲು ಹಾಕಿದ್ದರು. ಅಂದಿನಿಂದ ಇಲ್ಲಿಯವರೆಗೂ ರೈತರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದಾರೆ. ಕೋರ್ಟ್ ಗೆ ಹೋದವರಿಗೆ ಸ್ಪಲ್ಪಮಟ್ಟಿಗೆ ನ್ಯಾಯ ದೊರೆತಿದೆ. ಆದರೇ ಬಹಳಷ್ಟು ರೈತರು ಕೋರ್ಟ್ ಗೆ ಹೋಗಿಲ್ಲ. ಆಗಾಗಿ ಅವರು ಪರಿಹಾರದಿಂದ ವಂಚಿತರಾಗಿದ್ದಾರೆ.

ಕಾರಂಜಾ ಜಲಾಶಯದಿಂದ 28 ಗ್ರಾಮಗಳು ಮುಳಗಡೆಯಾಗಿವೆ. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೇ ಪರಿಪೂರ್ಣ ಮೂಲಭೂತ ಸೌಲಭ್ಯಗಳು ಆ ಗ್ರಾಮಗಳಿಗೆ ಸಿಕ್ಕಿಲ್ಲ. ಕಾರಂಜಾದಿಂದ ತೊಂದರೆಗೆ ಸಿಲುಕಿದವುಗಳ ಪೈಕಿ ಹೆಚ್ಚಿನ ಗ್ರಾಮಗಳು ನನ್ನ ಕ್ಷೇತ್ರದಲ್ಲಿ ಬರುತ್ತವೆ. ಮೂರು ನಾಲ್ಕು ವರ್ಷಗಳಿಂದ ಹೆಚ್ಚಿನ ಮಳೆ ಬಂದಿರುವುದರಿಂದ ಕಾರಂಜಾ ಜಲಾಶಯ ಭರ್ತಿಯಾಗುತ್ತಿದ್ದು, ಎಫ್.ಆರ್.ಎಲ್ ಗಿಂತ ಹೆಚ್ಚಿಗೆ ನೀರು ನಿಲ್ಲುತ್ತಿದೆ.

ನಾನು ಈ ಹಿಂದೆ ಎರಡು ಬಾರಿ ಕಾರಂಜಾ ಸಂತ್ರಸ್ತ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಆಗ ನೀರಾವರಿ ಸಚಿವರಾದ ಗೋವಿಂದ ಕಾರಜೋಳರವರು ಕೂಡಲೇ ಪರಿಹಾರ ಕೊಡಿಸ್ತಿನಿ ಅಂತ ಹೇಳಿದ್ದರು. ಇಲ್ಲಿಯವರೆಗೂ ಪರಿಹಾರ ಕೊಡಿಸಿಲ್ಲ. 180 ದಿನಗಳಿಂದ ಬೀದರ್ ನಗರದಲ್ಲಿರುವ ಉಸ್ತುವಾರಿ ಸಚಿವರ ಕಛೇರಿ ಮುಂಭಾಗದಲ್ಲಿ ಕಾರಂಜಾ ಸಂತ್ರಸ್ತ ರೈತರು ಹೋರಾಟ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರು ಇಲ್ಲಿಯವರೆಗೂ ಅವರ ಮನವಿಯನ್ನು ಸ್ವೀಕರಿಸಿಲ್ಲ.

ಸಂತ್ರಸ್ತ ರೈತರು ಈಗ ಎಲ್ಲಾ ಶಾಸಕರ ಮನೆಗಳ ಮುಂದೆ ಧರಣಿ ಮಾಡುತ್ತಿದ್ದಾರೆ. ಆಗಾಗಿ ಕೂಡಲೇ ಪರಿಹಾರ ಒದಗಿಸಿಕೊಡಬೇಕು. ಈ ಹಿಂದೆ ನಾವು ಸರ್ಕಾರದಲ್ಲಿದ್ದಾಗ ನಾನು ಬೀದರ್ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ದೊಡ್ಡಮಟ್ಟದ ಸಭೆ ನಡೆಸಿದ್ದೇವು. ರೈತರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವು. ಈಗ ನಿಮ್ಮ ಸರ್ಕಾರವಿದೆ. ರೈತರ ಪರವಾಗಿ ಕಾಳಜಿ ವಹಿಸಿ, ಕಾರಂಜಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಒತ್ತಾಯಿಸಿದರು.

ಉತ್ತರ ನೀಡಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿರವರು, ನಾನು ಈ ವಿಷಯದ ಕುರಿತು ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ. ಒಂದು ವಾರದೊಳಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮತ್ತು ಹೋರಾಟಗಾರರೊಟ್ಟಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದರು.

==============================================

ಚಿಟಗುಪ್ಪಾ ತಾಲೂಕು ಅಭಿವೃದ್ಧಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ಡಿ.26): ಬೀದರ್ ಜಿಲ್ಲೆಯ ಚಿಟಗುಪ್ಪಾ, ಜಗದೀಶ್ ಶೆಟ್ಟರ್ ರವರ ಕಾಲದಲ್ಲಿ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಆದರೆ ಅಭಿವೃದ್ಧಿಗಾಗಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಚಿಟಗುಪ್ಪಾ ತಾಲೂಕು ಕೇಂದ್ರಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕೆಂದು ಸದನದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಆರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ಚಿಟಗುಪ್ಪಾವನ್ನು ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ತಾಲೂಕು  ಕೇಂದ್ರವೆಂದು ಘೋಷಣೆ ಮಾಡಿದ್ದರು.

ಚಿಟಗುಪ್ಪಾ ತಾಲೂಕು ಕೇಂದ್ರಕ್ಕೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವಂತೆ ನಾನು ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಈಗಲಾದರೂ ಅಭಿವೃದ್ಧಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

Wednesday, December 21, 2022

ತೊಗರಿ ಬೆಳೆಗಾರ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್ | ಹೆಕ್ಟರ್ ಗೆ ಕನಿಷ್ಟ 50 ಸಾ. ರೂ. ಪರಿಹಾರ ಒದಗಿಸಲು ಸಿಎಂ ಬೊಮ್ಮಾಯಿಗೆ ಮನವಿ

 

ತೊಗರಿ ಬೆಳೆಗಾರ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಹೆಕ್ಟರ್ ಗೆ ಕನಿಷ್ಟ 50 ಸಾ. ರೂ. ಪರಿಹಾರ ಒದಗಿಸಲು ಸಿಎಂ ಬೊಮ್ಮಾಯಿಗೆ ಮನವಿ

ಬೀದರ್ (ಡಿ.21): ಬೀದರ್, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆ ರೋಗದಿಂದ ಬೆಳೆ ಕಳೆದುಕೊಂಡಿರುವ ತೊಗರಿ ಬೆಳೆಗಾರ ರೈತರಿಗೆ ಹೆಕ್ಟರ್ ಗೆ ಕನಿಷ್ಟ 50 ಸಾ. ರೂ. ಪರಿಹಾರ ಒದಗಿಸಬೇಕೆಂದು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತೊಗರಿ ಬೆಳೆಗಾರ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಮೂರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ರೋಗಬಾಧೆಯಿಂದ ನಾಶವಾಗಿರುವ ತೊಗರಿ ಬೆಳೆ ಮತ್ತು ಪರಿಹಾರ ವಿಷಯಕ್ಕೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಅವರು ಮಾತನಾಡಿದರು.

ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ನೀರಾವರಿ ಹೊರತಾಗಿ ಕ್ಯಾಶ್ ಕ್ರಾಪ್ ಅಂತ ಇರುವುದು ತೊಗರಿ ಬೆಳೆಯಾಗಿದೆ. ಬೀದರ್ ನಲ್ಲಿ ಸುಮಾರು 1.25 ಲಕ್ಷ ಹೆಕ್ಟರ್, ಕಲಬುರಗಿಯಲ್ಲಿ 6.50 ಲಕ್ಷ ಹೆಕ್ಟರ್ ತೊಗರಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯವರ ವರದಿಯ ಪ್ರಕಾರ ನೆಟೆ ರೋಗದಿಂದ ಬೀದರ್ ನಲ್ಲಿ 15 ಸಾವಿರ ಹೆಕ್ಟರ್, ಕಲಬುರಗಿಯಲ್ಲಿ 69 ಸಾವಿರ ಹೆಕ್ಟರ್ ತೊಗರಿ ಬೆಳೆ ಹಾಳಾಗಿದೆ. ನನ್ನ ಮಾಹಿತಿಯ ಪ್ರಕಾರ ಬಹುತೇಕ ಶೇ. 90% ರಷ್ಟು ಬೆಳೆ ನಾಶವಾಗಿದೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತೊಗರಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸಿಹಿ ಸುದ್ದಿ ನೀಡಬೇಕು ಎಂದು  ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ತೊಗರಿ ಬೆಳೆಗಾರ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಈ ವೇಳೆ ಮಾತನಾಡಿದ ಆಳಂದ ಶಾಸಕ ಸುಭಾಷ್ ಗುತ್ತೇದಾರ್ ರವರು, ನೆಟೆ ರೋಗದಿಂದ ಆಳಂದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ತೊಗರಿ ಬೆಳೆ ಹಾಳಾಗಿದೆ. ಬಂಡೆಪ್ಪ ಖಾಶೆಂಪುರ್ ರವರು ಹೇಳಿದಂತೆ ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಉತ್ತರ ನೀಡಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ರವರು, ಜುಲೈ, ಆಗಷ್ಟ್, ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ, ಕಲಬುರಗಿ ಜಿಲ್ಲೆಯಲ್ಲಿ 69776 ಹೆಕ್ಟರ್, ಬೀದರ್ ಜಿಲ್ಲೆಯಲ್ಲಿ 10426 ಹೆಕ್ಟರ್ ತೊಗರಿ ಬೆಳೆ ನಾಶವಾಗಿದೆ. ಇನ್ನೂಳಿದಂತೆ ಸ್ಥಳಕ್ಕೆ ಕೃಷಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿಕೊಡುವ ಕೆಲಸ ಮಾಡುತ್ತಾರೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 259404 ಜನ ರೈತರಿಗೆ 239.91 ಲಕ್ಷ ರೂ. ಬೆಳೆ ವಿಮೆ ಆಧಾರಿತ ಪರಿಹಾರ ಒದಗಿಸಲಾಗುತ್ತದೆ. ಖಾಶೆಂಪುರ್ ರವರು ಹೇಳಿದ ಸಮಸ್ಯೆಯನ್ನು ಕೃಷಿ ಸಚಿವರ ಗಮನಕ್ಕೆ ತಂದು ಪರಿಹಾರ ಒದಗಿಸಲು ತಿಳಿಸುತ್ತೇನೆ ಎಂದರು.

ಮರು ಪ್ರಶ್ನೆ ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಚಿವರ ಉತ್ತರ ಸಮರ್ಪಕವಾಗಿಲ್ಲ. ಕನಿಷ್ಟ ಶೇ.90% ನಷ್ಟು ಬೆಳೆ ನಾಶವಾಗಿದೆ. ಇದನ್ನು ಎನ್.ಡಿ.ಆರ್.ಎಫ್ ನಲ್ಲಿ ತೆಗೆದುಕೊಳ್ಳಬೇಕು. ಕನಿಷ್ಟ ಹೆಕ್ಟರ್ ಗೆ 50 ಸಾವಿರ ರೂ. ನಂತೆ ಪರಿಹಾರ ನೀಡಬೇಕು. ಬೆಳೆ ವಿಮಾ ಪರಿಹಾರ ರೈತರು ಮಾಡಿದ ಬೆಳೆ ವಿಮೆಯ ಆಧಾರದ ಮೇಲೆ ನೀಡಲಾಗುತ್ತದೆ. ಅದು ಸರ್ಕಾರ ನೀಡುವ ಪರಿಹಾರವಲ್ಲ. ಸಚಿವರು ಉದ್ರಿಯಾಗಿ ಸರ್ಕಾರ ನಡೆಸಬಾರದು. ರೈತರಿಗೆ ನಗದಿಯಾಗಿ ಪರಿಹಾರದ ದುಡ್ಡು ಒದಗಿಸಬೇಕು.

ಮುಖ್ಯಮಂತ್ರಿಗಳು, ಸಚಿವರು ಸದನದಲ್ಲಿಯೇ ಏನಾದರು ಒಂದು ಸಿಹಿ ಸುದ್ದಿ ನೀಡುತ್ತಾರೆ ಎಂದುಕೊಂಡಿದ್ದೇನೆ. ಸದನದಲ್ಲೇ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಬೇಕು. ಕೂಡಲೇ ಪರಿಹಾರ ಒದಗಿಸಬೇಕು. ಮುಖ್ಯಮಂತ್ರಿಗಳಿಂದ ಮಾತ್ರ ಪರಿಹಾರ ಒದಗಿಸಲು ಸಾಧ್ಯ. ಯಾವ ಮಂತ್ರಿಯಿಂದಲೂ ಪರಿಹಾರ ಒದಗಿಸಲಾಗದು. ಮುಖ್ಯಮಂತ್ರಿಗಳು ದೊಡ್ಡಮನಸ್ಸು ಮಾಡಿ ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿರವರಿಗೆ ಮನವಿ ಮಾಡಿದರು.

Tuesday, December 20, 2022

ಒಂದಿಂಚು ಜಾಗವನ್ನು ಬೇರೆಯವರಿಗೆ ನೀಡಬಾರದು: ಸಿಎಂಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

 


ಒಂದಿಂಚು ಜಾಗವನ್ನು ಬೇರೆಯವರಿಗೆ ನೀಡಬಾರದು: ಸಿಎಂಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯ

ಬೀದರ್ (ಡಿ.21): ಗಡಿ ವಿಷಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ನಾವು ಮುಖ್ಯಮಂತ್ರಿಗಳಿಗೆ ನೀಡುತ್ತೇವೆ. ಅವರು ಕೂಡ ಶೀಘ್ರದಲ್ಲೇ ಸಭೆ ಕರೆದು ಒಳ್ಳೆಯ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಗಡಿ ಪ್ರದೇಶದಲ್ಲಿನ ಸಮಸ್ಯೆಗಳ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲೇ ಇರಲಿ, ಸುಪ್ರೀಂ ಕೋರ್ಟ್ ನಲ್ಲಿಯೇ ಇರಲಿ ಒಳ್ಳೆಯ ರೀತಿಯಲ್ಲಿ ಲೀಡ್ ಮಾಡುವ ಮೂಲಕ ನಮ್ಮ ಪಾಲಿನ ಒಂದಿಂಚು ಜಾಗವನ್ನು ನಾವು ಬೇರೆಯವರಿಗೆ ಬಿಟ್ಟುಕೊಡದಂತೆ ನೋಡಿಕೊಳ್ಳಬೇಕು ಎಂದರು.

ಗಡಿ ತಕರಾರುಗಳ ನಿವಾರಣೆಯ ವಿಷಯದಲ್ಲಿ ಉತ್ತಮ ನ್ಯಾಯಾವಾಧಿಗಳನ್ನು ರಾಜ್ಯ ಸರ್ಕಾರದವರು ನೇಮಕ ಮಾಡಿಕೊಳ್ಳಬೇಕು. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಸ್ಥಾನ ಖಾಲಿ ಇದ್ದು, ಅದು ನೇಮಕ ಮಾಡಬೇಕು. ಎಲ್ಲಾ ಗಡಿ ತಜ್ಞರೊಂದಿಗೆ ಸಮಾಲೋಚನೆ ಮಾಡಬೇಕು ಎಂಬ ಜನರ ಅಭಿಪ್ರಾಯಗಳನ್ನು ಪತ್ರಿಕೆಗಳು ತಿಳಿಸಿವೆ.

ಗಡಿ ವಿಷಯವನ್ನು ಮಹಾರಾಷ್ಟ್ರ ರಾಜ್ಯದವರು ಬಹಳಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಅಲ್ಲಿನ ಮುಖ್ಯಮಂತ್ರಿಗಳು ಮೂರು ಜನರನ್ನು ಗಡಿ ಸಚಿವರು ಅಂತ ನೇಮಕ ಮಾಡುತ್ತಾರೆ. ಈ ಹಿಂದೆ ಹೆಚ್.ಕೆ ಪಾಟೀಲ್ ರನ್ನು ಬಾರ್ಡರ್ ಮಿನಿಷ್ಟರ್ ಅಂತ ನೇಮಕ ಮಾಡಲಾಗಿತ್ತು. ತಮ್ಮ ತಮ್ಮ ಇಲಾಖೆಗಳನ್ನು ನೋಡಿಕೊಳ್ಳುವ ಮಿನಿಷ್ಟರ್ ಗಳು ಮತ್ತು ಗೃಹ ಸಚಿವರು ಇದ್ದೇ ಇರುತ್ತಾರೆ. ಆದರೇ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬರು ಸಚಿವರು ಇದ್ದರೆ ಚನ್ನಾಗಿ ಇರುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಯೋಚಿಸಬೇಕಾಗಿದೆ.

ಮುಖ್ಯಮಂತ್ರಿಗಳ ಮೇಲೆ ನಮಗೆ ವಿಶ್ವಾಸವಿದೆ. ಅವರು ಸರ್ಕಾರ ನಡೆಸುವವರಾಗಿರುತ್ತಾರೆ. ಗಡಿ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳಬೇಕಾಗಿರುತ್ತದೆ. ಗಡಿ ವಿಷಯವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ನಿರಾಶಕ್ತಿ ಹೀಗೆ ಮುಂದುವರೆದರೆ ಮುಂದೊಂದಿನ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಕನ್ನಡಿಗರಲ್ಲಿ ಮನೆ ಮಾಡಿದೆ ಎಂದು ಮಾಧ್ಯಮಗಳು ತಿಳಿಸಿವೆ. ಮುಖ್ಯಮಂತ್ರಿಗಳು ಇಂತವುಗಳಿಗೆ ಅವಕಾಶ ನೀಡಬಾರದು.

ಮುಖ್ಯಮಂತ್ರಿಗಳು ಸರ್ವ ಪಕ್ಷ ಸಭೆ ಕರೆಯುತ್ತೇನೆ ಎಂದಿದ್ದಾರೆ. ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಳ್ಳೊಳ್ಳೆ ವಕೀಲರನ್ನು ನೇಮಿಸಬೇಕು. ಗಡಿ ತಜ್ಞರ ಸಲಹೆ ತೆಗೆದುಕೊಳ್ಳಬೇಕು. ಕನ್ನಡ ಪರ ಹೋರಾಟಗಾರರನ್ನು, ರಕ್ಷಣಾ ವೇದಿಕೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಸರ್ಕಾರ ಮಾಡಬೇಕು.

ಈ ಹಿಂದೆ 2006ರಲ್ಲಿ ಹೆಚ್.ಡಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದರು. ಅವರು ದೇವೇಗೌಡರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುವ ಅಧಿವೇಶನದಂತೆ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಬೆಳಗಾವಿಯಲ್ಲಿ ಅಧಿವೇಶನ ಆರಂಭಿಸಿದ್ದರು. ಆ ಮೂಲಕ ಅವರು ಬೆಳಗಾವಿ ಕರ್ನಾಟಕದ ಎರಡನೇ ಶಕ್ತಿ ಕೇಂದ್ರ ಎಂದು ತೋರಿಸಿಕೊಟ್ಟಿದ್ದರು.

ಸುವರ್ಣ ಸೌಧಕ್ಕೆ ಅವರೇ ಚಾಲನೆ ನೀಡಿದ್ದರು. ಯಡಿಯೂರಪ್ಪರವರು ಪೂರ್ಣಗೊಳಿಸಿದ್ದರು. ಇಲ್ಲಿನ ಜನರಿಗೆ ಶಕ್ತಿ ಕೊಡಬೇಕು ಎಂಬ ನಿಟ್ಟಿನಲ್ಲಿ ಅಂದು ಆ ನಿರ್ಧಾರಗಳನ್ನು ಮಾಡಿದ್ದರು. ನಾವು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕದ ಒಂದಿಂಚು ಜಾಗವನ್ನು ನಾವು ಬಿಡದಂತೆ ಡಬಲ್ ಇಂಜೀನ್ ಸರ್ಕಾರ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಹೇಳಿದರು.

ನಮ್ಮ ಪಾಲಿನ ನೀರು ಉಳಿಸಲು ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.20): ನೀರಾವರಿ ವಿಷಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ನಮ್ಮ ಬೀದರ್ ಜಿಲ್ಲೆಯಾಗಿದೆ. ನಮ್ಮ ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಈಶ್ವರ ಖಂಡ್ರೆರವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಪ್ರಶ್ನೆ ಕೇಳಿ ಅವರು ಮಾತನಾಡಿದರು.

ಗೋದಾವರಿ ಬೇಸಿನ್ ನಲ್ಲಿ 22 ಟಿ.ಎಮ್.ಸಿ ನೀರಿನ ಅಲೊಕೇಶನ್ ಇದೆ ಅಂತ ಹೇಳಿದ್ದಾರೆ. ಆದರೆ ಎಲ್ಲಾ ಸೇರಿ 10 ಟಿ.ಎಮ್.ಸಿ ನೀರನ್ನು ಸಹ ನಾವು ಬಳಕೆ ಮಾಡಿಕೊಳ್ಳುತ್ತಿಲ್ಲ. ನಮ್ಮ ಪಾಲಿನ ನೀರು ವ್ಯರ್ಥವಾಗಿ ಪಕ್ಕದ ತೆಲಂಗಾಣ ರಾಜ್ಯಕ್ಕೆ ಹರಿದು ಹೋಗುತ್ತಿದೆ. 2019-20ರಲ್ಲಿ ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ 375 ಕೋಟಿ ರೂ. ಬಜೆಟ್ ನಲ್ಲಿ ಕೊಟ್ಟು ಸುಮಾರು 33 ಕೆರೆ ತುಂಬಿಸಲು ಅಲೊಕೇಶನ್ ಕೊಡಲಾಗಿತ್ತು. ಆದರೆ ಇದುವರೆಗೂ ಆ ಯೋಜನೆ  ವಿಷಯದಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಪಾಲಿನ ನೀರನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು. ಬಚಾವತ್ ಆಯೋಗದ ತೀರ್ಪಿನನ್ವಯ ನೀರಿನ ಹಂಚಿಕೆಯಾಗಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ನಾವು ನೀರನ್ನು ಉಪಯೋಗ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕು ಬ್ಯಾರೇಜ್ ಗಳಿಗೆ ನೀರು ಹೋಗುತ್ತಿಲ್ಲವೆಂದು ಖಂಡ್ರೆಯವರು ಹೇಳಿದ್ದಾರೆ. ನಾನು ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲು ತಿಳಿಸುತ್ತೇನೆ. ಅಡೆತಡೆಗಳಿದ್ದಲ್ಲಿ ಪರಿಹರಿಸಲು ಸೂಚಿಸುತ್ತೇನೆ. 22.37 ಟಿ.ಎಮ್.ಸಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಖಾಶೆಂಪುರ್ ರವರು ಹೇಳಿದ್ದಾರೆ. ನಾವು ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಪ್ರಾಜೆಕ್ಟ್ ಗಳನ್ನು ಅನುಮೋದನೆ ಮಾಡಿದ್ದಿವಿ. ಕೆಲವು ಪ್ರಾಜೆಕ್ಟ್ ಗಳು ಮುಗಿದಿವೆ. ಕೆಲವು ಪ್ರಗತಿಯಲ್ಲಿವೆ. ಗೋದಾವರಿ ನೀರನ್ನು ಖಂಡಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು ಉತ್ತರದಲ್ಲಿ ತಿಳಿಸಿದರು.

ಸದನದಲ್ಲಿ ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ, ಸುಳ್ಳು ಮಾಹಿತಿಗಳನ್ನು, ಆಶ್ವಾಸನೆಗಳನ್ನು ನೀಡಬೇಡಿ. ಸರಿಯಾದ ಪರಿಹಾರಾತ್ಮಕ ಉತ್ತರ ನೀಡಿ, ಸರ್ಕಾರ ನಿಮ್ಮದಿದೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವರನ್ನು ಒತ್ತಾಯಿಸಿದರು.

Monday, December 19, 2022

ಕ್ಯಾನ್ಸರ್ ತಡೆಗೆ ಮುಖ್ಯಮಂತ್ರಿಗಳು ಹೆಚ್ಚು ಒತ್ತು ನೀಡಲಿ: ಶಾಸಕ ಬಂಡೆಪ್ಪ ಖಾಶೆಂಪುರ್

 

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ಮಾತು.

ಬೀದರ್ (ಡಿ.19): ಈ ಮುಂಚೆ ವಿದೇಶಗಳಲ್ಲಿ ಹೆಚ್ಚಾಗಿದ್ದ ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಭಾರತದಲ್ಲಿ ಕೂಡ ಹೆಚ್ಚುತ್ತಿದೆ. ಕ್ಯಾನ್ಸರ್ ಪತ್ತೆಹಚ್ಚಿ ತಡೆಗಟ್ಟುವ ಕಡೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸಲಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಮೊದಲ ದಿನದ ಕಲಾಪದಲ್ಲಿ ಪಾಲ್ಗೊಂಡು, ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿರವರು ತಂದ ಸಂತಾಪ ಸೂಚನೆಗೆ ಬೆಂಬಲಿಸಿ ಮಾತನಾಡಿದ ಅವರು, ಕ್ಯಾನ್ಸರ್ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಹಳ್ಳಿಗಳ ಮಟ್ಟದಲ್ಲಿ ಡಿಟೆಕ್ಷನ್ ಟೆಸ್ಟ್ ಮಾಡಿಸಿ ಪ್ರಿವೆನ್ಷನ್ ಮಾಡಿದರೆ ಒಳ್ಳೆದು ಅನಿಸುತ್ತಿದೆ ಎಂದು  ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ವಿಧಾನ ಸಭೆಯ ಹಾಲಿ ಉಪ ಸಭಾಧ್ಯಕ್ಷರಾಗಿದ್ದ ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ ಮಾಮನಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್, ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆಯ ಮಾಜಿ ಸದಸ್ಯರಾಗಿದ್ದ ಕೋಳೂರು ಬಸವನಗೌಡ, ರಾಜ್ಯದ ಮಾಜಿ ಸಚಿವರುಗಳಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ, ಸುಧೀಂದ್ರರಾವ್ ಕಸ್ಬೆ, ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ. ಬೊಮ್ಮಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್. ಪಾಟೀಲ್ ರವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ವಿಧಾನ ಸಭೆಯ ಹಾಲಿ ಉಪ ಸಭಾಧ್ಯಕ್ಷರಾಗಿದ್ದ ಆನಂದ ಮಾಮನಿರವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ಆಘಾತವಾಗಿದೆ. ಅವರು ಬಹಳ ಸೌಮ್ಯ ವ್ಯಕ್ತಿತ್ವದವರಾಗಿದ್ದರು. ನಮ್ಮ ಜೆಡಿಎಲ್ಫಿ ಆಫೀಸ್ ಅವರ ಆಫೀಸ್ ನ ಪಕ್ಕದಲ್ಲೇ ಇರುವುದರಿಂದ ನಾವು ಬರುವಾಗ ಹೋಗುವಾಗ ಅವರನ್ನು ಮಾತಾಡಿಸಿಕೊಂಡು ಹೋಗ್ತಿದ್ವಿ. ಅವರು ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ ಉದ್ಯಮಿ (ವ್ಯಾಪಾರಸ್ಥರು) ಕೂಡ ಆಗಿದ್ದರು. ಬೇರೆ ಬೇರೆ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರು ಕ್ಯಾನ್ಸರ್ ನಿಂದ ನಿಧನ ಹೊಂದಿರುವುದು ದುಃಖದ ವಿಷಯವಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ರವರು 10 ಬಾರಿ ಉತ್ತರ ಪ್ರದೇಶದಲ್ಲಿ ಶಾಸಕರು, ಒಂದು ಬಾರಿ ವಿಧಾನ ಪರಿಷತ್, 07 ಬಾರಿ ಲೋಕಸಭಾ ಸದಸ್ಯರು ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಅವರು ಕುಸ್ತಿಪಟು ಆಗಿದ್ದದ್ದನ್ನು ಗುರುತಿಸಿ ಅವರನ್ನು ರಾಜಕೀಯಕ್ಕೆ ತರಲಾಗಿತ್ತು. ಕರ್ನಾಟಕದವರೇ ಆದ ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಅವರಿಗೆ ಗೃಹ ಸಚಿವ ಸ್ಥಾನ ನೀಡಲಾಗಿತ್ತು. ಅವರು ಸಾಮಾಜಿಕ ನ್ಯಾಯದ ಪರವಾಗಿ ಬಹಳಷ್ಟು ಹೋರಾಟ ಮಾಡಿದ್ದರು.

ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿರವರು ನಮ್ಮ ರಾಯಚೂರು ಭಾಗದವರು, ರಾಯಚೂರು ಮಾತ್ರವಲ್ಲದೇ ಕಲಬುರಗಿ, ಬೀದರ್ ಕಡೆ ಯಾವಾಗ ಬಂದರು ಕೂಡ ಅವರು ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಈಗಲೂ ಅವರ ಕುಟುಂಬದವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಇನ್ನೂ ರಾಜ್ಯದ ಮಾಜಿ ಸಚಿವರಾದ ಸುಧೀಂದ್ರರಾವ್ ಕಸ್ಬೆರವರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸದಸ್ಯರಾಗಿ ಕೆಲಸ ಮಾಡಿದ್ದರು. ರಾಯಚೂರಿನ ಸ್ಕೌಡ್ಸ್ ಮತ್ತು ಗೈಡ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ವಿಧಾನಸಭೆಯ ಮಾಜಿ ಸದಸ್ಯರಾದ ಎನ್.ಟಿ. ಬೊಮ್ಮಣ್ಣರವರು, ಇತ್ತೀಚೆಗೆ ನಮ್ಮ ಜೊತೆಗೆ ಇದ್ದರು. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೇ ಸ್ಪರ್ಧೆ ಮಾಡಿದ್ದರು. ನಮ್ಮ ಪಕ್ಷದ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದರು. ವಿರೋಧ ಪಕ್ಷದ ನಾಯಕರು ಹೇಳಿದಂತೆ ಅವರು ಬಹಳಷ್ಟು ಸೌಮ್ಯ ಹೃದಯದ ವ್ಯಕ್ತಿಯಾಗಿದ್ದರು. ಇನ್ನೂ ಶ್ರೀಶೈಲಪ್ಪ ಬಿದರೂರುರವರು, ಕಾಂಗ್ರೆಸ್ ಆಫೀಸ್ ನ ಸಭೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇತ್ತೀಚೆಗೆ ನಿಧನರಾದ ಅವರೆಲ್ಲರ ಆತ್ಮಕ್ಕೆ ಶಾಂತಿ ಲಭಿಸಲಿ, ಮೃತರ ಕುಟುಂಬ ವರ್ಗದವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದರು.

Thursday, December 8, 2022

ಖಾಶೆಂಪುರ್: ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್


ಬೀದರ್ (ಡಿ.08): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ನಡೆದ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 6ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪಲ್ಲಕ್ಕಿ ಮಹೋತ್ಸವಕ್ಕೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.

ಖಾಶೆಂಪುರ್ ಪಿ ಗ್ರಾಮದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಖಾಶೆಂಪುರ್ ಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿವಿಧ ಕಲಾ ತಂಡದವರು ಅದ್ದೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಶಾಸಕರು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇಟಗಾ ಮಠದ ಶರಣಯ್ಯ ಸ್ವಾಮಿ ಅರ್ಚಕರು, ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶಿವಾನಂದ ಸ್ವಾಮಿ, ವಿಶ್ವನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಲಕ್ಷ್ಮಣ ಹೊಸಳ್ಳಿ, ಮಂಜುನಾಥ ಬಾಲೆಬಾಯಿ, ಸುನೀಲ್ ಗುಮಾಸ್ತಿ, ಶಾಂತು ಗುಮಾಸ್ತಿ, ಸಿದ್ದು ಖಾಶೆಂಪುರ್, ರಾಜಕುಮಾರ್ ಪೊಲೀಸ್ ಪಾಟೀಲ್, ಶಿವಪ್ಪ ಪೊಲೀಸ್ ಪಾಟೀಲ್, ಮಹೇಶ ಗುಮಾಸ್ತಿ, ಭಜರಂಗ ತಮಗೊಂಡ, ಮೋಹನ್ ಸಾಗರ್, ನರಸಪ್ಪ ಬಸಗೊಂಡ, ಚಂದ್ರಶೇಖರ್ ಪಾಟೀಲ್, ನವನಾಥ ಬಾಲೆಬಾಯಿ, ಕೃಷ್ಣ ಖಾಶೆಂಪುರ್, ಚಿದಾನಂದ ಖಾಶೆಂಪುರ್, ರವಿ ಬಾಲೆಬಾಯಿ, ಶಿವಕುಮಾರ್ ಬಾಲೆಬಾಯಿ, ಸುನೀಲ್ ಪಟ್ನೆ, ದೂಳಪ್ಪ ಪಟ್ನೆ, ಆನಂದ ತಮಗೊಂಡ, ಬಕ್ಕಪ್ಪ ಸುತಾರ್, ಬಾಬು ಗುಮಾಸ್ತಿ, ಸತೀಶ್ ಗುಮಾಸ್ತಿ, ಶಿವರಾಜ್ ಹಳ್ಳೊಳ್ಳಿ, ಬಸವರಾಜ ಬಂತಿಗಿ, ರಮೇಶ ಬಾಲೆಬಾಯಿ ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಶಾಸಕರು
#Bandeppa #Khashempur #Bidar #South #MLA

Monday, December 5, 2022

ಜಿಲ್ಲಾ ಮಟ್ಟದಲ್ಲೊಂದು ಪ್ಲಾನಿಟೋರಿಯಂ ಅಗತ್ಯ: ಶಾಸಕ ಬಂಡೆಪ್ಪ ಖಾಶೆಂಪುರ್


ಬೀದರ್ (ಡಿ.05): ಪ್ರತಿ ಜಿಲ್ಲೆಗೆ ಒಂದರಂತೆ ಜಿಲ್ಲಾ ಮಟ್ಟದಲ್ಲೊಂದು ಪ್ಲಾನಿಟೋರಿಯಂ ಮಾಡುವುದು ಅಗತ್ಯವಾಗಿದೆ. ಅದರಿಂದ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಲಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ 'ಶಾಲೆಯ ಅಂಗಳದಲ್ಲೆ ತಾರಾಲಯ' ಯೋಜನೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಚಾರಿ ತಾರಾಲಯ ಎಂಬ ಯೋಜನೆ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಸಂಚಾರಿ ತಾರಾಲಯ ಎಂಬ ಯೋಜನೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳಲ್ಲಿನ ಮಕ್ಕಳಿಗೆ ತಾರಾಲಯ ಪರಿಚಯಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿಜ್ಞಾನ ವಿಭಾಗದಿಂದ ಒಳ್ಳೆಯ ಕೆಲಸವಾಗುತ್ತಿದೆ. ಅಬ್ದುಲ್ ಕಲಾಂರವರು ಗ್ರಾಮೀಣ ಭಾಗದಲ್ಲಿ ಜನಿಸಿ ವಿಜ್ಞಾನಿಯಾಗಿರುವುದು ಅವರಲ್ಲಿರುವ ಶಕ್ತಿ ಸಾಮರ್ಥ್ಯದಿಂದಲೇ ಸಾಧ್ಯವಾಗಿದೆ. ಅದರಂತೆಯೇ ಅಂಬೇಡ್ಕರ್ ರವರು ತಮ್ಮ ಶಕ್ತಿ ಸಾಮರ್ಥ್ಯದಿಂದಲೇ ಭಾರತ ಸಂವಿಧಾನ ರಚಿಸಿದ್ದಾರೆ ಅಂತವರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಸಾಗಬೇಕು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ತಾರಾಲಯದಂತಹ ಯೋಜನೆಗಳಿಂದ ಸಾಧ್ಯವಾಗುತ್ತದೆ. ಕನಿಷ್ಠ ಪಕ್ಷ ಜಿಲ್ಲಾ ಮಟ್ಟದಲ್ಲಿ ಒಂದೊಂದು ತಾರಾಲಯಗಳನ್ನು ಸ್ಥಾಪಿಸಬೇಕು ಎಂಬುದು ನನ್ನ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಮುಖ್ಯ ವ್ಯವಸ್ಥಾಪಕ ವೀರೇಶ ಹಂಚಿನಾಳರವರು, ಸಂಚಾರಿ ತಾರಾಲಯ ಎಂದರೆ ಶಾಲೆಯ ಅಂಗಳದಲ್ಲಿಯೇ ಮಕ್ಕಳಿಗೆ ತಾರಾಲಯ ತೋರಿಸುವ ಯೋಜನೆಯಾಗಿದೆ. ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಿಜವಾದ ನಕ್ಷತ್ರಗಳು ಇದ್ದಂತೆ. ಅಂತವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಂತಹ ಯೋಜನೆ ರೂಪಿಸಿದೆ. ಮಕ್ಕಳಲ್ಲಿ ವೈಜ್ಞಾನಿಕ ಪ್ರವೃತ್ತಿ ಬೆಳೆಸುವ ಕೆಲಸವನ್ನು ಸಂಚಾರಿ ತಾರಾಲಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿ ಇಂದುಮತಿ, ಯೋಜನೆಯ ಮುಖ್ಯ ವ್ಯವಸ್ಥಾಪಕ ವೀರೇಶ ಹಂಚಿನಾಳ, ನಿವೃತ್ತ ಕುಲಪತಿ ಬಿ.ಜಿ ಮೂಲಿಮನಿ, ಅಗಸ್ತ್ಯ ಫೌಂಡೇಶನ್ ನ ಮುಖ್ಯಸ್ಥ ಬಾಬುರಾವ್ ಸಲಾಸರೆ, ಎಸ್ಡಿಎಮ್ಸಿ ಅಧ್ಯಕ್ಷ ಸೂರ್ಯಕಾಂತ್ ಜ್ಯೋತಿ, ಪ್ರಮುಖರಾದ ಭಜರಂಗ ತಮಗೊಂಡ, ಮಂಜುನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಸುನೀಲ್ ಗುಮಾಸ್ತಿ, ಸಂತೋಷ ಗುಮಾಸ್ತಿ, ನಾಗೇಶ ಪಾಟೀಲ್, ಸಚ್ಚಿದಾನಂದ, ಮಚೇಂದ್ರ ಮುತ್ತಂಗಿ, ಸುಪ್ರಿಯಾ, ದಿನೇಶ್, ವಿಶ್ವನಾಥ, ತುಕ್ಕರಾಮ್, ಸದಾನಂದ, ಸಂಜುಕುಮಾರ್, ದೀಪಾ, ಶಶಿಕಲಾ, ಅಶೋಕ್ ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಶಾಸಕರು #Bandeppa #Khashempur #Bidar #South #MLA

Monday, November 28, 2022

ಖಾಶೆಂಪುರ್: ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ; ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ


ಬೀದರ್ (ನ.28): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ (ಚಿದಾನಂದ ಸ್ವಾಮೀಜಿ) ರವರ ನೂತನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಇದೇ ವೇಳೆ ಗ್ರಾಮದ ಪ್ರಮುಖರೊಂದಿಗೆ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಇದೇ ಡಿಸೆಂಬರ್ 04 ರಿಂದ 08ನೇ ತಾರೀಖಿನವರೆಗೆ ನಡೆಯಲಿರುವ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವದ ಬಗ್ಗೆ ಚರ್ಚೆ ನಡೆಸಿ, ದೇವಸ್ಥಾನದ ಕಟ್ಟಡ ಕಾಮಗಾರಿ, ಜಾತ್ರಾ ಮಹೋತ್ಸವದ ಸಿದ್ದತೆಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಮಠಾಣಾ ಗವಿಮಠದ ಶ್ರೀ ಶ್ರೀ ಶ್ರೀ ಷ.ಬ್ರ  108 ಸದ್ಗುರು ರಾಚೋಟೇಶ್ವರ ಶಿವಾಚಾರ್ಯ ಮಹಾರಾಜರು, ಇಟಗಾ ಮಠದ ಶ್ರೀ ಶರಣಯ್ಯ ಸ್ವಾಮಿ ಅರ್ಚಕರು, ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶ್ರೀ ಶಿವಾನಂದ ಸ್ವಾಮೀಜಿರವರು, ಮಂಜುನಾಥ ಶಾಸ್ತ್ರಿ, ಧನಂಜಯ ಶಾಸ್ತ್ರಿ, ವಿಜಯಕುಮಾರ್ ಶಾಸ್ತ್ರಿ, ಚಿದಾನಂದ ಸ್ವಾಮಿ, ಬಸಯ್ಯಸ್ವಾಮಿ, ಸಿದ್ದಯ್ಯ ಸ್ವಾಮಿ, ಚಿದಾನಂದ ಸ್ವಾಮಿ, ಪ್ರಮುಖರಾದ ವಿಶ್ವನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಶಿವಪ್ಪ ಪೊಲೀಸ್ ಪಾಟೀಲ್, ರಾಜಕುಮಾರ ಪೊಲೀಸ್ ಪಾಟೀಲ್, ಭಜರಂಗ ತಮ್ಗೊಂಡ, ಆನಂದ ತಮ್ಗೊಂಡ, ಬಕ್ಕಪ್ಪ ಸುತಾರ್, ದೂಳಪ್ಪ ಪಟಣ್, ನರಸಪ್ಪ ಬಸ್ಗೊಂಡ, ಬಾಬು ಗುಮಾಸ್ತಿ, ಸತೀಶ್ ಗುಮಾಸ್ತಿ, ಮಂಜುನಾಥ ಬಾಲೆಬಾಯಿ, ಶಿವರಾಜ್ ಹಳ್ಳೊಳ್ಳಿ, ಬಸವರಾಜ ಬಂತಿಗಿ, ರಮೇಶ ಬಾಲೆಬಾಯಿ ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur ಬಂಡೆಪ್ಪ ಖಾಶೆಂಪುರ್ ಅಭಿಮಾನಿಗಳ ಬಳಗ #ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಶಾಸಕ #Bandeppa #Khashempur #Bidar #South #MLA

Sunday, November 27, 2022

ಬೀದರ್ ಕನ್ನಡ ಶ್ರೇಷ್ಠ ಮತ್ತು ವಿಶೇಷ ಕನ್ನಡವಾಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್


ಬೀದರ್ (ನ.27): ಬೀದರ್ ಕನ್ನಡ ಶ್ರೇಷ್ಠವಾದ ಕನ್ನಡವಾಗಿದೆ. ಪಕ್ಕದಲ್ಲೇ ತೆಲಂಗಾಣ, ಮಹಾರಾಷ್ಟ್ರ ರಾಜ್ಯವಿದ್ದು, ತೆಲಗು, ಮರಾಠಿಗಳ ನಡುವೆ ಕೂಡ ಬೀದರ್ ನಲ್ಲಿರುವ ನಾವು ನಮ್ಮ ತನವನ್ನು ಬಿಟ್ಟುಕೊಡದೆ ನಮ್ಮ ಭಾಷೆಯನ್ನು ಉಳಿಸಿ, ಬೆಳಸಿಕೊಂಡು ಸಾಗುತ್ತಿದ್ದೇವೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಗಂಗನಪಳ್ಳಿ ಪರಿವಾರ, ಸಿಕಿಂದ್ರಾಪೂರ ಪರಿವಾರ ಬೀದರ್ ಗಳ ಸಂಯುಕ್ತಾಶ್ರಯದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಭಾನುವಾರ ನಡೆದ ಶಿಕ್ಷಕ - ಸಾಹಿತಿ ಡಾ. ಸಂಜುಕುಮಾರ ಅತಿವಾಳೆ ಸಂಪಾದಿಸಿರುವ ಭಾವಗಂಗೆ ಕೃತಿ ಲೋಕಾರ್ಪಣೆ ಹಾಗೂ ಸಾಹಿತಿ - ಕಲಾವಿದರ ಸಂಗಮ ಸಾಂಸ್ಕೃತಿಕ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದರ್ ಭಾಷೆಯೇ ದೊಡ್ಡ ಸಾಹಿತ್ಯವಾಗಿದೆ. ಇಲ್ಲಿನ ಕನ್ನಡ ವಿಶೇಷ ಕನ್ನಡವಾಗಿದೆ ಎಂದರು.

ಬೀದರ್ ಭಾಗದ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಭಿಯಾನ ಶುರು ಮಾಡಬೇಕಾಗಿದೆ. ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ದೊಡ್ಡಮಟ್ಟದ ಅಭಿಯಾನ ಮಾಡಬೇಕಾಗಿದೆ. ನಾವು ಬೆಂಗಳೂರಿನಂತ ಮಹಾನಗರಗಳ ಕಡೆಗೆ ಹೋಗುತ್ತಿದ್ದೇವೆ. ಆ ಮೂಲಕ ಬೀದರ್ ಭಾಷೆಯನ್ನು ಮರೆಯಿತ್ತಿದ್ದೇವೆ. ಬೀದರ್ ಕನ್ನಡ ದೊಡ್ಡ ಸಾಹಿತ್ಯವಾಗಿದೆ. ಅದನ್ನು ಉಳಿಸಿಕೊಂಡು ಸಾಗಬೇಕಾಗಿದೆ.

ಕನ್ನಡ ಸಾಹಿತ್ಯ, ಕನ್ನಡ ಭಾಷೆ ಉಳಿಸಿದ ಶ್ರೇಯಸ್ಸು ಯಾರಿಗಾದರೂ ಸಿಗುತ್ತದೆ ಎಂದರೇ ಅದು ಬೀದರ್ ನವರಿಗೆ ಸಲ್ಲುತ್ತದೆ. ಸಾಹಿತ್ಯದ ಜೊತೆ ಜೊತೆಗೆ ಬೀದರ್ ಭಾಷೆ ಉಳಿಸುವುದು ಸಹ ನಮ್ಮೆಲ್ಲರ ದೊಡ್ಡಮಟ್ಟದ ಕರ್ತವ್ಯವಾಗಿದೆ. ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡೋಣ. ಸಾಹಿತಿಗಳು ಬೀದರ್ ಭಾಷೆ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಮಾತನಾಡಿ, ಸಾಹಿತಿ ಗಂಗನಪಳ್ಳಿರವರು ಸಾಹಿತ್ಯಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ. ಅವರು ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸಾಹಿತ್ಯದ ಸೇವೆ ಇವತ್ತು ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಒಬ್ಬ ಹಿರಿಯ ಜೀವಿಯ ಸಾಹಿತ್ಯ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಎಂಬತ್ತೇರಡು ಜನ ಸಾಹಿತಿಗಳು ಮುನ್ನುಡಿ, ಇನ್ನೂಡಿ ಬರೆದಿರುವ ಈ ಪುಸ್ತಕವನ್ನು ಎಲ್ಲರೂ ಖರೀದಿಸಿ ಓದಬೇಕು. ಆ ಮೂಲಕ ಸಾಹಿತಿಗಳಿಗೆ ಶಕ್ತಿ ತುಂಬಬೇಕೆಂದು ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಗಂದಗೆ, ಭಾವಗಂಗೆ ಕೃತಿಯ ಸಂಪಾದಕ ಸಂಜೀವಕುಮಾರ್ ಅತಿವಾಳೆರವರು ಸೇರಿದಂತೆ ಅನೇಕರು ಮಾತನಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಹಿರಿಯ ಸಾಹಿತಿ ಎಂ.ಜಿ ಗಂಗನಪಳ್ಳಿ, ಡಾ. ರಾಜಶೇಖರ ಜಮದಂಡಿ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಗುರಮ್ಮ ಸಿದ್ದಾರೆಡ್ಡಿ, ಪುಣ್ಯವತಿ ವಿಸಾಜಿ, ಅಮೃತರಾವ್ ಚಿಮಕೋಡೆ, ಸುರೇಶ ಚನ್ನಶೆಟ್ಟಿ, ಕವಿತಾ ಸ್ವಾಮಿ, ಡಾ. ಶಾಮರಾವ್ ನೆಲವಾಡೆ, ರೇಣುಕಾ ಮಳ್ಳಿ, ಲಕ್ಷ್ಮಣ ಮೇತ್ರೆ ಸೇರಿದಂತೆ ಅನೇಕರಿದ್ದರು.

ವಿವಿಧ ಪಕ್ಷ ತೊರೆದು ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಕಾರ್ಯಕರ್ತರು


ಬೀದರ್ (ನ.27): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗದಲ ಗ್ರಾಮದ ವಿವಿಧ ಪಕ್ಷಗಳ ಕಾರ್ಯಕರ್ತರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. 

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಭಾನುವಾರ ಬೆಳಗ್ಗೆ ಜೆಡಿಎಸ್ ಶಾಲು ಹೊದಿಸುವ ಮೂಲಕ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು‌.

ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು,  ಜೆಡಿಎಸ್ ಪಕ್ಷ ರೈತರ, ಬಡವರ, ಶ್ರಮಿಕರ ಪರವಾಗಿರುವ ಪಕ್ಷವಾಗಿದೆ. ತಾವು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯವಾಗಿದೆ. ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನೂತನ ಕಾರ್ಯಕರ್ತರಿಗೆ ಕರೆ ನೀಡಿದರು.

ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ನಾಡಿನ ಒಳಿತಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಏನೆಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂಬುದನ್ನು ಸಹ ಮನೆಮನೆಗೂ ಮುಟ್ಟಿಸುವ ಕೆಲಸ ಮಾಡಬೇಕು.

ತಳ ಹಂತದಿಂದ ಪಕ್ಷ ಸಂಘಟನೆ ಮಾಡಬೇಕು. ಮನೆಮನೆಗೂ ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ, ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಹೇಳಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗಿದೆ. ಎಲ್ಲರೂ ಸೇರಿ ಪಕ್ಷವನ್ನು ಬಲಿಷ್ಠಗೊಳಿಸೋಣ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಬಗದಲ್ ನ ನೂತನ ಜೆಡಿಎಸ್ ಕಾರ್ಯಕರ್ತರಾದ ಪ್ರಕಾಶ, ಸಿಮನ್, ವಿಲ್ಸನ್, ಶ್ರೀಮಂತ್, ರಮೇಶ್, ಸಾಲೋಮನ್, ಜೀವನ್, ಸುನೀಲ್, ರಾಜು, ಪ್ರಕಾಶ (ದುಬೈ), ಸುನೀಲ್ ಸಿರ್ಸಿ, ಸಂಜುಕುಮಾರ್, ಓಂಕಾರ, ರಾಹುಲ್, ರತನ್ ಪ್ರಕಾಶ್, ಪ್ರಲಾದ್, ಗುಂಡಪ್ಪಾ, ವಿಜಯಕುಮಾರ್, ಸಂತೋಷ್, ಆಕಾಶ್, ನೌನಾಥ್, ಪ್ರಕಾಶ್, ಶ್ರೀಮಂತ, ತುಕ್ಕರಾಮ್, ಮಚೇಂದ್ರ, ಧನರಾಜ್, ಬಸವರಾಜ ಸೇರಿದಂತೆ ಅನೇಕರಿದ್ದರು.

Monday, November 21, 2022

ಮಹಾತ್ಮರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.21): ಮಹಾತ್ಮರ ಇತಿಹಾಸ ತಿಳಿದುಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸೋಣ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ಪಟ್ಟಣದ ಶ್ರೀಬೊಮ್ಮಗೊಂಡೇಶ್ವರ ಚೌಕ್ ಹತ್ತಿರ ಸೋಮವಾರ ನಡೆದ ದಾಸ ಶ್ರೇಷ್ಠ ಭಕ್ತ ಶ್ರೀ ಕನಕದಾಸರ 535ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಹಾತ್ಮರ ಜೀವನ ಚರಿತ್ರೆ, ಇತಿಹಾಸವನ್ನು ಓದಿ ತಿಳಿದುಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದರು.
ಮಹಾತ್ಮರ ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳುವ ಔಷದಿ ಇದ್ದರೆ ಒಳ್ಳೆಯದಾಗುತ್ತಿತ್ತು. ನಾವು ಮಹಾತ್ಮರ ಇತಿಹಾಸವನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಬಿಡುತ್ತಿದ್ದೇವೆ. ಇತಿಹಾಸ ನೆನಪಿನಲ್ಲಿ ಇರುವಂತೆ ಮಾಡುವ ಯಾವುದಾದರೊಂದು ಔಷಧಿ ಕಂಡು ಹಿಡಿಯಬೇಕಾಗಿದೆ.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯರವರು ಮನುಷ್ಯರಾಗಿ ಹುಟ್ಟಿ ಮಹಾತ್ಮರಾಗಿದ್ದಾರೆ‌. ಅವರೆಲ್ಲರೂ ಒಂದೇ ಜನ್ಮದಲ್ಲಿ ಹೆಸರು ಮಾಡಿದ್ದಾರೆ. ಅವರ ಇತಿಹಾಸ ನಾವು ಓದುತ್ತಿದ್ದೇವೆ. ನಾವು ಮಹಾತ್ಮರ ಮೂರ್ತಿಗಳನ್ನು ನಿರ್ಮಾಣ ಮಾಡಿ ಜಯಂತಿ ಹೆಸರಲ್ಲಿ ಕುಣಿದುಕುಪ್ಪಳಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಅವರ ತತ್ವ ಸಿದ್ದಾಂತಗಳನ್ನು ಮರೆತುಬಿಡುತ್ತಿದ್ದೇವೆ‌ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.

ಚಿಟ್ಟಗುಪ್ಪಾ ಮಾದರಿ ತಾಲೂಕು ಮಾಡಲು ಪ್ರಯತ್ನಿಸುತ್ತೇವೆ:
ಇತ್ತೀಚೆಗೆ ಚಿಟ್ಟಗುಪ್ಪಾ ಹೊಸ ತಾಲೂಕು ಆಗಿದೆ. ನಾವು ಹೊಸ ತಾಲೂಕಿನ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕಾಗಿದೆ. ಚಿಟ್ಟಗುಪ್ಪಾ ತಾಲೂಕಿನ ಬಹುತೇಕ ಹಳ್ಳಿಗಳು ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇನ್ನೂ ಅನೇಕ ಹಳ್ಳಿಗಳು ರಾಜಶೇಖರ ಪಾಟೀಲ್ ರವರ ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತವೆ. ರಾಜಶೇಖರ ಪಾಟೀಲ್ ರವರು ಮತ್ತು ನಾನು ಇಬ್ಬರು ಸೇರಿ ಮಾದರಿ ತಾಲೂಕು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ. ಈ ವಿಷಯದ ಕುರಿತು ಅವರೊಂದಿಗೆ ಜಂಟಿ ಸಭೆ ನಡೆಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಗುರುಪೀಠ ತಿಂತಣಿಯ ಪರಮಪೂಜ್ಯ ಶ್ರೀ ಚಿಕ್ಕಲಿಂಗ ಬೀರದೇವರು, ಪರಮಪೂಜ್ಯರಾದ ರಾಜಪ್ಪ ಮುತ್ಯ ಕರಕನಳ್ಳಿ, ಶ್ರೀ ಮಲ್ಲಯ್ಯ ಮುತ್ಯ, ಮಚೇಂದ್ರ ಮುತ್ಯರವರು ವಹಿಸಿದ್ದರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಜಶೇಖರ ಬಿ ಪಾಟೀಲ್, ಉಪನ್ಯಾಸಕ ಡಾ. ಶರಣಪ್ಪ ಎಸ್ ಮಲಗೊಂಡ, ಪ್ರಮುಖರಾದ ಅಮೃತರಾವ್ ಚಿಮಕೋಡೆ, ಮಾಲಾಶ್ರೀ ಶಾಮರಾವ್ ಬುತಾಳೆ, ಸೌಭಾಗ್ಯವತಿ ಅಶೋಕಸ್ವಾಮಿ, ಬಸವರಾಜ ಮಾಳಗೆ, ಸಂತೋಷ ಜೋಳದಪಕೆ, ಶರಣಪ್ಪ ದಸ್ತಗೊಂಡ, ಭೀರಪ್ಪ ಕೊಂಡಬಲ್, ರಾಮಚಂದ್ರ ಒಳಕಿಂಡಿ, ಪಂಡಿತ್ ಕಲ್ಯಾಣಿ, ಶರತ್ ನಾರಣಪೇಟಕರ್, ಪ್ರಲಾದ್ ಪೂಜಾರಿ, ಬಸವರಾಜ ಮೊಳ್ಕೇರಾ, ಸತೀಶ್ ರಾಂಪೂರೆ, ಶಿವರಾಜ ಚಿನ್ಕೇರಾ, ಮಲ್ಲಪ್ಪ ಮನ್ನಾಎಖೇಳ್ಳಿ, ಅಶೋಕ ಚಳ್ಕಾಪೂರೆ, ಅಶೋಕ ಕಂಡಗೊಂಡ, ಅಶೋಕ ಸೊಂಡೆ, ಸಚಿನ್ ಕಲ್ಲೂರ, ಗುಂಡಪ್ಪ, ಪದ್ಮಾವತಿ ಪಾಟೀಲ್, ರೇಖಾ ಬಾಚಾ, ಮನೋಜ್, ದಿಲೀಪ್, ವಿಶಾಲ್ ಬೋರಾಳೆ, ಅನಿಲ್ ಕುಮಾರ್ ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur #Bandeppa #Khashempur #ಬಂಡೆಪ್ಪ #ಖಾಶೆಂಪುರ್

Thursday, November 10, 2022

ಚಾಂಗಲೇರಾ ಪುಣ್ಯಕ್ಷೇತ್ರವಾಗಿದೆ, ವೀರಭದ್ರೇಶ್ವರ ಮಹಿಮೆ ಅಪಾರವಾಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.10): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಪುಣ್ಯಕ್ಷೇತ್ರವಾಗಿದೆ. ಇಲ್ಲಿರುವ ವೀರಭದ್ರೇಶ್ವರ ದೇವರ ಮಹಿಮೆ ಅಪಾರವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲದೇ ಪಕ್ಕದ ರಾಜ್ಯಗಳಾದ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಲಕ್ಷಾಂತರ ಜನ ಭಕ್ತರು ವೀರಭದ್ರೇಶ್ವರ ದೇವರ ಸನ್ನಿಧಿಗೆ ಬರುತ್ತಾರೆ ಎಂದರೇ ಅದು ವೀರಭದ್ರೇಶ್ವರ ದೇವರ ಮಹಿಮೆಯಿಂದ ಸಾಧ್ಯವಾಗಿದೆ ಎಂದರು.
ಪುರಾಣ, ಪ್ರವಚನಗಳನ್ನು ನಾವೆಲ್ಲರೂ ಸಮಯ ಸಿಕ್ಕಾಗಲೆಲ್ಲ ಕೇಳುತ್ತಿರಬೇಕು. ಯಾಕೆಂದರೆ, ಯಾವ ಗುರುಗಳ ಮಾತು ಯಾವ ಸಮಯದಲ್ಲಿ ಯಾರ ಮನಸ್ಸು ಪರಿವರ್ತನೆ ಮಾಡುತ್ತೋ, ಯಾರ ವ್ಯಕ್ತಿತ್ವ ಸುಧಾರಣೆಗೆ ಕಾರಣವಾಗುತ್ತೊ ಗೋತ್ತಾಗುವುದಿಲ್ಲ. ಅಂತ ಶಕ್ತಿ ಪುರಾಣ, ಪ್ರವಚನಗಳಲ್ಲಿದೆ. ಈ ಭಾಗದಲ್ಲಿ ವೀರಭದ್ರೇಶ್ವರ ದೇವರ ಉದ್ಭವ ಲಿಂಗವಿದೆ. ಇದೊಂದು ಪುಣ್ಯ ಕ್ಷೇತ್ರವಾಗಿದೆ. ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ ಎಂದರೆ ಅದು ವೀರಭದ್ರಶ್ವರ ಶಕ್ತಿಯಿಂದ ಸಾಧ್ಯವಾಗಿದೆ.
ಈ ಪುಣ್ಯಕ್ಷೇತ್ರದ ಅಭಿವೃದ್ಧಿಗಾಗಿ ಐದು ಕೋಟಿ ರೂ. ಅನುದಾನ ಒದಗಿಸಿಕೊಡುತ್ತೇನೆ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗಾಗಲೇ ಸುಮಾರು ಮೂರುವರೆ ಕೋಟಿ. ರೂ. ಒದಗಿಸಿಕೊಟ್ಟಿದ್ದೇನೆ. ಇನ್ನೂ ಸುಮಾರು ಒಂದುವರೆ ಕೋಟಿ ರೂ. ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ನಾವೆಲ್ಲರೂ ಸೇರಿ ಈ ರೀತಿಯ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ.
ಸಮಾಧಾನ, ನೆಮ್ಮದಿ, ಸಂತೃಪ್ತಿ ಸಿಗುತ್ತದೆ ಎಂದು ಜನರು ದೇವಸ್ಥಾನಗಳಿಗೆ ಬರುತ್ತಾರೆ. ದೇವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬುದು ಭಕ್ತರ ಆಶಯವಾಗಿರುತ್ತದೆ. ನಾವು ನಾಡಿಗಾಗಿ, ನಾಡಿನ ಬಡಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ. ಜಾತಿ, ಮತ ಬೇಧ ಭಾವ ಮರೆತು, ನಮಗೆ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡೆಸಿಕೊಂಡು ನಾಡಿನ ಒಳಿತಿಗಾಗಿ ಕೆಲಸ ಮಾಡಬೇಕು. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು‌ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು‌.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಡೋಳಾ ಕಟ್ಟಿಮಠ ಸಂಸ್ಥಾನ ಮೇಹಕರ್ ಮಠದ ಪರಮಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು, ಹುಮಾನಾಬಾದ್  ಹಿರೇಮಠ ಸಂಸ್ಥಾನದ ಪರಮಪೂಜ್ಯ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು, ಬಸವಕಲ್ಯಾಣದ ತ್ರಿಪುರಾಂತ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ವಹಿಸಿದ್ದರು. ದೇವಸ್ಥಾನದ ಆಡಳಿತ ಅಧಿಕಾರಿ ಅನಂತ ಕುಲಕರ್ಣಿ, ಕೆಇಬಿ ಎಇಇ ಅನಿಲ್ ಕುಮಾರ್ ಪಾಟೀಲ್, ಸಂತೋಷ ರಾಸೂರ, ಸಂಜುಕುಮಾರ್ ಜುನ್ನಾ, ಕೃಷ್ಣ ಪಾಂಚಾಳ, ಶೈಲೇಂದ್ರ ಕವಡಿ, ಮಲ್ಲಪ್ಪ ಮನ್ನಾಎಖೇಳ್ಳಿ, ರಾಜಶೇಖರ ದಾನ, ನೀಲಕಂಠ, ಮಲ್ಲಪ್ಪ, ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #Bandeppa #Khashempur Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Kashempur Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Public Leader Bandeppa Kashempur

Sunday, November 6, 2022

ಬೇಮಳಖೇಡ ಅಪಘಾತ ಪ್ರಕರಣ: ಉಡಮನಳ್ಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್

ಉಡಮನಳ್ಳಿ ಗ್ರಾಮದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.06): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿಯ ಆರು ಜನ ಮಹಿಳಾ ಕಾರ್ಮಿಕರ ಮನೆಗಳಿಗೆ ಮತ್ತು ಕಾಡವಾದದ ಒಬ್ಬ ಮಹಿಳಾ ಕಾರ್ಮಿಕರ ಮನೆಗೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಮೃತ ಮಹಿಳಾ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಮನಳ್ಳಿ ಗ್ರಾಮಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಶಾಸಕರು, ಮೃತರ ಮನೆಗಳಿಗೆ ಭೇಟಿ ನೀಡುವ ಮುಂಚೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಹಳ್ಳಿಯ ಜನರು ಯಾವ ಕಾರಣಕ್ಕಾಗಿ ಬೇರೆ ಬೇರೆ ಊರುಗಳಿಗೆ ಕೆಲಸಗಳಿಗೆ ಹೋಗ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಪಂಚಾಯತಿಗೆ ಬಂದಿದ್ದೇನೆ ಎಂದರು.
ಬೇಮಳಖೇಡದ ಬಳಿ ಸಂಭವಿಸಿದ ಅಪಘಾತ ನನಗೆ ನೋವುಂಟು ಮಾಡಿದೆ. ನನ್ನ ಕ್ಷೇತ್ರದ ಏಳು ಜನರು ಈ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯತಿಯಿಂದ ನೀಡುವ ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ನಡೆಯಬಾರದಿದ್ದ ಘಟನೆ ನಡೆದಿದೆ:
ಬೇಮಳಖೇಡದ ಬಳಿ ನಡೆಯಬಾರದಿದ್ದ ಘಟನೆ ನಡೆದು ಹೋಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಾನು ಸಾಧ್ಯವಾದಷ್ಟು ವೈಯಕ್ತಿಕ ಧನಸಹಾಯ ಮಾಡಿದ್ದೇನೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಗಾಯಾಳುಗಳಿಗೂ ವೈಯಕ್ತಿಕ ಧನಸಹಾಯ ಮಾಡುತ್ತೇನೆ.
ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳ ಕುಟುಂಬಕ್ಕೆ ಸರ್ಕಾರದಿಂದ ಯಾವ್ಯಾವ ರೀತಿಯ ಸೌಲಭ್ಯ ಒದಗಿಸಿಕೊಡಲು ಸಾಧ್ಯವಾಗುತ್ತದೆಯೋ ಆ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ. ಶಾಸಕನಾಗಿ ನಾನು ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ.
ಮೃತರ ಕುಟುಂಬದಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ವೈಯಕ್ತಿಕ ಸಹಾಯ ಮಾಡುತ್ತೇನೆ. ಸರ್ಕಾರದಿಂದ ಕೂಡ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಎಲ್ಲರೂ ಸೇರಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಜಮೀನಿಗೆ 24 ತಾಸು ಕರೆಂಟ್:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಜಮೀನುಗಳಿಗೆ 24 ಗಂಟೆ ವಿದ್ಯುತ್ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಪಕ್ಕದ ರಾಜ್ಯದಲ್ಲಿ ದಿನಪೂರ್ತಿ ರೈತರ ಜಮೀನುಗಳಿಗೆ ವಿದ್ಯುತ್ ನೀಡ್ತಿದ್ದಾರೆ. ನಾವು ಯಾಕ್ ನೀಡಬಾರದು ಎಂಬುದು ನನ್ನ ಯೋಚನೆಯಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

ಮೃತರ ಮನೆಗಳಿಗೆ ಭೇಟಿ ವೈಯಕ್ತಿಕ ಧನಸಹಾಯ, ಸಾಂತ್ವನ:
ಬೇಮಳಖೇಡದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿ ಗ್ರಾಮದ ಮಹಿಳಾ ಕಾರ್ಮಿಕರಾದ ಗುಂಡಮ್ಮಾ, ರುಕ್ಕಮ್ಮಾ, ಮಂಜುಳಾ, ಜಗದೇವಿ, ಈಶ್ವರಮ್ಮಾ, ಪಾರ್ವತಿ, ಪ್ರಭಾವತಿರವರ ಮನೆಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು. ಅಲ್ಲಿಯೇ ಇದ್ದ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಸುನೀಲ್ ಎಂಬ ಯುವಕನ ಮನೆಗೆ ಕೂಡ ಭೇಟಿ ನೀಡಿ, ಯುವಕನಿಗೆ ಬ್ರಿಮ್ಸ್ ನಲ್ಲಿಯೇ ಚಿಕಿತ್ಸೆ ವ್ಯವಸ್ಥೆ ಮಾಡಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು. ಬಳಿಕ ಕಾಡವಾದಕ್ಕೆ ಭೇಟಿ ನೀಡಿ, ಬೇಮಳಖೇಡದ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆಯ ಗಂಡನ ಮನೆಯವರನ್ನು ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ ಎನ್ ಚೌಕಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಚಾಂಗಲೇರಾ, ಮುಖಂಡರಾದ ಸಂತೋಷ ರಾಸೂರ, ಮಲ್ಲಪ್ಪಾ ಮನ್ನಾಎಖೇಳ್ಳಿ, ಬಾಬುರಾವ್ ಬೈರೆ, ಗುಂಡಪ್ಪ ಬಂಡಿಕಾರ್, ಸುಧಾಕರ್ ನಿಂಗ್ ನಾಯಕ, ರವಿ, ಶ್ರೀಮಂತ, ರಿಯಾಜ್, ವಿನೋದ್, ಅಶೋಕರೆಡ್ಡಿ ಗಾಳಿ, ಶಿವಕುಮಾರ್, ಅಶೋಕ್ ವಡ್ಡರ್, ಮಾರುತಿ ನಾಟೀಕರ್, ಗುಂಡಪ್ಪ ಕುರುಮಣ್ಣನವರ್, ಅಮೃತ್ ಕುರಕೋಟಿ, ನರಸಿಂಗ್ ಬಂಟ್, ಬೀಮ್ಶಾ ಐನಳ್ಳಿ, ಅನಿಲ್, ಸಂತೋಷ, ಸೂರ್ಯಕಾಂತ್ ದಂಡಿ ಸೇರಿದಂತೆ ಅನೇಕರಿದ್ದರು.

+++++++++++++++++++

ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯರ ಆರೋಗ್ಯ ವಿಚಾರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.06): ಬೇಮಳಖೇಡದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿಯ ಮಹಿಳಾ ಕೂಲಿ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದ ಬಳಿಕ, ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಬ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಕೂಲಿ ಕಾರ್ಮಿಕರಾದ ಮೀನಾಕ್ಷಿ, ಜಯಶೀಲಾ, ಗೋದಾವರಿ, ಶಕುಂತಲಾ, ಶುಬ್ಬಮ್ಮ, ಪಾರ್ವತಿ, ಸರಸ್ವತಿ, ಮಾರತಮ್ಮ, ಬೆಬಿ ಎಂಬುವವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯದಿಂದ ಇರುವಂತೆ ತಿಳಿಸಿದರು.
ಇದೇ ವೇಳೆ ಗಾಯಾಳುಗಳ ಕುಟುಂಬದವರಿಗೆ ವೈಯಕ್ತಿಕ ಧನಸಹಾಯ ಮಾಡಿ, ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಾಗಿದೆ. ಗಾಯಾಳುಗಳು ಕನಿಷ್ಠ ಮೂರು ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿರುವುದರಿಂದ ಸರ್ಕಾರ ಗಾಯಾಳುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಬೇಮಳಖೇಡದ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯ ಜೊತೆಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ನಂತರ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿರುವ ಬ್ರಿಮ್ಸ್ ಸ್ವಚ್ಚತಾ ಕರ್ಮಿಗಳ ಅಹೋರಾತ್ರಿ ನಿರಂತರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಡಿಹೆಚ್ಒ ರತೀಕಾಂತ್ ಸ್ವಾಮಿ, ಶಿವಕುಮಾರ್ ಶೆಟ್ಕರ್, ಡಾ. ಅಂತಪ್ಪ, ಸುರೇಶ ಹಿಪ್ಪಳಗಾವ್, ಡಾ. ಮೇಟಾರೆ, ಸಂತೋಷ ರಾಸೂರ, ಸಂತೋಷ ಎನ್ ಚೌಕಿ, ಮಲ್ಲಪ್ಪ ಮನ್ನಾಎಖೇಳ್ಳಿ, ಅಭಿ ಕಾಳೆ, ಅನಿಲ್ ಬೇಮಳಖೇಡ ಸೇರಿದಂತೆ ಅನೇಕರಿದ್ದರು. ಬಳಿಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನಗರದ ವಾಲಿಶ್ರೀ ಆಸ್ಪತ್ರೆಗೆ ಭೇಟಿ ನೀಡಿ, ಬೇಮಳಖೇಡ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕನ ಆರೋಗ್ಯ ವಿಚಾರಿಸಿ, ವೈಯಕ್ತಿಕ ಧನಸಹಾಯ ಮಾಡಿದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur #bandeppa #khashempur #bidar #south #MLA #ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಕ್ಷೇತ್ರ #ಶಾಸಕ 

Saturday, November 5, 2022

ಬೇಮಳಖೇಡ ಅಪಘಾತ ಪ್ರಕರಣ: ಪರಿಹಾರಕ್ಕಾಗಿ ಸಿಎಂಗೆ ಪತ್ರ ಬರೆದ ಶಾಸಕ ಬಂಡೆಪ್ಪ ಖಾಶೆಂಪುರ್

ಸಿಎಂ ಬೊಮ್ಮಾಯಿಗೆ ಶಾಸಕ ಖಾಶೆಂಪುರ್ ಪತ್ರ

ಬೀದರ್ (ನ.05): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಆಟೋ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ಗಾಯಗೊಂಡ ಮಹಿಳೆಯರ ಕುಟುಂಬಗಳಿಗೆ ತಲಾ 05 ಲಕ್ಷ ರೂ. ಪರಿಹಾರ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದ್ದಾರೆ.
ಶಾಸಕ ಬಂಡೆಪ್ಪ ಖಾಶೆಂಪುರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಶನಿವಾರ ಪತ್ರ ಬರೆದಿರುವ ಅವರು, 'ನ. 04ರ ಸಂಜೆ ನನ್ನ ಮತಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಆಟೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಡಮನಳ್ಳಿಯ ಹದಿನೇಳು ಜನ ಕೂಲಿ ಕಾರ್ಮಿಕರ ಪೈಕಿ ಏಳು ಜನರು ಮೃತಪಟ್ಟಿರುತ್ತಾರೆ. ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮತ್ತು ಇನ್ನುಳಿದ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸದರಿ ಅಪಘಾತಕ್ಕೆ ಒಳಗಾದ ನನ್ನ ಮತಕ್ಷೇತ್ರದ ಉಡಮನಳ್ಳಿಯ ಬಡ ಕುಟುಂಬದ ಕೂಲಿ ಕಾರ್ಮಿಕರು, ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಇವರುಗಳು ಕುಟುಂಬ ಆದಾರ ಸ್ಥಂಭವಾಗಿದ್ದರು. ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಕುಟುಂಬದ ನಿರ್ವಹಣೆ ತುಂಬಾ ತೊಂದರಿಯಾಗಿರುತ್ತದೆ.
ಆದುದರಿಂದ, ನ. 04ರ ಸಂಜೆ ಬೇಮಳಖೇಡದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಹಾಗೂ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರು ಹಾಗೂ ಗಂಭೀರವಾಗಿ ಗಾಯಗೊಂಡ ಎಂಟು ಜನರಿಗೆ ಉತ್ತಮವಾದ ಉಚಿತ ಚಿಕಿತ್ಸೆ ನೀಡಿ ಅವರಿಗೆ ತಲಾ 05 ಲಕ್ಷ ರೂ. ಪರಿಹಾರವನ್ನು ನೀಡುವಂತೆ ತಮ್ಮಲ್ಲಿ ಕೋರುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಬರೆದಿರುವ ಪತ್ರದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.

ಬೇಮಳಖೇಡದ ಬಳಿ ನಡೆದ ಘಟನೆ ದುಃಖ ತರಿಸಿದೆ: ಶಾಸಕ ಬಂಡೆಪ್ಪ ಖಾಶೆಂಪುರ್
ನನ್ನ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ನಡೆದಿರುವ ಅಪಘಾತದಿಂದ ನನಗೆ ನೋವಾಗಿದೆ. ಘಟನೆಯಲ್ಲಿ ಉಡಮನಳ್ಳಿಯ ಏಳು ಜನ ಬಡ ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಘಟನೆ ಸಂಬಂಧ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಕಛೇರಿಯೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಘಟನೆ ಸಂಬಂಧ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಕಛೇರಿಯವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಸಚಿವರ ನೇತೃತ್ವದಲ್ಲಿ ಮೃತರ ಕುಟುಂಬಗಳನ್ನು  ಭೇಟಿಯಾಗಿ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ಸಹ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಮನೆಗಳಿಗೆ ನಾನು ನ.06ರಂದು ಭಾನುವಾರ ಬೆಳ್ಳಗೆ ಭೇಟಿ ನೀಡಿ ಸಾಂತ್ವಾನ ಹೇಳುತ್ತೇನೆ. ಬಳಿಕ ಬೀದರ್ ನಗರದ ಬ್ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ದೈರ್ಯ ಹೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ನಡೆದಿರುವ ಕಹಿ ಘಟನೆಯಿಂದ ನನಗೆ ನೋವಾಗಿದೆ. ಕ್ಷೇತ್ರದ ಜನತೆಯೊಂದಿಗೆ ನಾನಿದ್ದೇನೆ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದ್ದಾರೆ.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Kashempur #bandeppa #khashemur #ಬಂಡೆಪ್ಪ #ಖಾಶೆಂಪುರ್ Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Public Leader Bandeppa Kashempur

ಅಪಘಾತದ ಸುದ್ದಿ ಕೇಳಿ ದುಃಖವಾಗುತ್ತಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ನ.04): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಬಳಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಉಡಮನಳ್ಳಿಗೆ ಹೋಗುತ್ತಿದ್ದ ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿದ್ದ ಏಳು ಜನ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 08 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗುತ್ತಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ದುಃಖ ವ್ಯಕ್ತಪಡಿಸಿದ್ದಾರೆ.
ಬೇಮಳಖೇಡದ ಬಳಿ ಲಾರಿ ಮತ್ತು ಆಟೋ ನಡುವೆ ಶುಕ್ರವಾರ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಗಳಲ್ಲಿ ಪೋಸ್ಟ್ ಮಾಡಿರುವ ಅವರು, 'ನನ್ನ ವಿಧಾನಸಭಾ ಕ್ಷೇತ್ರವಾದ ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡದ ಬಳಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಉಡಮನಳ್ಳಿಗೆ ಹೋಗುತ್ತಿದ್ದ ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿದ್ದ ಏಳು ಜನ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 08 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗುತ್ತಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ಘಟನೆ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ. ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದೇನೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur Basavaraj Bommai Fans Club Basavaraj Bommai

Monday, October 31, 2022

ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

  

ಬೀದರ್ (.31): ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರಿಗೆ ರಾಜ್ಯದ ರೈತರ, ಬಡವರ, ಮಹಿಳೆಯರ, ಮಕ್ಕಳ, ಜನಸಾಮಾನ್ಯರ ಬಗ್ಗೆ ಕಾಳಜಿ, ಕಳಕಳಿ ಇಲ್ಲ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ವಿವಿಧ ವಿಭಾಗಗಳಿಗೆ ಇತ್ತೀಚೆಗೆ ನೂತನ ಪದಾಧಿಕಾರಿಗಳಾಗಿ ನೇಮಕಗೊಂಡ ಮುಖಂಡರಿಗೆ ಸೋಮವಾರ ಬೆಳಗ್ಗೆ ಜೆಡಿಎಸ್ ಜಿಲ್ಲಾ ಘಟಕದ ಕಛೇರಿಯ ಆವರಣದಲ್ಲಿ ಆದೇಶ ಪತ್ರ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಗರಣಗಳನ್ನು ಮಾಡಿಕೊಂಡು ಕುಂಭಕರ್ಣ ನಿದ್ರೆಗೆ ಜಾರಿದೆ. ಈಗ ಜನ ಸಂಕಲ್ಪ ಯಾತ್ರೆ ಮಾಡ್ತಿದ್ದಾರೆ‌. ಜನೋಪಯೋಗಿ ಕೆಲಸ ಮಾಡದ ಅವರು ಏನು ಸಂಕಲ್ಪ ಮಾಡ್ತಿದ್ದಾರೊ ಎಂಬುದು ತಿಳಿಯದಾಗಿದೆ ಎಂದರು.

ನಾವು ಟೀಮ್ ಮಾಡಿಕೊಂಡು ಜನರ ಮಧ್ಯ ಹೋಗ್ತಿವಿ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿರವರ, ದೇವೇಗೌಡರ ಆಶಯದಂತೆ ಕರ್ನಾಟಕದಲ್ಲಿ ಮಿಷನ್ 123ಯಂತೆ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಮಾಡಿದ್ದೇವೆ. ಪಂಚರತ್ನ ಕಾರ್ಯಕ್ರಮ ಮಾಡುತ್ತೇವೆ. ನಾವು ಅಧಿಕಾರದಲ್ಲಿದ್ದಾಗ ಸಾಲಮನ್ನಾ ಸೇರಿದಂತೆ, ನಾವು ನಾಡಿನ ಒಳಿತಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೇವೆ ಎಂಬುದನ್ನು ಜನತೆಗೆ ತಿಳಿಸುತ್ತೇವೆ. ಜನತೆಗೆ ನಮ್ಮ ಯೋಚನೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ

ಮುಂದಿನ ದಿನಗಳಲ್ಲಿ ಜನತಾದಳ ಅಧಿಕಾರಕ್ಕೆ ಬರಬೇಕು. ಬಡವರ, ರೈತರ, ಜನಸಾಮಾನ್ಯರ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬೀದರ್ ನಿಂದ ಚಾಮರಾಜನಗರದವರೆಗೂ ಸಂಘಟನೆ ಬಲಿಷ್ಠಗೊಳಿಸುವ ಕೆಲಸ ಆರಂಭಿಸಿದ್ದೇವೆ. ಜನರು ಕೂಡ ನಮ್ಮ ಪಕ್ಷಕ್ಕೆ ಬೆಂಬಲಿಸುವ ಮೂಲಕ ನಮಗೆ ಶಕ್ತಿ ಕೊಡುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ್, ಪ್ರಮುಖರಾದ ಮಾರುತಿ ಬೌದ್ಧೆ, ಗಾಲಿ ಬಾಸ್ಮಿಂ, ಸುರೇಶ್ ಸಿಂಧೆ, ಸಮ್ಮದ್ ಮನ್ನಳಿ, ಶೇಖ್ ಅಜದ್, ಅಶುಧುದೀನ್, ಐಲಿಂಜನ್ ಮಠಪತಿ, ರೇಖಾ ಬಾಚಾ, ಸಂಗೀತಾ ಪಾಟೀಲ್, ಸಂಘು ಚಿದ್ರಿ, ಅರುಣ್ ಹೊಸಪೇಟೆ, ಸೌಧ್, ಬೊಮ್ಮಗೊಂಡ ಚಿಟ್ಟಾವಾಡಿ ಸೇರಿದಂತೆ ಅನೇಕರಿದ್ದರು.


ನೂತನ ಪದಾಧಿಕಾರಿಗಳಿಗೆ ಸನ್ಮಾನ, ಆದೇಶ ಪತ್ರ ವಿತರಣೆ:

ಜೆಡಿಎಸ್ ಪಕ್ಷದ ಬೀದರ್ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಜ್ಜದ್ ಸಾಹೇಬ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದೇವೆಂದ್ರ ಸೋನೆ ಚಿದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ವಿಶ್ವನಾಥ ಕರಂಜೆ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ನಗರ ಘಟಕದ ಅಧ್ಯಕ್ಷ ಸುದರ್ಶನ್ ಸುಂದರರಾಜ್, ಬೀದರ್ ಉತ್ತರ ಕ್ಷೇತ್ರದ ಅಧ್ಯಕ್ಷ ಬಸವರಾಜ ಪಾಟೀಲ್ ಹಾರೋಗೆರೆ ಸೇರಿದಂತೆ ಅನೇಕರನ್ನು ಶಾಸಕ ಬಂಡೆಪ್ಪ ಖಾಶೆಂಪುರ್, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪೂರ್ ರವರು ಸನ್ಮಾನಿಸಿ, ಆದೇಶ ಪತ್ರ ವಿತರಿಸಿದರು.

 

ಜಿಲ್ಲಾ ಘಟಕದಿಂದ ಶಾಸಕರಿಗೆ, ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ:

ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮೊದಲ ಬಾರಿಗೆ ಜೆಡಿಎಸ್ ಜಿಲ್ಲಾ ಕಛೇರಿಗೆ ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ವಿವಿಧ ಗ್ರಾಮ ಪಂಚಾಯತಿ ಸದಸ್ಯರನ್ನು ಜೆಡಿಎಸ್ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.